ಕಸಾಕಾಂ ಪ್ರೋತ್ಸಾಹಿಸುವ ಸಾಹಿತ್ಯ
- ಸಮಕಾಲೀನ ವಸ್ತು ಹಾಗೂ ಅಭಿವ್ಯಕ್ತಿಯಲ್ಲಿ ಹೊಸತನವಿರುವ ಬರಹಗಳನ್ನು ಕಸಾಕ
ಪ್ರೋತ್ಸಾಹಿಸುತ್ತದೆ.
- ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಂಸ್ಕೃತಿ, ಟೀಕೆ, ಲಲಿತ ಕಲೆ, ಕ್ರೀಡೆ, ಸಂಚಾರ,
ತಂತ್ರಜ್ಞಾನ, ಭಾಷೆ, ಶಿಕ್ಷಣ - ಇವೇ ಮೊದಲಾದ ಸಾಹಿತ್ಯದ ಎಲ್ಲಾ ಪ್ರಕಾರದ ಬರಹಗಳನ್ನು ಕಸಾಕಾಂ
ಆಹ್ವಾನಿಸುತ್ತದೆ.
- ಬದುಕು-ಕಲೆಯ ಯಾವುದೇ ಮಜಲಿನ ಕುರಿತಾದ ವಿಮರ್ಶೆ-ಅನುಭವ-ವೈಚಾರಿಕ ಬರಹಗಳು ಆದಷ್ಟೂ
ಅಕ್ಯಾಡೆಮಿಕ್ ವಸ್ತುನಿಷ್ಠತೆ, ಸ್ಪಷ್ಟತೆ, ಸಾಂಸ್ಕೃತಿಕ ಪರಿಪೂರ್ಣತೆ ಹೊಂದಿರಬೇಕೆಂದು ಕಸಾಕಾಂ
ಬಯಸುತ್ತದೆ. ಸಮಕಾಲೀನ ಸಮಾಜ, ರಾಜಕೀಯ, ಆರ್ಥಿಕ ವ್ಯವಸ್ಥೆಗಳನ್ನು ವಸ್ತುನಿಷ್ಟವಾಗಿ ವಿಮರ್ಶಿಸುವ
ಲೇಖನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು.
- ಬರಹ ಕನ್ನಡದಲ್ಲಿರಬೇಕು, ವಸ್ತು ಕನ್ನಡೇತರವಾಗಿರಬಹುದು. ಕನ್ನಡಕ್ಕೆ ಸಂಬಂಧಿಸಿದ ಆಂಗ್ಲ
ಲೇಖನಗಳನ್ನೂ ಪ್ರಕಟಿಸಲಾಗುವುದು.