೨೬೦

ಕಾದಂಬರಿ
ಶಾಮಣ್ಣ - ಅಂತರ್ಜಾಲ ಆವೃತ್ತಿ ಭಾಗ4
ಕುಂ. ವೀರಭದ್ರಪ್ಪ

೨೬೯
ಮಾಡಿದರು. ಮೂರನೆ ರಾತ್ರಿ ಹಜರತ್ ಫಕೀರನ ವೇಷದಲ್ಲಿ ಕಾಣಿಸಿಕೊಂಡು ಏಕ್ಮಿನಾರ್ ಮಸೀದಿ ಕಟ್ಟಿಸಿದಲ್ಲಿ ಪುತ್ರ ಸಂತಾನವಾಗುದೆಂದು ಅಪ್ಪಣೆ ಕೊಡಿಸಿದರು. ಅದನ್ನು ಅವರು ತಾವು ಪ್ರಯಣಿಸುತ್ತಿದ್ದ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಗಂಡನಿಗೆ ಹೇಳಿದರು. ಆಸ್ತಿ ಐಶ್ವರ್ಯಕ್ಕಿಂತ ಪುತ್ರ ಸಂತಾನವೇ ಹೆಚ್ಚೆಂದು ಭಾವಿಸಿದ ಸಲಾವುದ್ದೀನ ಸಾಹೇಬರು ಊರಿಗೆ ಮರಳಿದೊಡನೆ ಇದ್ದ ಬದ್ದ ಆಸ್ತಿಯನ್ನೆಲ್ಲ ಮಾರಿ ಮುಸ್ಲಿಮರ ಕೇರಿಯೊಳಗೆ ಮಸೀದಿ ಕಟ್ಟಿಸಿದರು. ಕೆಲ ತಿಂಗಳಲ್ಲೇ ಅವರಿಗೆ ಪುತ್ರ ಸಂತಾನವಾಯಿತು. ನಿಜಾಮುದ್ದೀನ್ ಎಂದು ನಾಮಕರಣ ಮಾಡಿದ್ದರೂ ಅದು ಹುಟ್ಟಿದೋಡನೆ ತಂದೆಯನ್ನು ನುಂಗಿ ನೀರು ಕುಡಿದು ಇಮಾಮು ಎಂಬ ಹೊಸ ಹೆಸರು ಧರಿಸಿ ಬಡತನದ ಬೇಗೆಯಲ್ಲಿ ಬೆಳೆಯಿತು. ಅದು ಕರೀಮನ ಸೈಕಲ್ ಶಾಪಿನಲ್ಲಿ ಹಗಲೆಲ್ಲ ದುಡಿದು ತನ್ನ ತಂದೆ ಕಟ್ಟಿಸಿದ್ದನೆಂಬ ಅಭಿಮಾನದಿಂದ ಏಕ್‌ಮಿನಾರ್ ಮಸೀದಿಯಲ್ಲಿ ಮಲಗುವುದು ಮಾಡುತ್ತಿತ್ತು. ಅದನ್ನು ಸಂತೂಕ್ಚಂದ್‌ನ ಜವಳಿ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಮೌಲಾಲಿ ಸಾಹೇಬ ಸಹಿಸಲಿಲ್ಲ. ಮಾತಿಗೆ ಮಾತು ಬಂದು ಇಮಾಮನೆಂಬ ಬಾಲಕನನ್ನು ಒದ್ದು ಮಸೀದಿಯಿಂದ ಹೊರಹಾಕಿ ಮುಸ್ಲಿಂ ಭಾಂದವರಿಂದ ಸೈ ಅನ್ನಿಸಿಕೊಂಡರು. ಅದರಿಂದ ಕ್ರುದ್ಧನಾದ್ ಇಮಾಮನು ತಾನು ಹಣ ಗಳಿಸಿಕೊಂಡೇ ಊರಲ್ಲಿ ಕಾಲಿಡುವುದಾಗಿ ಶಪಥ ಮಾಡಿದನು. ವೃದ್ಧ ಮಾತೆ "ನಕ್ಕೊ ಬೇಟಾ ನಕ್ಕೋ ಬೇಟಾ" ಎಂದು ತಡೆದರೂ ಕೇಳದೆ ಇಮಾಮು ಕೊತ್ತಲಿಗಿಗೆ ಹೋಗುವುದಾಗಿ ಹೇಳಿ; ಗುಂತಕಲ್ ಮೂಲಕ ದಾದರ್ ಎಕ್ಸ್‌ಪ್ರೆಸ್‌ನ ಕಕ್ಕಸ್ಸುಕೋಣೆಯಲ್ಲಿ ಅವಿತು ಪಯಣಿಸಿ ಬೊಂಬೈ ತಲುಪಿದನು. ಅಲ್ಲಿ ಕೆಲವು ತಿಂಗಳ ಭೂಗತ ದೊರೆ ಹಾಜಿ ಮಸ್ತಾನ್ ಸಾಹೇಬರ ಆಪ್ತ ವಲಯದಲ್ಲಿ ಕೆಲಸ ಮಾಡಿ ಅಲ್ಲಿಂದ ದುಬಾಯ್‌ಗೆ ಪ್ರಯಾಣ ಬೆಳೆಸಿದನು. ದುಬೈಯಲ್ಲಿ ಕೆಲವು ತಿಂಗಳಿದ್ದು ಅಲ್ಲಿಂದ ಇರಾನ್‌ಗೆ ಪ್ರಾಯಣ ಬೆಳೆಸಿದನು. ಇರಾನಿಗಿಂತ ಇರಾನನ್ನು ಆಳುತ್ತಿದ್ದ ಷಾ ತುಂಬ ಸೊಗಸಾಗಿ ಕಂಡಿದ್ದರಿಂದ ಅಲ್ಲೇ ಇದ್ದು ಬಿಟ್ಟನು.

ಷಾ ರವರು ಮುವ್ವರು ಪುತ್ರಿಯರಿಗೆ ಪಂಜಾಬಿ ಡ್ರೆಸ್ ಹೊಲಿದು ಕೊಡುವಷ್ಟರ ಮಟ್ಟಿಗೆ ಅವನು ದರ್ಜಿಯಾಗಿ ಪ್ರಸಿದ್ಧನಾಗಿದ್ದನಂತೆ. ತಮ್ಮ ತರುಣಿಯರು ಬುರುಖಾದೊಳಗೆ ಪಂಜಾಬಿ ಡ್ರೆಸ್ ತೊಟ್ಟುಕೊಂಡು ಅದ್ದಾಡುತ್ತಿರುವುದು ಅಯತುಲ್ಲಾ ಖೋಮೇನಿಯ ಬಂಧು ಬಳಗದವರಿಗೆ ತಿಳಿಯುವ ಹೊತ್ತಿಗೆ ಅವನು ಲಕ್ಷಾಂತರ ದೀನಾರುಗಳನ್ನು ಸಂಪಾದಿಸಿಬಿಟ್ಟಿದ್ದನಂತೆ. ಅಪಾದನೆ ಹೊರಿಸಲು ನಂತರ ಮರಣದಂಡನೆ ವಿಧಿಸಲು ಇನ್ನೊಂದೈದು ತಿಂಗಳು ಇದೆ ಎನ್ನುವಾಗ ಅವನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಭಾರತಕ್ಕೆ ನುಸುಳಿದನಂತೆ. ಸಾವಿರ ಮೈಲಿಯೊಳಗೆ ಎರಡು ನಮೂನಿ ಕಳ್ಳತನಕ್ಕೆ ತುತ್ತಾಗಿ ಕೊಟ್ಟೂರು ಸೇರಿ ಇಂಥ ಎಷ್ಟೋ ಕಥೆಗಳಳನ್ನು ಹೇಳುತ್ತ ‘ಬಾಂಬೆ ಟೈಲರ್’ ಎಂದು ಹೊಸ ಗಿರಾಕಿಗಳನ್ನು ಆಕರ್ಷಿಸಿದನಂತೆ. ಪೋಸ್ಟ್‌ಮ್ಯಾನ್ ರಾಮಣ್ಣನ ಮೂಲಕ ಇಂಥ ಇಮಾಮನನ್ನು ಪರಿಚಯ ಮಾಡಿಕೊಂಡ ಶಾಮು ದಿನಾಲು ಅಲ್ಲಿ ಒಂದು ತಾಸಾದರೂ ಕುತುಕೊಳ್ಳುವುದು, ಇರಾನಿನ ತರುಣಿಯರ ಲೈಂಗಿಕ ಆಸಕ್ತಿ ಕುರಿತಂತಹ ಕಥೆಗಳನ್ನು ಕೇಳಿ ಆನಂದಿಸುವುದನ್ನು ಅಭ್ಯಾಸ ಮಾಶಿಕೊಂಡನಂತೆ. ಸಧ್ಯಕ್ಕೆ ಮೂವರು ಪತ್ನಿಯರೊಂದಿಗೆ ಹನ್ನೆರಡು ಮಂದಿ ಮೊಮಕ್ಕಳೊಂದಿಗೆ ಸುಖವಾಗಿರುವ ಇಮಾಮನೆಂದರೆ ಗ್ರಾಮದ ಎಲ್ಲರಿಗೂ ಅಚ್ಚುಮೆಚ್ಚು.
ಇಂಥ ಇಮಾಮ ನಾನು ಹೋದಾಗ ಗ್ರಾಮದ ಮಾಜಿ ಎಮ್ಮೆಲ್ಲೆ ದಮ್ಮಡಿ ಮೂಗವ್ವನ ಮಗ


೨೭೦
ಕುಂಟಿರಯ್ಯನ ಮೂರನೆ ಮಗಳಾದ ಅಂಬಿಕಾಳ ಓಳ ಉಡುಪುಗಳಿಗೆ ಗುಂಡಿ ಹಚ್ಚುವುದರಲ್ಲಿ ಮಗ್ನನಾಗಿದ್ದ. ನಾನು ಹೋದೊಡನೆ ‘ಆಯಿಯೇ...ಸಾಬ್ ಆಯಿಯೇ ಬೈಠಿಯೇ ಸಾಬ್ ಬೈಠಿಯೇ...’ ಎಂದು ತೋರಿಸಿದ ಮೂರು ಕಾಲಿನ ಕುರ್ಚಿಯ ಮೇಲೆ ಹುಷಾರಿಂದ ಕುಳಿತುಕೊಂಡೆ. "ಅರೆ ಹೋ ಕರೀಂ ಕಾ ಬಚ್ಚಾ ಸುಲೇಮಾನ್.. ಶೆಟ್ಟಿ ಹೂಟ್ಲೂಕು ಹೋಗಿ ಎರಡರ್ಧ ಜಾಕ್‌ಪಾಟ್ ಮಡಿಸ್ಕೊಂಡು ಬಾರ್ಲೇ... ನಮ್ಮ ಶಾಮಣ್ಣಾಕಿ ದೋಸ್ತು ಭಾಳ ದಿನ್ಕೆ ಬಂದಾರೆ" ಎಂದು ಹೇಳಿ ಗದುಮಿದ.

"ಅಲ್ಲಾ ದೊಡ್ಡೋನು... ಅವನ ದಯೆಯಿಂದ ನೀವು ಬಹುತ್ ಅಚ್ಚಾ ಆದೀರಿ... ನೀವು ಒಂದು ಕಡೆಯಿಂದ ನೋಡಿದ್ರೆ ಹೋಸ್ಲಿ ಮುಬಾರಕ್ ಸಾಹೆಬ್ರು ಕಂಡಂಗೆ ಕಾಣ್ತಿದೀರಿ. ಅಂದ ಹಾಗೆ ನಿಮ್ಮ ಖೂನ್ ಅಗೈತೆಂಬ ಸುದ್ದಿ ಹಬ್ಬಿತ್ತಲ್ಲ ಮಾರಾಯ್ರೆ. ಯಾರು ಹೇಳಿದ್ದಂತೀರಿ? ಅದೇ ನಿಮ್ಮ ದೋಸ್ತು ಶಾಮಣ್ಣೋರು. ಅವರ್ಗೆ ಯಾರು ಹೇಳಿದ್ದಂತೀರಿ? ಅದೇ ಪೋಸ್ಟ್‌ಮನ್ ರಾಮಣ್ಣೋರು... ಅವರ್ಗೆ ಯಾರು ಹೇಳಿದ್ದಂತೀರಿ... ಅದೇ" ಎಂದು ಹೇಳತೊಡಗಿದ್ದು ನನಗೆ ಆಶ್ಚರ್ಯ ಮತ್ತುಭಯ ಏಕಕಾಲ್ಕಕುಂಟಾದವು.
ಎದುರಿಗಿದ್ದ ನಿಲುವುಗನ್ನಡಿಯಲ್ಲಿ ನನ್ನ ಪ್ರತಿಬಿಂಬ ನನ್ನನ್ನು ನೋಡಿ ಪಕಪಕ ನಗಾಡಿದಂತೆ ಭಾಸವಾಯಿತು. ಇಲ್ಲಿಗೆ ಬಂದ ತಪ್ಪಿಗೆ ಎಕ್ಕಡದಿಂದ ಹೊಡೆದುಕೊಳ್ಳುವಷ್ಟು ಸಿಟ್ಟು ಬಂತು.

"ಹಂಗಲ್ಲ ಇಮಾಮು, ನಾನು ಯಾಕೆ ಬಂದೇ ಅಂದ್ರೆ..." ಎಂದು ಹೇಳುವಷ್ಟರಲ್ಲಿ ಅವನೇ ಒಳ ಉಡುಪಿನ ದಾರ ಕಡಿದು ಸೂಜಿ ಬೇರ್ಪಡಿಸುತ್ತ "ಆರಾಮಶೀರು ಬೈಠೀಯೆ ಜನಾಬ್... ನೀವು ಯಾಕ ಬಂದಿದೀರಂತ ನಂಗೊತ್ತು. ಅದೇ ವಿಶಯ ತಿಳ್ಕೊಳ್ಳಿಕ್ಕೆ ತಾನೆ" ಎನ್ನಲು ನಾನು ಸುಡುವ ಭೂಮಿಗೆ ಬಿದ್ದ ಒಂದು ಹಿಡಿ ನೀರಿನಂತಾಗಿ ಬಿಟ್ಟೆ.
ಬಾಯಿ ಒಣಗಿ ಮುಂದೇನು ಮಾತಾಡಬೇಕೆಂದು ತೋಚದಾಗಿ ಅವನತ್ತ ಒಂದುಕ್ಷಣ ಮಿಕಿಮಿಕಿ ನೋಡಿದೆ. ಅವನು ಮಾತ್ರ ನೀರೋ ಚಕ್ರವರ್ತಿಯಂತೆ ತನ್ನಪಾಡಿಗೆ ತಾನು ಪಿಟೀಲು ಬಾರಿಸುತ್ತಲೇ ಇದ್ದ.

ಇವರೆಲ್ಲರಿಗೆ ವಾಗಿಲಿ ಗ್ರಾಮದಲ್ಲಿ ನನ್ನ ಸುತ್ತ ನಡೆದಿರುವ ಘಟನೆಗಳ ಪೂರ್ವ ಪರಿಚಯ ಇರುವಂತಿದೆಯಲ್ಲಾ? ಪ್ರಾಯಶಃ ಅಲ್ಲಿಂದ ಯಾರಾದರೂ ಬಂದು ಹೋಗಿರಬೇಕು? ಇಲ್ಲವೆ ಪತ್ರ ಬರೆದಿರಬೇಕು. ಅದು ಈ ಅಲಾಲುಕೋರರ ಕೈಗೆ ಸಿಕ್ಕಿ ಹಲವುಬಣ್ಣ ಧರಿಸಿರಬಹುದು? ಆದರೆ ನಮ್ಮ ಮನೆಯಲ್ಲಿ ನಿಂಗಮ್ಮಜ್ಜಿಯೇ ಮೊದಲಾದವರ್ಯಾರೂ ಚಕಾರ ಎತ್ತದಿದ್ದುದು ಎಂಥ ದುರಂತ? ಮುಂದೆಂದಾದರು ಸತ್ತರೆ ಈ ಊರಲ್ಲಿ ಮಾತ್ರ ಹೆಣ ದಫನ್ ಆಗದಂತೆ ಮುಂಜಾಗ್ರತೆ ವಹಿಸಬೇಕೆಂದು ಕೃತು ನಿಶ್ಚಯ ಕೈಗೊಂಡೆ.

ಅದೇ ಹೊತ್ತಿಗೆ ಸುಲೇಮಾನು ಎಂಬ ಕರೀಂ ಕಾ ಬೇಟಾ ಜಾಕ್ಪಾಟ್ ತಂದು ನೆಗ್ಗಿ ನುಜ್ಜಾಗಿದ್ದ ಗಿಲಾಸಿನಲ್ಲಿ ಹಾಕಿಕೊಟ್ಟ. ಶೆಟ್ಟಿ ಹೋಟಲ್ಲಿನ ಸಮಸ್ತ ಹೊಗೆಯೇ ಅದರಲ್ಲಿ ತುಂಬಿಕೊಂಡಿತ್ತು. ಕುಡಿಯಲು ನಿರಾಕರಿಸಿದರೆಲ್ಲಿ ಏನು? ಎತ್ತ? ಎಂಬ ಗುಟ್ಟುಗಳಿಗೆ ಒಂದು ದಾರಿ ತೋರಿಸಲಾರನೋ ಎಂಬ ಆತಂಕದಿಂದ ಕುಡಿದು ಮುಗಿಸಿದೆ.

"ಶೆಟ್ಟಿಕಾ ಹಾಥ್ ಕಾ ಸಫಾಯಿ ಖೂಬ್ ಸೂರತ್ ಹೈ" ಎಂದು ಹೊಗಳುತ್ತ ಗಿಲಾಸನ್ನು ಹಿಂದಿರುಗಿಸಿದ. "ಈ ಸುವ್ವರ್ ಕಾ ಬಚ್ಚಾ ಶೆಟ್ಟಿ ಏನಾದ್ರು ಇರಾನಿನಲ್ಲಿ ಹೋಟ್ಲಿಟ್ತು ಇಂಥ


೨೭೧
ಜಾಕ್ಪಾಟ್ ಸೋಸಿದ್ದೂಂದ್ರೆ ಸಿರಫ್ ಏಕ್ ಸಾಲ್ ಮೇ ಲಾಖೋಂರುಪ್ಯಾ ಕಮಾಯಿ ಬಿಡ್ತಾನೆ ನೋಡ್ರಿ ಮಾಸ್ತರ್ ಸಾಬ್" ಎಂಬೊಂದು ಸಳ್ವಿಪಿಕ್ಟು ಕೊಟ್ಟ.
ಇಷ್ಟೊಂದು ಇವನು ಮಾತಾಡಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಕಿರು ನಾಟಕದೊಳಗೆ ಸಮಸ್ತ ಇರಾನನ್ನು ಬೆರೆಸಿ ತಲೆ ತಿನ್ನುವ ಕಲೆಯನ್ನು ಕರಗತ ಮಾಡಿಕೊಂಡಿರುವುದು ಪ್ರಾಯಶಃ ಇತ್ತೀಚಿನ ದಿನಗಳಲ್ಲಿರಬೇಕು.ಜನವರಿಯಿಂದಿಚ್ಚೀಗೆ ಇರಬೇಕು. ಶಾಮ ನಿರ್ಭಿಡೆಯಿಂದ ಬಳ್ಳಾರಿ, ಬೆಂಗಳುರಿಗೆ ಹೋಗಿ ಪ್ರೈವೇಟ್ ಡೆಟೆಕ್ಟಿವ್ ಥರ ವರ್ತಿಸುವುದನ್ನು ಕಲಿಯಬೇಕಾದರೆ ಇಮಾಮನಂಥವರು ಕೊಟ್ಟೂರೊಳಗೆ ಇರಾನನ್ನು ಬೆರಸಿ ಮಾತಾಡದೆ ಇರಲು ಹೇಗೆ ಸಾಧ್ಯ?
"ಯಾಕೆ ಬಂದ್ದಿದ್ದೀನಿ ನಂಗೊತ್ತೂ ಅಂತಿದ್ದಾನಲ್ಲ ಈ ಬಡವಾ!"
ಉಗುಳು ನುಂಗಿಕೊಂಡೆ.

"ಇಮಾಮು ನಾನು ಬಂದಿದ್ದು ಯಾಕಂದ್ರೆ?... ಎಂದು ಮಾತು ಆರಂಭಿಸುವಷ್ಟರಲ್ಲಿ ಅವನೇ ಪಾನನ್ನು ಒಂದು ದವಡೆಗೆ ತುರುಕಿ "ಮುಝುಕು ಮ್ಮಲುಂ ಹೈ..." ಇರಾನಿನಲ್ಲಿ ಇಂಥಾದೆಲ್ಲ ಮಾಮೂಲೈತೆ... ಅದಿರ್ಲಿ... ನಿಮ್ದು ಖೂನ್ ಅಗೈತಂತ ಸುದ್ದಿ ಹಬ್ಬಿ ಬಿಟ್ಟಿತ್ತಲ್ಲಾ... ಎಂಥೋರ್ಗೆ ಎಂಥ ಗತಿ ಬಂತಲ್ಲಪ್ಪಾ ಅಂತ ಮಾತಾಡ್ಕೊಂಡ್ವಿ ನೋಡ್ರಿ. ನಮ್ಮ ಶಾಮಣ್ಣ ನಗುನಗುತಾ ಹೇಳ್ದಾಗ ಎಂಥ ದೋಸ್ತಪ್ಪಾ ಈತಾಂತ ಅನ್ನಿಸಿಬಿಟ್ತುನೋಡ್ರಿ. ಅಲ್ಲಾ ಅದೆಂಗ ಖೂನಾತು ಏನ್ಕಥೆ? ಇದು ಸುಳ್ಳೋ ನಿಜವೋ? ನಿಮ್ಮನ್ನ ಖುದ್ಧ ಬೆಟ್ಟಿಯಾಗಿ ಕೇಳಬೇಕೆಂದ್ಕೊಂಡಿದ್ವಿ ನೋಡ್ರಿ... ಹೆಂಗೋ ನೀವೇ ಬಂದಿದ್ದೀರಿ. ನಿಂದು ಖೂನ್ ಯಾವಾಗಾಯ್ತು? ಹೆಂಗಾಯ್ತು? ಒಂಚೂರು ಬಿಡಿಸಿ ಹೇಳ್ರಲ್ಲಾ?... ನನಗಂತೂ ಖೂನು ಗೀನೂ ಆಗೋ ಸಿನ್ಮಾಗಲೆಂದ್ರೆ ಬಲು ಖಯಾಲು ನೋಡ್ರಿ..." ಎಂದು ಮಾತಾಡುತ್ತಲೇ ಅಂಬಿಕಾಳ ಉಡುಪುಗಳನ್ನು ಮಡಚಿ ಗಿಲಾಸಿನ ಬೀರುದೊಳಗೆ ಪೇರಿಸಿಟ್ಟ.

"ಅಲ್ಲ ಇಮಾಮು... ಯಾರೋ ಮೂರ್ಖರು ಈ ಸುದ್ದಿ ಹಬ್ಬಿಸಿರ್ಬೇಕು! ಖೂನಿ ಆಗಿದ್ರೆ ನಾನೆಂಗ ಜೀವಂತ ಬರ್ತಿದ್ದೆ ಹೇಳು!" ಎಂದೆ.
"ಅರೆ ಹೌದಲ್ಲ!... ಜೀವಂತ ಬಂದಿರೋರು ಅದೆಂಗ ಖೂನಿ ಆಗ್ತಾರೆ ಹೇಳ್ರಿ. ಇದು ನಂಗೆ ಯಾಕೋ ಹೊಳಿಲೇ ಇಲ್ಲವಲ್ಲಾಂತ..." ಎಂದು ಹಣೆ ಹಣೆ ಚಚ್ಚಿಕೊಂಡ.
"ಅದಿರ್ಲಿ ಸಾಬೂ... ನಾನಿಲ್ಲಿಗೆ ಬಂದಿದ್ದು..." ಎನ್ನುವಷ್ಟರಲ್ಲಿ ಅವನೆ ಅಡ್ಡಬಾಯಿ ಹಾಕಿ "ನೀವು ಯಾಕೆ ಬಂದೀರಂತ ಮುಝ್ಕು ಮಾಲುಂ ಹೈಜೀ... ಸಿರ್ಫ್ ಮುಝ್ಕೋಭಿ ನಹೀಂ ಯೆ ಗಾಂವ್ ಕಾ ಸಬ್ ಲೋಗೋಂಕು ಮಾಲುಂ ಹೈ... ಶಾಮಣ್ಣ ಬೂದು ಬಣ್ಣದ ಸಫಾರಿ ಸೂಟ್ ಹೊಲಿಸಿದ್ದಾನೋ ಇಲ್ವೋ ಅಂತ ತಾನೆ ನೀವು ಕೇಳೋಕೆ ಬಂದಿರೋದು?" ಎಂದು ನನಗೆ ಮರು ಪ್ರಶ್ನೆ ಹಾಕಿದೊಡನೆ ನಾನು ಪಾತಾಳಕ್ಕೆ ಇಳಿದು ಹೋಗಿಬಿಟ್ಟೆ.

"ಕೈಸಾ ಮಾಲುಂ ಹುವಾ ಇಮಾಂಭಾಯ್" ಎಂದರೆ ಆತ "ಬೆಕ್ಕುಕಣ್ಮುಚ್ಚಿ ಹಾಲು ಕುಡಿದ್ರೆ ತನ್ನನ್ಯಾರು ನೊಡಲ್ಲಾಂತ ತಿಳಿದುಕೊಂಡಿರುತ್ತದೆ" ಎಂಬ ಆಯಕಟ್ಟಾದ ಗಾದೆ ಮಾತನ್ನು ಎದೆಗೆ ಒದ್ದಂತೆ ಸೇರಿಸಿದ.

ಈಗೊಂದೆರಡು ತಿಂಗಳು ಹಿಂದೆ ಕೊತ್ತಲಗಿ ವಂಕದಾರಿ ಗೋವಿಂದ ಶೆಟ್ಟರ ಜವಳಿ ಅಂಗಡಿಯಿಂದ ಸಫಾರಿ ಶೂಟ್‌ಗೆ ಬಟ್ಟೆ ಹರಿಸಿ ಕಂಕುಳಲ್ಲಿ ತಂದು ಎಂದಾದ್ರು ಸಫಾರಿ


೨೭೨

ಶೂಟ್ ಹೊಲಿದಿದ್ದೀಯಾ? ಎಂಬ ಪ್ರಶ್ನೆಯನ್ನು ಮೆತ್ತಗೆ ಹಾಕಿದನಂತೆ. ಅದೆಂಗ ಕೇಳ್ತಿದ್ದೀಯಾ ಶಾಮಣ್ಣ ಶಾ ಚಕ್ರವರ್ತಿ ನಾನು ಹೊಲಿದು ಕೊಟ್ಟ ಸಫಾರಿ ಡ್ರೆಸ್ ತೊಟ್ಟುಕೊಂಡೇ ವಿಷ್ವಸಂಸ್ಥೆಯ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರು. ಮಾರಾಯ್ರೇ" ಎಂದು ಇಮಾಮು ಹೇಳಿದನಂತೆ. ಅದಕಿದ್ದು ಶಾಮಣ್ಣಗೆ ಏನು ತಿಳಿತೋ ಏನೋ ಹಾಗೆ ಹೊರಟು ಹೋಗಿ ಬಿಟ್ಟನಂತೆ.

"ನಾನೇನಂತ ಅನ್ಯಾಯ ಮಾಡಿದ್ದೀವಿ ಹೇಳ್ರಿ ಮಾಸ್ತರ್ ಸಾಬ್... ಅವರಿಲ್ಲಿಗೆ ಬರ್ದೆ ಎಷ್ಟೊ ದಿನಗಳಾದ್ವು ಸ್ವಾಮಿ. ನೌಕ್ರಿ ಸಿಕ್ಕ ಮೇಲೆ ಒಂದು ಸಾರಿಯಾದ್ರು ಬಂದು ಬಾಯ್ನ ಮೀಠಾ ಮಾಡಬಾರ್ದೆ ಅವ್ರು. ಷಾದಿಗಾದ್ರು ಕರೀತಾರೋ ಇಲ್ವೋ, ಅದ್ರ ಮದ್ವಿ ಶೂಟ್ ಹೊಲಿಯಬೇಕಂಭಾಸೆ ತುಂಬ ಇತ್ರೀ ಸಾಹೇಬ್ರೆ" ಎಂದು ಹೇಳುತ್ತಲೆ ಇಮಾಮು ಗದ್ಗದಿತನಾಗಿ ಬಿಟ್ಟ. ಆತನ ಕಂಣಿಂದ ಎರಡು ಮೂರು ಹನಿ ಇರಾನಿನಿಂದ ತಂದಿರಬಹುದಾದ ಕತ್ತರಿ ಮೇಲೆ ಬಿತ್ತು.
ನನಗೆ ಒಂಥರಾ ಆಯಿತು. ಅರಿವಿಲ್ಲದಂತೆ ಎದ್ದು ಆತನನ್ನು ಬರಸೆಳೆದು ಸಮಾಧಾನ ಹೇಳಿದೆ.ನೋಡ್ರಿ. ಇಲ್ಲಾಂದ್ರೆ ನಂಗೆ ಬಲು ದುಕ್ಕಾಗ್ತದೆ. ನಿಮ್ಮನ್ನೆಲ್ಲ ಕಳ್ಕೊಂಡು ನಾನ್ಯಾಕೆ ಈ ಊರಲ್ಲಿರಬೇಕು ಹೇಳ್ರಿ" ಎಂದು ಮತ್ತೆ ಗದ್ಗದಿತನಾದ.

ನಾನು ಆತನಿಗೆ ಆ ಭರವಸೆ ನೀಡಿ ಅಲ್ಲಿಂದ ಹೊರಗೆ ಬಂದೆ, ಅದೇ ಹೊತ್ತಿಗೆ ಶೆಟ್ಟಿ ಹೋಟೆಲ್ಲು ಮತ್ತು ದ್ವಾರಕ ಹೋಟಲ್ಲುಗಳಿಂದ ಒಂದ್ನಾಲ್ಕು ಮಂದಿ ಹೊರಗಡೆ ಬಂದು ನನ್ನ ಕಡೆ ಮಿಕಿ ಮಿಕಿ ನೋಡುತ್ತ ತಮ್ಮಷ್ಟಕ್ಕೆ ತಾವೆನೇನೋ ಮಾತಾಡಿಕೊಳ್ಳುತ್ತ ನಗುವರು ನಕ್ಕು; ನಿಟ್ಟುಸಿರು ಬಿಡುವವರು ಬಿಟ್ಟು ನನ್ನ ಕಡೆ ಹೆಜ್ಜೆ ಹಾಕಿದರು, ಮಫ್ತಿಯಲ್ಲಿದ್ದು ಅರೆಸ್ಟ್ ಮಾಡುವ ಸಿಬಿಐ ಇಲಾಖೆಯವರಂತೆ. ಪ್ರಾಯಶಃ ಅವರು ನಡೆದಿರಬಹುದಾದ ನನ್ನ ಖೂನಿ ಕುರಿತು ಪ್ರಸ್ತಾಪಿಸಬಹುದೆಂದೂಹಿಸಿ ನಾನು ಬಿರಬಿರನೆ ಹೆಜ್ಜೆ ಹಾಕಿ ತೇರು ಬೀದಿಯಲ್ಲಿ ತೇಲಿ ನಿರುಮ್ಮಳತೆಯಿಂದ ಉಸಿರಾಡತೊಡಗಿದೆ.

...ಖಡ್ಗದ ಪತ್ರಿಕಾ ಕಛೇರಿಗೆ ಹೋಗಬೇಕನ್ನುವಷ್ಟರಲ್ಲಿ ಕ್ರಿಸ್ಟೋಫರ್ ರೀವ್ ಮೋಟಾರ್ ಬೈಕಿನ ಮೇಲೆ ಬರ್ತಾನಲ್ಲ ಹಾಗೆ ಪೋಸ್ತ್‌ಮ್ಯಾನ್ ರಾಮಣ್ಣ ಮತ್ತಷ್ಟು ಲತಗೂ ಪುಟಗೂ ಬೈಸಿಕಲ್ ತುಳಿಯುತ್ತ ವಾಯುವೇಗದಿಂದ ಬಂದು ನನ್ನೆದುರಿಗೆ ನಿಲ್ಲಿಸಿ ಠ್ರಿಣ್ ಠ್ರಿಣ್ ಬೆಲ್ ಮಾಅಡಿನನ್ನ ಗಮನ ಸೆಳೆದು ದೇಶಾವರಿ ನಗೆ ನಕ್ಕ. ತಲೆಗೆ ಮಫ್ಲರ್ ಸುತ್ತಿ ಮಹಾ ಅಸ್ವಸ್ಥನಂತಿದ್ದರೂ ಕರ್ನಾಟಕ ರಮಾರಮಣನಂತೆ ತುಂಬಾ ಗೆಲುವಾಗಿದ್ದ. ನಡೆ ನುಡಿಯೆರಡರಲ್ಲೂ ಸಾಕಷ್ಟು ಬದಲಾವಣೆಯಾಗಿರುವುದನ್ನು ಒಂದು ಕ್ಷಣದಲ್ಲಿ ಗಮನಿಸಿದೆ. ನನ್ನ ಊಹೆ ಸರು ಎಂಬಂತೆ ಅವನು "ಏನ್ಮೇಷ್ಟ್ರೇ ಎಂಥಾ ಛಾನ್ಸ್ ಹೊಡೆದುಬಿಟ್ರಿ ಏನ್ಕಥೆ" ಎಂದು ಖೇದಾರಗೌಳ ದಲ್ಲಿ ಕೇಳಿದ. ನಾನು ಕೊಲೆಯಾದ ಸುದ್ದಿ ತಾನೆ?" ಅಂದೆ. "ಅದಿರ್ಲಿ... ಎಂಥೆಂಥೋರೊ ಕೊಲೆಯಾಗ್ತಾರೆ ಬಿಡ್ರಿ..." ಎಂದ. ನಾನು "ಮತ್ತೇನಪ್ಪಾ ರಾಮಣ್ಣ ಅಂಥಾ ವಿಷ್ಯ" ಎಂದೆ. "ಹ್ಹಿ..ಹ್ಹಿ..ಹ್ಹಿ..ಏನೂ ಬ್ಯಾಡ..." ಎಂದು ಮತ್ತೊಂದು ಕ್ಷಣ ಮಿಕಿಮಿಕಿ ನೋಡಿ (ಮಾಂತ್ರಿಕನ ಥರ) "ಅಲ್ರೀ ಈ ಊರಾಗ ನೀವೊಬ್ರೆ ಸಾಚಾ ಅಂದ್ಕೊಂಡಿದ್ದೆ..." ಎಂದು ಹೇಳಿ ಒಂದೆರಡು ಹೆಜ್ಜೆ ಮುಂದೆ ಹೋಗಿ


೨೭೩

ಹಿಂತುರಿಗಿ ಬಂದು "ಹೀಗೆ ಹೇಳ್ತಿದೀನಂತ ತಪ್ಪು ತಿಳಿಯಬೇಡಿ... ನಾನಿಮಿಗಿಂತ ವಯಸ್ಸಿನಲ್ಲಿ ಹಿರಿಯ. ಅದೂ ಅಲ್ದೆ ಈ ಊರಿನ ಹಣೆ ಬರಹ ಬಲ್ಲೋನಾದ್ರಿಂದ ಹ್ಳ್ತಿದೀನಿ. ಹಿಂದೆ ಹೆಂಗಿದ್ರೋ ಹಂಗಿರೋದು ಕಲ್ತೊಳ್ಳಿ. ಹೆಣ್ಣು ಅಂದ್ರೆ ಬೆಂಕಿ ಕಣ್ರೀ ಬೆಂಕಿ. ಅದ್ರ ಸಮೀಪ ಹೋದ್ರೆ ಸುಟ್ಟು ಬೂದಿ ಆಗ್ತಾರೆ ಅಷ್ಟೆ. ಕಥೆ ಕಾದಂಬರಿ ಬರೆಯೋ ನಿಮ್ಗೆ ಹೇಳೋದೇನಿದೆ? ಬರ್ತೀನಿ" ಎಂದು ಹೇಳಿ ಹೊರಟು ಹೋದ.

ಅವನು ಬಿಕ್ಕಿ ಮರ್ಡಿ ಭರಮಜ್ಜನ ದಬ್ಬಿ ಅಂಗಡಿ ಸಂದಿಯಲ್ಲಿ ತಿರುಗಿ ಮರೆಯಾಗುವವರೆಗೆ ಕಣ್ತುಂಬ ನೋಡಿದೆ. ಹರಿವಾಣದ ಚಿದಾನಂದಾವಧೂತರೇ ರಾಮಣ್ಣ್ನ ಮೈಯೊಳಗೆ ಓಡಮೂಡಿ ಮಾತಾಡಿದರೆಂದೆನಿಸಿತು. ನನಗೇನು ರಾಮಣ್ಣನು ನಿನ್ನೆ ಮೊನ್ನೆಯ ವ್ಯಕ್ತಿಯಲ್ಲ್. ಆರನೆ ಇಯತ್ತೆಯಿಂದ ನೋಡುತ್ತಿರುವ ವ್ಯಕ್ತಿ. ಮೊದಲು ವಿಳಸಗಳನ್ನು ತಪ್ಪು ತಪ್ಪಾಗಿ ಓದಿಕೊಂಡು ಯಾರ ಯಾರ ಪತ್ರಗಳನ್ನು ಯಾರು ಯಾರಿಗೋ ಕೊಡುತ್ತ ಪಜೀತಿ ಗೀಡಾಗುತ್ತಿದ್ದನು. ಪ್ರಮೋಷನ್ ಮತ್ತು ರಿಸರ್ವಷನ್ ಆಧಾರದ ಮೇಲೆ ಸುಟ್ಟುಕೋಡಿಹಳ್ಳಿಯ ಬ್ರಾಂಚ್ ಪೋಸ್ಟಾಫೀಸ್ ನೋಡಿಕೊಳ್ಳುತ್ತಿದ್ದಾತ ಪೊಸ್ಟ್ಮ್ಯಾನ್ ಪದವಿಗೇರಿ ಅಕ್ಷರ ಕಲಿಯುವ ನಿಮಿತ್ತ ಅವರಿವರ ಪತ್ರಗಳನ್ನು ಕದ್ದು ಓದುತ್ತಾ ಓದುತ್ತಾ ಜೈಮಿನಿ ಭಾರತ ಕುಮಾರವ್ಯಸ ಭಾರತ ಓದುವಷ್ಟರ ಮಟ್ಟಿಗೆ ವಿದ್ಯಾವಂತನಾದನು. ತೆರೆಯದೇನೆ ಇಂಥ ಲಕೋಟೆಯೊಳಗೆ ಇಂಥ ವಿಷಯವೇ ಅಡಕವಾಗಿದೆ ಎಂದು ಹೇಳುವಷ್ಟರ ಮಟ್ಟಿಗೆ ತಾಂತ್ರಿಕ ಪರಿಣಿತಿಯನ್ನು ಸಾಧಿಸಿದನು!

ಕರ್ನಾಟಕದ ಎಲ್ಲಾ ಮೂಲೆಗಳಿಂದ ಬರುತ್ತಿದ್ದ ಪತ್ರಗಳನ್ನು ಎರಡುವರೆ ದಶಕಗಳ ಕಾಲ ಓದೀ ಓದೀ ಎಲ್ಲಾ ಉಪ ಭಾಷೆಗಳನ್ನು ಸಹಜ ರೀತಿಯಲ್ಲಿ ಮಾತಾಡಬಲ್ಲವನಾಗಿದ್ದನು. ಸಾಮಾನ್ಯವಾಗಿ ಎಲ್ಲರ ಗುಟ್ಟುಗಳನ್ನು ಬಲ್ಲವನಾಗಿದ್ದ ಅವನನ್ನು ಯಾರೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಸಂಸ್ಕೃತ ಭಾಷೆಯಲ್ಲಿ ಯಾರೊಬ್ಬರೂ ಪತ್ರ ಬರೆಯುತ್ತಿಲ್ಲವಲ್ಲ ಎಂಬ ಕಾರಣಕ್ಕೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದ ಶಾಮನನ್ನು ಹಚ್ಚಿಕೊಲ್ಲುವುದಕ್ಕೆ ಪ್ರಾಯಶಃ ಇದೇ ಕಾರಣವಿರಬಹುದು. ಅವನು ಅನಸೂಯಾಳಿಂದ ಬಂದ ಲಕೋಟೆಯನ್ನು ಕರಚಳಕದಿಂದ ಬಿಚ್ಚಿ ಓದುವ ಪ್ರಯತ್ನ ಮಾಡಿರಬಹುದು. ಪ್ರೀತಿಯ ಎಂಬ ವಿಶೇಷಣವನ್ನಷ್ಟೆ ತಾನು ಓದಿ ಉಳಿದ ಉಪಸರ್ಗಗಳನ್ನು ಬೇರೆಯವರ ಕೈಯಿಂದ ಓಡಿಸಿರಲೂಬಹುದು. ಇವು ಮತ್ತು ಇಂಥವರು ಶವಗಳನ್ನು ಕುಯ್ದು ಪರೀಕ್ಷಿಸುವ ಸರಕಾರಿ ವೈದ್ಯರಿಗಿಂತ ಬೇರೆ ಅಲ್ಲ ಎಂದೆನಿಸಿತು. ಇಷ್ಟೊಂದು ಸಂದಿಗ್ಧತೆಗಳನ್ನು ಹುಟ್ಟು ಹಾಕಿರುವ ಸ್ರೀಮತಿ ಅನಸೂಯ್ಳ ಪತ್ರದ ಸುಳಿವು ಶಾಮನಿಗೊಂದೇ ಅಲ್ಲದೆ ಜಲಜಾಕ್ಷಿ, ಕಮಲಾಕರ ಮೊದಲಾದವರಿಗೆ ತಿಳಿದಿರಲಿಕ್ಕೆ ಸಾಕು. ಶಾಮ ವ್ಯಕ್ತಪಡಿಸಲಿರುವ ಭಾವನೆಗಳಿಂದ ರಾಜಕೀಯ ಮತು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳ ಅಭಿಪ್ರಾಯಗಳು ಭಿನ್ನವಾಗಿರುತ್ತವೆ ಎಂಬ ಭಾವನೆಯಿಂದ... ಖಡ್ಗ ಪತ್ರಿಕೆಯ ಕಛೇರಿ ಕಡೆ ಹೆಜ್ಜೆ ಹಾಕಿದೆ.

ಕಮಲಾಕರ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಶಸ್ತಿ ಪಡೆದ ಅಮಲಿನಲ್ಲಿ ಸಾಮಾನ್ಯವಾಗಿ ಇರಲಿಕ್ಕಿಲ್ಲ್ಲದಿರಬಹುದು. ಮಹಿಳಾ ಸಂಘಟನಾ ಸಮಾವೇಶದ ಗಡಿಬಿಡಿಯಲ್ಲಿರುವ ಜಲಜಾಕ್ಷಿ ಈ ಕ್ಷಣ ದೊರಕಿ, ಬಂದಿರುವ ಪತ್ರದ ಬಗೆಗಾಗಲೀ; ನನ್ನ ಕೊಲೆಯಾಗಿದೆ ಎನ್ನಲಾದ ವದಂತಿ ಬಗ್ಗೆ ಪ್ರಸ್ತಾಪಿಸದಿರಬಹುದು. ಸುರೇಶಗಊಡ ಈಗಾಗಲೇ ‘ರಅ’ ಬ್ರಾಂಡಿನ ದೋಸೆಮಿಕ್ಸ್ ಏಜೆನ್ಸಿ ಪಡೆಯಲು ಹೋರಾಟ ನಡೆಸಿರಬಹುದು. ನೌಕರಿಯ ಅಮಲಿನಲ್ಲಿರುವ ಶಾಮ ನನ್ನನ್ನು ಕಂಡರೂ ಕಾಣದಂತೆ ಹೊಗಬಹುದು.


೨೭೪
ಅಂಚೆಯ ಅನ್ನ, ಪತ್ರಕರ್ತ, ರಾಜಕಾರಣಿ, ವ್ಯವಹಾರಸ್ಥ ಇವರೆಲ್ಲ ಒಂದೇ ಜಾಯಮಾಅನದ ಹಲವುಮುಖಗಳು. ಮನುಷ್ಯನ ಚಿಕ್ಕ ದೌರ್ಬಲ್ಯದ ಎಳೆಯೊಡನೆ ರತ್ನಗಂಬಳಿ ನೆಯ್ದು ಅದರ ಮೇಲೆ ಪವಡಿಸಿ ಬದುಕಿನ ಚರಮಸೀಮೆ ಅನುಭವಿಸುವಂತ ನಿಷ್ಣಾತರಿವರು, ಇವರ ಪೈಕಿ ಯಾರೊಬ್ಬ್ರನ್ನು ಎದುರು ಹಾಕಿಕೊಳ್ಳುವುದು ಕಷ್ಟ, ಏಗುವುದು ಕಷ್ಟತಮ, ಇವರಿಗೆ ನಿಲುಕದಹ್ಟು ದೂರ ಉಳಿಯಲೂ ಆಗುತ್ತಿಲ್ಲ.

ಕ್ಷೇತ್ರದ ಉದಯೋನ್ಮುಖ ರಾಜಕಾರಣಿ ಎಂದೂ ಭಾವಿ ಎಮ್ಮೆಲ್ಲೆ ಎಂದೂ ಜಲಜಾಕ್ಷಿಯ ಪ್ರಮುಖ ಪ್ರತಿಸ್ಪರ್ಧಿ ಎಂದೂ ಹೆಸರು ಮಾಡಿರುವ ಗುಲಾಂ ನಬಿಯವರ ಸಂದರ್ಶನವನ್ನು ಆಂಗ್ಲರು ಕಟ್ಟಿಸಿದರೆಂದು ಹೇಳಲಾದ ಪ್ರವಾಸಿಮಂದಿರದಲ್ಲಿ ಯಶ್ಸ್ವಿಯಾಗಿ ನಡೆಸಿ ಧನಿಗೆ ಅಕ್ಷರ ರೂಪ ಕೊಡುವುದರಲ್ಲಿ ಮಗ್ನನಾಗಿದ್ದ ಡಾ.ಕಮಲಾಕರ ‘ಓಹೋಹೋ’ ಎಂದು ಉದ್ಗರಿಸಿ ಎದ್ದು ಬಂದು ಆಲಿಂಗಿಸಿ ಸ್ನೇಹ ಮೆರೆದು ನಿನ್ನೆ ಮೊನ್ನೆ ಕೊಂಡಿರಬಹುದಾದ ಕುರ್ಚಿಯಲ್ಲಿ ಕುಂಡ್ರಿಸಿ "ನೀನು ಬಂದ್ ಬರ್ತೀಯಾ ಅಂತ ನಂಗೊತ್ತಿತ್ತು. ಕಣಯ್ಯಾ, ಸೈಕೋಲಾಜಿಸ್ಟ್‌ಥರ ಊಹಿಸಿರಬೌದಂದ್ಕೋ ಬ್ಯಾಡ... ಬಂದೊಡನೆ ಮ್ಲೊಆನವದನನಾಗ್ತೀಯಾ ಅಂತಲೂ ನಂಗೊತ್ತಿತ್ತು. ಮಾರಾಯ. ಈ ವಯಸ್ಸಿನಲ್ಲಿ ಇದೆಲ್ಲಾ ಮಾಮೂಲೆ, ಜಸ್ಟ್ ರಿಲಾಕ್ಸ್, ನ್ತಗೋತೀ. ಕಾಫಿ ಟಿ ಅಥವಾ ಸ್ಮಾಲ್ ಪೆಗ್ ಹಾಕ್ತೀಯಾಂದ್ರೂ ನಂಗೆ ಸಂತೋಷಾನೇ" ಎಂದ. "ಬಹು ಸಂಖ್ಯಾತ ಕೋಮುಗಳ ನಡುವೆ ಅಲ್ಪ ಸಂಖ್ಯಾತಕೋಮುಗಳು ಬದುಕಿರ್ತಿರೋ ಸಂದರ್ಭದಲ್ಲಿ ಭಾವೀ ಶಾಸಕನಾಗಿ ನಾನು ಹೇಳ್ತಿರೋದೇನೆಂದ್ರೆ... ಗುಲಾಂ ನಬಿಯವರ ಮಾತುಗಳನ್ನು ಹೊತ್ತ ದ್ವನಿಸುರುಳಿ ತನ್ನ ಪಾಡಿಗೆ ತಾನು ಬಿಚ್ಚಿಕೊಳ್ಳ ತೊಡಗಿತ್ತು. ಮಾಜಿ ಮತ್ತು ಭಾವೀ ಮುಖ್ಯಮಂತ್ರಿ ಏಳುಕೊಳ್ಳದ ಭಗವಂತರಾವ್ ದೇಶಪಾಂಡೆಯವರ ಅದುಗೆಮನೆಗೆ ಪ್ರಮುಖವಾಗಿ ತರಕಾರಿ ಸರಬರಾಜು ಮಾಡುವುದು ಮತ್ತು ದೋಬಿ ದೇಶ್ಮುಖ್‌ರವರಿಗೆ ಇಸ್ತ್ರಿಗೆಂದು ಕೊಡುವ ವಿದೇಶಿ ಉಡುಪುಗಳನ್ನು ಎಣಿಸುವುದು ಇವೇ ಮೊದಲಾದ ಕಿಚನ್ ಸೆಕ್ರೇಟರೇಟ್ ಕಾರ್ಯ ನಿರ್ವಹಿಸುತ್ತಿರುವ ಗುಲಾಂ ನಬಿ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ‘ಮೂಮುಮಂ’ ರವರ ಕಿಚನ್ನಲ್ಲಿದ್ದುಕೊಂಡೇ ಇಷ್ಟೊಂದು ಅದ್ಭುತವಾದ ಗ್ರಾಂಥಿಕ ಭಾಷೆಯಲ್ಲಿ ಮಾತಾಡುವ ವ್ಯಕ್ತಿ ಇನ್ನು ಯಾವುದಾದರೂ ವಿಶ್ವವಿದ್ಯಾಲಯ ಪ್ರ್ವೇಶಿಸಿ ಕ್ಯಾಲಿಕೋ ಪುಸ್ತಕಗಲನ್ನು ಮುಗುಚಾಡಿದ್ದರೆ ಇನ್ನೆಷ್ಟು ಚಂದ ಮಾತಾಡುತ್ತಿದ್ದನೋ?

ಚಹ ಕುಡಿದಾದ ಮೇಲೆ ಕಮಲಾಕರ ತನಗೆ ಸಂದ ಪ್ರಶಸ್ತಿ ಬಗ್ಗೆ, ಪತ್ರಿಕೆಯನ್ನು ರಾಜಧಾನಿವರೆಗೆ ವಿಸ್ತರಿಸುವುದಾದರೆ ಆರ್ಥಿಕ ಸಹಾಯ ನೀಡುವುದಾಗಿ ಹಾಲಿ ಮುಖ್ಯಮಂತ್ರಿ ವೆಂಕಟಾಚಲಪತಿ ಗೌಡರು ಅಶ್ವಾಸನೆ ನೀಡಿರುವ ಬಗ್ಗೆ, ಆಳುವ ಮತ್ತು ವಿರೋಧ ಪಕ್ಷಗಳೆಂಬ ಎರಉ ತುಂಡು ದೋಣಿಗಳಲ್ಲಿ ತನ್ನೆರಡೂ ಕಾಲಿರಿಸಿ ಪತ್ರಿಕೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಬಗ್ಗೆ, ತನ್ನ ವಿರುದ್ಧ ಹಲ್ಲು ಮಸೆಯುತ್ತಿದ್ದ ಶಿವಪೂಜೆ ಸುರೇಶ್ಗಊಡ ಬೀಫ್ ಪ್ರಿಯೆ ಸತ್ಯಭಾಮೆಯನ್ನು ಹಂಪೆ ವಿರೂಪಾಕ್ಷ ಮಂದಿರದಲ್ಲಿ ಮದುವೆಯಾಗಿ ‘ಅರ’ ಬ್ರಾಂಇನ ದೋಸೆಮಿಕ್ಸ್‌ನ ಏಜೆನ್ಸಿ ಪಡೆದು ಅದನ್ನು ಜಿಲ್ಲೆಯ ಪ್ರತಿಯೊಂದು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಪರಿಚಯಿಸಬೇಕೆಂದು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ.

ನಂತರ ಪ್ರಮುಖ ವಿಶಯಗಳ ಪೈಕಿ ಇದೂ ಒಂದೆಂಬಂತೆ ನನ್ನ ಕೊಲೆ ವದಂತಿ ಬಗ್ಗೆ ಪ್ರಸ್ತಾಪಿಸಿ ಹ್ಹ.. ಹ್ಹ.. ಎಂದು ನಗಾಡಿದ. ನಂತರ ಇದು ನನ್ನಲ್ಲಿ ಹೇಗೋ ಬಂತೂ ಅಂತ ಮಾತ್ರ ಕೇಳಬೇಡ



ಇಂಥ ಸಂಪನ್ಮೂಲಗಳಿದ್ರೆ ನಮ್ಮಂಥೋರ್ಗೆ ಪತ್ರಿಕೆ ನಡೆಸೋದ್ಕೆ ಸಾಧ್ಯವಾಗೊದಿಲ್ಲ ಎಂದು ಹೇಳಿ ನನ್ನ ಮುಂದೆ ನನಗೆ ಬಂದಿದ್ದ ಅನಸೂಯಾಳ ಸುಧೀರ್ಘ ಪತ್ರದ ಝೆರಾಕ್ಸ್ ಪ್ರತಿಯನು ಪ್ರತಿಷ್ಟಾಪಿಸಿದ. ಅದನ್ನು ನೋಡಿ ನನಗೆ ಉಸಿರುಕಟ್ಟಿದ ಅನುಭವವಾಯಿತು. ಅದನ್ನು ಗಮನಿಸಿದ ಅವನು ಹೆದರ್ಕೋಬೇಡ. ಪೋಸ್ಟ್‌ಮ್ಯಾನ್ ಓದಿರೋದು ಈ ಪತ್ರದ ಆರಂಭ ಶಬ್ದವನ್ನು ಮಾತ್ರ. ರಾಮಣ್ಣನನ್ನು ಕೈಗೊಂಬೆ ಮಾಡ್ಕೊಂಡಿರೋ ನಿಘೂಡ ವ್ಯಕ್ತಿ ಜೆರಾಕ್ಸ್ ಮಾಡಿಸಿ ಹತ್ತಾರು ಕಡೆ ಹಂಚಿದ್ದಾನೆ. ಆ ನಿಘೂಡ ವ್ಯಕ್ತಿ ನಿನಾಗಿರಬೌದು? ನಾನಾಗಿರಬೌದು? ಸುರೇಶ್‌ಗೌಡ, ಜಲಜಾಕ್ಷಿ, ಶಾಮ ಹೀಗೆ ಯಾರಾದ್ರು ಆಗಿರಬೌದು? ಅಥವಾ ಇನ್ಯಾರೋ ಆಗಿರಬೌದು? ಈ ಗ್ರಾಮದ ಮತ್ತಿಗಿನ ನಾಗರಿಕ ಪ್ರಪಂಚದಲ್ಲಿ ಇಂಥದೆಲ್ಲ ನಡೆಯುತ್ತದೆ ಎಂಬುದೇ ಹೆಮ್ಮೆಯ ಸಂಗತಿ. ಈಗ ಅದಲ್ಲ ಮುಖ್ಯ. ಸಹೋದರಿ ಅನಸೂಯಾ ತನ್ನ ಪತ್ರದಲ್ಲಿ ಪ್ರಸ್ತಾಪಿಸಿರುವಂತೆ ಕಿರುಕುಳ ನೀಡಿದಾತ ಶಾಮ ಹೌದೋ ಅಲ್ಲವೋ? ಈ ಬಗ್ಗೆ ನೀನೂ ಯೋಚಿಸಿರಬೌದು. ನಿನ್ಗೆ ಯಾಕೆ ತೊಂದರೆ ಅಂತ ನಾನೇ ಕೆಲವು ಮೂಲಗಳಿಂದ ಶಾಮನ ಬಗ್ಗೆ ವಿಷಯ ಸಂಗ್ರಹಿಸಿದೆ. ಗುಲಾಂ ನಬಿಗೆ ತುಂಬಾ ಬೇಕಾಗಿರುವ ಅವನು, ತನ್ನ ಮದುವೆ ಬಗ್ಗೆ ಸೀರಿಯಸ್ಸಾಗೆ ಅಡ್ಡಾಡುತ್ತಿರುವ ಅವನು ಬೆಂಗಳುರಿಗೆ ಹೋಗಿರಬೌದಾದ್ರು ಹೀಗೆ ವರ್ತಿಸಿರ್ಲಿಕ್ಕಿಲ್ಲವೆಂಬುದು ನನ್ನ ಅನಿಸಿಕೆ. ಆದ್ರೆ ಒಂದು ಮಾತು ಮಾತ್ರ ಸತ್ಯ. ಅವ್ನೀಗ ಸಫಾರಿಸೂಟ್ ಇಲ್ದೆ ಹೊರಗಡೆ ಕಾಣಿಸಿಕೊಳ್ತಿಲ್ಲ. ಜುಟ್ಟು ಪೂರ್ತಿ ಮರೆಯಾಗುವಷ್ಟರ ಮಟ್ಟಿಗೆ ತಲೆ ಗೂದಲು ಬೆಳೆಸಿದ್ದಾನೆ. ಸಚ್ತ್ರ ಲೇಖನಗಳನ್ನು ಬರೆಯಬೇಕೆಂದು ನಿರ್ಧರಿಸಿ ಒಂದು ಹಳೆಯ ಕೊಡಕ್ ಕೆಮೆರಾವನ್ನು ಕೇಂದ್ರಗ್ರಂಥಾಲಯ ಪಕ್ಕದಲ್ಲಿರೋ ಪಾನ್ ಬ್ರೋಕರ್ ರಿಕಬ್‌ಚಂದ್‌ನ ಅಂಗಡಿಯಿಂದ ಖರೀದಿಸಿತುಕೊಂಡಿದ್ದಾನೆ. ನಿನ್ಗೆ ಹೇಳಿದ್ರೆ ಆಶ್ಚರ್ಯವಾಗಬೌದು. ಕೊತ್ತಲಿಗಿಯ ರಮ್ಗಕಲಾವಿದೆಯರ ಬಣ್ಣದ ಬದುಕಿನ ಬಗ್ಗೆ ಒಂದು ಸಚಿತ್ರ ಲೆಖನ ಬರೆದುಕೊ
ಟ್ಟಿದ್ದಾನೆ. ಓದ್ತೀಏನು?" ಎಂದು ಕೇಳುತ್ತ ಮಾತು ನಿಲ್ಲಿಸಿದ. ನಾನು ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದೆ.
ಲೇಖನವನ್ನು ನಾನು ನೋಡಿ ಮಾಡಲು ಉಳಿದಿರುವುದಾದರೂ ಏನು>
ಹೇಳಲಿಕ್ಕೆ ಉಳಿದಿರುವುದೇನು?
ಕೇಳಲಿಕ್ಕೆ ಉಳಿದಿರುವುದೇನು?
*
*
*
ಪತ್ರಿಕೆಯ ಕಛೇರಿಯಿಂದ ಮರಳುವಾಗ್ಗೆ ಸ್‌ಉಜನಶೀಲ ಕಥೆ, ಕವಿತೆಗಳಿಗಿಂತ ವೇಶ್ಯಾವಾಟಿಕೆ ಕುರಿತು ಸಚಿತ್ರ ಲೇಖನಗಳ್‌ಏ ಮುಖ್ಯ ಎಂದು ಭಾವಿಸಿರುವಂತಿದ್ದ ಅವನು ಮಾಮೂಲಿನಂತೆ ಯಾವುದಾದ್ರೊಂದು ಕಥೆ ಕೊಡಯ್ಯಾ ಎಂದು ಕೇಳಲೂ ಇಲ್ಲ, ಕೊಡುವೆನೆಂದು ನಾನೂ ಹೇಳಲಿಲ್ಲ. ಆದರೆ ಅವನು ಹೇಳಿದ್ದು ಇಷ್ಟು. ತಾವೈದು ಮಂದಿ ಶಾಸ್ತಿಗಳ ಆರೋಗ್ಯ ಪರಾಂಬರಿಸಲು ಹೋಗುತ್ತಿರುವುದಾಗಿಯೂ; ಅವರ ಬದುಕಿನ ಗತ ವೈಭವ ಏಳುಬೀಳುಗಳನ್ನು ಕುರಿತ ಲೇಖನಮಾಲೆಯನ್ನು ಪ್ರಕಟಿಸಲು ಯೋಚಿಸಿರುವುದಾಗಿಯೂ, ನೀನು ಬಂದರೆ ಮುಂದೊಂದು ದಿನ ಕಾದಂಬರಿಗೆ ಸಾಮಗ್ರಿಯಾಗುವುದೆಂದು ಹೇಳಿದ. ಮುಂದಿನ ಸಂಚಿಕೆಯಲ್ಲಿ ಪ್ರಾಯಶಃ ನನ್ನದೇ ಇರಬಹುದಾದ ‘ಸತ್ತವನು ಎದ್ದು ಬಂದಾಗ’ (ಲೆಖಕ-ಅನಾಮಿಕ) ಎಂಬೊಂದು ಕಥೆಯ ಜೊತೆಗೆ ಗುಲಾಂನಬಿ ಸಂದರ್ಶನ ಓದಲು


೨೭೬
ಮರೆಯಬೇಡಿ ಎಂದು ಪ್ರಕಟಣೆ ಕೊಟ್ಟಿರುವ ಅವನು ಅನಸೂಯಾಳ ಪತ್ರ ಪ್ರಕಟಿಸುವುದಾಗಿ ಆತಂಕ ಹುಟ್ಟಿಸಿದರೂ ಆಸ್ಚರ್ಯವಿಲ್ಲೆಂದೆನಿಸಿತು. ಇತ್ತೀಚಿನ ದಿನಗಳಲ್ಲಿ ಹೋಚಿಮಿನ್ ಗಡ್ಡದೊಂದಿಗೆ (ಕ್ರಾಂತಿಕಾರಿ ಕವಿತೆಯಾಕಾರದ) ಮುಖದ ಗೆಟ್‌ಅಪ್ ಬದಲಾಯಿಸಿ ಕೊಂಡಿರುವ ಅವನೊಂದಿಗೆ ಹೋಗುವುದಕ್ಕಿಂತ ನಾನೇ ಹೋಗಿ ಶಾಸ್ತ್ರಿಗಳ ಆರೋಗ್ಯ ವಿಚಾರಿಸಿಕೊಂಡು ಬರುವುದೆಂದು ನಿರ್ಧರಿಸಿದೆ.

ಪರಸ್ಪರ ದೋಷಾರೋಪಣೆಗೆ ಕಾರಣವಾದೀತೆಂಬ ಕಾರಣದಿಂದ ನಿಂಗಮ್ಮಜ್ಜಿ ಸಿದ್ದಮ್ಮಜ್ಜಿಯರೆಂಬ ಸುಂದೋಪ ಸುಂದರು ತಲಾ ಒಂದೊಂದು ಮುಖ ಮಾಇರಲು ಏಕರಿಕೆ ಧೇಖರಿಕೆಗೆ ಸಂಬಂಧಿಸಿದಂತೆ ದೊಡ್ಡವ್ವನೊಡನೆ ವ್ಯವಹರಿಸಿದೆ. ರಾತ್ರಿ ಬಿದ್ದ ಕನಸಿನಲ್ಲಿ ವಾಗಿಲಿಯ ಜಗನ್ನಾಥರೆಡ್ಡಿ ತನ್ನ ಹೇಮಿ ಸಂಗಇಗರೊಡನೆ ಕೊಟ್ಟೂರಿಗೆ ಇಳಿದಿದ್ದ. ಕೊಟ್ಟೂರಿಗರು ತೆಲುಗು ಸಿನೆಮಾದ ವಿಲನ್ ಪಾತ್ರಧಾರಿಗಳೇ ಬಂದಿರುವರೆಂಬಂತೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಪರಮೇಶ್ವರ ಶಾಸ್ತ್ರಿಗಳು ಹೆಚ್ಚು ಲವಲವಿಕೆಯಿಂದ ತ್ರಿಕಾಲ ಸಂಧ್ಯಾವಂದನೆ ಮಾಡಿ ಮುಗಿಸಿ ಹೆಚ್ಚು ಗೆಲುವಿನಿಂದಿದ್ದರು. ಪಾದಾಭಿವಂದನೆ ಸಲ್ಲಿಸಿದ ರೆಡ್ಡಿ ಮತ್ತವರ ಸಂಗಡಿಗರಿಗೆ ಕೋಸುಂಬರಿ ಪಾನಕ ಕೊಟ್ಟು ಸತ್ಕರಿಸಿದರು. ರೆಡ್ಡಿ ತನ್ನ ಪ್ರಾಣಕ್ಕೆ ಅಪಾಯ ಇರುವುದಾಗಿಯೂ, ಪ್ರಾಣ ರಕ್ಷಣೆ ಯಂತ್ರ ದಯಪಾಲಿಸಬೇಕೆಂದೂ, ಅದರ ಜೊತೆಗೆತನ್ನ ಅಜನ್ಮ ವೈರಿಯು ದುರ್ಮರಣವನ್ನು ಅಪ್ಪುವಂಥ ಯಂತ್ರವನ್ನು ಜೊತೆಗೆ ದಯಪಾಲಿಸಬ್‌ಏಕೆಮ್ದೂ ಕೈ ಮುಗಿದು ಬೇಡಿಕೊಂಡ. ಅಂಥ ಬೇಡಿಕೆಯಿಂದ ಪ್ರಸನ್ನವದನರಾದ ಶಾಸ್ತ್ರಿಗಳು ಅಂದೇ ಆದಿತ್ಯವಾರ ಅಮವಾಸ್ಯೆ ಬಂದಿದ್ದರಿಂದ ಮಧ್ಯರಾತ್ರಿಯಲ್ಲಿ ತಕ್ಕ ಪರಿಕರಗಳೊಂದಿಗೆ ಮಸಣಕ್ಕೆ ಹೋಗಿ ಬೆಳಗಾಗುವ್ವರೆಗೆ ಪೂಜೆ ಪುನಸ್ಕಾರ ಮಾಡಿದರು. ಒಂದು ಯಂತ್ರವನ್ನು ಮಂತ್ರಿಸಿ ಜಗನ್ನಾಥ ರೆಇಯ ಸೊಂಟಕ್ಕೆ ಕಟ್ಟಿದರು. ಇನ್ನೊಂದು ಗೊಂಬೆಯನ್ನು ಮಂತ್ರಿಸಿಕೊಡುತ್ತ ಅದನ್ನೊಯ್ದು ವೈರಿಯ ಊರಿನ ಕರಗಲ್ಲಿನ ಬುಡದಲ್ಲಿ ಹೂತಿಡಬೇಕೆಂದು ಹೇಳಿದರು. ಅದನ್ನು ತೆಗೆದುಕೊಂಡು ಹೋಗುವಾಗ್ಗೆ ಜಗನ್ನಾಥ ರೆಡ್ಡಿ ಮತ್ತು ಕಮಲಾಕರ ಮುಖಾಮುಖಿಯಾದರು. "ನಮ್ಮ ಮನೆಯನ್ನು ದೊಚಿದ ನಕ್ಸಲೈಟರಲ್ಲಿ ನೀನೂ ಇದ್ದಿ ಅಲ್ವೆ?" ಎಂದು ರೆಡ್ಡಿಯೂ "ಬಡವರ ಶ್ರಮ ಕೊಳ್ಳೆ ಹೊಡೆಯುತ್ತಿರುವವರಲ್ಲಿ ಅಗ್ರಗಣ್ಯನಾದ ನೀನಿನ್ನೂ ಬದುಕಿದ್ದೀಯಲ್ವೇ" ಎಂದು ಕಮಲಾಕರನೂ ಹೂಂಕರಿಸಿದನು.

ಅದೇ ಹೊತ್ತಿಗೆ ಬೆಳಕು ಹರಿದು ಎಚ್ಚರಾಗಿ ನಾನೂ ಹಾಸಿಗೆಯಿಂದೆದ್ದೆ. ಮರುದಿನವೇ ಅಮವಾಸ್ಯೆ ಬಂದಿರುವ ಆದಿತ್ಯವಾರ ಎಂಬುದನ್ನು ದೊಡ್ಡವ್ವನಿಂದ ಖಚಿತಪಡಿಸಿಕೊಂಡೆ. ಪೋಸ್ಟ್ ಬರುವ ವೇಳೆಗೆ ಸರಿಯಾಗಿ ನಾನೂ ರೆಡಿಯಾದೆ. ಒಂದೆರಡು ದಿನದ ಮಟ್ಟಿಗಾದರೂ ಯಾರ ಕಂಣಿಗೆ ಬೀಳಬೇಡವೆಂದು ಕಮಲಾಕರಗೆ ಚೀಇ ಬರೆದು ಪೋಸ್ಟಾಫೀಸಿಗೆ ಹೋಗುವ ದಾರಿಯಲ್ಲಿ ಅದನ್ನು ಹರಿದು ಹಾಕಿದೆ. ಬರಬಹುದಾದ ಪತ್ರಗಳು ರಾಮಣ್ಣನ ಮೂರನೆ ಕಂಣಿಗೆ ಬೀಳುವ ಮೊದಲೆ ಪಡೆಯಬೇಕೆಂಬ ಉದ್ದೇಶದಿಂದ ಲಗುಬಗೆಯಿಂದ ಹೆಜ್ಜೆಹಾಕಿ ಪೊಸ್ಟಾಫೀಸು ತಲುಪಿದೆ. ‘ಬೆಂಗ್ಳೂರಿಂದೇನಾದ್ರು ಲೆಟರ್ಸ್ ಬರ್ಬೇಕಿತ್ತ ಮೇಸ್ಟ್ರೇ’ ಎಂಬ ಪ್ರಸ್ನೆ ಹಾಕಿಸ್ವಾಗತ ಕೋರಿದ ಪೋಸ್ಟ್ ಮಾಸ್ಟರ್ ದೇವದಾಸನ ಎದೆಗೆ ಝಾಡಿಸಿ ಒದೆಯುವಸ್ಟು ಸಿಟ್ಟು ಬಂತು. ಹುಳ್ಳಗೆ ಮುಖ ಮಾಡಿಕೊಂಡು ಬಂದಿದ್ದ ಕೆಲವು ಪತ್ರಗಳನ್ನು ನನ್ನ ಕೈಗಿತ್ತ. ಅದನ್ನು ಕಂಕುಳಲ್ಲಿರಿಸಿಕೊಂಡು ಹೋಗಿ ಉಡುಪಿ ಹೋಟಲ್ಲಿನ ಮೂಲೆಯಲ್ಲಿ ಕೂತು ಒಂದೊಂದಾಗಿ ಪರಾಮರ್ಶಿಸಿದೆ.


೨೭೭
ತುರ್ತು ಪರಿಸ್ಥಿತಿ ವಿರೋಧಿ ವೇದಿಕೆಯವರು ತರಬೇಕೆಂದಿರುವ ‘ಅಯ್ಂಟಿ ಫ್ಯಾಸಿಸ್ಟ್ ಸ್ಕ್ವಾಡ್’ ಎಂಬ ವಾರ ಪತ್ರಿಕೆಗೆ ಸಾವಿರ ರುಪಾಯಿ ಕಳಿಸಿ ಆಜೀವ ಸದಸ್ಯತ್ವ ಪಡೆಯಬೇಕೆಂದು ಒಂದು ಪತ್ರ.

ಕಥೆ ಪ್ರಕಟಣೆಗೆ ಸ್ವೀಕರಿಸಲಾಗದಿದ್ದುದಕ್ಕೆ ವಿಶಾದಿಸುತ್ತೇವೆ ಎಂದೋರ್ವ ಸಂಪಾದಕರುಹಿಂದಿರುಗಿಸುತ್ತ ಬರೆದಿರುವ ಲಕೋಟೆ.
ಹಸ್ತ ಪ್ರತಿ ಕಲಿಸಿ ತಿಂಗಳಾದರು ಮುನ್ನುಡಿ ಬರೆದಿಲ್ವಲ್ಲ, ನೀವೇನು ಈ ಭೂಮಿ ಮೇಲೆ ಇರುವಿರೋ ಇಲ್ಲವೋ ಎಂದೋರ್ವ ಉದಯೋನ್ಮುಖ ಕವಿ ಖಾರವಾಗಿ ಬರೆದಿರುವ ಪತ್ರ.
ಅವ್ನ್ನೆಲ್ಲ ಚೂರುಚೂರು ಮಾಡಿ ಒಲೆಗೆ ತುರ್ಕಲು ಭಟ್ಟರಿಗೆ ಕೊಡಲು ಅವರು ಎಂಥದು ಮಾರಾಯ್ರೆ ಎಂದು ಇಸಿದುಕೊಂಡು ಅಡುಗೆ ಮನೆಗೆ ಹೋದ. ನನ್ನ ಬೇಜವಾಬ್ದಾರಿತನಕ್ಕೆ ಪಕ್ಕಾಗಿ ಭಟ್ರೆ.. ಅವುಗಳ್ನ ಕೊಡಿ ಸ್ವಲ್ಪ ಎಂದು ಕೇಳಿದ್ದಕ್ಕೆ ಆತ "ಆಗ್ಲೆ ಉರಿಯೋ ಒಲೆಗೆ ಹಾಕಿದ್ದಾಯ್ತಲ್ಲ ಮಾರಾಯ್ರೆ" ಎಂದ.

ಈ ರೀತಿಯ ಅನಿಶ್ಚಿತ ನಡುವಳಿಕೆಯನ್ನು ತಿದ್ದಿಕೊಳ್ಳಬೇಕಾದ್ರೆ ಈಗಿಂದಲೇ ಹೋಗಿ ಪರಮೇಶ್ವರ ಶಾಸ್ತ್ರಿಗಳ ಆರೋಗ್ಯ ಪರಾಮರ್ಶಿಸಬೇಕೆಂದು ನಿರ್ಧರಿಸಿ ಅಲ್ಲಿಂದ ಕಾಲು ಕಿತ್ತೆ.
ಅಷ್ಟು ವೇಗದಿಂದ ನಡೆದು ಶಾಸ್ತ್ರಿಗಳ ಮನೆ ತಲುಪುವೆನೆಂದು ನಾನು ಅಂದುಕೊಂಡಿರಲಿಲ್ಲ. ಹತ್ತಾರು ಮಂದಿ ಹೆಂಗಸರು, ಗಂಡಸರು ತಲಾ ಒಂದೊಂದು ಕೆಲಸದಲ್ಲಿ ತೊಡಗಿ ಸಂಭ್ರಮ ಪ್ರಕಟಿಸಬಹುದೆಂದುಕೊಂಡಿರಲಿಲ್ಲ. "ಏನಪ್ಪಾ, ಈಗ ನೆನಪಾಯ್ತೇ ನಮ್ಮ ಮನೆ? ನೀನು ಬಂದು ಹೋಗಿ ಎಷ್ಟು ದಿನಗಳಾದ್ವು? ನಿನ್ನ ಸ್ನೇಹಿತನ ಮದುವೆ ಇರೋ ಸಂಗತಿ ಮರೆತು ಬಿಟ್ಟಿರುವೆ ಏನಪ್ಪಾ? ಅಂತ್‌ಊ ಜ್ಞಾಪಿಸಿಕೊಂಡು ಬಂದೆಯಲ್ಲ! ಬಾ... ಲಗ್ನಪತ್ರಿಗೆಗಳಿಗೆ ವಿಳಾಸ ಬರೆದು ನೀನೇ ಪೋಸ್ಟ್ ಮಾಡೊದಿದೆ. ಅಂದ ಹಾಗೆ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಮಹಾ ಪ್ರಭುಗಳಿಗೆ ದುಂಡಗೆ ಬರೆಯೋದ್ನ ಮಾತ್ರ ಮರೀಬೇಡ. ಅವರಹಿರಿಯರು ನಮ್ಮ ಹಿರಿಯರಿಗೆ ತುಂಬ ಬೇಕಾಕಿದ್ದವರು ಕಣಪ್ಪಾ.ಅವರು ಯಾರನ್ನಾದ್ರೂ ಕಳಿಸಿ ಆಶೀರ್ವಾದ ತಗೋತಾರೆ" ಎಂದು ಹೇಳುತ್ತ ಅಲುಮೇಲಮ್ಮ ನನ್ನ ಮುಂದೆ ಒಂದು ಕುಪ್ಪೆ ಲಗ್ನ ಪತ್ರಿಕೆಗಳನ್ನು ಪೇರಿಸಿಡಬಹುದೆಂದು ಅಂದುಕೊಂಡಿರಲಿಲ್ಲ. "ಯಾರದು? ಓಹ್ ಅವನಾ... ಹೇಗಿದ್ದೀಯಪ್ಪಾ? ಏನೋ ತೊಂದರೆಯಾಗಿತ್ತಂತೆ ಅಲ್ಲಿ. ಹೌದಾ?... ಈ ದೇಹ ನಶ್ವರ! ಎಂದು ಹೋಗುವುದೋ ಏನೋ? ನನ್ನ ಮೊಮ್ಮಗ ಅಂದ್ರೆ ನಿನ್ನ ಜೀವದ ಗೆಳೆಯ ಶಾಮಾಶಾಸ್ತ್ರಿಗಳ ಮದುವೇನ ನೀವೆಲ್ಲ ನಿಂತಿದ್ದು ಮಾಡಬೇಕಪ್ಪಾ" ಎಂದು ಲಕ್ವಾ ಸ್ಥಿತಿಯಲ್ಲಿ ಮಲಗಿದ್ದಲ್ಲಿಯೇ ಪರಮಪೂಜ್ಯರಾದ ಶಾಸ್ತ್ರಿಗಳು ಅಸ್ಪಷ್ಟವಾಗಿ ನುಡಿಯಬಹುದೆಂದು ನಾನು ಅಂದುಕೊಂಡಿರಲಿಲ್ಲ. ಆಧ್ವನಿಯಿಂದ ಪರವಶನಾಗಿ ನಾನು ಪರಿವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ದುಡು ದುಡನೆ ಹೋಗಿ ಅವರ ಕೃಶ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನನ್ನೇ ತಮ್ಮ ಶಾಮನೆಂದು ಪರಿಭಾವಿಸಿ ಶಾಸ್ತ್ರಿಗಳು ತದಡವಿ ಆಶೀರ್ವದಿಸಬಹುದೆಂದುಕೊಂಡಿರಲಿಲ್ಲ. ನಾನದರಿಂದ ಹ್‌ಒಸಕನಸು ಪಡೆದವನಂತೆ ಅರ್ದತಾಸೊಪ್ಪತ್ತಿಗೆ ನೂರಾರು ಲಗ್ನಪತ್ರಿಗೆಗಳ ಮೇಲೆ ನೂರಾರು ವಿಳಾಸಗಳನ್ನು ಬರೆದು ಅಂಚೆ ಚೀಟಿ ಹಚ್ಚಬಹುದೆಂದುಕೊಂಡಿರಲಿಲ್ಲ. ಅವುಗಳ್ನ್ನೆಲ್ಲ ಒಂದುಕಡೆ ಸೇರಿಸಿಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಡ್ಯೂಟಿ ಮುಗಿಸಿಕೊಂಡು ಶಾಮ ಬಂದವನೆ ನನ್ನ ಕಡೆ ದುರುಗುಟ್ಟಿ


೨೭೮

"ನೀನ್ಯಾಕೆ ಬಂದೆಯೋ ಬೋಳ್ಮಗ್ನೆ" ಎಂಬರ್ಥ ಬರುವಂತೆ ನೋಡಬಹುದಂತೆ ಅಂದುಕೊಂಡಿರಲಿಲ್ಲ. ನಾನು ಅದನ್ನೆಲ್ಲ ಅಪಾರ್ಥ ಮಾಡಿಕೊಳ್ಳದೆ "ಏನು ಶಾಮ ಚೆನ್ನಾಗಿದ್ದೀಯಾ ನಿನ್ನ ಮದ್ವೆ ವಿಷ್ಯ ನಂಗೆ ಗೊತ್ತೇ ಇಲ್ವಲ್ಲೋ... ನಿಂಗೆ ನೌಕರಿ ದೊರಕಿದ್ದು, ಮದುವೆ ಇರೋದು ಇದ್ನೆಲ್ಲ ಪತ್ರ ಬರೆದು ತಿಳಿಸೋದು ಬೇಡವೇನೋ?" ಎಂದು ಉಗುಳು ನುಂಗುತ್ತ ಅವನ ಕೈ ಕುಲುಕಬೇಕೆಂದುಕೊಂಡಿರಲಿಲ್ಲ. ಅವನು ನನ್ನ ಸ್ಪರ್ಶದಿಂದ ಕೂಲಾಗಿ ನಿಟ್ಟುಸಿರುಬಿಟ್ಟು ಬಿಡಬಹುದೆಂದುಕೊಂಡಿರಲಿಲ್ಲ. ನಂತರ ನನಗೂ ಒಂದು ಕಪ್ಪು ಮಜ್ಜಿಗೆ ಕೊಟ್ಟು ತಾನೂ ಒಂದು ಕಪ್ಪು ಕುಡಿದು ಅಪರಾಧೀ ಪ್ರಜ್ಞೆಯಿಂದ ನನ್ನ ಮಗ್ಗುಲುಕೂರಬಹುದೆಂದು ಕೊಂಡಿರಲಿಲ್ಲ. ನನಗೆಂದೇ ಬರೆದಿದ್ದ ಮೂರು ಅಪೂರ್ಣ ಪತ್ರಗಳನ್ನು ಕಿಸೆಯಿಂದ ತೆಗೆದು ತೋರಿಸಬಹುದೆಂದು ಕೊಂಡಿರಲಿಲ್ಲ. ಅಂದುಕೊಂಡಿರದಿದ್ದ ಎಷ್ಟೋ ಸಂಗತಿಗಳು ಆ ಒಂದೂವರೆ ತಾಸಿನಲ್ಲಿ ತಾನೇ ತಾನಾಗಿ ತಮ್ಮ ಪಾಡಿಗೆ ತಾವು ನಡೆದು ನನ್ನ ಚಕಿತಗೊಳಿಸಿದವು.

ಸ್ವಲ್ಪ ಹೊತ್ತು ನಮ್ಮಿಬ್ಬರ ಎದೆಯೊಳಗೆ ಎಷ್ಟೊ ಪ್ರಸ್ತಾಪಿಸಬೇಕಿದ್ದ ಸಂಗತಿಗಳು ಇದ್ದರೂ ಗಂಟಲು ದಾಟಿ ಹೊರ ಬರದೆ ಅವನ ಮುಖವನ್ನು ನಾನೂ; ನನ್ನ ಮುಖವನ್ನು ಅವನೂ ಕದ್ದು ಕದ್ದು ನೋಡುತ್ತ ಕುಳಿತುಕೊಂಡಿದ್ದೆವು, ತಪ್ಪು ಮಾಡಿರುವವರಂತೆ.

ಗ್ರಾಮದ ಅನೇಕರು ಬಂದು ಪರಮೇಶ್ವರ ಶಾಸ್ತ್ರಿಗಳ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ಮದುವೆ ಏರ್ಪಾಡಿನ ಅನೇಕ ಸಂಗತಿಗಳನ್ನು ವಿಚಾರಿಸಿಕೊಂಡು ಹೋಗುತ್ತಿದ್ದರು. ಅರಸನ ಬಟ್ಟೆ ಅಗಸನ ಮೈ ಮೇಲೆ ಎಂಬ ನಾಣ್ಣುಡಿಯಂತೆ ಚಾಕಲಿ ನಾರಾಣಿಯಂತೂ ತಾನೇ ಮಧು ಮಗನಂತೆ ಗ್ರಾಂಥಿಕವಾಗಿ ಮಾತಾಡುತ್ತ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿದ್ದುದು ನಯನ ಮನೋಹರವಾಗಿತ್ತು. ಮಾವಂದರ ಪಂಚೇಂದ್ರಿಯಗಳಿಗೆ ತಾನೇ ಅಧಿಕೃತ ವಕ್ತಾರಳಂತೆ ಅಲುಮೇಲಮ್ಮ ಅವರ ಅನೇಕ ಸಂಜ್ಞೆಗಳಿಗೆ ಹೊಸ ಹೊಸ ವ್ಯಾಖ್ಯಾನಗಳನ್ನು ಬರೆಯ ತೊಡಗಿದ್ದು ತುಂಬ ಅರ್ಥಗರ್ಭಿತವಾಗಿತ್ತು.

ಇಂಥ ಬದಲಾವಣೆ ತನ್ನಲ್ಲಿ ಹುಟ್ಟಿದಂದಿನಿಂದಲೇ ಇತ್ತೆಂಬಂತೆ ಶಾಮ ನಿರಮ್ಮಳವಾಗಿ ಕೂತಿರುವಾಗ ಮಾತಾಡಲು ನನ್ನಲ್ಲಿ ಉಳಿದಿರುವುದಾದರೂ ಏನು? ಹೆಚ್ಚು ಆಧುನಿಕವಾಗಿ ಮತ್ತು ಹೆಚ್ಚು ಅಥೆಂತಿಕ್ ಎನಿಸಿದರು. ಕೋಣೆಯಲ್ಲಿ ಇನ್ನೇನು ಒಬ್ಬರೇ ಉಳಿದಿರುವರು ಎಂದು ಕೈ ಹಿಡಿದು ಜಗ್ಗಿದ, "ನಾಳೆ ಮಾತಾಡಿಸ್ಬೇಕಂದ್ರೆ ಸಿಕ್ಕಾರೆಯೇ? ಇದು ನನ್ನ ಮಾನಸಿಕ ಸ್ವಾಸ್ಥ್ಯದ ಪ್ರಶ್ನೆ ಕಣಯ್ಯಾ!" ಎಂಬಂತೆ ಕೊಸರಿಕೊಂಡು ಒಳಗಡೆ ಹೋಗಿ ವಿನಮ್ರತಾ ಭಾವದಿಂದ ಮಂಚದ ಮಗ್ಗುಲು ಕೂತುಕೊಂಡೆ.

ನಿರೀಕ್ಷೆಗೆ ಮೀರಿ ಕೃಶರಾಗಿದ್ದ ಅವರು ನನ್ನನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೋ ಎಂಬಂತೆ ನೋಡಿದರು. ಹೆಬ್ಬಾರರ ಸರಳರೇಖೆಂತಿದ್ದ ಅವರು ಏನನ್ನೋ ಮಾತಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ನುಡಿಕಟ್ಟು ತುಟಿಯಿಂದೀಚೆಗೆ ಹೊರಡಲಿಲ್ಲ. ನಾನೇ ಅವರ ಬಲಗಿವಿಗೆ ಹತ್ತಿರಹೋಗಿ ನನ್ನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ. ಜಗನ್ನಾತಹ್ ರೆಡ್ಡಿ ಬರ್ಲಿಲ್ಲವಲ್ಲ ಎಂದು ಕೇಳಿರಬಹುದೆಂದುಕೊಂಡು ರೆಡ್ಡಿ ಬಗೆಗೂ ಒಂಚೂರು ವಿವರಿಸಿದೆ. ಶಾಮನ ಮದುವೆಯನ್ನು ನಿಂತಿದ್ದು ಮಾಡಿ ಮುಗಿಸಬೇಕು ಎಮ್ದು ಕೇಳಿದರೆಂದುಕೊಂಡು ಶಾಮನ ಮದುವೆ ಮುಗಿಸಿಯೇ


೨೭೯

ಹೊರಡುವುದೆಂದು ಹೇಳಿದೆ. "ನಿನ್ ಮದುವೆ ಯಾವಾಗಯ್ಯ, ನಿನ್ತಲೆ ಮೇಲೂ ಅಕ್
ಷತೆ ಹಾಕಿ ಇಹಲೋಕ ತ್ಯಜಿಸಬೇಕೆಂದಿದ್ದೇನೆ" ಎಂದು ಕೇಳಿದರೆಂದೂಹಿಸಿ "ಮದವೆ ಆಗೋ ಯೋಚನೆ ಸದ್ಯಕ್ಕಿಲ್ಲ ಪೂಜ್ಯರೆ" ಎಂದು ಉತ್ತರಿಸಿದೆ. ಶಾಮನ ಗಣಾವಗುಣಗಳನ್ನು ಕೇಳಿದರೆಂದೂಹಿಸಿ "ಶಾಮಾಶಾಸ್ತ್ರಿಯಂಥ ಸದ್ಗುಣವಂಥರು ಸದ್ಯಕ್ಕೆ ನಮ್ಮೂರಲ್ಲಿ ಇನ್ನೊಬ್ರಿಲ್ಲ" ಎಂದೂ ಹೇಳಿದೆ.

ಅವರ ಮುಖದಲ್ಲಿ ನೆಮ್ಮದಿ ಮೂಡಿತು. ಸಾರ್ಥಕ ರೀತಿಯಲ್ಲಿ ಮಾತಾಇದೆ ಎಂದುಕೊಂಡು ನಾನೂ ನೆಮ್ಮದಿಯಿಂದ ಉಸಿರುಬಿಟ್ಟೆ. ಅಲ್ಲಿವರೆಗೆ ಬಾಗಿಲ ಮರೆಯಲ್ಲಿ ಕದ್ದು ಕೇಳಿಸಿಕೊಳ್ಳುತ್ತಿದ್ದ ಶಾಮ ದಿಢೀರನೆ ಒಳಗೆ ಬಂದವನೆ "ಕರೆದಿರಾ ತಾತ", ಎಂದು ನನ್ನ ಕಡೆ ನೋಡಿ ‘ಎಲಾ ನನ ಮಗ್ನೇ’ ಎಂಬಂತೆ ನೋಡಿದ. ನಾನು ನಿರ್ವಿಕಾರ ಚಿತ್ತದಿಂದ ಆ ನೋಟ ಎದುರಿಸಿದೆ. ಶಾಸ್ತ್ರಿಗಳು ನಮ್ಮನ್ನು ಹತ್ತಿರ ಕರೆದರು. ಅವನ ಕೈಯೊಳಗೆ ನನ್ನ ಕೈಯನ್ನೂ; ನನ್ನ ಕೈಯೊಳಗೆ ಅವನ ಕೈಯನ್ನೂ ಇರಿಸಿ ತಮ್ಮ ಸಂಕಲ್ಪ ಶಕ್ತಿಯ ಕಿಂಚತು ಅಂಶವನ್ನು ಧಾರೆ ಎರೆದರು. ತದನಂತರ ಇಲ್ಲಿಂದ ಕದಲು ಎಂಬಂತೆ ಶಾಮ ನನ್ನತ್ತ ನೋಡಿದ. ನಾನು ಅಲ್ಲಿಂದ ಹೊರ ಬಿದ್ದೆ.
*
*
*
ಅಲ್ಲಿಂದ ಎರಡನೆ ದಿನದಂದು ಆ ಸೀರೆ ಉಟ್ಕಾ... ಈ ಸೀರೆ ಉಟ್ಕಾ ಎಂದು ಸಿದ್ದಮ್ಮಜ್ಜಿ ತನ್ನ ಒಡಹುಟ್ಟಿದ ಅಕ್ಕ ನಿಂಗಮ್ಮಜ್ಜಿಗೆ ತಾರೀಫು ಮಾಡುತ್ತಿರುವಾಗಲೇ ಮಹಿಳಾ ಸಮ್ಮೇಳನ ನಡೆಯಲಿರುವ ಸಂಗತಿ ನನ್ನ ಅರಿವೆಗೆ ಬಂದದ್ದು. "ಏನಯ್ಯಾಅ ಅವನು ಅಷ್ಟೊಮ್ದು ತಿರಸ್ಕಾರದಿಂದ ಕಾಣುತ್ತಾನೆಂದು ಗೊತ್ತಿದ್ದು ನೀನ್ಯಾಕೆ ಶಾಸ್ತ್ರಿಗಳ ಮನೆಗೆ ಹೋಗಿದ್ದಿ" ಎಂದು ಕಮಲಾಕರ ನನ್ನನ್ನು ಪತ್ರಿಕೆಯ ಕಛೇರಿಗೆ ಬರಮಾಡಿಕೊಂಡು ವಿಲಕ್ಷಣವಾದ ಪ್ರಶ್ನೆಕೇಳೆದ್ದು ನೆನ್ನೆ ಮಧ್ಯಾನ್ನ ಸುಮಾರು ಎರಡು ಗಂಟೆ ಸುಮಾರಿಗೆ. "ಅವನೇನು ನನ್ನ ತಿರಸ್ಕಾರದಿಂದ ಕಾಣಲಿಲ್ಲ...ಇರ್ಲಿ ಇದ್ನ ನಿನ್ಗೆ ಯಾರು ಹೇಳಿದ್ದು" ಎಂದು ಸಮ್ಮೇಳನದ ಪೂರ್ವಭಾವಿ ಸಿದ್ಧತೆಯ ವರದಿಯನ್ನು ಓದುತ್ತ ಕೇಳಿದೆ. ಹ್ಹ... ಹ್ಹ... ಹ್ಹ...ಎಂದು ನಕ್ಕು ಆ ಪತ್ರಕರ್ತ "ಇನ್ಯಾರು ಹೇಳ್ತಾರೆ. ಆ ಶಾಮನೆ" ಎಂದು ಹೇಳಿದ ಸ್ವಲ್ಪ ಹೊತ್ತಿಗೆ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದ ಜಲಜಾಕ್ಷಿ ಒಳಗಡೆ ಬಂದಿದ್ದಳು. ಬಂದವಳೆ ಕೈಲಿದ್ದ ಫೈಲ್ ತೇಬಲ್ ಮೇಲೆ ಕುಕ್ಕಿ "ಏನಪ್ಪಾ... ನಿನ್ನ ಎಲ್ಲಂಥ ಹುಡ್ಕೋದು? ಬಂದಿಷ್ಟು ದಿನಾದುರ್ ಫೋನಾದ್ರು ಮಾಡೊದು ಬೇದೇನು? ನಾಳೆ ಫಂಕ್ಷನ್ನಿಗೆ ಎಮಿನಿಯಂಟ್ಸ್ ಪರ್ಸನಾಲಿಟೀಸೆಲ್ಲ ಬರ್ತಿದ್ದಾರೆ. ನಿಮ್ಮ ನಿಂಗಮ್ಮಜ್ಜಿಯ ಅಧ್ಯಕ್ಷತೆಯಲ್ಲಿ ನಡೆಯೋದು ನೆನಪಿಟ್ಕೋ... ವರದಕ್ಷಿಣೆ ವಿರುದ್ಧ ಹೋರಾಡ್ತಿರೋ ಜಾಗಟೆ ತಿಮ್ಮಕ್ಕ; ಇಂಡಿಯಾದ ವೈವಾಹಿಕ ವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ಪ್ರೊಫೆಸರ್ ರುದ್ರಮುನೆಮ್ಮ, ಚಾತುರ್ವರ್ಣ ವ್ಯವಸ್ಥೆ ವಿರುದ್ಧ ಹೋರಾಡ್ತಿರೋ ಕುಲಕರ್ಣಿ ಖಾಸಿಮಮ್ಮ ಮೊದಲಾದವರೆಲ್ಲ ಬರ್ತಿದಾರೆ... ಅವರ್ಗೆ ಇರೋದ್ಕೆ ವ್ಯವಸ್ಥೆ ಮಾಡೊ ಹೊತ್ಗೆ ಸಾಕು ಸಾಕಾಗಿ ಹೋಯ್ತು ಕಣಪ್ಪ. ನಿಮ್ಮಂಥ ಗೆಳೆಯರು ಸಕ್ರಿಯವಾಗಿ ದುಡಿದಿದ್ರೆ ಹೇಗೆ? ಇಲ್ಲಿ ಹೇಗೋ ಸಿಕ್ಕಿದೆಯಲ್ಲಾ? ಸ್ವಾಗತ ಭಾಷಣಾನ ನಮ್ಮ ಮಸಾಲೆ ಮಾಡ್ತಾರೆ. ನೀನು ಮಾತ್ರ ಅದ್ಭುತವಾಗಿ ವಂದನಾರ್ಪಣೆ ಮಾಡ್ಬೇಕು ನೋಡು..." ಎಂದು ಒಂದೇ ಉಸುರಿಗೆ ಹೇಳಿ ಮುಗಿಸಿದಳು. ಉಪನ್ಯಾಸಕಾರರೆಲ್ಲ ನನಗೇನು ಅಪರಿಚಿತರೇನಲ್ಲ. ಅಧ್ಯಕ್ಷತೆ ವಹಿಸುವ ನಿಂಗಮ್ಮಜ್ಜಿಯಂತೂ ನನ್ನ ತಾಯಿಯ ಸದ್ಯ್ ದೊಡ್ಡ್ಡಮ್ಮ. ತಾಯ್ಲೆತ್ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡು ಗಟ್ಟಿಯಾಗಿ ತೃಪ್ತಿಯಾಗುವವರೆಗೆ ನಗಬ್‌ಏಕೆನ್ನಿಸಿತು. ಇಂಥ ಸಮ್ಮೇಳನ


೨೮೦

ನಡೆಯುವುದರ ಮ್ಲಕ ಅದು ಹೇಗೆ ಜಲಜಾಕ್ಷಿ ತನ್ನ ಓಟಿನ ಬ್ಯಾಂಕನ್ನು ದೃಢಗೊಳಿಸುವಳೇನೋ? ಈಕೆಯ ಪ್ರತಿಸ್ಪರ್ಧಿ ಗುಲಾಂನಬಿ ಸಾಮಾನ್ಯ ವ್ಯಕ್ತಿಯಲ್ಲ. ಬರುವವರನ್ನೆಲ್ಲ ಬರದಂತೆ ಮಾಡುವುದರಲ್ಲಿ ನಿಷ್ಣಾತ. ಆಕೆ ನಡೆಸುವ ಸಮ್ಮೇಳನದಲ್ಲಿ ಭಾಗವಹಿಸಿದರೆ ಗಂಡಸರು ಹೆಂಗಸರು ಗಂಡಸರಾಗುವರೆಂದೂ ಹೇಳಿ ನಾನು ಭಾಗವಹಿಸದಂತೆ ಮಾಡಿರುವನಂತೆ.

ದೇವದಾಸಿ ಪದ್ಧತಿ ವಿರುದ್ಧ ಅಹರ್ನಿಶಿ ದುಡಿಯುತ್ತಿರುವ ಬ್ಯಾಡರ ಭುವನೇಶ್ವರಿಗೂ ಅತಗೂ ಇದೇ ವಿಶಯದಲ್ಲಿ ಜಟಾಪಟಿಯಾಯಿತಂತೆ. ಆತನ ಬೆದರಿಜೆಗೆ ಮಣಿಯದೆ ಭುವನೇಶ್ವರಿ "ನೀನು ಏನೇ ಹೇಳು ನಾನು ಭಾಗವಹಿಸೇ ತೀರ್ತೇನೆ?" ಎಂದು ಘಂಟಾ ಘೋಷವಾಗಿ ಹೇಳಿಬಿಟ್ಟಳಂತೆ. ಆಗ ಸಿಟ್ಟಿಗೆದ್ದು ಗುಲಾಂ ನಬಿ "ಎಲೆ ಮುಂಡೆ... ಎಲ್ಲೋ ಮೂಲೆಲಿದ್ದು ಹಮಾಲಿಗಳ ಮಲಿಕ್ಕೊಳ್ತಿದ್ದೋಳ್ನ ಕರ್ಕೊಂಡು ಬೆಂಗ್ಳೂರು, ಮಡ್ರಾಸೂ, ಡೆಲ್ಲೀಗೆಲ್ಲ ಕರ್ಕೊಂಡೋಗಿ ದೊಡ್ ದೊಡ್ಡೋರ್ನೆಲ್ಲ ಪರಿಚಯ ಮಾಡಿಕೊಟ್ನಲ್ಲೆ ಭೋಸೂಡಿ. ತ್ರಿಸ್ತಾರ್ ಫೈವ್ವು ಸ್ಟಾರ್ ಹೋಟ್ಲಲ್ಲೆಲ್ಲ ಉಳ್ಳಾಡ್ಸಿದೆಲ್ಲೆ..." ಎಂದು ನಾಲಿಗೆಗೆ ಕೈ ಜೋಡಿಸಿದನಂತೆ. ಅದಕ್ಕೆ ಕೇರು ಮಾಡದೆ ಆಕೆ, "ಇದ್ ಏ ಮತ್ನ ನಾಕು ಮಂದಿಗೆದ್ರು ಅನ್ನು. ಆಗ ಗೊತ್ತಾಗ್ತದೆ ಈ ಮೇಲ್ ಡೋಮಿನೇಟೆಡ್ ಸೊಸೈಟೀಗೆ ನಿನ್ ಬಂಡ್ವಾಳ ಏನೂಂತ?... ನಾನೇನು ಕರೆದಿದ್ದೆನೋ... ನನ್ನ ಕರ್ಕೊಂಡೊಯ್ದು ಇಂಥಿಥೊರತ್ರ ಮಲಗ್ಸೂಂತ... ನಿನ್ನ ಪೆಂಡಿಂಗ್ ಕೆಲಸಾಗೋದಿದ್ವು ಮಲಗಿಸಿದ್ದೀ... ನೀನು ನನ್ನೊಂದೆ ಏನು ಈ ದಾರಿಗೆಲೆದಿರೋದು. ಕಂಪಿಲರಾಯನ ವಂಶದವಳಾದ ಕಮಲಿ; ಪಾಳ್ಳೆಗಾರ ವಂಶದ ಪಾರ್ವತಿ; ನಿಜಾಮನ ವಂಶದವಳಾದ ನಳಿನಿ... ಗುಡೇಕೋಟೆ ಪದ್ಮ ಜರುಮಲಿಯ ಜಾನಕಿ; ಕೊಟ್ಟುಊರಿನ ಬೆಣ್ಣೆ ಬಸವ್ವ... ಲಿಸ್ಟ್ ಕೊಡ್ಲೇನು ಲಿಸ್ಟ್... ನಾಳೆ ಸಮ್ಮೇಳನದಾಗ ನಿನ್ನ ಬಣ್ಣ ಬಟಾ ಬಯಲು ಮಾಡದಿದ್ರೆ ನಾನು ಅಮ್ಮನಕೇರಿ ಹಾಲವ್ವನ ಮಗ್ಳು ತಿಮ್ಮಾವ್ವ ಉರುಫ್ ಭುವನೇಶ್ವರೀನೆ ಅಲ್ಲ" ಎಂದು ಶಪಥ ಮಾಡಿಬಿಟ್ಟಳಂತೆ. "ಲೇ ಮುಂಡೆ ಕೈಯಲ್ಲಿ ಒಂದಿಷ್‌ಉ ಗಂಟು. ಮೈಯಲ್ಲೊಂದಿಷ್ಟು ನೆಣ ಐತಂಥ ಬಾಯಿಬಂದಂಗೆ ಹೋಗಿ ಹೇಗೆ ಭಾಗವಹಿಸುತ್ತೀಯೋ ನಾನೂ ನೋಡೇ ಬಿಡ್ತೀನಿ" ಎಂದು ಮೈಗೆಲ್ಲ ಸಿಟ್ಟು ಮೆತ್ತಿಕೊಂಡು ನಬಿ ಅಲ್ಲಿಂದ ಹೋದನಂತೆ. ಪ್ರಚಲಿತ ರಾಜಕಾರಣಿಗಳ ಹಾಸಿಗೆ ಹಂಚಿಕೊಂಡಿರುವ ಚತುರ್ವೇದಿಗಳಿಗೂ ಮಿಗಿಲಾದ ವ್ಯವಹಾರ ಜ್ಞಾನ ಹೊಂದಿರುವ ಭುವನೇಶ್ವರಿ ದೇವದಾಸಿ ಪದ್ಧತಿ ನಿರ್ಮೂಲನಾ ವೇದಿಕೆ ರಚಿಸಿದ್ದೇ ಜಲಜಾಕ್ಷಿ ಸಹಾಯದಿಂದ.ಅದಕ್ಕೆ ಮಹಿಳಾ ಸಂಕ್ಷೇಮ ನಿಧಿಯಿಂದ ಲಕ್ಷಾಂತರ ರುಪಾಯಿಗಳು ಹರಿದು ಬರುವಂತೆ ಮಾಡಿರುವುದೂ ಮಸಾಲೆಯವರ ಸಹಾಯದಿಂದಜಲಜಾಕ್ಷಿಯೆ. ದೇವದಾಸಿಯರನ್ನು ಮದುವೆಯಾಗಲು ಯುವಕರನ್ನು ಪ್ರೇರೇಪಿಸಿ ವೇದಿಕೆಯನ್ನು ಸದೃಡಗೊಳಿಸಿರುವುದೂ ಜಲಜಾಕ್ಷಿಯೇ. ನಾನೇನಾದ್ರು ಮಂದೆ ಎಮ್ಮೆಲ್ಲೆ ಆದ್ರೆ ನಿನ್ನನ್ನು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯನ್ನಾಗಿ ಮಾಡುವುದಾಗಿ ಭುವನೇಶ್ವರಿಗೆ ವಚನವಿತ್ತಿರುವುದೂ ಜಲಜಾಕ್ಷಿಯೇ. ಇಂಥ ಜಲಜಾಕ್ಷಿಯಾದ ತನ್ನ ಮಾತನ್ನು ಹೇಗೆ ಂಇರುವುದು ಸಾಧ್ಯ? ಎಂಬುದು ಏಕೆಯ ತರ್ಕ. ಕೊತ್ತಲಗಿಯ ಅಂಡರ್ರ್ವರ್ಲ್ಡ್ ಪರಿಚಯ ಸಾಕಷ್ಟಿರುವ ಭುವನೇಶ್ವರಿ ಸಮ್ಮೇಲನದಲ್ಲಿ ಭಾಗವಹಿಸುತ್ತಾಳೆಂಬುದು ಜಲಜಾಕ್ಷಿಯ ಸಧ್ಯದ ವಿಶ್ವಾಸ.

ಕಾರಿನಲ್ಲಿ ನನ್ನನ್ನು ಕೂರಿಸಿಕೊಂಡು ತಾನೇ ಡ್ರೈವ್ ಮಾಡುತ್ತ ಗ್ರಾಮದ ಮೂಲೆಯಲ್ಲಿ ತಿರುಗಾಡಿಸುತ್ತ ಮೇಲ್ಕಾಣಿಸಿದ ವಿಷಯಗಳನ್ನು ಪ್ರಸ್ತಾಪಿಸಿದಳು. ಹಾಗೆ ಒಂದು ರೌಂಡು ಪ್ರವಾಸಿ


೨೮೧
ಬಂಗಲೆ ಕಡೆ ಹೋಗಿ ಬಂದೆವು. ಆಗಲೆ ಬಂದು ಇಳಿದುಕೊಂಡಿದ್ದ ಕೆಲವು ಉಪನ್ಯಾಸಕಾರಿಣಿಯರಿಗೆ "ಇವ್ರೇ ನಾಳೆ ವಂದನಾರ್ಪಣೆ ಮಾಡೋದು" ಎಂದು ಪರಿಚಿಯಿಸಿದಳು. ಅವರೆಲ್ಲ ಹಾಗೋ ಎಂದು ಉದ್ಗರಿಸಿ ತಂತಮ್ಮ ಸಾಧನೆ ವಿವರ ಸರ್ಟಿಫೈಡ್ ಕಾಪಿಗಳನ್ನು ಕೊಡುತ್ತ ಸಾಧ್ಯವಾದ್ರೆ ವಂದನಾರ್ಪಣೆ ಮಾಡುವಾಗ ಪ್ರಸ್ತಾಪಿಸಿ ಮಹಿಳಾ ವಿಮೋಚನಾ ಹೋರಾಟ ಬೆಂಬಲಿಸಿ ಎಂದು ಮುಗುಳ್ನಕ್ಕೂ ಕೊಟ್ಟರು. "ವಂದನಾರ್ಪಣೆಗೆ ಇದೆಲ್ಲಾ ಬೇಕಾಗಿಲ್ಲ" ಎಂದು ವಾಪಸು ಕೊಡಲು ಹೋದಾಗ ಜಲಜಾಕ್ಷಿ "ಎಂಥಾ ಮಾತಾಡ್ತೀಯಾ? ಇವ್ರೆಲ್ಲ ಮಾತಾಡೋದು ಒಂದು ತೂಕವಾದ್ರೆ ವಂದನಾರ್ಪಣೆಯೇ ಒಂದು ತೂಕ ತಗೋ ಎಂದಳು. ನಾನು ನಗುತ್ತ ಹೋತದ ಕೊರಳಲ್ಲಿನ ಮೊಲೆ ಗಂಡಸಿನ ಜೋಲು ಎದೆಗಳಷ್ಟೆ ನಿಷ್ಪ್ರಯೋಜಕ. ವಂದನಾರ್ಪಣೆ ಎಂದು ಮಹಾನುಭಾವ ಬೀಚಿ ಹೇಳಿರುವನೇನೆಂದು ಆಕೆಗೆ ನೆನಪಿಸಿದೆ. ಅದಕ್ಕೆ ಎಲ್ಲರೂ ಬಿದ್ದು ಬಿದ್ದು ನಕ್ಕರು. ಅವರ ಒತ್ತಾಯಕ್ಕೆ ಕಟು ಬಿದ್ದು ವಿವರದ ಕಟ್ಟುಗಳನ್ನು ಕಂಕುಳಲ್ಲಿಟ್ಟುಕೊಂಡೆ. ಒಬ್ಬರ್ ಸಂಡಾಸ್ ಕಡೆಗೆ, ಒಬ್ಬರು ಬಾತ್ರೂಮಿಗೆ ಒಬ್ಬರು ಪ್ರಸಾಧನ ಕೋಣೆಗೆ ಹೋಗಲು ನಾನು "ಅಲ್ಲ ಜಲಜಾಕ್ಷಿ, ನಮ್ಮ ನಿಂಗಮ್ಮಜ್ಜಿ ಅಧ್ಯಕ್ಷತೆ ಎಂದರೇನು? ಇವ್ರೆಲ್ಲ ಭಾಷಣ ಮಾಡೊದೆಂದ್ರೇನು? ಭುವನೇಶ್ವರಿ ಕಾಷ್ಟ ಕೋಟಲೆ ಎದುರಿಸೋಣವೆಂದರೇನು..." ಎಂಬಿವೇ ಮೊದಲಾದ ಪ್ರಶ್ನೆಗಳು ಹಾಕಿದೆ. ಜವಾರಿತನ ಮತ್ತು ತಾಜಾನುಭವಗಳಿಂದ ಮಾತ್ರ ಸಮಾಜ ಕಂನು ತೆರೆಯಲು ಸಾಧ್ಯವೆಮ್ದು ಹೇಳಿದಳು. ಭುವನೇಶ್ವರಿಯನ್ನು ಗುಲಾಂ ನಬಿ ವಿರುದ್ಧ ಎತ್ತಿಕಟ್ಟುವುದಕ್ಕೇಂದೇ ಆಕೆ ಈ ಸಮ್ಮೇಳನ ರೂಪಿಸಿಕೊಂಡಿರುವಳೆಂದುಕೊಂಡೆ. ಈ ವಿಚಿತ್ರದ ಬೆರಗಿನೊಂದಿಗೆ ನಾನು ನಡೆದುಕೊಂಡೇ ಮನೆ ತಲುಪಿದ್ದು ಹಿಂದಿನ ದಿನದ ಮಾತು.
ಅದಕ್ಕಿಂತ ಮೊದಲೆ ನಮ್ಮ ಮನೆಗೆ ದಟ್ಟಂಡಿ ದಾರಂಡಿ ಅಡ್ಡಾಡಿ ನಿಂಗಮ್ಮಜ್ಜಿಯಲ್ಲಿ ಹುರುಪು ತುಂಬಿದ್ದಳೆಂದು ತಿಳಿಯಿತು. ಸಿನಿಮಾ ನೋಡುವುದೆಂದರೆ ಮೂಗು ಕುಯ್ಯಿಸಿಕೊಳ್ಳುವ ನಿಂಗಮ್ಮಜ್ಜಿ ಕೂಡ ತನ್ನ ವಾಗ್ ವೈಖರಿ ಪ್ರದರ್ಶಿವ ಸಲುವಾಗಿ ಇಂಥದೊಂದು ಛಾನ್ಸಿನ ನಿರೀಕ್ಷೆಯಲ್ಲಿದ್ದಳು. ಅಂಥದೊಮ್ದು ಅವಕಾಶ ತಾನ್‌ಏ ತಾನಾಗಿ ಒದಗಿ ಬಂದಿರುವುದನ್ನು ಆಕೆ ಹೇಗೆ ನಿರಾಕರಿಸಲು ಸಾಧ್ಯ.

ಹೊಟ್ಟೆ ಹುಣ್ಣು ಇಲಾಜಿಗೋಸ್ಕರ ಧಾರವಾಅದ ಲೂರ್ಧಾ ಆಸ್ಪತ್ರೆಯಲ್ಲಿರದಿದ್ದರೆ "ಯ್ ಮುದುಕೀ ಹೊಸ್ತಿಲು ದಾಟ್ದೀ ಅಂದ್ರೆ ಕಾಲು ಮುರೀತೀನಿ" ಅಂತಿದ್ದ. "ಅದ್‌ಏನು ತಲಿ ಬಡಕೊಂಡೈತವ್ವಾ. ಈ ವಯಸ್ನಾಗೆ ನಿಂಗೆ . ಯೇನಾದ್ರು ಯೇಳಿದ್ರೆ ಯೆಗ್ರಿ ಬೀಳ್ತೀಯಾ. ಅದೇನು ಮಾಡ್ತೀಯ ಮಾಡು" ಎಂದು ತನ್ನಕ್ಕನೆಂಬ ಬ್ರಹ್ಮಪುತ್ರ ಪ್ರವಾಹದೆದುರು ಈಜಲಾರದೆ ಸಿದ್ದಮ್ಮಜ್ಜಿ ನಿಂಗಮ್ಮಜ್ಜಿಯ ನರ್ತನಕ್ಕೆ ಒಪ್ಪಿಗೆ ಸೂಚಿಸಿತು.

ನಾನು ಕೋಣೆಯೊಳಗಿದ್ದೇ ೧೯೦೫ರ ಮಾಡೆಲ್ ತಂಗಿಯೋರ್ವಳು ೧೯೦೩ರ ಮಾಡೆಲ್ ಅಕ್ಕ ಓರ್ವಳಿಗೆ ಸಿಂಗಾರ ಮಾಡುತ್ತಿದ್ದುದನ್ನು ಗಮನಿಸುತ್ತಿದ್ದೆ. ಸಿಂಗರಿಸುವ ಪ್ರಕ್ರಿಯೆ ಮಧ್ಯಾಹ್ನ ಮೂರುಗಂತೆ ಹದಿನಾರು ನಿಮಿಷಕ್ಕೆ ಆರಂಭವಾಗಿದ್ದು ಸಾಯಂಕಾಲ ನಾಲ್ಕು ಗಂಟೆ ನಲವತ್ತೆರಡು ನಿಮಿಷಕ್ಕೆ ಮುಕ್ತಾಯವಾಯಿತು. ತನ್ನ ಸೇನಾಧಿಪತಿ ಈ ಪ್ರಕಾರವಾಗಿ ಅಲಂಕೃತಗೊಂಡು ಪುರುಷ ಪ್ರಪಂಚದ ವಿರುದ್ಧ ಸೆಡ್ಡು ಹೊಡೆಯಲುಸಜ್ಜಾಗುತ್ತಿರುವುದನ್ನು ಓಣಿಯ ಸಿದ್ದವ್ವ ರುದ್ರವ್ವ ನಂಜವ್ವ, ಕೊಟ್ರವ್ವ, ತಾಯವ್ವ, ಸಿವವ್ವ ಇವರೇ ಮೊದಲಾದ ಬಿರುಗಾಳಿ,


೨೮೨

ಸುಂಟರಗಾಳಿ ಕಣ್ತುಂಬ ವೀಕ್ಷಿಸಿದ್ದವು. ಆಕೆಯ ನಡಿಗೆಯ ನೇತೃತ್ವ ವಹಿಸಿರುವ ಕರ್ಮಕ್ಕೆ ಹೆದರಿ ನಾನು ವಮ್ದನಾರ್ಪಣೆಗಷ್ಟೆ ಸೀಮಿತವಾಗಿ ಅಲಂಕರಿಸಿಕೊಂಡು ಅಲ್ಲಿಂದ ಹೊರಟು ಜಲಜಾಕ್ಷಿಯ ಕಾರ್ಯ ಕ್ಂದ್ರವಾದ... ಖಡ್ಗ ಪತ್ರಿಕಾಲಯದ ಕಟ್ಟಡ ತಲುಪಿದೆ. ಸಂಘಟಕಿಯ ನಿರ್ದೇಶನದಂತೆ ಕಮಲಾಕರ ಕುರ್ತಾಪಾಯಿಜಾಮ ಧರಿಸಿ ನನಗಾಗಿ ಕಾಯುತ್ತಿದ್ದ. ಒಬ್ಬ ಕಾಮೆರಾಮನ್ನು; ಒಬ್ಬ ವರದಿಗಾರನನ್ನು ಸಮ್ಮೇಳನದ ಜಾಗಕ್ಕೆ ಅಟ್ಟಿದ. ಪ್ರಶಸ್ತಿಯ ಹಣದಲ್ಲಿ ಮತ್ತು ಸುರೇಶಗೌಡ ಕೊಟ್ಟಿದ್ದ ಹಫ್ತಾ ವಸೂಲಿ ಹಣದಲ್ಲಿ ಅವನು ಹದಿನೈದು ದಿನದ ಹಿಂದೆಯಷ್ತೆ ಕೊಂಡಿದ್ದ ಬುಲೆಟ್ ಮೇಲೆ ಕೂಕಂಡು ಸುತ್ತೀ ಬಲಸೀ ಸಮ್ಮೇಅಳನ ವ್ಯವಸ್ಠೆಯಾಗಿದ್ದ ಲೆನಿನ್ಗ್ರಾಡ್ ಮೈದಾನ ತಲುಪಿದೆವು.

ಕೊಟ್ಟೂರಿನ ಲೆನಿನ್ ಗ್ರಾ ಮೈದಾನ ನಾಡಿನಲ್ಲೆಲ್ಲ ಚಿರಪರಿಚಿತ. ೧೯೩೯ರಲ್ಲಿ ಗಾಂಧಿ ಮಹಾತ್ಮರು ಕೊಟ್ಟುರಿಗೆ ಬಮ್ದಾಗ ಅಲ್ಲಿ ಭಾಷಣ ಮಾಡಲು ಬಿಲ್‌ಕುಲ್ ಒಪ್ಪದೆ ಹರಿಜನ ಕೇರಿಗಂಟಿಕೊಂಡಂತಿರುವ ಅರಳಿಕಟ್ಟೆ ಮೇಲೆ ಸ್ವತಂತ್ರ್ಯ ಸಮರದ ಕಹಳೆ ಊದಿ ಸತ್ಯ ಮತ್ತು ಅಹಿಂಸೆ ಕುರಿತು ಒತ್ತಿ ಹೇಳಿ ಹೋಗಿದ್ದರು. ಸ್ವಯಂ ಗಾಂಧೀಜಿಯವರಿಂದಲೇ ಬೇಬಿಷ್ಟೆಗೆ ಒಳಗಾದ ಸದರೀ ಮೈದಾನಕ್ಕೆ ಲೆನಿನ್ ಗ್ರಾ ಎಂಬ ಹೆಸರು ಬಂದುದು ಕಾಮ್ರೇಡ್ ಮಾಯಾಪುರಂ ಅಬ್ದುಲ್ ಘನಿಯವರಿಂದ. ದಕ್ಷಿಣ ಭಾರತದಲ್ಲಿ ಅವರೋರ್ವರೆ ಸೋವಿಯತ್ ಲ್ಯಾಂಡ್‌ಗೆ ಹೋಗಿ ಲೆನಿನ್‌ರವರ ಕೈಕುಲುಕಿದರಂತೆ, ಅವರೇ ಸದರೀ ಮೈದಾನದಲ್ಲಿ ಹಿಂಸೆಯ ಮೂಲಕ ಸ್ವಾತಂತ್ರ್ಯ ಸಂಪಾದಿಸಬೇಕೆಂದು ಭಾಷಣ ಮಾಡಿ ಮುಂದೊಂದು ದಿನ ಕೊಟ್ಟೂರಿನ ಅಹಿಂಸಾವಾದಿಗಳಿಂದಲೇ ಒದೆ ತಿಂದು ಸತ್ತನಂತೆ., ಸದರೀ ಗ್ರಾಮದ ಹಿಂಸಾವಾದಿಅಹಿಂಸಾವಾದಿಗಳ ನಡುವೆ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘರ್ಷಣೆ ಸ್ಥಳ ನಾಮೆಯಲ್ಲೆಲ್ಲೂ ಉಲ್ಲೆಖವಾಗಿಲ್ಲ. ಅಹಿಂಸಾವಾದಿಗಳಿಗಿಂತ ಹಿಂಸಾವಾದಿಗಳೆ ಕ್ರಮೇಣ ಜನಪ್ರಿಯಗೊಂಡು ಸದರೀ ಮೈದಾನಕ್ಕೆ ಲೆನಿನ್ ಗ್ರಾಡ್ ಎಂಬ ಹೆಸರು ಬಂದಿರಬಹುದೆಂದು ಜನರ ಅಂಬೋಣ.

೧೯೮೪ರಲ್ಲಿ ಹುತಾತ್ಮರಾದ ಸ್ರೀಮತಿ ಇಂದಿರಾಗಾಂಧಿಯವರು ೧೯೭೫ರಲ್ಲಿ ವಿಧಿಸಿದ್ದ ತುರ್ತು ಪರಿಸ್ಥಿತಿ ವಿರೋದಿಸಿ ಅನೇಕರು ಭಾಷಣ ಮಾಡಿದ್ದು ಇಲ್ಲಿಯೇ. ದೊಡ್ಡಾಟ, ಸಣ್ಣಾಟ, ನಾಟಕಗಳಿವೇ ಮೊದಲಾದ ರಂಗ ಚಟುವಇಕೆಗಳಿಗೆ ಹೆಸರಾದ ಈ ಮೈದಾನ ಜನರ ಆಡುಮಾತಿನಲ್ಲಿ ಲೆಂಗ್ಯಾಡು ಆಗಿದೆ. ಸ್ವಾತಂತ್ರ್ಯ ಪೂರ್ವದ ಲೆಂಗು ಎಂಬ ಆಟ ಆಡುತಿದ್ದರಾದ್ದರಿಂದ ಲೆಂಗ್ಯಾಡು ಎಂಬ ಹೆಸರು ಬಂದಿರುವುದೆಂದು ಸ್ಥಳೀಯ ಹವ್ಯಾಸಿ ಸಂಶೋಧಕ ಉಳ್ಳಾಗಡ್ದೆ ಈರೇಶ ಅಭಿಪ್ರಾಯ ಪಟ್ಟಿರುತ್ತಾನೆ. ಈ ಪ್ರಕಾರವಾಗಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಹಿನ್ನೆಲೆಯುಳ್ಳ ’ಲೆಂಗ್ಯಾಡು’ ಮೈದಾನವನ್ನು ನಮ್ಮ ಬುಲೆಟ್ಟು, ಅಟ್ಟೆಟ್ಟಟ್ಟು, ಉಟ್ಟುಟ್ಟುಟ್ಟು ಎಂದು ಭಯಂಕರ ಸದ್ದು ಮಾಡುತ್ತ ಪ್ರವೇಶಿಸಿತು. ಜನರು ಹೋಹೋ! ಹ್ಹಾ...ಹ್ಹಾ ಎಂದು ಉದ್ಗರಿಸಿ ಸ್ವಾಗಸುತ್ತಿರಲು ನಾವು ಹೋಗಿ ನಮ್ಮ ನಮ್ಮ ಉಚಿತಾಸನದಲ್ಲಿ ಕೂಕಂಡೆವು.

ಲಾರಿಗಳು, ಟ್ರಿಪ್ಪರುಗಳು ಸುತ್ತಮುತ್ತ ಹಳ್ಳಿಗಳಿಂದ ಜನರನ್ನು ಹೊಡೆದಿಳಿಸುವುದರಲ್ಲಿ ಮಗ್ನವಾಗಿದ್ದವು. ನೋಡು ನೋಡುವಷ್ಟರಲ್ಲಿ ಎಲೆ ಅಡಿಕೆ, ತಂಬಾಕು, ನೆಶ್ಶೆ ಪುಡಿಗಳಿಂದ ಮೈದಾನ ತುಂಬಿ ಹೋಯಿತು. "ನನ್ನ ಗಂಡ ಕುಡ್ಕೊಂಡು ಬಂದು ದಿನಾಲು ಹೊಡಿ ತಾನೆ ನಮ್ಮವ್ವ್ವ" ಎಂದೋ, ಹಡ್ದೂ ಹಡ್ದೂ ಸಾಕಾಗಿ ಹೋಗೈಟೆ ದೊಡ್ಡವ್ವ" ಎಂದೋ; ಪಂಚಮಿ ಹಬ್ಬಕ ನಮ್ಮಣ್ಣ ಕರಿಯಾಕೆ ಬರ್ಲಿಲ್ಲೆ" ಎಂದೋ; "ಈ ನಮ್ಮಮ್ಮ ಜಲ್ಜಾಕ್ಚಿ ನಮ್ಗೇನಾರ ಒಂದಿಕ್ಕು


೨೮೩

ತೋರಿಸ್ತಾಳೇನೋ ನೋ ಡಾಮ ಎಂದೋ" ಗೊಣಗಾಡುತ್ತಿದ್ದರು. ಅಷ್ಟರಲ್ಲಿ ಮಿನಿ ಬಸ್ಸಿನಲ್ಲಿ ಬೆವತು ಮುದ್ದೆಯಾಗಿದ್ದ ಆ ಲಿಪ್‌ಸ್ತಿಕ್ಕು; ನಶ್ಶೆಪುಡಿ ತೊಂಬಲ ಮಂತಾದ ನೂರತ್ತು ಮಂದಿ ವೀರ ಮಹಿಳೆಯರು ಇಳಿಯುತ್ತಿದ್ದಂತೆ "ಭುವನೇಶ್ವರಿ ಜಿಂದಾಬಾದ್ ಗುಲಾಮ ನಬಿ ಮುರ್ದಾಬಾದ್" ಒಂದು ಕೂಗುತ್ತ ಸಮ್ಮೇಳನದಮುಖ್ಯದ್ವಾರ ಪ್ರವೇಶಿಸಿದರು. ಪತಿವ್ರತೆಯರೂ; ಗಂಡ ಬಿಟ್ಟವರೂ, ರಂಡ ಮುಂಡೆಯರೆಲ್ಲರೂ ಒಗ್ಗಟ್ಟಾಗಿ ಕೊತ್ತಲಗಿಯಿಂದಿಳಿದ ವೃತ್ತಿಪರ ವೇಶ್ಯೆಯರ, ದೇವದಾಸಿಯರ ವಿರುದ್ಧ ವಾಗ್ಯುದ್ಧಕ್ಕಿಳಿದರು. ಸಮ್ಮೇಳನದ ಮುಖ್ಯ ಸಚೇತಕನಾದ ಗುಡ್ತಿಂದಪ್ಪ ಮತ್ತು ಮುಖ್ಯ ವಖ್ತಾರನಾದ ಯಂಕೋಬಿಯವರು ಅವರ ನಡುವೆ ಶಾಂತಿ ಸ್ಥಾಪಿಸಲು ಶ್ರಮಿಸಿ ಕೊನೆಗೂ ಯಶಸ್ವಿಯಾದರು. ಕೊತ್ತಲಗಿಯ ಮಿನಿ ಬಸ್ ತಂದ ಲೇಟೆಸ್ಟ್ ನ್ಯೂಸ್ ಪ್ರಕಾರ ಭುವನೇಶ್ವರಿಯನ್ನು ಬಿಡಿಓ ಭರಮಪ್ಪನ ಕುತಂತ್ರದಿಂದ ಊರಹೊರಗಿರುವ ಪ್ರವಾಸಿ ಬಂಗಲೆಗೆ ನಬಿ ಬರಮಾಡಿಕೊಂಡನಂತೆ. ಆಕೆಗೂ ಆತನಿಗೂ ಮುಷ್ಟಿ ಯುದ್ದ್ಧ್, ಮಲ್ಲ ಯುದ್ಧ ರಾತ್ರಿ ಇಡೀ ನಡೆಯಿತಂತೆ. ಗುಲಾಮನ ಗೂಂಡಾಗಳು ಆಕೆಯನ್ನು ಅಮೇರಿಕನ್ ಶೈಲಿಯ ಶೌಚಾಲಯದಲ್ಲಿ ಕೂಡಿ ಹಾಕಿ ಬಿಟ್ಟರಂತೆ. ಇದು ಹೇಗೋ ತಿಳಿದ ದೇವದಾಸಿ ನಿರ್ಮೂಲನಾ ಸಂಘದ ಗೌರವ ಸದಸ್ಯೆಯರಾದ ನೂರಾರು ಮಂದಿ ತಂತಮ್ಮ ಕೈಯಲ್ಲಿ ಹಳೆಪಳೆ ಕೆರಗಳನ್ನು ಹಿಡಿದುಕೊಂಡು ಪ್ರವಾಸಿ ಬಂಗಲೆಯನ್ನು ಮುತ್ತಿದರಂತೆ. ಅವರ ಹೊಡೆತಗಳನ್ನು ತಾಳಲಾರದೆ ಗುಲಾಮನೂ ಆತನ ಗೂಂಡಾಗಳು ಕಾಲಿಗೆ ಬುದ್ಧಿ ಹೇಳಿ ಸರ್ಕಿಲ್ಲನ ನೆರವು ಪಡೆದರಂತೆ, ಸರ್ಕಿಲ್ ಸರೂಪಾನಂದ ರಾತ್ರಿ ಇಡೀ ಢಾಂಢೂಂ ಅಂತ ಭುವನೇಶ್ವರಿ ಮತ್ತಾಕೆಯ ಅಭಿಮಾನಿ ಬಳಗದ ಮೇಲೆ ದೈಹಿಕಾಕ್ರಮಣ ಮಾಡಿದನಂತೆ. ಪಿಂಪ್ ಕಲ್ಲರಿನ ಪರಮೇಶಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪುರುಶೋತ್ತಮೈಂಗಾರ್ರವರಿಗೆ ಫೋನ್ ಮಾಡಿ ವಸ್ತು ಸ್ಥಿತಿ ವಿವರಿಸಿದನಂತೆ. ರಾಕಾರವರು ಜಿಲ್ಲೆಯ ಎಸ್ಪಿಯವರಿಗೂ; ಎಸ್ಪಿ ಸರ್ಕಿಲ್ಗೂ ಫೋನ್ ಮಾಡಿ ಭುವನೇಶ್ವರಿ ಬಿಡುಗಎಯಾಗುವ ಹೊತ್ತಿಗೆ ಅಕೆಯದೇ ಆದ ಹನ್ನೆರಉ ಹುಂಜಗಳು ಪಾಂಜಜನ್ಯ ಮೊಳಗಿಸಿದುವಂತೆ... ಆದರೂ ಗುಲಾಮನ ಅಟಾಟೋಪ ಕಡಿಮೆಯಾಗಲಿಲ್ಲವಂತೆ... ಒನಕೆ ಓಬವ್ವಗಿಂತಲೂ ಸುಸ್ತಾಗಿರುವ ಭುವನೇಶ್ವರಿ ಯಾವ ಮೇಕಪ್ಪಿಲ್ಲದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುತ್ತಾಳೆ ಎಂದು ಕೊತ್ತಲಗಿಯ ವೀರರಮಣಿಯರು ಸಾರಿ ಸಾರಿ ಹೇಳಿದರು.

ಓಂದೇ ಸಮನಾಗಿ ಗುಜುಗುಜು ಎದ್ದು ಸಭೆಗೆ ಸಭೆಯೇ ತಂಗನತಿಟ್ಟಾಯಿತು. ಕೈಮಗ್ಗದ ಸೀರೆ ರವಿಕೆ ಉಉ ಸಾಕ್ಷಾತ್ ಸೋನಿಯಾ ಗಾಂಧಿಯವರನ್ನು ನೆನಪಿಸುವಂತಿದ್ದ ಜಲಜಾಕ್ಶಿ ಓಹೋ... ಹ್ಹಾ... ಹ್ಹಾ... ಅಂತ ಬಂದು ನಮ್ಮ ನಮ್ಮ ಅಂಗಿಗಳಿಗೆ ಬ್ಯಾಡ್ಗ್ ಅಂಟಿಸಿ ಹೋದಳು. ಆಕೆಯ ಬಲಗೈ ಎಂದೇ ಹೆಸರಾಗಿರುವ ಜೋಗರ ಗೋಣಿ ಬಸವ್ವಗೂ; ಎಡಗೈ ಎಂದೇ ಹೆಸರಾಗಿರುವ ಕರೆಕಟ್ಟೆ ಕರೆವ್ವಗೂ ಮೈಕ್‌ಟೆಸ್ಟಿಂಗ್ ಒನ್‌ಟೂತ್ರಿ ಎಂದು ಹೇಳುವ ಸಲುವಾಗಿಜಗಳವಾಯಿತು. ಅದೇ ಹೊತ್ತಿಗೆ ಆಗಮಿಸಿದ್ ಭಾಶಣಗಾರ್ತಿಯರಾದ ಜಾಗಟೆ ತಿಮ್ಮಕ್ಕ; ಪ್ರೊ.ರುದ್ರಮುನೆಮ್ಮ, ಕುಲಕರ್ರ್ಣಿ ಖಾಸೀಮಮ್ಮ ಮೊದಲಾದವರೆಲ್ಲ ಬ್ಯೂಟಿಪರ್ಲೆರ್‍ಗಳೇ ಮಹಿಳೆಯರ ವೇಶಧರಿಸಿರುವುವೇನೋ ಎಂಬಂತೆ ಬಂದು ತಲಾ ಒಂದೊಂದು ರವಂಡು ಸಿಂಹಿಣಿಯಾವಲೋಕನ ಮಾಡಿ ತೊಂಕದ ಮೇಲೆ ಕೈ ಇಟ್ಟುಕೊಂಡು ವೇದಿಕೆ ಮೇಲೆ ಶತಪಥ ಹೆಜ್ಜೆ ಹಾಕ ತೊಡಗಿದರು. ತರುಣಿಯೋರ್ವಳು ನೋಡುತ್ತಲೆ ನಮ್ಮ ಬಳಿಗೆ ಓಡಿಬಂದು " ನೀವೇ ಅಲ್ವೇನ್ರಿ ವಾಗ್ಲೀಲಿ ಮೇಶ್ಟ್ರು ಕೆಲ್ಸ ಮಾಡ್ತಿರೋದು" ಎಂದು ಕೇಳಿದಳು. ನಾನು ಆಶ್ಚರ್ಯದಿಂದ


೨೮೪

ಮತ್ತು ಹೆಮ್ಮೆಯಿಂದ ‘ಹೂ’ ಅಂದೆ. ಆಕೆ ಕೂಡಲೆ ದನಿ ಎತ್ತರಿಸಿ "ಏಯ್ ಯವ್ವೋ ಬಾರೆ... ಯ್‌ಏಮ್ ಮ್ಮೋ ಬಾ.." ಎಂದು ಕೂಗುತ್ತಲೆ (ಕಾಗೆಯೊಂದಗಗುಳ ಕಂಡರೆ ಕರೆಯುವ ತನ್ನ ಬಲಗವನು) ಬಂದಿಬ್ಬರು ಹೆಂಗಸರು ಸಿಕ್ಕವರಿಗೆ ಸಿವ್ಲಿಂಗ ಅಂತ ಬಂದರು. "ಈಕೆ ನಮ್ಮವ್ವ" ಎಂದು ಒಬ್ಬಾಕೆಯನ್ನೂ "ಈಕೆ ನಮ್ಮಮ್ಮ" ಎಂದು ಮುದುಕಿಯನ್ನೂ ಪರಿಚಯ ಮಾಡಿಸಿದಳು. ಅಮ್ಮ "ಯೇಯ್ ಅವುದಾ... ಅಂತಾ " ರೆಡ್ಡೇರು ಗವುಡರಿರೋ ಊರಾಗಿದ್ದೆ... ಒಂದ್ಸಾರಿ ಆದ್ರು ಬರಬಾರ್ದಾ?" ಎಂದು ನನ್ನ ಸೋಟಿಗೆ ತಿವಿದು ವಿಶ್ ಮಾಡಿದ್ರೆ ... ಅವ್ವ ಎಂಬಾಕೆಯು "ನೀನು ಸತ್ತೀ ಅಂತ ಮಾತಾಡ್ಕಂತಿದ್ರಲ್ಲ ಅವುದಾ ... ನಮ್ಮೂರ್ಗೆ ಬಂದು ಕೊತ್ಲಯ್ಯಗೊಂದು ತುಪ್ಪದ್ದೀಪ ಹಚ್ಚಬಾರ್ದಾ" ಎಂದು ನನ್ನ ಮುಖಕ್ಕೆ ಎರಡೂ ಕೈಹಚ್ಚಿ ಲಟ್ಟಿಗೆ ತೆಗೆದಳು. ಅನಂತರ ಗೊತ್ತಾಯಿತು ನನಗೆ ಇವರು ಒನಕೆ ಬಸೆಟ್ಟಮ್ಮನ ವಂಶಸ್ಥರೂ; ಪಾಮಲ ಕುರ್ತಿ ಸಿದ್ದಾರೆಡ್ಡಿಯ ಬೆನ್ನು ಹುಣ್ಣು ವಾಸಿ ಮಾಡಿದವರೂ ಆದ ಪ್ನಕೆ ಬಸಮ್ಮ; ಮತ್ತಾಕೆಯ ಮಗಳು ವೆಂಕಮ್ಮ; ಮತ್ತಾಕೆಯ ಮೊಮ್ಮಗಳು ರಂಗಮ್ಮಾಂತ. ನಾನು ಒಂದು ಕ್ಷಣ ಮುಖವನ್ನು ಹುಣುಸೆ ತೊಕ್ಕು ಮಾಡಿಕೊಂಡು ಹ್ಹಿ...ಹ್ಹಿ... ಅಮ್ದೆನು. ಆಗವರು ತಂತಮ್ಮ ಮುಖದ ಸ್ಟೇಷನ್ ಛೇಂಜು ಮಾಡಿ "ಯೇಮ್ ನಮ್ಮ ಶಾಮಣ್ಣ ಕಾಣ್ತಿಲ್ಲಲ್ಲೇ..." ಎಂದು ಹುಡುಕಾಡುತ್ತ ಮುಂದಿನ ಸಾಲಿನ ಬೆಂಚ್ ಕಡೆ ಹೋದರು. ಕೇಳಿಸಿಕೊಂಡಿದ್ರೆ ಒಳ್ಳೆರ್ಯದೂಂತ ಪಕ್ಕ ನೋಡಿದೆ. ಕಮಲಾಕರ ಸ್ವಲ್ಪ ದೂರದಲ್ಲಿ ಯಾರೊಂದಿಗೋ ಮಾತಾಡುತ್ತ ನಿಂತಿದ್ದವನು ಕೂಡಲೆ ಹೊರಟು ಬಂದು " ಯಾರೋ ಹೆಂಗಸರು ಮಾತಾಡಿಸ್ದಂಗಿತ್ತಲ್ಲ?" ಎಂದು ಕೇಳಿ ನಂತರ ಓಹ್ "ಅವ್ರಾ!" ಎಂದು ಮೀಸೆ ಗಡ್ಡದ ನಡುವೆ ನಕ್ಕ.

"ಓಯ್ ಜಲ್‌ಜಲ್ದಿ ಸುರುವು ಮಾಡ್ತೀರೋ... ಇಲ್ಲ ವಂಟೋಗೋಣ" ಎಂದೊಬ್ಬಾಕಿ ಗಟ್ಟಿಯಾಗಿ ಕೂಗಿದ್ದು ಕೇಳಿಸಿತು, ಹಿಂದಿರುಗಿ ನೋಡಿದರೆ ಸರಸಿ ಯಾರದೋ ಮಗುವನ್ನು ತೊಡೆಮೇಲಿಟ್ಟುಕೊಂಡು ಲೊಚಲೊಚ ಮುದ್ದು ಕೊಡುತ್ತಿರುವುದು ಕಂಡಿತು. ಆಕೆಗೂ ಹಿಂದಿದ್ದ ಸಾಲಿನಲ್ಲಿ ಗದ್ದಲ ಗವುಜ ಎದ್ದಿದ್ದರಿಂದ ನೋಡದೆ ಗತ್ಯಂತರವಿರಲಿಲ್ಲ. ಆಕೆಯ ವಕ್ಷಸ್ಥಳ ಮಿರಿಮಿರಿ ಮಿಂಚುತ್ತ ನನ್ನ ನೋಟದ ಸರಳರೇಖೆ ಗುಂಟ ಹಾದು ಹೋಗಲು ಅಲ್ಲಿ ಗಂಡನೊಬ್ಬ ತನ್ನ ಹೆಂಡತಿಯ ತುರುಬು ಹಿಡಿದು ಎಳೆದಾಡುತ್ತ "ಕತ್ತಿ ರಂಡೆ ಮನಿ ಹೊಸ್ತಿಲು ದಾಟಿ ಇಲ್ಲಿವರ್ಗೂ ಬಂದು ಆ ಮುಂಡೇರು ಭಾಷ್ಣ ಕೇಳೋಟರ ಮಟ್ಟಿಗೆ ಕೊಬ್ಬಿದ್ದೀಯಾ, ಮನೀಲಿ ಅಡ್ಗೇನ ನಿಮ್ಮಮ್ಮ ಮಿಂಡ ಮಾಡ್ತಾನೇನೇ ಭೋಸೂಡಿ. ನಿನ್ನ ಮನೀಗೆಳ್ಕೊಂಡೊಯ್ದು ಕಾಲ್ಮುರ್ದು ಕುಂಡ್ರಿಸ್ಲಿಲ್ಲ ನಾನು ಮೆಣಸಿನ ಕಾಯಿ ಮರೆಪ್ಪ ಮಗ ಅಪಾರೀನೇ ಅಲ್ಲ" ಎಂದು ಕೂಗಾಉತ್ತಿರುವುದು ಕಂಡಿತು. ಸರ್ವ್ ಸಾಮಾನ್ಯ ಮಹಿಳೆಯಲ್ಲದ ಆಕೆ "ಬಿಡಲೋ ಬಾಯಾ... ಕುಂತನಿಂತ ಸಬಾದಾಗ ನನ್ನ ತುರುಬಿಡ್ದು ಎಳೀತಿಯಾ... ಇನ್ನು ದುಡ್ದಿಕ್ಕೋನಾಗಿದ್ರೆ ಇನ್ನೇಟಾರಾಡ್ತಿದ್ಯೋ... ನಾನು ದುಡ್ದಿಕ್ಕದಿದ್ರೆ ನೀನೆಲ್ಲಿರ್ತಿದ್ಯೋ..." ಎಮ್ದು ಲಭೋ ಲಭೋ ಬಾಯಿ ಬಡಿದುಕೊಳ್ಳಲು ಸುತ್ತ ಹೋ ಎಂದು ವಿಮೋಚನಾ ಸಂಘದ ಸದಸ್ಯರು ಜಮಾಯಿಸಿ ಜಟಾಪಟಿಗಿಳಿದರು. ತನ್ನೆಂಡ್ರೂನ ತಾನೆಂಗಾರ ಹೊಡ್ಕೊಂತಾನ ಎಂದು ಕೆಲ ಗಂಡಸರು ಅವರ ಇಗೆ ದೋತರ ತಂಪು ಮಾಡಿಕೊಂಡು ಯಾಕಿದ್ದೀತಪ್ಪಾ ಎಂದು ಸ್ವಸ್ಥಾನಕ್ಕೆ ಹಿಂದಿರುಗಿದರು. ಅಲ್ಲಿ ಅಳಿದುಳಿದಿದ್ದ ಪೋಲೀಸರು ಲಾಠಿ ಚಾರ್ಜು ಮಾಡದಿದ್ದಲ್ಲಿ ಆ ಗಂದ ಹೆಂದರ ಜಗಳ ಉಂದು ಮಲಗಿಕೊಂದರೂ ಮುಗಿಯುತ್ತಿರಲಿಲ್ಲ. ಆ ಗಲಾಟೆ ಗಮನವನ್ನು ತನ್ನ ಕಡೆಗೆ ಸೆಳೆಯುವ ರೀತಿಯಲ್ಲಿ


೨೮೫

ಹತ್ತಿರದಲ್ಲೆಲ್ಲೋ ಬ್ಯಾಂಡು ಬಜಂತ್ರಿ ಸದ್ದು ಕೇಳಿ ಬಂತು. ಎಲ್ಲರಂತೆ ನಾನೂ ಎದ್ದು ನಿಂತು ದಾಂತೋಂತಲೆ ಉಂಗ್ಲಿ ದಬಾನ ಮಾಡಿದೆ.
ಕಾಳಾಪುರದ ಡೊಳ್ಳು, ಕೋಡಿಹಳ್ಳಿಯ ತಮಟೆ, ಹೊಸಹಳ್ಳಿಯ ರುಮ್ಮಿ, ಹ್ಯಾಳ್ಯಾದ ಕಹಳೆ, ಚಪ್ಪರದಳ್ಳಿಯ ನಮ್ದಿಕೋಲು,; ಉತ್ತಂಗಿಯ ಸಮಾಳ, ಹಡಗಲಿಯ ಬ್ಯಾಂಡು, ಬಸಾಪುರದ ಬಜಂತ್ರಿ ಇವೇ ಮೊದಲಾದ ವಾದ್ಯಗಳ ವಾದನದ ನಡುವೆಯೂ; ಸುಟ್ಟಳ್ಳಿಯ ಕೋಲಾತ, ನಾಯ್ಕನಳ್ಳಿಯ ಭಜನೆ, ಗಜಾಪುರದ ಭೂತಕುಣಿತ, ಗುಡೇ ಕೋಟೆಯ ಕೀಲುಕುದುರೆ, ಜರುಮಲಿಯ ಮರಗಾಲು ಕುಣಿತ ಇದೇ ಮೊದಲಾದ ಜಾನಪದ ಕಲಾತಂಡಗಳ ನಡುವಯೂ; ನೂರಾರು ಜನರ ಜಯ ಘೋಶದ ನಡುವೆಯೂ; ದಿನ ತುಂಬಿದ ಬ್ಸುರಿಯಂತೆ ಚಲಿಸುತ್ತಿದ್ದ ಲಾರಿ ಅಟ್ಟದ ಮೇಲೆ ನಭೂತೋ ನಭವಿಷ್ಯತಿ ಎಂಬಂತೆ ನೆಲಮುಗಿಲಿಗೇಕಾಗಿ, ಬೆಂಗಳುರು ಹಾರ, ಮಡ್ರಾಸ್ ಹಾರಗಳಿಂದ ಅಲಂಕೃತಳಾಗಿ ನಿಂತಿದ್ದ ನಿಂಗಮ್ಮಜ್ಜಿ ಕಸ್ತೂರಿಬಾ ಗಾಂಧಿಯಂತೆ ಎಲ್ಲರಿಗೂ ಕೈಎತ್ತಿ ಮುಗಿಯುತ್ತಿದ್ದುದು ಕಂಡು ಸೋಜಿಗ ಪಟ್ಟೆನು. ಆ ಕೊಟ್ಟುರಿಯನ್ ವಿಕ್ಟೋರಿಯಾ ರಾಣಿಯ ವಾಮಭಾಗದ ಪಕ್ಕ ಜಲಜಾಕ್ಷಿಯೂ; ಬಲಭಾಗದಲ್ಲಿ ಆಕೆಯ ಪತಿಪರಮೇಶ್ವರರಾದ ಶ್ರೀಮಾನ್ ಮಸಾಲೆಯವರೂ ತಂತಮ್ಮೆರಡು ಕೈಗಳನ್ನು ಮುಗಿಲಿಗೆ ಎತ್ತಿದ್ದರು. ಸಮ್ಮೇಳನಾಧ್ಯಕ್ಷೆ ನಿಂಗಮ್ಮಜ್ಜಿಗೇ ಎಂದೆಂದು ಗುಂಪೂ ಜಯವಾಗಲಿ ಎಂದು ಇನ್ನೊಂದು ಗುಂಪೂ ಕೂಗುತ್ತಿದ್ದುದನ್ನು ದೇವಾನುದ್ವತೆಗಳೆಲ್ಲ ಕೇಳಿ ತಮ್ಮ ಪದವಿಗೆಲ್ಲಿ ಸಂಚಕಾರ ಬರುತ್ತದೋ ಎಂದು ಹೆದರಿದರು. ಈ ಪ್ರಕಾರವಾಗಿ ಹತ್ತಿರವಾದ ಮೆರವಣಿಗೆ ಕಡೆಗೆ ಹಾಕ್ಕೊಂದು ಬಿದ್ದರೆಲ್ಲಿ ತಾವು ಅಪ್ಪಚ್ಚಿ ಆಗುವೆವೋ ಎಂದು ಹೆದರಿ ಸದರೀ ಗ್ರಾಮದ ಪೈಲ್ವಾನರೆಲ್ಲ ಹಿಂದೆ ಮುಂದು ನೋಡುತ್ತಿರಲು ನಿಂಗಮ್ಮಜ್ಜಿ ಲೀಲಾಜಾಲವಾಗಿ ವಾಹನದಿಂದ ಕೆಳಕ್ಕಿಳಿದು"ಹೋಗೋ ನಮ್ಮವ್ವ" ಎಂದು ಉದ್ಗರಿಸಿತು.
ಕನ್ನಡನಾಡಿನ ವೀರರಮಣಿಯರು... ಹಾಡು ಮಾರ್ಮಲೆಯುತ್ತಿರುವಾಗಲೇ ನಿಂಗಮ್ಮಜ್ಜಿಯನ್ನು ಮಸಾಲೆ ದಂಪತಿಗಳು ವೇದಿಕೆ ಕಡೆ ಕರೆದೊಯ್ದರು. ಒಂದೊಂದು ಮೆಟ್ಟಿಲನ್ನು ಒಂದೊಂದು ದೇವರ ನಾಮೋಚ್ಚಾರಣೆ ಮಾಡುತ್ತ ಮೇಲೇರಿ ಭೋಜರಾಜನ ಸಿಂಹಾಸನವನ್ನು ಹೋಲ್ವಂಥ ಕುರ್ಚಿ ಮೇಲೆ ನಿಂಗಮ್ಮಜ್ಜಿ ಸುಖಾಸೀನಳಾಗಲು ನಿಂಗಮ್ಮಜ್ಜಿ ಜಿಂದಾಬಾದ್; ಜಯಲಕ್ಷ್ಮಿ ಜಿಂದಾಬಾದುಗಳೆಂಬ ಹರ್ಷೋದ್ಗಾರ ಮೊಳಗಿತು.

ಕಾರ್ಯಕ್ರಮ ನಿರೂಪಕಿಯರಾದ ಗೋಣಿ ಬಸವ್ವಗೂ ಕರಿಯವ್ವಗೂ ಮತ್ತೊಮ್ಮೆ ಜಟಾಪಟಿಯಾಗಿ ತಲಾ ಒಂದೊಂದು ಮೈಕು ಹಿಡಿದುಕೊಂಡು ಅನ್ನ ತಮ್ಮಂದಿರೇ; ಅಕ್ಕತಂಗಿಯರೇ ಎಂದು ಆರಂಭಿಸಿ ಬಿಟ್ಟರು. ಹಂಪಾ ಪಟ್ಟಣದ ಗೊಮ್ದಲಿಗರ ರುಕ್ಕೂಮಾಯಿ ಮತ್ತು ಸಂಗಡಿಗರಿಂದ ಪ್ರಾರ್ಥನಾಗೀತೆ ಆದ ಮೇಲೆ ಸ್ವಾಗತ ಭಾಶಣದ ಸಲುವಾಗಿ ಮಸಾಲೆ ದಂಪತಿಗಳ ನಡುವೆ ತಿಕ್ಕಾಟ ಶುಯ್ರುವಾಯಿತು. ಕೊನೆಗೇ ಜಲಜಾಕ್ಷಿಯೇ ಅದರಲ್ಲಿ ಗೆದ್ದು ಮೈಕಿನೆದುರು ನಿಂತುಬಿಟ್ಟಳು. ಸಮ್ಮೇಳನದ ಗೊತ್ತು ಗುರಿ ವಿವರಿಸಿ ಇಂಥಿಂಥೋರು ಬಂದು ವೇದಿಕೆಯನ್ನಲಂಕರಿಸಬೇಕೆಂದು ಸ್ವಾಗತ ಭಾಷಣ ಮಾಡಿದಳು. ಆಕೆ ಹೆಸರು ಹಿಡಿದು ಕರೆಯಲು ಇಂಥಿಂಥೋರು ಬಂದು ವೇದಿಕೆಯ ಮೇಲೆ ಕೂತುಕೊಂಡರು.

ರಾಜಿಸೂತ್ರದಂತೆ ಗೋಣಿ ಬಸವ್ವ ಭಾಷಣಗಾರ್ತಿಯರನ್ನು ಹೆಸರಿಸುವುದು ಕರೆವ್ವ ಅವರ


೨೮೬

ಪರಿಚಯ ಮಾಡಿಕೊಡುವುದು ಮಾಡಿದರು. ಪ್ರೊಫೆಸರ್ ರುದ್ರಮುನೆವ್ವನವರು ಇಂಡಿಯಾದ ವೈವಾಹಿಕ ವ್ಯವಸ್ಥೆ ಕುರಿತು ಮಾತಾಉವ ಆರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ನಿಂಗಂಂಅಜ್ಜಿ ರುದ್ರರಮಣೀಯ ಬದುಕನ್ನೇ ಮುಖ್ಯ ಟಾಪಿಕ್ಕಾಗಿ ಎತ್ತಿಕೊಂಡಳು. ಆಕೆ ಎಂಅನೆ ವಯಸ್ಸಿಗೆ ಮದುವೆಯಾಗಿದ್ದು; ಒಂಬತ್ತನೆ ವಯಸ್ಸಿಗೆ ಗಂಡ ತೀರಿಕೊಂಡಿದ್ದು; ಹನ್ನೆರಡನೆ ವಯಸ್ಸಿಗೆ ಋತುಮತಿಯಾಗಿದ್ದು; ಜೀವನುದ್ದಕ್ಕೂ ಪರಪುರುಷರ ಕಡೆ ಕಣ್ಣೆತ್ತಿ ನೋಡದೆ ಗಂಡಸಿನಂತೆ ದುಡಿದಿದ್ದು ಹೀಗೆ... (ಆಕೆ ಅಷ್ಟೊಂದು ವಿಷಯವನ್ನು ಎಲ್ಲಿಂದ ಸಂಗ್ರಹಿಸಿದ್ದಳೊ ಏನೋ... ನಮ್ಮಜ್ಜಿ ಮಾತ್ರ ಪ್ರತಿಮಾತಿಗೂ ಮೀಸೆ ತಿರುವಿದ್ದೇ ತಿರುವಿದ್ದು.) ಕೊನೆಗೆ ಜಲಜಾಕ್ಷಿಯ ರಾಜಕೀಯ ಸಾಧನೆ ಕುರಿತು ಮಾತಾಇ ಭಾಷಣ ಮುಗಿಸಿದಳು.
ನಂತರ ಜಾಗಟೆ ತಿಮ್ಮಕ್ಕ ವರದಕ್ಷಿಣೆ ಪಿಗಿನಿಂದಾಗಿ ತಾನಿನ್ನೂ ಮದುವೇನೇ ಅಗಿಲ್ಲ ಎಂದು ಮಾರ್ಮಿಕವಾಗಿ ಮಾತಾಡಿದರೆ ಕುಲಕರ್ಣಿ ಖಾಸೀಮಮ್ಮರವರಂತೂ ಚಾತುರ್ವರ್ಣದ ರೂವಾರಿ ಮನುವಿನ ಮೇಲೆ ನಿಗಿನಿಗಿ ಕೆಂಡ ಕಾರಿದರು. ಅಷ್ಟರಲ್ಲಿ ವೇದಿಕೆಗೆ ನುಗ್ಗಿದ ಆಟವಾಳಿಗೆ ಈರಯ್ಯನವರು ಹೆಂಗಸ್ರೂ ತಂತಮ್ಮ ಗಂಡಂದರನ್ನು ಶೋಷಿಸ್ತಿದಾರೆ. ಇದ್ಕೆ ನಾನೇ ನಿದರ್ಶನ್ ಎಂದು ಮುಂತಾಗಿ ಮಾತಾಡಲು ಪ್ರಯತ್ನಿಸಿ ಸ್ವಯಂ ಸೇವಕಿಯರಿಂದ ಬಯ್ಯಿಸಿಕೊಂದು ಕೆಳಕ್ಕಿಳಿದು ಸಭಾತ್ಯಾಗ ಮಾಡಿದರು.

ಇನ್ನೇನು ಅಧ್ಯಕ್ಷೆ ಭಾಷನವನ್ನು ನಿಂಗಮ್ಮಜ್ಜಿ ಶುರು ಮಾಡಬೇಕೆಂದಿದ್ದಾಗ ಸಭೆಯ ಒಂದು ಕಡೆ ದೊಡ್ಡ ಗಲಾಟೆ ಕೇಳಿ ಬಂತು. ಹರಿದಿದ್ದ ಬಟ್ಟೆಗಳಿಂದಲೂ; ಕೆದರಿದ್ದ ತಲೆಯಿಂದಲೂ ಅಸ್ತಸ್ವ್ಯಸ್ತಳಾಗಿದ್ದ ಭುವನೇಶ್ವರಿ "ಗುಲಾಮ್ನಬಿ ಮುರ್ದಾಬಾದ್... ಆ ತಲೆಹಿಡುಕನಿಗೆ ಧಿಕ್ಕಾರ" ಎಂದು ಕೂಗುತ್ತ ವೇದಿಕೆ ಮೇಲೇರಲು ಮಿಂಚಿನ ಹೊಳೆ ತುಳುಕಾಡಿತು. ತನ್ನ ತಂತ್ರ ಫಲಿಸಿದ ಹೊಸ ಹುಮ್ಮಸ್ಸಿನಲ್ಲಿ ಜಲಜಾಕ್ಷಿ ಆಕೆಗೊಂದು ಲಿಂಬೂ ಶರಬತ್ತು ಕೊಟ್ಟಳು. ಅದನ್ನು ಕುಡಿದು ಜಲಜಾಕ್ಷಿ ನಿಂಗಮ್ಮಜ್ಜಿ ಕೈಯಿಂದ ಮೈಕನ್ನು ಕಸಿದುಕೊಂಡು ಬಿರುಗಾಳಿಯನ್ನೇ ಉಸಿರಾಡುತ್ತಿರುವಳೋ ಎಂಬಂತೆ ಸಭೆ ಎದುರು ನಿಂತುಕೊಳ್ಳಲು ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿ ಬೆಂಬಲಿಸಿದರು.

ಭುವನೇಶ್ವರಿ ಏಕ್‌ಧಂ ಗುಲಾಮನಬಿಯ ಜಾತಕ ಜಾಲಾಡಲಾರಂಭಿಸಿದಳು. ಹೀಗೆ ಒಂದ್ತಾಸು ಮಾತಾಡಿ ವೇಶ್ಯಾವಾಟಿಕೆ ಸೃಷ್ಟಿ ಮತ್ತು ಪೋಷಣೆಗೆ ಗುಲಾಮನಂಥ ಹಲ್ಕಾಕೋರ ರಾಜಕಾರಣಿಗಳೇ ಕಾರಣ ಎಂದು ಭಾಷಣ ಮುಗಿಸಿ ಮೆದಿಕಲ್ ಚೆಕಪ್ಪಿಗೆಂದು ಕೂಡಲೆ ಅಲ್ಲಿಂದ ಹೋಗಿ ಬಿಟ್ಟಳು.

ನಿಂಗಮ್ಮಜ್ಜಿ ತನ್ನ ಅಧ್ಯಕಾಹೀಯ ಭಾಷಣದಲ್ಲಿ ಕೆಮ್ಮಿ ಕ್ಯಾಕರಿಸಿ ಹೆಣಮಕ್ಳಿಲ್ದಿದ್ರೆ ಈ ಗಂಡಸ್ರೆಲ್ಲಿರ್ತಿದ್ರೂ... ನನ್ನಾಟಗಳ್ರು ಡುಡಿಯಲ್ಲ ದುಕ್‌ಪಡಿಯಲ್ಲ ಎಂದು ಮುಂತಾಗಿ ಮಾತಾಡುತ್ತಿರಲು ಜಲಜಾಕ್ಷಿ ವೇದಿಕೆಗೆ ಬರುವಂತೆ ನನ್ನತ್ರ ಸಂಜ್ಞೆ ಮಾಡಿದಳು. ನಾನು ಅಂಜುತ್ತ ಅಳುಕುತ್ತ ವಂದನಾರ್ಪಣೆ ಭಾಹಣವನ್ನು ಕಂಠಪಾಠ ಹಾಕುತ್ತ ವೇದಿಕೆಗೆ ಬಂದೆ. ಅದ್‌ಏ ಹೊತ್ತಿಗೆ ನಿಂಗಮ್ಮಜ್ಜಿ ಭಾಷಣ ಮುಗಿಸಿ "ಅದೇನು ಮಾತಾಡ್ತಿ ಮಾತಾಡೆಲೋ" ಅಂತು.

ಇನ್ನೇನು ನಾನು ಶುರು ಮಾಡಬೇಕೆನ್ನುವಷ್ಟರಲ್ಲಿ ಎಲ್ಲಿಂದಲೋ ಬಂದು ನನ್ನ ಮತ್ತು ನಿಮ್ಮ ಶಾಮಾಶಾಸ್ತ್ರಿ ಪ್ರತ್ಯಕ್ಷವಾಗಿ ಬಿಡುವುದೇನು? ಅವನು ಯಾರ ಪರವಾನಿಗಿಗೂ ಕಾಯದೆ ಇಂದಿನ ಶಭೆಯ ಅಧ್ಯಕ್ಷತೆ ವಹಿಸಿರತಕ್ಕಂಥ ... ಎಂದು ಶುರು ಮಾಡೇ ಬಿಟ್ಟ. ಆಗ ನಾನು ಇಂಗು ತಿಂದ ಮಂಗನಂತಾಗಿ ಜಲಜಾಕ್ಹಿ ಪಾರಿತೋಷಕ ರೂಪದಲ್ಲಿ ಕೊಡಮಾಡಿದ ಗಜಲಿಂಬೆ ಹಣ್ಣನ್ನು ಪಡೆದು



೨೮೭
ಅದನ್ನು ಮೂಸುತ್ತ ವಾಪಸಾಗಿ ಬಿಟ್ಟೆ.
*
*
*
ಏನಲೋ ಸೂಗಾಽಽ... ಅವ್ನು ನಿನ್ನ ಕೈಯಾಗಳಂದು ಕಿತ್ಕೊಂಡ್ನಲ್ಲ ಆಗ್ನೀನೇನು ಮಾಡ್ತಿದ್ದೆಲೋ.. ತಗ್ದು ವಂದ್ಕೊಡಬೇಕಾಗಿತ್ತು. ಆ ಜಲಜಾಕ್ಷಿ ಅದಾಳವ್ಳೂ.. ಮಾಭಿನ್ನಾಣಗಿತ್ತಿ... ಒಂದೂ ಮಾಡ್ಲಿಲ್ಲಿಲ್ಲಿ... ಬಾಯಾಗ ಗೆಂಡೆ ಇಟ್ಕೊಡಿದ್ಳಾಂತೀನಿ... ಅಲಲಾ" ಎಂದು ಒಂದೇ ಸಮನೆ ಶುರುಮಾಡಿಬಿಟ್ಟಿತು. ಆ ಶಾಮನ ಮದುವೆಗೆ ಯಾರೂ ಹೋಗಕೂಡದೆಂದು ಸುಗ್ರೀವಾಜ್ಞೆ ವಿಧಿಸಿ ಇಡೀ ಕುಟುಂಬವನ್ನು ಅಲ್ಲೋಲ ಕಲ್ಲೋಲ ಮಾಡಿತು.

"ಅಲಲಾ ಭಪ್ಪರೆ ನಮ್ಮವ್ವ... ಅವ್ನೂ ಇವ್ನೂ ಪೆಂಡ್ಸವ್ವಾ... ಬುಟ್ಕೊಟ್ಟಿದ್ರೂ ಕೊಟ್ಟಿದ್ನೂ... ಇದ್ರಿಂದ ನಮ್ಮೊಮ್ಮಗ್ನ ಕಿರೀಟೇನು ಕಮ್ಮಿ ಆತ.. ಇವ್ನೀಗಿಲ್ಲದ ರೋಸ ನಿಂಗೆ ಯಾಕಂತೀನಿ?" ಎಂದು ಸಿದ್ದಮ್ಮಜ್ಜಿ ಎದುರು ಕೊಚ್ಚೆನ್ನು ಹಾಕಿತು.
ಅದರಿಂದ ಕಿಡಿಕಿಡಿ ಆದ ನಿಂಗಮ್ಮಜ್ಜಿ
ಲೇ...ಯ್ ಸಿದ್ದಿ... ಬಾಯ್‌ಮುಚ್ಕಾ... ತಗದೀ ಅಂದ್ರ ಅಲ್ಲುದುರ್ತಾವ ನೋಡು ಮತ್ತೆ... ಪ್ರೆಂಡ್ಸಂತೆ ಪ್ರೆಂಡ್ಸು... ಸುಡ್ಗಾಡಗಿಲ್ಲದ ಪ್ರೆಂಡ್ಸು... ನಾನಾಡಿದ ಮ್ಯಾಕೆ ಮುಗಿತು... ಹೋಗ್ಕೂಡ್ಡಂದ್ರೆ ಹೋಗ್ಕೂಡ್ದು ಅಷ್ಟೇಯಾ... ಹ್ಹಾಂ..." ಎಂದು ಗುಡುಗಿತು.
"ಆ ತಾಟಗಿತ್ತಿ ಜಲಜಾಕ್ಷಿ ನಿನ್ನೊಯ್ದು ಮ್ಯಾಲ ಕುಂಡ್ರಿಸಿದ್ಕೆ ಕೋಡು ಬಂದ್ವಲ್ಲೆ ಕೋಡು.. ಇದು ಓಣಿ ಮಾತವ್ವಾ ಓಣಿ ಮಾತು. ಒಬ್ರಿಗೊಬ್ರು ಹೋಗಾದೈತಿ ಬರಾದೈತಿ. ಮನಸ್ಸಾಂದ ಮ್ಯಾಕೆ ಲಗ್ಣಕ ಮರಣಕ ಹೋಗದಂಗ ಇರಕಾಗಲ್ಲೆವ್ವೋ.. ಹೋಗ್ಲಿಲ್ಲಾಂದ್ರ ನೋಡ್ದೋರಾರ ಏನಂದಾರು?" ಎಂದು ಸಿದ್ದಮ್ಮಜ್ಜಿ ನುಡಿದ ತತ್ವ ನಿಂಗಮ್ಮಜ್ಜಿಯ ಕಿವಿ ತೂರುವುದು ಸಾಧ್ಯವಿರಲಿಲ್ಲ.
"ಉಗುರಿಲೆ ಹೋಗುದಕ ಕೊಡಲಿ ತಗಂತಾವಿವು. ನಾನ್ಯಾರ ಮದ್ವಿಗಾರ ಹೋಗ್ತೀನಿ ಹೋಗದಂಗಿರ್ತೀನಿ.. ಅದ್ನೆ ಕೇಳೋಕಿವರ್ಯಾರು?" ಎಂದು ಗೊಣಗಿಕೊಂಡೆ.
ನೋಡು ನೋಡುವಷ್ಟರಲ್ಲಿ ಆ ಅಪೂರ್ವ ಸಹೋದರಿಯರೀರ್ವರು ಪೂರ್ವ ಜರ್ಮನಿ, ಪಶ್ಚಿಮ ಜರ್ಮನಿ ಆದಂತಾಗಿ ಕೂಳು ನೀರು ಮಾತಿವೇ ಮೊದಲಾದ ಸಂಬಂಧ ವಾಚಕಗಳನ್ನು ತ್ಯಜಿಸಿ ದಿಕ್ಕು ದಿಕ್ಕಿಗೊಂದು ಮುಖ ಮಾಡಲು ಮನೆಯೊಳಗೆ ಸ್ಮಶಾನ ಮೌನ ಕವಿಯಿತು.

ಗುಲಾಮನಬಿಯಂಥ ಪ್ರಬಲ ರಾಜಕಾರಿಣಿಯ ಕಟ್ಟಾಗ್ಞೆ ಉಲ್ಲಂಘಿಸಿ ಶಾಮನೆಂಬ ಮಹಾನುಭಾವನು ವಂದನಾರ್ಪಣೆ ಮಾಡುವ ಮೂಲಕ ಜಲಜಾಕ್ಷಿಗೆ ಬೆಂಬಲ ಸೂಚಿಸಿದ್ದರಿಂದ ನನಗೆ ಹೆಚ್ಚು ಸಂತೋಷ ಮತ್ತು ನೆಮ್ಮದಿ ಮೂಡಿತ್ತು.

ಶಾಮನನ್ನು ಬಿಡೆ ಎಂದು ಗುಲಾಂ ನಬಿಯೂ; ಶಾಮನನ್ನು ಕೊಡೆ ಎಂದು ಭುವನೇಶ್ವರಿಯೂ ಎಳೆದಾಡುವುದರಲ್ಲಿ ಸಂದೇಹವಿಲ್ಲ ಎಂದುಕೊಂಡೆ. ಸುರಸುಂದರಿಯರೆಂಬ ಅಸ್ತ್ರಗಳನ್ನು ಕುಪ್ಪಸವೆಂಬ ಬತ್ತಳಿಕೆಯಲ್ಲಿ ಇಟ್ಟುಕೊಡಿರುವ ಭುವನೇಶ್ವರಿ ಕಡೆ ಅವನು ವಾಲಿದ್ದು ಹೆಚ್ಚು ಅರ್ಥ ಪೂರ್ಣ ಕೂಡ. ಅಲ್ಪ ಕಾಲದಲ್ಲಿಯೇ ಅವನು ಹೆಚ್ಚು ವ್ಯಾವಹಾರಿಕನಾಗಿರುವ ಸಂತೋಷವನ್ನು ಹೀಗೆ ವ್ಯಕ್ತಪಡಿಸುವುದು? ಸಾಯುವವರೆಗೆ ಮದುವೆಯನ್ನು ಮುಂದೂಡುತ್ತಲೆ ಹೋಗುವುದಾಗಿ ಹೇಳುತ್ತಿದ್ದ ಅವನು ಪಕ್ಷ ಒಪ್ಪತ್ತಿನಲ್ಲಿಯೇ ಗೃಹಸ್ಥಾಶ್ರಮ ಪ್ರವೇಶಿಸಲು ಒಪ್ಪಿದ್ದು ಕೂಡ


೨೮೮

ಅಭಿನಂದನೀಯವಾದುದು. ಪ್ರಾಯಶಃ ಅದು ವೇಶ ಮರೆಸಿಕೊಂಡು ಬೆಂಗಳೂರಿಗೆ ಹೋಗಿ ಅನಸೂಯಾ ಗಂಡನೊಡನೆ ಸುಖವಾಗಿರುವುದನ್ನು ನೋಡಿ ಅದರಿಂದ ಪ್ರೇರಣೆ ಪಡೆದಿರಬೆಕೆಂದೆನಿಸುವುದು. ಇಂಥದೊಂದು ಅದ್ಭುತವಾದ ಬದಲಾವಣೆಗೆ ಕಾರಣೀಭೂತಳಾದ ಮಹಾತಾಯಿ ಅನಸೂಯಳಿಗೆ ಕೂಡಲೆ ಒಂದು ಪತ್ರ ಬರೆದು ಸಂಶಯ ಹೋಗಲಾಡಿಸುವುದರ ಜೊತೆಗೆ ಮದುವೆ ಫಂಕ್ಶನ್ನು, ನಿಂಗಮ್ಮಜ್ಜಿ ಇತ್ಯಾದಿ ಮಾಹಿತಿ ಒದಗಿಸಬೇಕೆಂದು ನಿರ್ಧರಿಸಿದೆ. ಪತ್ರ ಬರೆಯಲೆಂದು ಐದಾರು ಹಾಳೆಗಳನ್ನು ದಂಡ ಮಾಡಿದಾಗಲೆ ನಾನು ಒಳಗೊಳಗೆ ಮಹಾ ಗಿಲ್ಟಿ ಇರುವೆನೆಂದು ಅರ್ಥವಾದದ್ದು. ಕ್ರಮೇಣ ಗಿಲ್ಟಿನೆಸ್ಸನ್ನು ಗಾಳಿಗೆ ತೂರಿ, ಪ್ರೀತಿಯ ಸಹೋದರಿ ಅನಸೂಯಾರವರಿಗೆ... ಎಂದು ಸಂಭೋದಿಸುತ್ತ ಶುರು ಮಾಡಿದೆ. ನಿಮಗೆ ತೊಂದರೆ ಕೊಟ್ಟನೆನ್ನಲಾದ ವ್ಯಕ್ತಿ ಶಾಮನಲ್ಲವೆಂದೂ ಬೇರೆ ಯಾರೋ ಇರಬೇಕೆಂದೂ ಇಲ್ಲಿನ ಬುದ್ಧಿಜೀವಿಗಳು, ರಾಜಕೀಯ ವ್ಯಕ್ತಿಗಳು ಆ ವ್ಯಕ್ತಿಯು ನಾನೇ ಇರಬಹುದೆಂದು ಅನುಮಾನಿಸಿರುವರೆಂದು ಇತ್ಯಾದಿ ಬರೆದಾದ ಮೇಲೆ ನಿನ್ನೆ ದಿನ ನಡೆದ ಸಮ್ಮೇಳನದ ವೈಷಿಷ್ಟ್ಯ ಸರಾಗವಾಗಿ ವಿವರಿಸಿ ಬರೆದೆ. ಶಾಮನ ಪರವಾಗಿ ಅವನ ಲಗ್ನ ಪತ್ರಿಕೆಯನ್ನು ಪತ್ರದೊಂದಿಗೆ ಲಗತ್ತಿಸಿ ಲಕೋಟೆಯಲ್ಲಿರಿಸಿ ಅಂಟು ಹಚ್ಚಿದೆ. ಫ್ರಂ ಅಡ್ರಸ್ ಬರೆಯದೆ ಆಕೆಯ ವಿಳಾಸ ಮಾತ್ರ ಬರೆದು ಅಂಚೆ ದಬ್ಬಿಯೊಳಗೆ ಹಾಕಿದೆ.

ಅವನು ಹಚ್ಚಿಕೊಳ್ಳುತ್ತಿಲ್ಲವೆಂದ ಮೇಲೆ ಮದುವೆಗೆ ಹಾಜರಿರುವುದಾದರೂ ಯಾಕೆ ಎಂದು ಯೋಚಿಸಿ ವಾಗಿಲಿಗೆ ಹೊರಡಲು ನಿರ್ಧರಿಸಿದೆ. ಜಗನ್ನಾಥ ರೆಡ್ಡಿಯವರಿಂದ ಪತ್ರ ಬಾರದೆ ಇದ್ದದ್ದೂ ಹೊರಡಲು ಕುಮ್ಮಕ್ಕು ನೀಡಿತ್ತು. ಆದರೆ ನಾರಾಣಿ ಮೂಲಕ ನನ್ನನ್ನು ಕರೆಸಿಕೊಂಡ, ಬಲವಾಗಿ ಅಪ್ಪಿಕೊಂಡ, ಭುಜದ ಮೇಲೆ ಎರಡು ಹನಿ ಕಣ್ಣೀರು ಸುರಿಸಿದ, ನಿನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಕ್ಷಮಿಸು ಅಂದ. ಮದುವೆ ಮುಗಿಸಿಕೊಂಡು ಹೋಗು ಮಾರಾಯ ಅಂದ. ಸರೆ! ಆಗಲಿ ಅಂದೆ, ಟೊಂಗುಟುಸುಕು ಹಸಿಮುನಿಸು ಎಲ್ಲ ಬಿಟ್ಟು ಶಾಮ ನನ್ನೊಂದಿಗೆ ರಾಜಿ ಆದನಲ್ಲ ಅಷ್ಟೆ ಸಾಕು. ಇಲ್ಲಿ ಇವನನ್ನು ಕಳೆದು ಕೊಳ್ಳುವೆನೋ ಎಂಬ ಭಯ ಇತ್ತು.

ಶಾಮನ ಮದುವೆ ಮುಗಿಸಿಕೊಂಡೇ ನಾನು ವಾಗಿಲಿಗೆ ಹೊರಡುವುದಾಗಿ ನಿಂಗಮ್ಮಜ್ಜಿಗೆ ಹೇಳಿಯೇ ಬಿಟ್ಟೆ. ಅದು ಕೇಳಿದ್ದರಿಂದ ಓ ಹಂಗಾ... ಹಂಗಾದ್ರೆ ನೀನು ನನ್ನ ಮಮ್ಮಗ ಅಲ್ಲ... ನಾನು ನಿನ್ನ ಅಜ್ಜಿಯಲ್ಲ.. ಎಂದು ಹೇಳಿಬಿಟ್ಟಿತು. ಸಂಬಂಧ ತ್ಯಜಿಸುವ ಇಂಥ ಮಾತುಗಳನ್ನದು ಸಾವಿರ ಸಾರಿ ಆಡಿರಬಹುದು. ಅದಕ್ಕೆಲ್ಲ ತಲೆಕೆಡೆಸಿಕೊಂಡರೆ ಹುಚ್ಚಾಸ್ಪತ್ರೆ ಸೇರೋದೊಂದೇ ಬಾಕಿ, ಆದ್ದರಿಂದ ನಾವ್ಯಾರೂ ‘ಹೀಗಂತಲ್ಲಾ’ ಅಂತ ತಲೆಕೆಡೆಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಿಂಗಮ್ಮಜ್ಜಿ ಎಂಬ ವಿಶ್ವಾಮಿತ್ರ ರಾಜರ್ಷಿಯೂ ಸಿದ್ದಮ್ಮಜ್ಜಿ ಎಂಬ ವಶಿಷ್ಟ ಬ್ರಹ್ಮರ್ಷಿಯೂ ಒಟ್ಟಿಗೆ ವಾಸಿಸುತ್ತಿರುವ ಪರ್ಣಕುಟಿಯಲ್ಲಿ ಅನೇಕ ಪವಾಡ ಕಂಟಕಗಳನ್ನೆದುರಿಸುತ್ತ ಬದುಕುಳಿದಿರುವುದೇ ಬಹು ದೊಡ್ಡ ಸೋಜಿಗ. ಇಂಥ ಸೊಜಿಗದ ಮೂರ್ತಿಯಾದ ನಾನು ಯಾವ ಪ್ರಕಾರವಾಗಿ ಯಾವುದೇ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಳ್ಳುವುದಿಲ್ಲವೋ ಹಾಗೆಯೇ ಇಂಥ ಮಾತನ್ನು ಕೂಡ, ಆರು ಮೂರಾಗಲಿ ಮೂರು ಆರಾಗಲಿ... ಶಾಮನ ಮದುವೆ ಮಾಡಿ ಮುಗಿಸಿಕೊಂಡೇ ಹೋಗುವುದಾಗಿ ನಿರ್ಧರಿಸಿಬಿಟ್ಟೆ.

ಆ ವಾರದ ಖಡ್ಗ ಸಂಚಿಕೆಯನ್ನು ಶಾಮಾಶಾಸ್ತ್ರಿಯ ಫೋಟೋದೊಂದಿಗೆ ವಿವಾಹ ಎಂಬ ವಿಶೇಷಾಂಕವಾಗಿ ಕಮಲಾಕರ ಮಾರ್ಪಡಿಸಿದ. ಯಾವ ಯಾವ ದೇಶಗಳಲ್ಲಿ ಯಾರ್ಯಾರು ಹೇಗೆ


೨೮೯

ಮದುವೆಯಾಗುತ್ತಾರೆ ಮತ್ತು ಆಗಿದ್ದಾರೆ ಎಂಬ ಕುರಿತು ಸುಧೀರ್ಘವಾಗಿ ಚರ್ಚಿಸಿದ. ಆ ಖಡ್ಗದ ಮದುವೆ ವಿಷೇಶಾಂಕ ಬಿಡುಗಡೆಗೊಂಡೆರಡುದಿನಗಳೊಪ್ಪಾತ್ತಿನಲ್ಲಿ ಮಾರಾಟವಾಗಿ ಅದರ ಸಂಪಾದಕನಿಗೆ ಹೆಚ್ಚು ಲಾಭ ತಂದುಕೊಟ್ಟಿತು.
ಪತ್ರಿಕೆಯಿಂದಾಗಿ ಹೆಚ್ಚು ಬ್ಯುಜಿ ಇದ್ದ ಕಮಲಾಕರನೂ; ರಾಜಕಾರಣದಲ್ಲಿ ಅತಿ ಹೆಚ್ಚು ಬ್ಯುಜಿ ಇದ್ದ ಜಲಜಾಕ್ಷಿಯೂ... ಅವರೊಂದಿಗೆ ನಾನು ಧಗಧಗಿಸುವ ಒಲೆಯೊಂದರ ಮೂರು ಗುಂಡುಗಳಂತೆ ಶಾಮನ ಮದುವೆಯ ಮೂರು ದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದುಡಿದೆವು.

ಮಹೂರ್ತದ ಹಿಂದಿನ ದಿನ ನಿಗದಿತ ವೇಳೆಗೆ ಒಂದು ಗಂಟೆಗೂ ಮೊದಲೆ ಹೊಸಪೇಟೆಯ ಬೀಗರುಬಿಜ್ಜರು ವೇದಾಂತಿ ರಾಜಗೋಪಾಲಾಚಾರ್ಯರ ನೇತೃತ್ವದಲ್ಲಿ ಬಂದು ಇಳಿದುಬಿಟ್ಟರು. ಇಳಿದೊಡನೆ ಸ್ವಾಗತ, ಸತ್ಕಾರ ಮತ್ತಿತರ ವಿಷಗಳಿಗೆಂದು ಬಿಡದಿ ಮನೆಗೆ ಹೋದ ನಮ್ಮನ್ನು ಆಚಾರ್ಯರು ನೀವ್ಯಾರು? ನೀವ್ಯಾರು? ಎಂದು ಕೇಳಿದರು. ಇಂತಿಂಥವರೆಂದು ನಾವು ಹೇಳಲು "ಹೌದೇ ನಮ್ಮ ಪರಮೇಶ ಈ ಇಳಿವಯಸ್ಸಿನಲ್ಲಿ ಬರೀ ಶೂದ್ರರ್‍ನೇ ತುಂಬಿಟ್ಟುಕೊಂಡಿದ್ದಾನಲ್ಲ... ಕನಿಷ್ಟ ಮಾಧ್ವರಾದ್ರು ಸಿಗಲಿಲ್ಲ್ವೆ ಇವನಿಗೆ" ಎಂದು ಗೊಣಗಿದರು. ಪಕ್ಕದಲ್ಲಿದ್ದ ಅವರ ಷಡ್ಡಕ "ಎಲ್ಲ ಅಂಗೈಯಲ್ಲಷ್ಟೆ ನಿಚ್ಚಳವಾಗಿದೆ? ಈ ಗ್ರಾಮದ ಮಾಧ್ವರೂ ಸ್ಮಾರ್ತರೆಲ್ಲ ಮದುವೆಗೆ ಹೋಗಲೇಬಾರದೆಂದು ನಿರ್ಧರಿಸಿದ್ದಾರಂತೆ! ಅದ್ಕೆ ಒಬ್ಬ ಬ್ರಾಹ್ಮಣನೂ ಕಾಣಿಸ್ತಿಲ್ಲ" ಎಂದು ಬೆನ್ನತುರಿ ತುರಿಸಿಕೊಂಡ.

ಊರಿಗಿಳಿದೊಡನೆ ಅವರ ಷಡ್ಡಕರಾದ ತ್ರಯಂಬಕಾಚಾರ್ಯ ದುಡುದುಡನೆ ಅಗ್ರಹಾರಕ್ಕೆ ಹೋಗಿದ್ದರು. ಬ್ರಾಹ್ಮಣ ಮಹಾ ಸಂಘದ ಕೊಟ್ಟೂರು ಶಾಖೆಯ ಗೌರವಾಧ್ಯಕ್ಷರಾದ ಭಾಷ್ಯಂ ಶ್ರೀಕರಾಚಾರ್ಯರು ರಾಘವೇಂದ್ರ ಮಠದ ಬಳಿಯೇ ತರುಬಿ ಓಹೋ... ನೀವು ಹೊಸಪೇಟೆ ಅಗ್ರಹಾರದ ಹೆಣ್ಣಿನ ಕಡೆಯವ್ರೋ... ಎಂದು ವ್ಯಂಗವಾಡಿ ಸ್ವಾಗತಿಸಿದರಂತೆ, ಅಲ್ಲೇ ಕೂಡ್ರಿಸಿ ವಿಶ್ವತೀರ್ಥನ ಮನೆಯಿಂದ ಒಂದು ತಂಬಿಗೆನೀರು ತರಿಸಿಕೊಟ್ಟು ಕುಡಿಸಿ ಹೇಳಿದರಂತೆ, "ಯಾವಾಗ ಅಮೇಧ್ಯ ತಿನ್ನುವವರ ಓಣಿ ಸೇರಿ ಬ್ರಾಹ್ಮಣ್ಯ ಹಾಳು ಮಾಡಿಕೊಂಡನಾ ಮುದುಕ." ಎಂದೇ ಮೊದಲಾಗಿ ಆರಂಭಿಸಿ ‘ಆ’ ದಿನದಿಂದ ಹಿಡಿದು ಕ್ಷತ್ರಜ್ಞದವರೆಗೆ ಎಲ್ಲ ಹೇಳಿಬಿಟ್ಟು ಕೊನೆಗೆ ಆ ವಾಮಾಚಾರಿ ರುದ್ರನಾಯಕನ ಮಗ್ಳು ಅನಸೂಯಾಳ ಸೆರಗು ಹಿಡ್ಕೊಂಡು ಅಡ್ಡಾಡುತ್ತಿದ್ದ ಆ ಶಾಮನಿಗೆ ಆ ರಾಘವ ತನ್ನ ಮೊಮ್ಮಗಳ್ನ ಕೊಟ್ಟಿದ್ದಾನಲ್ಲ... ಬುದ್ಧಿ ಇದೆಯೇ ಈ ಮುಠ್ಠಾಳನಿಗೆ..." ಎಂದು ಹೇಳಿದನಂತೆ.
ಅದಕ್ಕಿದ್ದು ತ್ರಯಂಬಕರು "ಹಾಗಲ್ಲ ರಾಯ್ರೆ... ಹುಡ್ಗ ಗುಣವಂತ... ಮೇಲಾಗಿ ಸರ್ಕಾರಿ ನೌಕರಿ ಬೇರೆ ಸಿಕ್ಕಿದೆ ಈ ಮೀಸಲಾತಿ ಕಾಲದಲ್ಲಿ" ಎಂದು ಗೊಣಗಿದರಂತೆ.
"ಆಪದ್ಗತಂ ಹಸಸಿ ಕಿಂ ದ್ರವಿಣಾಂಥ ಮೂಢ... ನಾವೆಲ್ಲ ಸರ್ಕಾರಿ ನೌಕರಿ ಮಾಡೇ ಬದುಕಿದಿವೇನ್ರಿ... ಬ್ರಾಹ್ಮಣ್ಯಕ್ಕೆ ತಿಲತರ್ಪಣ ಕೊಟ್ಟವರು ಏನುಬೇಕಾದರೂ ಆಗುತ್ತಾರೆ ಎಂಬುದಕ್ಕೆ ಆ ಮದುಮಗನೇ ನಿದರ್ಶನ ನೋಡಿ" ಎಂದು ಆ ಹಿರಿಯರು ಬೇಸರ ವ್ಯಕ್ತ ಪಡಿಸಿದರು.

ಷಡ್ಡಕರಾದ ತ್ರಯಂಬಕರು ಇದೇ ಸವುಡು ಎಂದು ಕೊಂಡರು. ಅವರು ಅಂಥದೇ ಉತ್ತರದ ನಿರೀಕ್ಷೆಯಲ್ಲಿದ್ದರು. ಅವರು ತಮ್ಮ ಹೆಂಡತಿಯ ಸಂಭಂದಿಯೋರ್ವರಿಗೆ ವರಲಕ್ಷ್ಮಿಯನ್ನು


೨೯೦

ಕೊಡಿಸಲು ಪ್ರಯತ್ನ ಮಾಡಿದ್ದುಂಟು. ಅವನು ನಾಲ್ಕನೆ ಸಂಬಂಧಕ್ಕಾಗಿ ಕನ್ಯಾನ್ವೇಷಣೆಯಲ್ಲಿರುವ ನಲವತ್ತೊಂದು ವರ್ಷ ಪ್ರಾಯದವನು ಎಂಬ ಸಂಗತಿಯನ್ನು ಹೇಗೋ ತಿಳಿದುಕೊಂಡು ಆಚಾರ್ಯರು "ನನ್ನ ಮೊಮ್ಮಗಳಂದ್ರೆ ಏನು ತಿಳ್ಕೊಂಡೀಯೋ ತ್ರಂಬ್ಯಕ... ಇನ್ನೊಮ್ಮೆ ಅಂಥವರ ಪ್ರಸ್ತಾಪಿದಿ ಅಂದ್ರ... ಅನ್ನ ನೀರು ಸಿಗದಂತೆ ಮಾಡಿ ಬಿಡ್ತೀನಿ" ಎಂದು ಗದರಿಸಿರುವುದುಂಟು. ಅಷ್ಟೆಲ್ಲವನ್ನು ತನ್ನ ವಾತಾಪಿಯಲ್ಲಿಟ್ಟುಕೊಟ್ಟಿರುವ ತ್ರಯಂಬಕರು ಹೇಗಾದರು ಮಾಡಿ ಈ ಮದುವೆ ಮುರಿದು ಬಿದ್ದರೆ ವರಲಕ್ಶ್ಮಿಯನ್ನು ಮದುವೆಯಾಗುವವರಾದರೂ ಯಾರು? ಕೊನೆಗೆ ತಾವು ಸೂಚಿಸಿದ ವರಮಹಾಶಯನಿಗೆ ಕೊಟ್ಟು ಮದುವೆ ಮಾಡದೆ ಮುದುಕನಿಗೆ ಗತ್ಯಂತರವಿಲ್ಲವೆಂಬುದಾಗಿ ಯೋಚಿಸಿ ಎಲ್ಲ ವಿಷಯ ಸಂಗ್ರಹಿಸಿಕೊಂಡು ಬಿಡದಿ ಮನೆಗೆ ದಯಮಾಡಿಸಿದ್ದರು.

"ಶಾಮಾಶಾಸ್ತ್ರಿಗಳ ಮದುವೆಗೆ ಅಗ್ರಹಾರದೋರೆಲ್ಲ ಬಹಿಷ್ಕಾರ ಹಾಕಿದ ಮಾತಾಡ್ತಿದಾರಲ್ಲ... ಅಣ್ಣಾವ್ರೆ... ಈ ಮದುವೆ ನಿರ್ವಿಘ್ನವಾಗಿ ನಡೆಯೋದಾದ್ರು ಹೇಗೆ?" ಎಂದು ತ್ರಯಂಭಕರು ಆಚಾರ್ಯರ ಕಿವಿ ಚುಚ್ಚಿದರು.
ಅದನ್ನು ಕೇಳುತ್ತಲೆ ಆ ವೃದ್ಧರು ತಲೆ ಮೇಲೆ ಕಾಂಚನಗಂಗಾ ಕಳಚಿಬಿದ್ದಂತೆ ವಿಲವಿಲನೆ ಒದ್ದಾಡಿದರು.
"ಹೋ ಹೋ ಹಾಗೋ ಸಮಾಚಾರ! ಅದ್ಕೇನೆ ಒಬ್ಬ ಬ್ರಾಹ್ಮನನೂ ಕಾಣಿಸ್ತಿಲ್ಲ. ಬರೀ ಶೂದ್ರಜನರೇ ಪರಾಂಬರಿಸ್ತಿದ್ದಾರೆ. ಪ್ರಾಣತ್ಯಾಗ ಮಾಡಿದರೂ ಸರೆ, ಜಾತಿಗೆ ಅಪಚಾರ ಮಾಡಬಾರ್ದೂಂತ ಪೂರ್ವೀಕರು ಹೇಳಿದ್ದಾರೆ..." ಎಂದು ಉತ್ತರೀಯವನ್ನು ಹೆಗಲಮೇಲಿಳಿ ಬಿಡುತ್ತ "ಈ ಸಮಸ್ಯೆ ಪರಿಹಾರ ಆಗದ ಹೊರತು ಮಾಂಗಲ್ಯಧಾರಣೆ ಆಗದಂತೆ ನೊಡ್ಕೋಬೇಕು... ಹೊಂಡಲೇ ತ್ರಂಬಕ..." ಎಂದು ಎದ್ದು ನಿಂತರು.

ಅವರ ವರ್ತನೆಯಿಂದಾಗಿ ನಾವು ಅಸಹಾಯಕತೆಯಿಂದ ಒದ್ದಾಡಿದೆವು. ನಾವು ಎಷ್ಟು ಹೇಳಿ ನೋಡಿದರೂ ಅವರು ಮಾಗಲಿಲ್ಲ.
ಅಚಾರ್ಯ ಹಿಂದೆ ಶಕುನಿ ಸ್ವರೂಪಿಯಾದ ತ್ರಯಂಭಕಾಚಾರ್ಯರು, ಗಜೇಂದ್ರ, ಶ್ರೀನಿವಾಸ, ಗುರುರಾಜ, ಕಾಶೀ ವಿಶ್ವನಾಥರಾಯರು, ಪಾಲುಪರ್ತಿ ಶಿವರಾಮರಾಯರು, ಕೃಷ್ನಮೂರ್ತಿ ಶರ್ಮರು, ಸುಬ್ರಮಣ್ಯ ಶಾಸ್ತ್ರಿಗಳು ಇವರೇ ಮೊದಲಾದ ಬಂಧು ಬಳಗದವರು ಪ್ರಳಯ ಮುನ್ಸೂಚನೆ ನೀಡಲಿರುವವರಂತೆ ಹೊರಟರು. ಕೇಶವಿಹೀನೆಯಾದ ಶಾರದಮ್ಮನವರು "ಏನೋ ರಾಜಗೋಪಾಲ, ಈ ನಿನ್ನ ಅತ್ತೆಯನ್ನೆ ಬಿಟ್ಟು ಹೊರಡ್ತಿದ್ದೀ ಏನೋ? ಗಂಡಸರು ಗಂಡಸರ ಹತ್ರ ಮಾತಾಡ್ಲಿಕ್ಕಾಯ್ತು... ಆದ್ರೆ ಹೆಂಗಸರತ್ರ ಮಾತಾಡ್ಲಿಕ್ಕೆ ನಾನು ಬರೋದುಬೇಡವೇನೋ?... ಮಗು ಇಲ್ಲಿ ಅಳಲಿಕ್ಕತ್ತದೆಯಪ್ಪಾ" ಎಂದು ಕೋಲಿನಾಸರೆಯಿಂದ ಮೇಲೆ ಏಳುತ್ತ ಕೂಗಿದರು.
ತಮಗೆ ಅಕಾಲ ಮರಣಕ್ಕೀಡಾದ ಮಗಳನ್ನು ಹೆತ್ತು ಕೊಟ್ಟು ಇಚ್ಚಾಮರಣಿಯಂತೆ ಬದುಕಿರುವ ತಮ್ಮತ್ತೆ ಕೂಗಿಕೊಳ್ಳುವುದರೆಂದರೇನು!
ಆಚಾರ್ಯರು ಜಮದಗ್ನಿ ಮಹರ್ಷಿಗಳಾಗಿ ದುರುಗುಟ್ಟಿ ನೋಡಿದರು.

"ಅಲ್ಲಿ ಹೆಂಗಸರಿಗೇನಿದೆ ಕೆಲಸ? ಅದೂ ಅಲ್ಲದೆ ಕೇಶವಿಹೀನೆ ಬೇರೆ! ಇಲ್ಲೇ ಇದ್ದು ಮಂಗಳಕರವಾದ ವಸ್ತುಗಳನ್ನು ಮುಟ್ಟದೆ ಮಗುಗೆ ಧೈರ್ಯಹೇಳಿ" ಎಂದವರೆ ದಪದಪ ಹೆಜ್ಜೆ ಹೊರಗಿಟ್ಟು ಬಿಟ್ಟರು.


೨೯೧
ಪರಮೇಶ್ವರ ಶಾಸ್ತ್ರಿಗಳಿಗಿಂತ ವಯಸ್ಸಿನಲ್ಲಿ ಹಿರಿಯರಿದ್ದರೂ ಎಷ್ಟೊಂದು ಗಟ್ಟಿಮುಟ್ಟಾಗಿದ್ದಾರಲ್ಲ ಈ ಆಚಾರ್ಯರು, ಅವರಿಗೆ ಹೆಣ್ಣುಕೊಟ್ಟ ಅತ್ತೆ ಶಾರದಮ್ಮನವರು ಮೂರುಪೋಗು ನೋಡಿರುವರೆಂದರೆ ಸಾಮಾನ್ಯರೆ! ಅವರ ‘ಪಾಲುಟ್ಲಿ’ ವಂಶದವರಾರೂ ನೂರು ವರ್ಷಗಳ ಒಳಗೆ ಇಹಲೋಕ ತ್ಯಜಿಸಿಯೇ ಇಲ್ಲವಂತೆ! ಅವರ ಮಗಳು ಅಂದರೆ ವಿಶಾಲಕ್ಷಮ್ಮನವರು ಅಂದರೆ ಆಚಾರ್ಯರ ಧರ್ಮಪತ್ನಿಯವರು; ಅಂದರೆ ಸಂಸಾರದಿಂದ ಬೇಸತ್ತು ವೈರಾಗ್ಯ ತಾಳಿ ಹರಿದ್ವಾರದ ವೀರಭದ್ರಾಶ್ರಮದಲ್ಲಿ ವರ್ಷಗಟ್ಟಲೆ ದೇವೀ ಉಪಾಸನೆ ಮಾಡಿ ಹಿಮವತ್ಕೇದಾರದಲ್ಲಿ ದೇಹತ್ಯಜಿಸಿದ ವಿದ್ಯಾವಾಚಸ್ಪತಿ ಡಮರುಗಾಚಾರ್ಯರ ತಾಯಂದಿರು; ಅಂದರೆ ಗಂಡನಿಲ್ಲದ ಚಿಂತೆಯಿಂದ ಕೊರಗುತ್ತ ಮತಿಭ್ರಮಣೆಯಾಗಿ ಋಷ್ಯಮೂಕ ಪರ್ವತ ಶ್ರೇಣಿಯಲ್ಲಿ ಕಾಣೆಯಾದ ರೇಣುಕಾಬಾಯಿಯವರ ಅತ್ತೆಯಂದಿರಾದ ಶಾರದಮ್ಮನವರು ಅಳಿಯ ನಾಡಿದ ಮಾತಿಗೆ ತಿಲಮಾತ್ರ ಬೆಲೆಕೊಡದೆ ಕೋಲು ಹಿಡಿದುಕೊಂಡು ಅರ್ಧ ಫರ್ಲಾಂಗು ಅಂತರದಲ್ಲಿ ಹಿಂದೆ ಬರತೊಡಗಿದರು.

ಓಣಿಯ ಜನ ಹನ್ನೊಂದಾದರೂ ಮಲಗಿರದೆ ಕೂಸು ಕಂದಯ್ಯಗಳೊಡನೆ ಅಂಗಳಕೈತಂದು ಅವರೇ ನೋಡು ಇವರು, ಇವರೇ ನೋಡು ಅವರು ಎಂದು ತಮ್ಮ ತಮಗೇ ಮಾರ್ಗದರ್ಶನಮಾಡುತ್ತ ಸಂತೋಷಪಡುತ್ತಿದ್ದರು. ಬಂದಿದ್ದ ಬೀಗರು ಬಿಜ್ಜರು ಪೈಕಿ ಯಾರೂ ಕುಬ್ಜರಿರಲಿಲ್ಲ. ಪ್ರತಿಯೊಬ್ರೂ ಆಜಾನುಬಾಹುಗಳು... ಇವರಹಾಗೆ ಕುಳ್ಳಗಿರಲಿಕ್ಕೆ ನಾವೇನು ಮೂಲತಃ ದಕ್ಷಿಣಾತ್ಯರೇನು? ನಮ್ಮ ಪೂರ್ವೀಕರು ಉತ್ತರ ಭಾರತದಿಂದ ವಲಸೆ ಬಂದವರು. ಕಣ್ರೀ... ಕನೌಜದ ಹರ್ಷವರ್ಧನ, ಛತ್ತರಪುರದ ಛತ್ತರಸಾಲ, ಇವರೇ ಮೊದಲಾದ ರಾಜಾಧಿರಾಜರ ಆಸ್ಥಾನದಲ್ಲಿ ಜ್ಯೋತಿಷಿಗಳಾಗಿದ್ದವರು. ಏನೋ ಅವರ ಪೈಕಿ ಒಬ್ಬರು ತಿಮ್ಮರಸರ ಮಾತು ಮೀರಲಾರದೆ ದಕ್ಷಿಣಕ್ಕೆ ಬಂದು ವಿಜಯನಗರದ ಕೃಷ್ಣರಾಯನ ಆಸ್ಥಾನದಲ್ಲಿ ವೈದಿಕಕ್ಕೆ ನಿಂತರು. ಕಮಲಾಪುರದ ಕೆರೆ ಪಕ್ಕದಲ್ಲಿರುವ ಶಿಲಾಶಾಸನದಲ್ಲಿ ನಮ್ಮ ಪೂರ್ವೀಕರಾದ ವೇದವ್ಯಾಸ ಮಹತ್ಪಾದರ ವರ್ಣನೆ ಮಾಡಲಾಗಿದೆ. ಬೇಕಾದರೆ ಹೋಗಿ ಓದಿಕೊಳ್ಳಿ ಎಂದು ಆಚಾರ್ಯರು ದಿನಂ ಪ್ರತಿ ಅವರಿವರಿಗೆ ಹೇಳುತ್ತಿರುವುದುಂಟಂತೆ.
ಅವರನ್ನು ನೋಡಿದರೆ ಅದೇನು ಉತ್ಪ್ರೇಕ್ಷೆ ಅಲ್ಲ ಎನ್ನಿಸಿತು.

ಬ್ರಾಹ್ಮಣರೆಂದರೆ ಹೀಗಿರಬೇಕು ಎಂದು ನೋಡಿದ ಎಂಥವರಿಗೂ ಅನ್ನಿಸದಿರಲಿಲ್ಲ. ಅಷ್ಟ ದಿಗ್ಗಜಗಳೇ ಮನುಷ್ಯರೂಪದಲ್ಲಿ ನಡೆಯುತ್ತಿರುವರೇನೋ ಎಂಬಂತೆ ಅವರು ನಡೆಯುತ್ತಿದ್ದರು. ಅಕ್ಕಪಕ್ಕದಲ್ಲಿ ಅಬ್ರಾಹ್ಮಣರ ಮನೆಗಳಿರುವವೆಂದು ಭಾವಿಸಿ ಮೂಗು ಬಾಯಿಗಳ ಮೇಲಿರಿಸಿದ್ದ ಅಂಗವಸ್ತ್ರವನ್ನು ಅವರು ತೆಗೆಯಲೇ ಇಲ್ಲ.
ಅಷ್ಟರಲ್ಲಿ ನಾನು ತಿಪ್ಪಜ್ಜಿಯವರೋಣಿಯಿಂದ ಹೋಗಿ ಶಾಸ್ತ್ರಿಗಳಿಗೆ ವಸ್ತುಸ್ಥಿತಿ ವಿವರಿಸಲು ಪ್ರಯತ್ನಿಸಿದೆ. ಅವರ ಪರವಾಗಿ ಬಂದಿದ್ದವರು ‘ರಾಜಗೋಪಾಲಚಾರ್ಯರು ಧರ್ಮಕರ್ಮಗಳ ಸೂಕ್ಷ್ಮಗಳು ಮರೆತಿರುವರೇನು?’ ಎಂದು ಪ್ರಶ್ನಿಸಿದರು. ಆ ಪಂಚವಿಂಶತಿ ನೆಂಟರಲ್ಲಿ ನಂಜನಗೂಡಿಂದ ಬಂದಿದ್ದ ನರಹರಿ ಶಾಸ್ತ್ರಿಗಳು; ಬೇಲೂರು ಅಗ್ರಹಾರದಿಂದ ಬಂದಿದ್ದ ಅಳಸಿಂಗಾಚಾರ್ಯರು; ತಲಕಾಡಿಂದ ಬಂದಿದ್ದ ರಾಮಾಚಾರ್ಯರು ಗೇರುಸೊಪ್ಪೆಯಿಂದ ಬಂದಿದ್ದ ವೆಂಕಣ್ಣಾಚಾರ್ಯರು ಆ ಬೀಗರಿಗೆ ಬುದ್ಧಿ ಹೇಳುವುದಾಗಿ ನಿರ್ಧರಿಸಿದರು. ಬೆಂಗಳೂರಿಂದ ಬಂದಿದ್ದ ರಿಟೈರ್ಡ್ ಅಮಲ್ದಾರರಾದ ಹಯವದನರಾಯರಂತೂ ಈ ಮದುವೆ


೨೯೨

ಮುರಿದು ಬಿದ್ದ ಪಕ್ಷದಲ್ಲಿ ತಮ್ಮ ಪಂಚಮ ಸುಪುತ್ರಿಯಾದ ರುಕ್ಮಿಣಿಯನ್ನು ಇದೇ ಹಂದರದಲ್ಲಿ ಇದೇ ಮುಹೂರ್ತನಲ್ಲಿ ಕೊಟ್ಟು ಧಾರೆ ಎರೆದು ಬಿಡಬಹುದೆಂದು ಲೆಕ್ಕ ಹಾಕಿದರು. ಕೂಡಲೆ ಅವರು ಒಳಗೆ ಜೋಗಿ ತಮ್ಮ ಧರ್ಮಪತ್ನಿ ಜಯಲಕ್ಷಮ್ಮನವರನ್ನು ಗುಟ್ಟಾಗಿ ಕಂಡು "ದೇವರದಯಯಿಂದ ಮದುವೆ ಮುರಿದು ಬಿದ್ದರೆ ರುಕ್ಮಿಣಿಯನ್ನು ಕೊಟ್ಟಿ ಧಾರೆ ಎರೆದು ಬಿಡೋಣ... ಕೋಟೆ ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿಸೋಣ" ಎಂದು ಪಿಸುಗುಟ್ಟಿದರು. ಜಯಲಕ್ಷಮ್ಮನವರು ತಮ್ಮ ಕೈಯಲ್ಲಿರುವ ಚಪಾತಿ ತುಪ್ಪದಲ್ಲಿ ಬೀಳಲಿದೆ ಎಂದು ಭಾವಿಸಿ ತಮ್ಮ ಮಗಳ ಬಳಿಗೆ ಹೋಗಿ ಆಕೆಯ ಕಿವಿಯಲ್ಲಿ ವಸ್ತುಸ್ಥಿತಿ ಸೂಚ್ಯವಾಗಿ ಹೇಳಿದರು. ಕೂಡಲೆ ರುಕ್ಮಿಣಿ ಕೋಣೆಗೆ ಹೋಗಿ ಒಳಗಿದ್ದವರನ್ನೆಲ್ಲ ಹೊರಗೆ ಕಳಿಸಿ ಧರ್ಮಾವರಂ ಕಲಾಪತ್ತಿನ ಸೀರೆ ಉಟ್ಟು ನೀಟಾಗಿ ಡ್ರೆಸ್ ಮಾಡಿಕೊಂಡು ವಟುವಿನೋದಾಪಾದಿಯಲ್ಲಿ ಮಂಕಾಗಿ ಕೂತಿದ್ದ ಶಾಮಣ್ಣನ ಹಿಂದೆ ಮುಂದೆ ಸುಳಿಯ ತೊಡಗಿದಳು. ಕಾಂಪೌಂಡಿನಾಚೆ ಹೋ ಎಂದು ಹರ್ಷೋದ್ಗಾರ ಮಾಡತೊಡಗಿದ ಗ್ರಾಮದ ಸಮಸ್ತ ನಾಯಿಗಳನ್ನು ನಾರಾಣಿ ಕೈಯಲಿದ್ದ ಬೆತ್ತದಿಂದ ಓದಿಸುವ ಪ್ರಯತ್ನ ಮಾಡತೊಡಗಿದನು. ಗ್ರಾಮದ ಪ್ರಮುಖರೆಂದು ಹೆಸರು ಮಾಡಿರುವ ಹಲ್ಕುಂದಿ ರಾಮಣ್ಣ; ಮಾಜಿ ಪುರಸಭಾ ಅಧ್ಯಕ್ಷ ಚನ್ನಬಸಪ್ಪ; ಜಾಟಗೆರೆ ಸತ್ಯಪ್ಪ; ಗವುಳೇರ ಕ್ರಿಷ್ಟಪ್ಪ; ಕಟುಕರ ವಿಠೋಬ; ಕೊಲ್ಮಿ ಹಸನ್ ಸಾಹೇಬ ಮುಂತಾದವರು ಇದು ತಮ್ಮ ಊರಿನ ಮರ್ಯಾದೆ ಪ್ರಶ್ನೆ ಎಂದುಕೊಂಡು ಬಂದರು. ರುಗ್ಣಶಯ್ಯೆಯಲ್ಲಿದ್ದ ಶಾಸ್ತ್ರಿಗಳಿಗೆ ನಮಸ್ಕರಿಸಿದರು. ಕಣ್ಣಿನ ನೀರನ್ನು ಸೆರಗಿಗೆ ಬಸಿಯುತ್ತಿದ್ದ ಅಲುಮೇಲಮ್ಮನವರಿಗೆ "ನೀವೇನು ಹೆದರ್ಬೇಡಿ ತಾಯಿ... ಬೀಗರ ವಿಷಯ ನಮಗೆ ಬಿಟ್ಟು ನೀವು ನಿಶ್ಚಿಂತೆಯಿಂದಿರ್ರಿ" ಎಂದು ಸಮಾಧಾನ ಹೇಳಿದರು. ಅಷ್ಟು ಹೇಳಿ ಅವರಿನ್ನೂ ಉಸುರು ಬಿಟ್ಟು ತೆಗೆದುಕೊಂಡಿರಲಿಲ್ಲ. ಅಷ್ಟರೊಳಗೆ ವೇದಾಂತಿ ರಾಜಗೋಪಾಲಚಾರ್ಯರು ಮತ್ತವರ ದಂಡು ಬಂದೇಬಿಟ್ಟಿತು.

ಬಂದವರೆಲ್ಲ ಮೊದಮೊದಲು ಶಾಸ್ತ್ರಿಗಳ ದೈಹಿಕ ಪರಿಸ್ಥಿತಿ ಕಂಣಾರೆಕಂದು ಕರಗಿಹೋದವರಂತೆ ಕಂಡುಬಂದರಾದರೂ ಕ್ರಮೇಣ ದ್ವನಿ ಎತ್ತರಿಸಿ ಮಾತಾಡ ತೊಡಗಿದರು. ಸದರೀ ಗ್ರಾಮದ ಅಗ್ರಹಾರದವರು ಬಹಿಷ್ಕಾರ ಹಾಕಿರುವರೆಂದ ಮೇಲೆ ಮಂಗಳ ಕಾರ್ಯಗಳು ಸುಸೂತ್ರವಾಗಿ ಹೇಗೆ ನಡೆಯುತ್ತವೆ ಎಂಬುದಾಗಿ ತ್ರಯಂಬಕರು ನಾಂದಿ ಹಾಡಿದರು. ಉಳಿದವರು ಅದಕ್ಕೆ ದನಿಗೂಡಿಸಿದರು. ತಾವು ಏನಾದ್ರು ಹೇಳುವ ದೊಡ್ಡ ಮನಸ್ಸು ಮಾಡಬೇಕು ಬುದ್ಧಿ ಎಂದು ಹೇಳಿದ ಕಟುಕರ ವಿಠೋಬಗೆ ಎಲ್ಲ ಹಕ್ಕು ದಯಪಾಲಿಸಿತ್ತು. ಸಭೆ ವಿಠೋಬನ ಗಿರಿಜಾ ಮೀಸೆ ನೋಡಿ ಆಚಾರ್ಯರ ಹಳ್ಳೊಳಗಿದ್ದ (ವಯಸ್ಸು ತೊಂಭತ್ತರ ಮೇಲಾಗಿದ್ದರು ಮುವ್ವತ್ತೆರದರ ಪೈಕಿ ಎರಡು ಹಲ್ಲು ಮಾತ್ರ ಉಸುರಿದ್ದವು) ನಾಲಗೆಯನ್ನು ಸರಿಪಡಿಸಿಕೊಂಡು ಮೊದಲು ಬೆಣ್ಣೆಯಲ್ಲಿ ಹರಳು ಕರಗುವಂತೆ ಮಾತಾಡಿದ ನಂತರ "ಈ ಸಮಸ್ಯೆ ಸೂಕ್ಷ್ಮ ಅದೆ. ಅಗ್ರಹಾರದ ಕುಲ ಬಾಂಧವರು ಬಹಿಷ್ಕಾರ ಹಾಕಿದ್ದಾರಂತಲ್ಲ..." ಎಂದಷ್ಟೆ ಹೇಳಿದರು. ಆಚಾರ್ಯರ ಮಾತು ಕೇಳಿ ಚನ್ನಬಸಪ್ಪ ಗಹಗಹಿಸಿ ನಗಾಡಿದ "ಅಲ್ರೀ ಬುದ್ದಿ... ಬಹಿಷ್ಕಾರ ಹಾಕಿದ್ದೀವಂತ ಅವರೇನು ಬಂದ ತಮ್ಗೆ ಹೇಳಿದ್ರಾ?" ಎಂದ. ತ್ರಯಂಬಕರು ಬುದಕ್ಕನೆ ಎದ್ದು ನಿಂತು "ನಾವೇ ಖುದ್ಧ ಹೋಗಿದ್ವಿ" ಎಂದು ಹೇಳಿದರು. ಕೊಲ್ಮಿಹಸನ್ಸಾಬು (ಹಿಂದೆ ಕುಸ್ತಿ ಪಂದ್ಯಾವಳಿಗಳಲ್ಲಿ ಮೂರು ಸಾರಿ ಚಿನ್ನದ ಪಡೆದ ವ್ಯಕ್ತಿ) ಹೇಳಿಕೆ ಮಾತು ಕೇಳಬಾರದೆಂದೂ ಅಗ್ರಹಾರದವರನ್ನೇ ಖುದ್ದು ಕರೆಸಿಕೇಳಬೇಕೆಂದೂ ಹೇಳಿದನು. ಇದು ಸರ್ವಥಾ ಒಪ್ಪಿಗೆ ಆಯಿತು.


೨೯೩

ಅಗ್ರಹಾರದ ಭಾಷ್ಯಂ ಶ್ರೀಕರಾಚಾರ್ಯರೇ ಮೊದಲಾದ ಹಿರಿಯರನ್ನು ಕೂಡಲೆ ಕರೆಸಿ ವಿಚಾರಿಸುವುದೆಂದು ನಿರ್ಧರಿಸಿದರು. ತಾನೇ ಹೋಗಿ ಕರೆದುಕೊಂಡು ಬರುವುದಾಗಿ ಕಟುಕರ ವಿಠೋಬ, ಗೌಳೇರ ಕ್ರಿಷ್ಟಪ್ಪನೊಡನೆ ಅಗ್ರಹಾರದ ಕಡೆ ಯಜ್ದಿ ಮೇಲೆ ಹೋದನು. ಕೊಟ್ಟೂರಿನ ಕಟುಗರು, ಗೌಳೀಯೆಂದರೆ ಅಗ್ರಹಾರಕ್ಕೆ ಅಗ್ರಹಾರವೇ ಥರಥರ ನಡುಗಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು. ಅವರಿಗೆ ಒಳ್ಳೆಯವರಾದರೆ ಇವರಿಂದಲೆ, ಕೆಟ್ಟವರಾಗಿದ್ದರೂ ಇವರಿಂದಲೇ. ಅವರು ಇವರಿಗೆ ಬಹಿಷ್ಕಾರ ಹಾಕಿದರೆಂದರೆ ಇವರು ಅವರಿಗೆ ಬಹಿಷ್ಕಾರ ಹಾಕಿ ಕೂಳಿಗೆ ಕೂಳು, ನೀರಿಗೆ ನೀರು ಸಿಗದಂತೆ ಮಾಡುವುದು. ಭಾಷ್ಯಂ ಮನೆತನದವರಿಗೂ ಕಟುಗರಿಗೂ ಲಗಾಯ್ತಿನಿಂದ ಲೇವಾದೇವಿಯುಂಟು. ತಗೊಳ್ಳುವುದರಲ್ಲಿ ಕೊಡುವುದರಲ್ಲಿ ಒಂಚೂರು ಹೆಚ್ಚು ಕಡಿಯಾದುದಿಲ್ಲ. ಕುರಿ, ಮೇಕೆ, ಕೋಳಿ ಕಡಿದು ಬಣ್ಣ ಬಣ್ಣದ ಮಾಂಸಗಳನ್ನು ತೂಗಿ ಬಿಡುವ ಕಡೆ ಹೋಗಲು ಅಗ್ರಹಾರದವರು ಹಿಂದೇಟು ಹಾಕುವುದುಂಟು. ಯಾರಿಂದಲಾದರೂ ಹೇಳಿ ಕಳಿಸಿದೊಡನೆ ವಿಠೋಬ ಒಂದೇ ಮಾತಿಗೆ ಹೋಗಿ ಬಾಯಿ ಮಾತೀಲೆ ಕೊಡುವನು,. ಕೇವಲ ಬಾಯಿ ಮಾತೀಲೆ ವಾಪಾಸು ಪಡೆಯುವನು. ಶೇಕಡ ಮೂರಿದ್ದುದು ಎರಡು ಮಾಡುವನು. ಎರಡು ಇದ್ದುದು ಒಂದು ಮಾಡುವನು. ಅಪ್ಪಟ ಮಾಂಸಾಹಾರಿಯಾದ ಮತ್ತು ಗ್ರಾಮದ ಏಳೆಂಟು ನೂರು ಮನೆಗೆ ಮಾಂಸಾಹಾರ ಸರಬರಾಜು ಮಾಡುವ ಐವತ್ತೆಂಟು ಕಟುಗರ ಕುಟುಂಬಗಳಿಗೆ ಮುಖ್ಯಸ್ತನಾದ ಅವನು, ಪ್ರಾಣಿಹಿಂಸೆಯಿಂದ ಪಾಪಕಟ್ಟಿಕೊಳ್ಳುತ್ತೇವೆ ಎಂದು ಸದಾ ಹಪಹಪಿಸುವ ಅವನು; ಪೊಗದಸ್ತಾದ ಮೀಸೆಯನ್ನೂ; ದಡೂತಿ ಕಾಯವಂದಿಗನಾದ ಅವನು ಇವರು ತಮ್ಮ ಪಾಪದ ಮಟ್ಟವನ್ನು ಕಿಂಚತ್ತಾದರೂ ಕಡಿಮೆ ಮಾಡುತ್ತಾರೆ ಎಂದು ನಂಬಿಕೆ ಇಟ್ಟುಕೊಂಡೇ ಅಗ್ರಹಾರದವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಅವನ ಜೊತೇಲಿ ಹೊಂಟ ಗೌಳೇರ ಕ್ರಿಷ್ಟಪ್ಪನೇನು ಕಡಿಮೆ? ಅಗ್ರಹಾರವೆಂಭೊ ಅಗ್ರಹಾರಕ್ಕೆನೇ ಹಾಲು ಹೈನ ಸರಬರಾಜು ಮಾಡುವುದು ಒತ್ತಟ್ಟಿಗಿರಲಿ, ಸದರಿ ಗ್ರಾಮದ ಜಮಾತೆ ಇಸ್ಲಾಮಿನ ಮುಖಂಡನಾದ ದಾದಾ ಖಲಂದರನು ಅಗ್ರಹಾರದ ರಾಮದೇವರ ದೇವಸ್ಥಾನದ ಪಕ್ಕದಲ್ಲಿ ಮಸೀದಿ ಕಟ್ಟುವುದಾಗಿ ಎಗರಾಡಿದಾಗ ಈ ಕ್ರಿಷ್ಟಪ್ಪ ಅವನನ್ನು ಒಂದುಮಟ್ಟಹಾಕಿ ಅವನು ಮುಂದೆಂದೂ ಅಗ್ರಹಾರದ ಗಡಿದಾಟದಂತೆ ನೋಡಿಕೊಂಡಿದ್ದಂಥ ಪುಣ್ಯಾತ್ಮನು. ಅಗ್ರಹಾರದವರು ತಲೆ ಎತ್ತಿ ಅಡ್ಡಾಡುತ್ತಿರುವರೆಂದರೆ ಈ ಕ್ರಿಷ್ಟಪ್ಪ ಮತ್ತು ವಿಠೋಬರ ಬೆಂಬಲದಿಂದಾಗಿಯೇ.

ಅವರು ಮೊದಲಿಂದಲೂ ಒಂದಾಗಿ ಇದ್ದವರಲ್ಲ. ಕ್ರಿಷ್ಟಪ್ಪ ಒಂದು ಪಾರ್ಟಿಯಾದರೆ ವಿಠೋಬ ಇನ್ನೊಂದು ಪಾರ್ಟಿ. ರಾಜಕೀಯ ವಿಕೇಂದ್ರಿಕರಣ ಆದಂತೆಲ್ಲಾ ಆದಂತೆಲ್ಲಾ ಅವರಿಬ್ಬರ ನಡುವೆ ಟಗ್ ಆಫ್ ವಾರ್ ತಿಂಗಳಿಗೊಂಡು ಸಾರಿಯಾದರೂ ನಡೆಯುತ್ತಲೇ ಇರುವುದು, ಇವರಿಬ್ಬರನ್ನು ಒಂದು ಮಾಡಲು ಸಾಕ್ಷಾತ್ ಮುಖ್ಯಮಂತ್ರಿಗಳೇ ಗ್ರಾಮಕ್ಕೆ ಬಂದು ಒಬ್ಬರು ಎಂಜಲು ಮಾಡಿದ ಹಾಲನ್ನು ಇನ್ನೊಬ್ಬರು ಕುಡೀರಯ್ಯ ಎಂದು ಹೇಳಿ ರಾಜಿ ಮಾಡಲು ಪ್ರಯ್ತ್ನಿಸಿ ವಿಫಲರಾದದ್ದುಂಟು. ಶಾಮಣ್ಣ ಮದುವೆ ಸುಸಂದರ್ಭದಲ್ಲಿ ದಿಡೀರನೆ ಹುಟ್ಟಿಕೊಂಡ ಸಮಸ್ಯೆ ಅಂಥ ಅವರಿಬ್ಬರನ್ನು ಒಂದು ಮಾಡಿ ಬೀದುಗುಂಟ ನಡೆಸಿತು ಎಂದರೆ ಸಾಮಾನ್ಯ ಸಂಗತಿಯೇ?
ವಿಠೋಬ ಕ್ರಿಷ್ಟಯ್ಯರೆಂಬ ಎರಡು ಧ್ರುವಗಳು ಒಂದಾಗಿ ಅಗ್ರಹಾರಕ್ಕೆ ಬರುತ್ತಿದೆ ಎಂಬ ಸುದ್ದಿ ಹವ್ಯಾಸಿ ಪತ್ತೆದಾರನಾದ ಮಾಧವಾಚಾರ್ಯನಿಂದ ಎಲ್ಲರಿಗೂ ತಿಳಿದುಬಿಟ್ಟಿತು. ಆ ನಡುರಾತ್ರಿಯಲ್ಲಿ ಭಾಷ್ಯಂರವರ ಪುರಾತನ ಮನೆ ಮುಂದೆ ಅಗ್ರಹಾರದ ಹಿರಿಕಿರಿಯರೆಲ್ಲ ಸೇರಿ


೨೯೪

ಉಸಿರು ಬಿಗಿಹಿಡಿದು ಕೂತಿದ್ದರು. ಆಗಲೆ ರಾಹುಕೇತುಗಳೋಪಾದಿಯಲ್ಲಿ ದಯಮಾಡಿಸಿದ ಅವರನ್ನು "ಓಹೋಹೋ ಬರ್ಬೇಕು... ಏನು ಇಷ್ಟು ಹೊತ್ನಲ್ಲಿ ದಯಮಾಡಿಸೋಣವಾಯ್ತು!" ಎಂದು ಸ್ವಯಂ ಶ್ರೀಕರಾಚಾರ್ಯರೇ ಎದ್ದು ಹೋಗಿ ಸ್ವಾಗತಕೋರಿ ಒಂದು ಕಡೆ ಕೂಡ್ರಿಸಿ "ಪಂಚಾಂಗ ಕೇಳೊದಿತ್ತಾ?" ಎಂದು (ತಾವು ತುಂಬ ಮುಗ್ಧರು, ಅಮಾಯಕರು ಎಂಬರ್ಥದಲ್ಲಿ) ವಿಚಾರಿಸಿದರು. "ನಿಮ್ಮ ಪಂಚಾಂಗಕ್ಕಿಷ್ಟು ಬೆಂಕಿ ಹಾಕ್ಲಿ... ಊರಲ್ಲೇನು ಒಳ್ಳೇದು ನಡೀಬೇಕೋ ಬೇಡ್ವೋ ಅಷ್ಟು ಹೇಳ್ರಿ" ಎಂದು ವಿಠೋಬ ಏಕ್‌ದಂ ಗುಂಡು ಹಾರಿಸಿ ಅವರನ್ನು ಥರಥರ ನಡುಗಿಸಿದನು. "ನಿಮ್ಗೆ ಹೇಳೋರು ಕೇಳೋರು ಯಾರೂ ಇಲ್ಲೇನು... ಇವತ್ತು ಯಲ್ಡರಾಕೊಂದು ತೇಲೇಬೇಕು" ಎಂದು ಕ್ರಿಷ್ಟಪ್ಪ ಗೇಣುದ್ದದ ಚುಟ್ಟದ ಹೊಗೆಯನ್ನು ಭಾಷ್ಯಂರವರ ಮುಖಕ್ಕೆ ಬಿಟ್ಟನು. ಅದರಿಂದ ಶ್ರೀಕರಾಚಾರ್ಯರ ಜಂಘಾಬಲ ಉಡುಗಿಬಿಟ್ಟಿತು. ಅವರನ್ನು ಅವರಿಬ್ಬರು ಅಶ್ವಥ್‌ಕಟ್ಟೆಯ ಮರೆಗೆ ಕರೆದು ಐದು ಚಿಂತನ ಮಂಥನ ನಡೆಸಿದರು. ಸ್ರಿಕರಾಚಾರ್ಯರು ಬೆವರು ಒರೆಸಿಕೊಳ್ಳುತ್ತ ಹೊರ ಬಂದವರೆ ಅಗ್ರಹಾರದ ಕೆಲವರೊಂದಿಗೆ ಅವರಿಬ್ಬರ ಹಿಂದೆ ಹೆಜ್ಜೆ ಹಾಕಿದರು. ನಾನ್ ಬ್ರಾಹ್ಮಿನ್ ಪತ್ತೆದಾರನಾದ ಚೇಕರನು ಮನೋವೇಗದಿಂದ ಶಾಸ್ತ್ರಿಗಳ ಮನೆ ತಲುಪಿ ವರ್ತಮಾನ ಪಿಸುಗುಟ್ಟಿದನು. ಅದನ್ನು ಊಹಿಸಿಕೊಂಡು ಕೊರಚರ ಎಲುಗ ಕಹಳೆ ಮೊಳಗಿಸಿದನು. ದೊಬಿ ನಾರಾಣಿಯ ನಾಯಿ ಹೋ ಎಂದು ಬೊಳಗಿತು.

ಆ ಸದ್ದು ಪ್ರತಿದ್ವನಿಸುತ್ತಿರುವಾಗಲೆ ವಿಠಪ್ಪ ಕ್ರಿಷ್ಟಪ್ಪ ಅಗ್ರಹಾರದವರೊಡನೆ ಬಂದೆ ಬಿಟ್ಟರು. ಬಂದೊಡನೆ ಶ್ರೀಕರಾಚಾರ್ಯರು ರುಗ್ಣಶಯ್ಯೆ ಬಳಿಗೆ ಹೋಗಿ ಶಾಸ್ತ್ರಿಗಳನ್ನು ಮಾತಾಸ್ಡಿಸಲು ಪ್ರಯತ್ನಿಸಿವಿಫಲರಾದರು.

ಸ್ವಲ್ಪ ಹೊತ್ತು ಬಹಿಷ್ಕಾರ ಎಂಬ ಟಾಪಿಕ್ಕಿನ ಮೇಲೆ ಚರ್ಚೆ ನಡೆಯಿತು. ಪರಸ್ಪರ ಶಾಮೀಲಾಗಿದ್ದ ಹಯವದನರು, ತ್ರಿಯಂಬಕರು ಬಹಿಷ್ಕಾರ ಕುರಿತಂತೆ ಮಂಡಿಸಿದ ಗೊತ್ತುವಳಿ ಕ್ರಮೇಣ ಬಿದ್ದುಹೋಯಿತು. "ಯಾವ ಮುಠ್ಠಾಳ ಹೇಳಿದ ನಿಮ್ಗೆ ನಾವು ಬಹಿಷ್ಕಾರ ಹಾಕಿದೀವಂತ" ಶ್ರೀಕರಾಚಾರ್ಯರು ಘಂಟಾ ಘೋಷವಾಗಿ ಹೇಳಿದ್ದೇ ಗೊತ್ತುವಳಿ ಬಿದ್ದು ಹೋಗಲು ಕಾರಣ? ಈ ಮದುವೆಯಲ್ಲಿ ಭಾಗವಹಿಸಿದರೆ ತಾವೂ ಬ್ರಷ್ಟರಾಗಿ ಹೋಗುವುದಾಗಿಯೂ; ಆದ್ದರಿಂದ ತಾವು ತಂತಮ್ಮ ಹೆಂಡಿರು ಮಕ್ಕಳನ್ನು ಕರೆದುಕೊಂಡು ಸಭಾತ್ಯಾಗ ಮಾಡುವುದಾಗಿಯೂ ಸಂಸಿದ್ಧರಾದ ಹಯವದನರು, ತ್ರಯಂಬಕರು "ಕೈಸೆ ಜಾತೆ ಜಾಜಿ ದೇಖ್ತಾ" ಎಂದು ಕೊಲ್ಮಿಹಸನ್ಸಾಬ ಗತ್ತು ಹಾಕುತ್ತಲೆ ನಿಂತುಬಿಟ್ಟರು.
ಹಲ್ಕಂದಿ ರಾಮಣ್ಣ; ಭದ್ರಣ್ಣ ತಲಾ ಒಂದೊಂದು ಸುಗ್ರಾಸ ಭೋಜನದ ಖರ್ಚನ್ನು ಭರಿಸುವುದಾಗಿಯೂ ವಯೋಭೇದವಿಲ್ಲದೆ ಲಿಂಗಭೇದವಿಲ್ಲದೆ ಎಲ್ಲರೂ ಊಟ ಮಾಡಬೇಕೆಂದು ಆಯಾ ಮುಖಂಡರಿಗೆ ಮನವಿ ಸಲ್ಲಿಸಲು ಅವರೆಲ್ಲ ಯಾಕಾಗಬಾರದೆಂದರು?

ದೊಡ್ಡದೊಂದು ಕಂಟಕ ಪರಿಹಾರವಾಯಿತೆಂದು ಸಮಾಧಾನದ ಉಸಿರುಬಿಡುತ್ತ ಅಲುಮೇಲಮ್ಮನವರು ಅಣ್ಣಂದಿರಾ ಅಂತ ಎಲ್ಲರಿಗೂ ಕೃತಜ್ಞತೆ ಸೂಚಿಸಿದರು. ಸಭೆ ಬರಖಾಸ್ತಾಗಿ ಎಲ್ಲರೂ ಮದುವೆಗೆ ಸಂಭಂದಿಸಿದ ತಲಾ ಒಂದೊಂದು ಕಾರ್ಯ ವಹಿಸಿಕೊಳ್ಳಲು ಆತ ಶಾಮಣ್ಣನನ್ನು ದೇವರಕೋಣೆಗೆ ತುಪ್ಪದ ದೀಪ ಹಚಲು ಕರೆದೊಯ್ಡಳು.
ಅದು ಹೇಳಿ ಕೇಳಿ ಕಟ್ಟಾ ಸಂಪ್ರದಾಯಸ್ಥರ ನೇತೃತ್ವದಲ್ಲಿ ನಡೆಯುವ ಮದುವೆಯಾದ್ದರಿಂದ ನಾವ್ಯಾರೂ ಎಲ್ಲ ಕಡೆ ಮೂಗು ತೂರಿಸುವಂತಿರಲಿಲ್ಲ. ಕಂಪ್ಲಿಯಿಂದ ಬಂದಿದ್ದ ರಾಜ್ಯೋತ್ಸವ


೨೯೫

ಪ್ರಶಸ್ತಿ ವಿಜೇತ ಚೆನ್ನ ಹುಸೇನ ಸಾಹೇಬರಮತ್ತವರ ಸಂಗಡಿಗರ ನಾದಸ್ವರವಾದನಕ್ಕೆ ಎಲ್ಲರೂ ತಲೆ ಅಲ್ಲಾಡಿಸುತ್ತ ಒಂದಲ್ಲ ಒಂದು ಕೆಲಸವನ್ನು ಹುಡುಕಿ ಮಾಡುತ್ತಿದ್ದೆವು. ಆಚಾರವಿಚಾರ ಶಾಸ್ತ್ರ ಸಂಪ್ರದಾಯಗಳು ರಾತ್ರಿ ಇಡೀ ನಡೆದವು. ಸೂರ್ಯ ಇನ್ನೂ ಸ್ವಲ್ಪ ತಡಮಾಡಿ ಹುಟ್ಟಿದ್ದರೆ ಗಂಟೇನು ಕಳೆದುಕೊಳ್ಳುತ್ತಿದ್ದ ಎಂದು ಗೊಣಗುತ್ತಿರುವಷ್ಟರಲ್ಲಿ ಒಳಗಿನ ಕೋಣೆಯಲ್ಲಿ ಮಾಂಗಲ್ಯಧಾರಣೆಯಂಥ ಮಂಗಳಕಾರ್ಯ ನಡೆದೇಬಿಟ್ಟಿತು. ಕ್ರಮೇಣ ಹೊತ್ತೇರಿದಂತೆ ಶಾಸ್ತ್ರಿಗಳ ಕಡೆಯವರು, ಅಲಮೇಲಮ್ಮನವರ ಕಡೆಯವರು, ಶಾಮಣ್ಣನ ಬ್ಯಾಂಕು ಸಹೋದ್ಯೋಗಿಗಳು; ಗ್ರಾಮದ ಮೂಲೆ ಮುರುಕಟ್ಟಿನಲ್ಲಿ ಉಳಿದುಕೊಂಡಿದ್ದಂಥವರು ಎಲ್ಲರೂ ತಂತಮ್ಮ ಶಕ್ತ್ಯಾನುಸಾರ ಬರಲಾಗಿ ಮದುವೆ ಮನೆಯ ಆ ಬೀದಿಯಿಂದ ಈ ಬೀದಿಯವರೆಗೆ;ಈ ಬೀದಿಯಿಂದ ಆ ಬೀದಿಯವರೆಗೆ ಗಿಜಿಗಿಜಿ ಗುಟ್ಟತೊಡಗಿ ಪುಟ್ಟ ಜಾತ್ರೆಯ ಶೋಭೆಯನ್ನು ತಂದಿತು. ನೀವ್ಯಾರು? ನೀವ್ಯಾರು? ನೀವ್ಯಾವಕಡೆಯವ್ರು: ನೀವ್ಯಾವಕಡೆಯವ್ರು? ಎಂಬಂಥ ಪ್ರಶ್ನೆಗಳಿಗೂ; ನಾವಿಂಥವರು! ನಾವಿಂಥವರು ನಾವಿಂಥ ಕಡೆಯಿಂದ ಬಂದಿದ್ದೀವಿ! ನಾವಿಂಥ ಕಡೆಯಿಂದ ಬಂದಿದ್ದೀವಿ! ಎಂಬ ಉತ್ತರಗಳು; ಹೋಽಽ.. ಹ್ಹಾಂ! ಸಂತೋಷ.. ಎಂಬ ಉದ್ಗಾರಗಳು ಎಲ್ಲಿ ನೋಡಿದರೂ! ಎಲ್ಲಿ ಕಿವಿಚಾಚಿದರೂವೆ, ಬಸ್‌ಸ್ಟಾಂಡು, ರೈಲ್ವೆ ನಿಲ್ದಾಣಗಳಂಥ ಪುಣ್ಯಸ್ಥಳಗಳ ನಿವಾಸಿಗಳಾದ ಕೆಲವೊಂದು ಭಿಕ್ಷಕರೂ ಬಂದು ಯಪ್ಪಾ! ಯಮ್ಮಾ ಅಂಥ ಕೈ ಚಾಚದಿರಲಿಲ್ಲ. ಅವರಿಗೆ ಚಿಕ್ಕಾಸು ಕೊಡುತ್ತಿದ್ದವರೂ, ಕೊಡದೆ ಗದರಿಸುತ್ತಿದ್ದವರೂ ಭಾರತದ ರಾಜಕೀಯ ಆರ್ಥಿಕ ಸ್ಥಿತಿಗತಿಗಳಬಗೆಗೆ ಚರ್ಚಿಸುತ್ತಲೇ ತಮ್ಮ ಕೌಟಿಂಬಿಕ ಸಮಸ್ಯೆಗಳ ಬಗ್ಗೆ ಮಾತು ಎತ್ತಿಕೊಳ್ಳದೆ ಇರುತ್ತಿರಲಿಲ್ಲ. ಭಾರತದ ಆರ್ಥಿಕ ದುಸ್ಥಿತಿ ಬಗ್ಗೆ ಶ್ವೇತಪತ್ರ ಪ್ರಕಟಿಸಬೇಕೆಂದು ಪಟ್ಟು ಹಿಡಿದಿರುವ ವಿರೋಧಿ ಧುರೀಣ ಡೆಂಗರ್ಪೂರ್ ಕಡೆಗೆ ಕೆಲವರೂ; ಆಡಳಿತ ಪಕ್ಷದ ಆರ್ಥಿಕ ಮಂತ್ರಿ ಕೇವಲ್‌ನಾಥ್ ಸಿಂಗ್ ಕಡೆ ಕೆಲವರೂ ವಕಾಲತ್ತು ವಹಿಸಿ ಏರು ದನಿಯಲ್ಲಿ ಮಾತಾಡುತ್ತಿದ್ದುದು ಆ ನಾದಸ್ವರ ವಾದನಕ್ಕಿಂಥ ಒಂದು ಕೈ ಮಿಗಿಲಾಗಿತ್ತು. ಚರ್ಚೆ ಕಾವೇರಿದ್ದಾಗಲೀ ಕೈಯಲ್ಲಿ ಒಂದು ಪೆಂಡೆಹಾಳೆಯನ್ನು ಹಿಡಿದುಕೊಂಡು ಬಂದ ಯುವಕನೋರ್ವ ಕುಂಡಿ ಕಡೆ ಹರಿದಿದ್ದ ಪ್ಯಾಂಟಿನ ಕಡೆ ಷರ್ಟ್ ಎಳೆದುಕೊಳ್ಳುತ್ತಾ ಹಂಚತೊಡಗಿದ. ಅದು ‘ಆರ’ ಕಂಪನಿಯವರ ದೋಸೆಮಿಕ್ಸ್‌ಗೆ ಸಂಬಂಧಿಸಿದಾಗಿತ್ತು.

ಕೊಟ್ಟೂರು ಪ್ರಾಂತದ ಮುಖ್ಯ ಏಜೆಂಟನಾಗಿ ಸುರೇಶಗೌಡ ರೂಪಗೊಂಡಿರುವ ಸಂಗತಿ ಅದರಿಂದ ತಿಳಿದುಬಂತು. ಕರಪತ್ರ ಹಂಚುತ್ತಿದ್ದ ಹುಡುಗನ ತಾಯಿ ಗತಿಸಿದ ಶಿವಪೂಜೆ ಗೌಡರ ಗುಪ್ತ ಪ್ರೇಯಸಿಯಾಗಿದ್ದಳೆಂದು ಮಂದಿ ಗೊಣಗಿಕೊಂಡರು. ಕೊರಿಯಾ; ಚೀನಾ; ಜಪಾನ್ ದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಪ್ರತಿ ಸಾವಿರ ಚದುರ ಕಿಲೋಮೀಟರಿಗೊಂದರಂತೆ ಸಿಗುವ ಝನ್‌ಸಂಗ್ ಮೊದಲಾದ ದಿವ್ಯ ಔಷಧೀಯ ಸಸ್ಯ ಬೇರುಗಳ ಒಂದಂಶವನ್ನು ಬೆರೆಸಿರುವ ಈ ಹಿಟ್ಟಿನಿಂದ ದೋಸೆ ಮಾಡಿ ತಿಂದು ಹೊಸ ಯೌವನ ಪಡೆಯಿರಿ ಎಂಬುದನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗಿತ್ತು. ಅದನ್ನು ಓದಿ ಕೆಲವರು ಎಸೆದರೆ ಮತ್ತೆ ಕೆಲವರು ಅದನ್ನು ಮಡಚಿ ಕರೆನ್ಸಿ ನೋಟುಗಳ ನಡುವೆ ಇಟ್ಟುಕೊಂಡರು. ಅನಂತರ ಚರ್ಚೆ ಇನ್‌ಸ್ಟಂಟ್ ಫುಡ್ ಜನಪ್ರಿಯಗೊಳ್ಳುತ್ತಿರುವುದರ ಬಗ್ಗೆ ತಿರುಗಿತು. ಅಷ್ಟರಲ್ಲಿ ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದ ಇಳಿದು ಸ್ಲೋ ಮೋಷನ್ನಿನಲ್ಲಿ ತಮ್ಮತ್ತ ಬಂದವರು ಅನಸೂಯ ಮತ್ತು ರಘುರಾಂ ಎಂದು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ. ನೋಡಲಿಕ್ಕೆ ಹುದ್ದೆಯ ಸತಿಪತಿಗಳಂತಿದ್ದ ಅವರು


೨೯೬

ಮುಗುಳ್ನಗುತ್ತ ಹಲೋ ಹಲೋ ಅಂತ ಕೈಬೀಸುತ್ತ ಅವರಿಬ್ಬರನ್ನು ಮಾತಾಡಿಸುತ್ತ ಕ್ರಮೇಣ ತ್ರಿಮೂರ್ತಿಗಳಾದ ನಮ್ಮನ್ನು ಸೇರಿಕೊಂಡರು. ಆ ದಂಪತಿಗಳನ್ನು ನೋಡಿ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಪರಸ್ಪರ ಕ್ಷೇಮ ಹಂಚಿಕೊಂಡೆವು. ಬೀಗರು ಬಿಜ್ಜರನ್ನು ಕರೆತರಲು; ಬಿಟ್ಟು ಬರಲು ರಘು ತನ್ನ ಕಾರನ್ನು ಬಿಟ್ಟು ಕೊಟ್ಟ. ಅದು ಬೇಸರವಿಲ್ಲದಂತೆ ಊರತುಂಬ ತಿರುಗಾಡತೊಡಗಿತು. ‘ಅರ’ ಕಂಪನಿಯ ಪ್ರಧಾನ ನಿರ್ದೇಶಕರು ಬಂದಿರುವರೆಂಬ ಸುದ್ದಿ ತಿಳಿದು ಉಜ್ಜನಿ, ಹಡಗಲಿ, ಕೂಡ್ಲಿಗಿ, ಕೊತ್ತಲಗಿ ಕಡೆಯಿಂದ ಅದರ ಹಂಚಿಕೆದಾರರು ಬಂದಿದ್ದರು. ಪ್ರಾಡಕ್ಟನ್ನು ಜನಪ್ರಿಯಗೊಳಿಸುವ ಬಗ್ಗೆ, ಠೇವಣಿ ಬಗ್ಗೆ,; ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಅನುಲಕ್ಷಿಸಿ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ರಘು ಮತ್ತು ಠೇವಣಿದಾರರು ಚರ್ಚಿಸುವುದರಲ್ಲಿ ಮಗ್ನರಾದರು. ಅನಸೂಯ ತನ್ನ ಮನೆಗೆ ಹೋಗಿ ನೋಡಿಕೊಂಡು ಬಂದಳು. ಮಾಟಗಾರ ರುದ್ರನಾಯಕನ ಮನೆ ಎಂಬ ಕಾರಣಕ್ಕಾಗಿ ಅದು ಚಲಾವಣೆ ಕಳೆದುಕೊಂಡಿತ್ತು. ತಾವು ಓದಿಕೊಂಡ ನೆನಪಿಗೆ ಗಚ್ಚಿನಮಠ ಶಾಲೆಗೆ ಬಿಟ್ಟು ಕೊಡಬೇಕೆಂದು ದಂಪತಿಗಳು ನಿರ್ಧರಿಸಿ ಪತ್ರಬರೆದಿದ್ದರು ಎಂದು ಕಾಣುತ್ತದೆ. ಶಾಲೆಯ ಮೇನೇಜರಾದ ಹೊನ್ನೂರು ಸಾಹೇಬರು "ಏನಮ್ಮಾ ತಾಯಿ ಚೆನ್ನಾಗಿದ್ದೀಯಾ?" ಎಂದು ಬಂದು ಮಾತಾಡಿಸಿದರು. ಅವರಿಂದ ತಪ್ಪಿಸಿಕೊಂಡರೆ ಇನ್ನೊಬ್ಬರು! ಇನ್ನೊಬ್ಬರಿಂದ ತಾಪ್ಪಿಸಿಕೊಂಡರೆ ಮತ್ತೊಬ್ಬರು ಹೀಗಾಗಿ ಅನಸೂಯಾಗೆ ನಮ್ಮನ್ನು ಹೆಚ್ಚು ಮಾತಾಡಿಸಲು ಅವಕಾಶ ಸಿಗಲೇ ಇಲ್ಲ. ಸಿಕ್ಕ ಅವಕಾಶದಲ್ಲಿ ಕಥೆಗಳ ಬಗ್ಗೆ, ಒಮ್ಮೆಯಾದರೂ ಬೆಂಗಳೂರಿಗೆ ಬಂದು ಮಾತಾಡಿಸದಿರುವುದರ ಬಗ್ಗೆ ಮಾತಾಡಿದಳು. ಆ ಪಾದರಸದಂಥ ದಂಪತಿಗಳನ್ನು ಹೆಂಣಿನ ಕಡೆಯವರಾಗಲೀ ಗಂಡಿನ ಕಡೆಯವರಾಗಲೀ ಮಾತಾಡಿಸುವ ಸೌಜನ್ಯ ತೋರಿಸದಿದ್ದುದರಿಂದ ನಮಗೆಲ್ಲ ಬೇಸರವಾಯಿತು. ಮಧು ಮಕ್ಕಳನ್ನು ಕೂಡ್ರಿಸಿದ ಮೇಲೆ ದಂಪತಿಗಳೀರ್ವರೂ ಹೋಗಿ ಅಕ್ಷತೆ ಹಾಕಿದರು. ಕಾದ ಹೆಂಚಿನ ಮೇಲೆ ಚಡಪಡಿಸುವ ಚುಬ್ಬಿಯಂತೆ ತಲೆತಗ್ಗಿಸಿಕೊಂಡು ಕೂತಿದ್ದ ಶಾಮಣ್ಣ ಅವರನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ. ಅನಸೂಯ ಅವನಿಗೊಂದು ಉಂಗುರವನ್ನು ಹಾಗೂ ವಧುವಿಗೆ ಒಂದು ರೇಶಿಮೆ ಸೀರೆಯನ್ನು ಆಯಿರು ಮಾಡಿ ಬಂದಳು. ಆದ ಬೇಸರ ಹೇಳದಿದ್ದರೂ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ತಮಗೆ ಕಾಟ ಕೊಟ್ಟ ನಿಘೂಡ ವ್ಯಕ್ತಿ ಶಾಮನೇ ಇರಬಹುದೆಂದು ಆಕೆ ಯೋಚಿಸಲಿಕ್ಕೆ ಅನುಕೂಲವಾಗುವಂತೆ ಶಾಮ ಸಫಾರಿ ತೊಟ್ಟಿದ್ದುದೂ ಆಕೆಯ ಬೇಸರಕ್ಕೆ ಒಂದು ಕಾರಣವಿರಬಹುದೆಂದುಕೊಂಡೆ. ನನ್ನ ಪತ್ರ ಓದಿ ಇದು ಹಿಪೋಕ್ರಿಟಿಕ್ನೊಬ್ಬ ಬರೆದದ್ದು ಎಂದು ಭಾವಿಸಿರುವಳೆಂದುಕೊಂಡೆ. ಆ ದಂಪತಿಗಳು ಊಟ ಮಾಡುವುದೊತ್ತಟ್ಟಿಗಿರಲಿ ಮದುವೆಮನೆಯಲ್ಲಿಒಂದು ಕಪ್ಪು ನೀರು ಸಹ ಕುಡಿಯದೇ ಕಾರು ಹತ್ತಿದರು. ಅವರು ಅದಕ್ಕೆಲ್ಲ ಕರೆದರೆ ತಾನೆ? ಇದರಿಂದ ತ್ರಿಮೂರ್ತಿಗಳಾದ ನಮಗೂ ಬೇಸರವಾಯಿತು. ಒಬ್ಬೊಬ್ಬರು ಒಂದೊಂದು ನೆಪ ಹೇಳಿ ತಪ್ಪಿಸಿಕೊಂಡು ಹೊರಟು ನಮ್ಮ ನಮ್ಮ ಮನೆ ಸೇರಿದೆವು.

ಮದುವೆ ಆಯಿತು ಎಲ್ಲಾ ಆಯಿತು. ಇನ್ನು ನನಗೇನು ಕೆಲಸ ಕೊಟ್ಟೂರಿನಲ್ಲಿ? ಅಲ್ಲದೆ ಜಗನ್ನಾಥರೆಡ್ಡಿಯವರು ಹೇಳಿದ ಪ್ರಕಾರ ಬಂದಿದ್ದರೆ ಜೀವಕ್ಕೆ ಒಂದಿಷ್ಟು ನೆಮ್ಮದಿ ಇರುತ್ತಿತ್ತು. ಮದುವೆ ಮನೆಯಲ್ಲಿ ಊಟ ಮಾಡದೆ ಬಂದಿದ್ದ ನನ್ನ ಬಗ್ಗೆ ನಿಂಗಮ್ಮಜ್ಜಿಗೆ ತುಸು ಗೌರವ ಹೆಚ್ಚಿ ನನ್ನ ಮೊಮ್ಮಗ ಅಂದ್ರೆ ಹೀಗಿರಬೇಕು ಎಂಬಂಥ ಮಾತುಗಳನ್ನು ಆಡಿಕೊಂಡಿತು. ಜೊತೆಗೆ "ನಿನ್ನ ಮದ್ವಿ ನೋಡ್ತೀನೋ ಇಲ್ಲಾ ಹಂಗೇ ಕಣ್ಮುಚ್ತೀನೋ" ಎಂದು ನಿಟ್ಟುಸಿರು ಬಿಟ್ಟಿತು. ನಾನು ಅವರನ್ನು


೨೯೭

ಅವರ ಪಾಡಿಗೆ ಬಿಟ್ಟು ಒಂದು ದಿನ ಬಳ್ಳಾರಿ ಕಡೆ ಹೋಗುವ ಬಸ್ಸು ಹತ್ತಿದೆ.

*
*
*
ನನ್ನ ಗೈರುಹಾಜರಿಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ವಾಗಿಲಿ ಎಂಬ ಗ್ರಾಮವು ನೀರಲ್ಲಿ ಅದ್ದಿದ ಸುಣ್ಣದ ಭಟ್ಟಿಯಂತಾಗಿತ್ತು. ಆ ಘಟನೆಗಳಿಂದ ಯಾರೊಬ್ಬರು ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಯಾರ ಎದೆಯಲ್ಲಿ ಏನಿಟ್ಟುಕೊಂಡಿದ್ದಾರೋ ಎಂಬ ಭಯ ನಿರ್ಭಯವಾಗಿ ತಾಂಡವವಾಡತೊಡಗಿತ್ತು. ಯಾರೂ ಒಂಟಿಯಾಗಿ ಮಲಮೂತ್ರ ವಿಸರ್ಜನೆಗೆಂದು ಹೊರಗೆ ಹೋಗುತ್ತಿರಲಿಲ್ಲ. ಸಂಜೆಯಾಯಿತೆಂದರೆ ಕೂಡಲೆ ಎಲ್ಲರೂ ತಂತಮ್ಮ ಗೂಡುಗಳನ್ನು ಸೇರಿಕೊಂಡು ಬಿಡುತ್ತಿದ್ದರು. ಜಗನ್ನಾಥರೆಡ್ಡಿಯವರ ಪ್ರೇತ ಊರಲ್ಲಿ ತಿರುಗಾಡುತ್ತಿದೆ ಎಂಬುದೇ ಅವರ ಭಯಕ್ಕೆ ಕುಮ್ಮಕ್ಕು ಕೊಟ್ಟಿತ್ತು. ಅಮವಾಸೆಯ ಹಿಂದಿನ ದಿನವೇ ರೆಡ್ಡಿಯವರು ಬಡಗೇರ ಚನ್ನಪ್ಪಾಚಾರಿ ಮತ್ತು ರಾಗಪ್ಪನವರಿಗೆ ಒಂದು ಜೀಪು ಹತ್ತುವಂತೆ ಹೇಳಿದರಂತೆ. ಅವರಿಬ್ಬರು ಅಸ್ವಸ್ಥತೆಯ ಕಾರಣ ಹೇಳಿ ತಪ್ಪಿಸಿಕೊಂಡರಂತೆ. ಅದರ ಬದಲಿಗೆ ತಾನು ಬರುವುದಾಗಿ ಹೇಳಿದ ರಾಮಕ್ರಿಷ್ಣಾರೆಡ್ಡಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟು ತನ್ನ ಬಲಗೈ ಭಂಟನಾದ ಅಕ್ಬರು, ಚಂದ್ರರ, ಲಸುಮರನ್ನು ಕರೆದುಕೊಂಡು ಜೀಪು ಹತ್ತಿದರಂತೆ. ಇವತ್ತೊಂದಿನ ಮನೆ ಬಿಟ್ಟು ಹೋಗಬೇಡಿ ನನಗ್ಯಾಕೋ ಭಯಾ ಅಗ್ತಿದೆ ಎಂದು ತಡೆಯಲೆತ್ನಿಸಿದ ಹೆಂಡತಿಗೆ ತಮ್ಮ ಸೊಂಟದಲ್ಲಿ ತುಂಬಿರುವ ಪಿಸ್ತೂಲಿರುವಾಗ ಯಾಕೆ ಭಯ? ಎಂದು ಧೈರ್ಯ ಹೇಳಿದರಂತೆ.

ಸಾಮಾನ್ಯವಾಗಿ ರೆಡ್ಡಿಯವರು ಎಲ್ಲಿಗೇ ಹೊಗಲಿ ಎಲ್ಲಿಂದಲೇ ಬರಲಿ ಇಂಥ ಕಡೆ ಹೋಗುತ್ತೇವೆ, ಇಂಥ ಕಡೆಯಿಂದ ಬರುತ್ತೇವೆ ಎಂದು ಯಾರಿಗೂ ಹೇಳುವುದಿಲ್ಲ. ಅದೇ ರೀತಿ ಅವರು ಕರ್ನೂಲಿಗೆ ಹೋಗುತ್ತಿರುವುದಾಗಿ ಕಳೆದೆರಡು ದಿನಗಳಿಂದ ಸುದ್ದಿ ಮಾಡಿದ್ದವರು ಅವರು ಹೊರಟಿದ್ದು ಪುಲಿವೆಂದುಲದ ಮೂಲಕ ಬಳ್ಳಾರಿ ಕಡೆಗೆ. ಸಾಮಾನ್ಯವಾಗಿ ಅವರು ದೂರ ಹೋಗಬೇಕೆಂದಾಗ ತಮ್ಮ ಕುಲ ದೈವವಾದ ಚಿನ್ನೋಬಳಂನ ನರಸಿಂಹ ಸ್ವಾಮಿ ದೇವರಿಗೆ ಕಾಯಿ ಕರ್ಪೂರ ಮಾಡಿಸದೇ ಇರುವುದಿಲ್ಲ. ತಮ್ಮ ಹಿರಿಯರೇ ಕಟ್ಟಿಸಿದ್ದ ಗೋಪುರದ ಹಿಂಭಾಗದ ಗರ್ಭಗುಡಿಯಲ್ಲಿ ಓರಂಗಲ್ ಪ್ರತಾಪರುದ್ರ ಗಜಪತಿ ಮಹಾರಾಜರ ಕಾಲದಿಂದಲೂ ನೆಲೆಗೊಂಡಿರುವ ನರಸಿಂಹದೇವರೆಂದರೆ ಹಿರಣ್ಯಕಶ್ಯಪನನ್ನು ಕೊಂದ ವಿಷ್ಣುವಿನ ನರಸಿಂಹಾವತಾರವಲ್ಲ, ಕ್ರಿಸ್ತಶಕ ಹದಿನಾಲ್ಕುನೂರು ತೊಂಬತ್ತರಲ್ಲಿ ಕೇರಳದಿಂದ ಆದಿವಿಷ್ಣುವಿನ ದರ್ಶನಾಕಾಂಕ್ಷಿಯಾಗಿ ಶ್ರೀಕಾಕುಳಂ ಕಡೆ ಪಾದಯಾತ್ರೆ ಹೊರಟಿದ್ದ ಶ್ರೀಮಂತ ಬ್ರಾಹ್ಮಣನೋರ್ವನ ಮೇಲೆ ಮತ್ತಾತನ ಕುಟುಂಬ ವರ್ಗದ ಮೇಲೆ ದರೋಡೆಕಾರರ ತಂಡವೊಂದು ಮರಣಾಂತಿಕವಾಗಿ ಧಾಳಿ ಮಾಡಿತು. ಎಲ್ಲರೂ ಕೊಲೆಯಾದರು. ಆದರೆ ಕೊನೆ ಉಸಿರು ಬಿಡುವ ಮುನ್ನ ಬ್ರಾಹ್ಮಣ ಪುಟ್ಟ ಪೆಟ್ಟಿಗೆಯಿಂದ ಒಂದು ಸಾಲಿಗ್ರಾಮವನ್ನು ಹೊರತೆಗೆದು ದರೋಡೆಕಾರರ ಗುಂಪಿನ ನಾಯಕನ ಕೈಗೆ ಕೊಡುತ್ತ ಇದನ್ನು ಭಕ್ತಿ ಶ್ರದ್ದೆಯಿಂದ ದಿನಂಪ್ರತಿ ಪೂಜೆ ಮಾಡು ಸಕಲ ಪಾಪ ಪರಿಹಾರವಾಗುತ್ತದೆ ಎಂದುಹೇಳಿ ಕೊಟ್ಟು ಪ್ರಾಣ ಬಿಟ್ಟನಂತೆ. ಆದರೆ ಆ ನಾಯಕ ಆ ಸಾಲಿಗ್ರಾಮವನ್ನು ಬೆಟ್ಟದ ತುದಿಯಿಂದ ಪೂರ್ವ ದಿಕ್ಕಿನತ್ತ ಎಸೆಯಲು ಅದು ಗಾಳಿಗುಂಟ ಐವತ್ತು ಹರದಾರಿ ಪ್ರಾಯಾಣ ಮಾಡಿ ಚಿನ್ನೋಬಳಂ ಬಳಿ ಜುಳು ಜುಳು ಹರಿಯುತ್ತಿದ್ದ ಹಂದ್ರಿ ನದಿಯ ದಡದಲ್ಲಿ ಬಿದ್ದಿತಂತೆ. ಅದು ಒಂದೊಂದು ಸಂದರ್ಭದಲ್ಲಿ ಒಂದೊಂದು ರೂಪ ಪ್ರಕಟಗೊಳ್ಳುತ್ತಿರಲು ಚಿನ್ನೊಬಳಂನ ಶತಾವಧಾನಿ


೨೯೮

ಶಿವರಾಮ ಶರ್ಮರು ಅದನ್ನು ಪ್ರತಿಷ್ಟಾಪಿಸಿ ಚಿಕ್ಕ ಗುಡಿ ಕಟ್ಟಿಸಿ ಸೇವಾಕೈಕರ್ಯ ಮಾಡಿದರಂತೆ. ನಂತರ ಚಕ್ರವರ್ತಿಗಳು; ಸಾಮಂತರು ಗುಡಿ ಗುಂಡಾರ ಕಟ್ಟಿಸಿ ನರಸಿಂಹದೇವರೆಂದು ಕರೆದು ಅದನ್ನು ಪ್ರಸಿದ್ಧಿಗೆ ತಂದರಂತೆ. ತನ್ನ ಮೆಚ್ಚಿನ ಭಕ್ತನ ಕೊಲೆ ಮೇಲಿನ ಸೇಡು ತೀರಿಸುವುದಕ್ಕೆಂದೋ ಏನೋ ನರಸಿಂಹ ದೇವರು ಇದುವರೆಗೆ ನಡೆದುಕೊಂಡವರನ್ನೂ ಬಿಟ್ಟಿಲ್ಲ, ನಡೆದುಕೊಳ್ಳದವರನ್ನೂ ಬಿಟ್ಟಿಲ್ಲ . ಅವರಿಗೆ ಅವರನ್ನು ಇವರಿಗೆ ಇವರನ್ನು ಬಲಿ ಕೊಡುತ್ತ ರಕ್ತ ತರ್ಪಣ ಮಾಡಿಸಿಕೊಳ್ಳುತ್ತ ಆಳುವ ವರ್ಗಗಳಲ್ಲಿ; ಜಮೀನ್ದಾರಿ ವರ್ಗಗಳಲ್ಲಿ ಹೆಚ್ಚು ಜನಪ್ರಿಯಗೊಂಡಿರುವ ನರಸಿಂಹದೇವರ ದರ್ಶನಾಕಾಂಕ್ಷಿಗಳಾಗಿ ವಾಗಿಲಿಯ ಜಗನ್ನಾಥ ರೆಡ್ಡಿಯವರು ಹೋದರೆಂದರೆ ಆಶ್ಚರ್ಯ ಪಡಬೇಕಿಲ್ಲ ಹಾಗೆ ಹೋಗಿ ಪೂಜೆ ಮಾಡಿಸಿ ಮಂಗಳಾರತಿ ತಟ್ಟೆಗೆ ನೂರು ಒಂದು ದಕ್ಷಿಣೆ ಹಾಕಲು ನರಸಿಂಹ ದೇವರು ಬಲ ಭುಜದ ಮೇಲಿಂದ ಆಶೀರ್ವದಿಸಿ ಶುಭ ಹಾರೈಸಿದರಂತೆ. ಇದರಿಂದ ಸುಪ್ರೀತರಾದ ಜಗನ್ನಾಥ ರೆಡ್ಡಿಯವರು ತಂಗರದೋಣಿಯ ತಮ್ಮಾರೆಡ್ಡಿ ತಿಂಗಳೊಪ್ಪತ್ತಿನಲ್ಲಿ ಸತ್ತರೆ ರುದ್ರಾಭಿಷೇಕ ಮತ್ತು ಅನ್ನ ಸಂತರ್ಪಣೆ ಮಾಡಿಸುವುದಾಗಿ ಕೈ ಮುಗಿದು ಬೇಡಿಕೊಂಡು ಪ್ರಾಯಣ ಬೆಳೆಸಿದರಂತೆ, ಕೊಂಡವೀಡು ಪರ್ವತ ಶ್ರೇಣಿಯ ಕಲ್ಲುದುಂಡೆಗಳನಡುವೆ ಹೋಗುತ್ತಿದ್ದಾಗ ಯಾರೋ ನಾಡಬಾಂಬುಗಳನ್ನೆಸದರಂತೆ, ತಮ್ಮಾರೆಡ್ಡಿ ಮೇಸೆ ತಿರುವುತ್ತಿರುವುದನ್ನು ನೋಡುತ್ತಲೆ ಜಗನ್ನಾಥರೆಡ್ಡಿ ಪ್ರಾಣ ಬಿಟ್ಟರಂತೆ.

ಇಷ್ಟೆಲ್ಲ ಹೇಳಿ ಗುರಪ್ಪ ನಿಟ್ಟುಸಿರು ಬಿಟ್ಟ. ನನಗೆ ಒಂದೆರಡು ದಿನ ಕೂಳು ನೀರು ಸೇರಲಿಲ್ಲ. ರೆಡ್ಡಿಯವರ ಮಗಳು ಪುಷ್ಪಾವತಿ ತಮ್ಮಾರೆಡ್ಡಿಯ ಮಗ ವೆಂಕಟರೆಡ್ಡಿಯೊಂದಿಗೆ ಹೋಗಿರುವಳಂತೆ. ಮಾನಪ್ಪಾಚಾರಿ, ರಾಘಪ್ಪಾಚಾರಿ ತಂಗರದೋಣಿಗೆ ಹೋಗಿ ತಲೆಮರೆಸಿಕೊಂಡಿರುವರಂತೆ. ರೆಡ್ಡಿಯವರ ಹಿರಿಯ ಮಗ ಪುರುಷೋತ್ತಮರೆಡ್ಡಿ ತಮ್ಮ ತಂದೆಯವರ ಸಮಾಧಿ ಮೇಲೆ ಉಡುದಾರ ಬಿಚ್ಚಿಟ್ಟು ತಾನು ತಮ್ಮಾರೆಡ್ಡಿಯನ್ನು ಕಡಿಯುವವರೆಗೆ ಉಡುದಾರ ಕಟ್ಟುವುದಿಲ್ಲ ಮತ್ತು ಗಡ್ಡ ಮೀಸೆ ತೆಗೆಯುವುದಿಲ್ಲವೆಂದು ಶಪಥ ಮಾಡಿರುವನಂತೆ. ಇಂಥ ಸುದ್ದಿಗಳಿಂದಾಗಿ ಇಡೀ ಗ್ರಾಮವೇ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಿರುವುದು. ಸಹಜ ಬದುಕನ್ನು ಮರೆ ಮಾಚಿರುವುದು, ಊರೊಳಗೆ ಹತ್ತೆಂಟು ಮಂದಿ ಪೋಲೀಸರು ಟೆಂಟ್ ಹಾಕಿ ಗಸ್ತು ತಿರುಗುತ್ತಿರುವುದರಿಂದ ಮಕ್ಕಳು ಮರಿ ಬಾರದೆ ಸ್ಕೂಲೆಂಭೋ ಸ್ಕೂಲು ಬಿಕೋ ಎನ್ನುತ್ತಿರುವುದು. ಇಂಥ ಬಿಕೋ ವಾತಾವರಣದಲ್ಲಿ ಉಸಿರುಗಟ್ಟಿ ಕೂತಿದ್ದ ನನ್ನನ್ನು ಪೀಸಿ ಸಲೀಮ್ ಕರೆದು ಕೊಂಡು ಹೋಗಿ ಎಸೈಯವರಿಗೆ ಪರಿಚಯ ಮಾಡಿಸಿದ. ಮಾತಾಡ್ತಾ ಮಾತಾಡ್ತಾ ಅವರು "ನೀವು ಲೇಖಕರೆಂದರೆ ಯಾವ ನಮೂನೆ ಲೇಖಕರು, ಎಡಾನೋ ಬಲಾನೋ? ಎಂದು ಮಂಕಾಗಿ ಕೇಳಿದರು. ತಾವೂ ಒಂದಾನೊಂದು ಕಾಲದಲ್ಲಿ ನಕ್ಸಲೈಟರ ಗುಂಪಿನಲ್ಲಿದ್ದು ಕೆಲಸ ಮಾಡಿದುದಾಗಿ ಹೇಳಿದರು. ನಾನೂ ಹ್ಹೂಂ ಗುಟ್ಟುತ್ತ ಕೇಳುತ್ತಿದ್ದೆ. ಕಾಮ್ರೇಡ್ ಗಣಪತಿ ಫ್ಯಾನ್ ಕಣ್ರೀ ನಾನು ಅವ್ರೆಲ್ಲಿದ್ದಾರಂತ ನಿಮ್ಗೇನಾದ್ರು ಗೊತ್ತಿದ್ರೆ..." ಎಂದು ರಾಗ ಎಳೆದರು. ಗಣಪತಿಯನ್ನು ನಾನು ಒಂದೆರಡು ಬಾರಿ ಬೆಟ್ಟಿಯಾಗಿದ್ದೆ. ಆತ ಲಕ್ಷ್ಮಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಕಥೆಗಳೆಂದರೆ ನನಗೆ ತುಂಬ ಇಷ್ಟ. ಆತ ಆಂಧ್ರದ ಪೋಲಿಸ್ ವ್ಯವಸ್ಥೆಗೆ ತಲೆನೋವಾಗಿವವನು. ಆತನ ತಲೆಗೆ ಒಂದು ಲಕ್ಷ ಬಹುಮಾನವನ್ನು ಸರಕಾರ ಘೋಷಿಸಿರುವುದು. ಎಸೈ ನನ್ನ ಮೇಲೆ ಬೀಸಲೆತ್ನಿಸಿದ ಬಲೆಗಳೆಲ್ಲ ವಿಫಲವಾದವು. ಏನೋ ಒಂದು ಹೇಳಿ ತಪ್ಪಿಸಿಕೊಂಡು ಹೊರಬಂದೆ.


೨೯೯

ನಾವಿಲ್ಲಿ ಈ ಪ್ರಕಾರವಾಗಿ ಗೋಳಾಡುತ್ತಿರುವ ಸಂಧರ್ಬದಲ್ಲಿ ಶಾಮ ನೆನಪಾಗದೆ ಇರಲಿಲ್ಲ. ಅವನು ಹೆಂಡತಿಯೊಂದಿಗೆ ಹನಿಮೂನ್‌ಗೆ ಹೋಗಿಬಂದಿರಬಹುದು ಈಗಾಗಲೆ ಎಂದುಕೊಂಡೆ. ಒಟ್ಟಿನಲ್ಲಿ ಅವನು ಒಂದು ರೀತಿ ಸಂತೃಪ್ತ ಬದುಕು ಅನುಭವಿಸುತ್ತಿದ್ದರಷ್ಟೆ ಸಾಕು ಎಂದುಕೊಂಡೆ. ಬಹಳ ದಿನ ನಾನು ಊರಕಡೆ ಸುಳಿಯಲಿಲ್ಲ. ವರ್ಗಾವಣೆಗೆ ಅವರಿವರ ಕೈ ಕಾಲು ಕಟ್ಟಿ ಅಂತೂ ಯಶಸ್ವಿಯಾದೆ. ವಾಗಿಲಿಯಿಂದ, ಈ ಕಾದಂಬರಿ ಬರೆಯುತ್ತಿರುವ ಗ್ರಾಮಕ್ಕೆ ವರ್ಗವಾಗಿ ಬಂದು ಹತ್ತು ವರ್ಷದ ಮೇಲಾಯಿತು ಎಂಬಲ್ಲಿಗೆ ಕುಂವೀ ಎಂಬ ಹುಲುನರವಿರಚಿತ ಶಾಮಣ್ಣ ಎಂಬ ಕಥಾನಕದ ತೃತೀಯ ಶ್ವಾಸಂ ಸಮಾಪ್ತಿಯಾದುದು.

ಜಯಮಂಗಳಂ ನಿತ್ಯ ಶುಭ ಮಂಗಳಂ
*
*
*
೩೦೦

‘ಚುತುರ್ಥಾಶ್ವಾಸಂ’
ನಾನೂ ನನ್ನ ಹೆಂಡತಿ ಅನ್ನಪೂರ್ಣ ಸದರೀ ಗ್ರಾಮದಲ್ಲಿ ಗದಗಿನ ಪಂಚಾಕ್ಷರಿ ಕಂಪನಿಯವರು ಬೆಳ್ಳಂಬೆಳಗು ಆಡಿದ ಹೇಮರೆಡ್ಡಿ ಮಲ್ಲಮ್ಮ ನಾಟಕ ನೋಡಿ ಬಂದ ಮೇಲೇಯೇ ಶಾಮಣ್ಣನ ಕುರಿತ ಕಾದಂಬರಿಗೆ ಹೊಸ ಆಯಾಮ ದೊರಕಿದ್ದು ಅದನ್ನು ನಾನು ನೋಡಿದ್ದು ಮೂರನೆ ಇಯತ್ತೆ ಓದುತ್ತಿದ್ದಾಗ, ಅಪ್ಪನ ಹೆಗಲ ಮೇಲೆ ಹೋಗಿ ಹೆಗಲ ಮೇಲೆ ಬಂದಿದ್ದೆ. ಅದೇ ಕಂಪನಿ, ಅದೇ ನಟರು! ಅಂಬಳಿ ಶಿವಲಿಂಗಯ್ಯನವರು ಹೇಮರೆಡ್ಡಿ ಮಲ್ಲಮ್ಮನ ಪಾತ್ರ ವಹಿಸಿದ್ದರೆ ಎರೆಯಂಗಳ ಶಿವಣ್ಣನವರು ಸೂಳೆ ಪಾತ್ರ ವಹಿಸಿದ್ದರು. ಅದೇ ಕಲಾವಿದರನ್ನು ಇಷ್ಟು ವರ್ಷಗಳ ನಂತರ ನೋಡುತ್ತೇನೆಂದು ನಾನು ಕನಸು ಮನಸಲ್ಲೂ ಯೋಚಿಸಿರಲಿಲ್ಲ. ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದ ಬಲದಿಂದ ಇನ್ನೂ ಜೀವ ಹಿಡಿದಿದ್ದ ಆ ಕಂಪನಿಯ ಕಲಾವಿದರು ದೈಹಿಕವಾಗಿ ಜರ್ಝರಿತರಾಗಿದ್ದರೂ ಅಭಿನಯದ ವಿಷಯದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿದ್ದರು. ಗಾಂಧಿ ತೊಪ್ಪಿಗೆಯನ್ನು ಅಡ್ಡಡ್ಡ ಧರಿಸಿ ಅಭಿನಯದ ಮೂಲಕ ನಗೆ ಮತ್ತು ವಿಷಾದವನ್ನು ಪ್ರೇಕ್ಷಕರಲ್ಲಿ ಬಿತ್ತುತ್ತಿದ್ದ ಭರಮರೆಡ್ಡಿ ಪಾತ್ರ ವಹಿಸುತ್ತಿದ್ದ ನಟ ಯಾರೆಂಬುದು ನೆನಪಾಗುತ್ತಿಲ್ಲ. ಕೇಳೋಣವೆಂದರೆ ಗ್ರಾಮದ ಒಬ್ಬರಲ್ಲಾ ಒಬ್ಬರ ಮನೆಯಲ್ಲಿ ನಟರು ವಾದ್ಯಗಾರರು ಪರದೆ ಎಳೆಯುವವರು ಆತಿಥ್ಯ ಸ್ವೀಕರಿಸುತ್ತ ಬ್ಯುಜಿಯಾಗಿರುತ್ತಿದ್ದರು.

ಇನ್ನೇನು ಕಂಪನಿ ದಿವಾಳಿ ಎದ್ದು ಕಲಾವಿದರೆಲ್ಲ ಹೊಟ್ಟೆ-ಹೊರೆಯಲೋಸುಗ ಅಂಡಾವರನ ಆಗುತ್ತಾರೆ ಎಂಬ ಸಂದರ್ಭದಲ್ಲಿ ಹೊಳಗುಂದಿ ಸಿದ್ದಮಲ್ಲನಗೌಡರ ಅಳಿಯಂದಿರೂ ಸ್ವತಃ ಕಲಾಭಿಮಾನಿಗಳೂ ಆದ ಶ್ರೀಯುತ ಚನ್ನಬಸವನಗೌಡರು ಕಂಪನಿಯನ್ನು ಸದರೀ ಗ್ರಾಮಕ್ಕೆ ಕರೆತಂದಿದ್ದರು. ಬಸವೇಶ್ವರ ಮಹಾತ್ಮೆ; ರಾಜಾ ಸತ್ಯಹರಿಶ್ಚಂದ್ರ ಮುಂತಾದ ಅಪ್ರಕಟಿತ ನಾಟಕಗಳನ್ನು ಬರೆದಿರುವ ಜೆ.ಸಿ.ಗೌಡರು ಒಂದೊಂದು ಮನೆಯವರು ಒಂದೊಂದು ದಿನ ಕಂಪನಿ ಕಲಾವಿದರಿಗೆ ಆತಿಥ್ಯ ಕೊಟ್ಟು ಕಂಪನಿಯ ಹಾಗೂ ಗ್ರಾಮದ ಗೌರವ ಕಾಪಾಡಬೇಕೆಂದು ಗ್ರಾಮಕ್ಕೆ ಕರೆ ನೀಡಿದ್ದರು. ಆದ್ದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಆತಿಥ್ಯದ ವಿಷಯದಲ್ಲಿ ಪರಸ್ಪರ ಪೈಪೋಟಿಗಿಳಿದಿತ್ತು. ಒಬ್ಬರು ಒಂದು ಮಾಡಿಸಿದರೆ ಇನ್ನೊಬ್ಬರು ಇನ್ನೊಂದು ಮಾಡಿಸುತ್ತಿದ್ದರು. ನವಣಿ ಬಾನ ಉಂಡು ಹೇಗೋ ಬದುಕು ನೂಕುತ್ತಿದ್ದ ಕಲಾವಿದರು ಸದರಿ ಗ್ರಾಮದಲ್ಲಿ ಕ್ಯಾಂಪು ಹಾಕಿದಂದಿನಿಂದ ಬಗೆ ಬಗೆಯ ಖಾದ್ಯಗಳನ್ನೊಳಗೊಂಡ ಮೃಷ್ಟಾನ್ನಭೋಜನ ಉಂಡೂ ಉಂಡೂ ಮೈಬಿಟ್ಟಿದ್ದರು. ಯಾರಾದರೂ ಊಟಕ್ಕೆ ಭಿನ್ನವಿಸಿದರೆಂದರೆ ನವಣಕ್ಕಿ ಅನ್ನ ರೊಟ್ಟಿ ಪುಂಡಿ ಪಲ್ಯೆ ಮಾಡ್ರಿಯಪ್ಪಾ... ಸಿಹಿತಿನಿಸು ಉಂಡೂ ಉಂಡೂ ನಾಲಿಗೆ ಬರಗೆಟ್ಟು ಹೋಗದೆ ಎಂದು ಗೋಗರೆಯುತ್ತಿದ್ದರು. ಅದಕ್ಕೆ ಅವರು "ಅದೆಂಗ ಮಾಡಲಕ್ಕಾಗ್ತದ್ರೀ... ಪಕ್ಕದ್ಮನೆ ಸಂಬ್ಲಿಂಗ ನಿನ್ನ ಲಡ್ನೂಟ ಹಾಕ್ಸಿದ್ನಂತೆ. ಅವ್ನಿಗಿಂತ ನಾವೇನು ಕಡ್ಮೆ... ಮೈಸೂರು ಪಾಕ ಜಿಲೇಬಿ ಮಾಡಿಸ್ಟೀವಿ. ಇದು ನಮ್ ಮನ್ತನದ ಮರುವಾದಿ ಪ್ರಸ್ನೆ" ಎಂದು ಬಿಲ್ಕುಲ್ ಒಪ್ಪುತ್ತಿರಲಿಲ್ಲ. ಆದ್ದರಿಂದ ನಿರಾಶ್ರಾದ ಕಲಾವಿದರು ಜೆ.ಸಿ.ಗೌಡರಿಗೆ ಹೋಗಿ ದೂರು ನೀಡಿದ್ದುಂಟು. ಅದಕ್ಕೆ ಅವರು "ನೀವು ಬಗಸೋದೆ ಮಾಡಿದ್ರಿ ಅಂತ ಗ್ರಾಮದೋರ್‍ಗೆ ಹೇಗೆ ಹೇಳ್ಲಿಕ್ಕಾಗ್ತದೆ... ಅದು ಅವರವರ ಪ್ರಿತಿಗೆ ಸಂಬಂಧಿಸಿದ್ದು. ಕಲಾವಿದರೆ, ಎಲ್ಲಾ ಊರುಗಳಂತಲ್ಲ ಇದು. ಎಂಜಲುಗೈಲಿ ಕಾಗೆ ಹೊಡೆಯದ ಮಂದಿಯೇ ಇಲ್ಲಿ ಹೆಚ್ಚು ಇರೋದು".


೩೦೧

ಅದೇನು ದೇವ್ರು ಅದೇನು ಬುದ್ಧಿ ಕೊಟ್ಟಿದ್ದಾನೋ ನಾವೇನು ಕಡ್ಮೆ ನಾವೇನು ಕಡ್ಮೆ ಅಂತ ಖರ್ಚು ಮಾಡ್ತಿದ್ದಾರೆ. ಮಾಡ್ಲಿ ಬಿಡಿ. ನಮ್ಮ ನಿಮ್ಮ ಗಂಟೇನೋಗ್ತದೆ..." ಎಂದು ಬುದ್ಧಿ ಹೇಳಿದ್ದುಂಟು. ಅದಕ್ಕೆ ಕಲಾವಿದರು "ಹಂಗಲ್ಲ ಧಣೆರ. ಸುಖವಾಗಿ ಉಂಡೂ ಉಂಡೂ ಏನಾರ ಹೆಚ್ಚು ಕಡ್ಮೆ ಆಗಿ ಬಿಟ್ರೆ" ಎಂದು ಹಿಂದೆಲೆ ಕೆರೆದದ್ದುಂಟು. ಅದಕ್ಕೆ ನಕ್ಕು ಗೌಡರು "ಏರ್‍ಕೆ ವಯಸ್ನಲ್ಲಿ ಇಳ್ಕೆ ವಯ್ಸ್ನಲ್ಲಿ ಸುಖವಾಗಿ ಉಣ್‌ಬೇಕ್ರಿ"... ಎಂದು ಹೇಳಿ ಕಳಿಸಿದ್ದುಂಟು. ಆದರೆ ಕಲಾವಿದರ ಪೈಕಿ ಹಲವರು ಎರಡು ದಿನಕ್ಕೊಮ್ಮೆ ಮೂರು ದಿನಕ್ಕೊಮ್ಮೆ ಪಕ್ಕದೂರುಗಳಾದ ಬಾಪುರ, ಮಾಸನೂರು, ಕಾರೆಕಲ್ಲು, ಕುರುವಳ್ಳಿ ಮೊದಲಾದ ಗ್ರಾಮಗಳಿಗೆ ಹೋಗಿ ಅಂಗಲಾಚಿ ರೊಟ್ಟಿ ಪಡೆದು ತಿಂದು ಬರುತ್ತಿದ್ದುದುಂಟು. ಸಿಕ್ಕಿ ಬಿದ್ದ ಕೆಲವರು "ಏನು ಆಡ್ಲಿಕ್ಕಾಗ್ತದ್ರಿ...ಸುಖಕ್ಕೇನೆ ಹೊಟ್ಟೆ ಹೊಂದ್ಕೊಂಡ್ತಂದ್ರೆ ನಾಳೆ ದಿನ ಕಷ್ಟಕ್ಕೆಂಗ ಬಗ್ಗೀತು... ಅದ್ಕ ರೊಟ್ಟಿ ಉಂಭೋ ಅಭ್ಯಾಸ ಮಾಡ್ಕೊಂಡು ಬರ್ತಿದೀವಿ" ಎಂದು ಹೇಳಿದ್ದುದುಂಟು.

ನಾಳೆ ನಾಟಕಕ್ಕೆ ಹೋಗ್ತಿದೀವಿ ಅನ್ನುವಾಗ ಇವತ್ತಿನಂಗೆ ನಾನು ಕಂಪನಿಯ ಮೇನೇಜರೂ ಮತ್ತು ಮುಖ್ಯ ನಟರೂ ಆದ ಎರಂಗಳ ಶಿವಣ್ಣನವರ ಬಳಿಗೆ ಹೋಗಿ ನಾಳೆ ಮಧ್ಯಾನ್ಹ ಊಟಕ್ಕೆ ಎಲ್ರೂ ನಮ್ಮನೆಗೆ ಬರಬೇಕೆಂದು ಭಿನ್ನವಿಸಿಕೊಂಡೆ. ಈ ಮೊದಲೇ ಪರಿಚಯವಿದ್ದುದ್ದರಿಂದ ಒಪ್ಪಿಕೊಳ್ಳುವುದು ಕಷ್ಟವಾಗಲಿಲ್ಲ. ಫಜೀತಿ ಎದುರಾಗಿದ್ದು ಮನೆಯಲ್ಲಿ ಬಣ್ಣಹಚ್ಚಿಕೊಳ್ಳೋರ್‍ಗೆಲ್ಲ ಕೂಳು ಬೇಯಿಸ್ಲಿಕ್ಕೇನ್ರಿ ನಾನಿರೋದು"ಎಂದು ನನ್ನ ಶ್ರೀಮತಿ ಅನ್ನಪೂರ್ಣಮ್ಮನವರು ತಕರಾರು ಎತ್ತಿದಾಗಲೇ. ಗೃಹಖಾತೆ ಮತ್ತು ಅರ್ಥ ಶಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತ ಬದುಕು ಆರಕ್ಕೇರದಂತೆ ಮೂರಕ್ಕೆ ಇಳಿಯದಂತೆ ನೋಡುಕೊಳ್ಳುತ್ತಿದ್ದ ಶ್ರೀಮತಿಯವರನ್ನು ಮುಂಗಡವಾಗಿ ಒಂದು ಮಾತು ಕೇಳಿದ್ದರೆ ಈ ಪೀಕಲಾಟ ಇರುತ್ತಿರಲಿಲ್ಲವೆಂದುಕೊಂಡೆ. ಮಲೆನಾಡಿನ ಮೂಲೆಯಲ್ಲಿ ಹುಟ್ಟಿ ಬೆಳೆದಿದ್ದರೂ ಆಕೆ ಕಲೆ ಸಾಹಿತ್ಯ ಸಂಸ್ಕೃತಿ ಬಗ್ಗೆ ನನಗಿಂತ ಹೆಚ್ಚು ಒಲವು ಉಳ್ಳವರಾಗಿರುವಳು. ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಆಕೆಯ ಅಣ್ಣ ರುದ್ರಪ್ಪ ಯಕ್ಷಗಾನ ಬಯಲಾಟ ಆಡುವುದರಲ್ಲಿ; ಶನಿಮಹಾತ್ಮನ ಕಥೆ ಹಾಡುವುದರಲ್ಲಿ ಯಮಸಂಧಿಯೊಂದೇ ಅಲ್ಲದೆ ಚೋಕನಳ್ಳಿ, ಮಾಸುವಳ್ಳಿ, ಬೆಣ್ಣೂರು, ಹಲ್ಮಡಿಯೇ ಮೊದಲಾದ ಗ್ರಾಮಗಳಲ್ಲಿಯೂ ಸಾಕಷ್ಟು ಹೆಸರುವಾಸಿಯಾಗಿದ್ದನು. ಆಕೆಯ ತಮ್ಮ ಒಂದು ಸಿನಿಮಾ ನೋಡಿದನೆಂದರೆ ಆ ಸಿನಿಮಾದ ಹಾಡುಗಳನ್ನೆಲ್ಲವನ್ನು ಬಾಯಿಪಾಠ ಮಾಡಿಟ್ಟುಕೊಂಡು ಬಿಡುತ್ತಿದ್ದನು. ಆಕೆಯ ತಂದೆಯವರಾದ ನಿರ್ವಾಣೆಪ್ಪನವರು ರಾಜಕುಮಾರರೊಂದಿಗೆ ಗುಬ್ಬಿಕಂಪೆನಿಯಲ್ಲಿದ್ದು ತಬಲ ನುಡಿಸುತ್ತಿದ್ದಂಥವರು. ಇಂಥ ಹಿನ್ನೆಲೆಯ ಆಕೆ ‘ನಮ್ಮ ಮಗನಿಗೆ ತಬಲ ಅಭ್ಯಾಸ ಮಾಡಿಸೋಣ ಕಣ್ರೀ’ ಎಂದು ಹಠ ಹಿಡಿಯುತ್ತಿದ್ದಳು. ‘ಹೆಣ್ಣು ಮಗು ಹುಟ್ಟಿದ್ರೆ ಭರತ ನಾಟ್ಯ ಕಲಿಸೋಣ ಕಣ್ರೀ’ ಎಂದು ಆಪ್ಯಾಯತೆಯಿಂದ ಕೇಳುತ್ತಿದ್ದಳು.

ಹೊಟ್ಟೆಗೆ ಹಿಟ್ಟು ಇಲ್ಲದ ಎಷ್ಟೋ ಸಂದರ್ಭಗಳಲ್ಲಿ ಜುಟ್ಟಿಗೆ ಮಲ್ಲಿಗೆ ಹೂವು ಹೊಂಚುವ ಬಗ್ಗೆ ಯೋಚಿಸುವ ಜಾಯಮಾನದವನಾದ ನಾನು ಆಕೆಯ ಆ ತೆರನ ಮಹತ್ವಾಕಾಂಕ್ಷೆಗಳಿಗೊಂದು ತಣ್ಣನೆ ಕೊರೆವ ಸಿಹಿನೀರನ್ನು ಎರಚಿದವನಲ್ಲ, ಅಂಥ ಆಕೆ ಗವಾಯಿಗಳ ಕಂಪೆನಿಯ ಕೇವಲ ಐವತ್ತೇಳು ಮಂದಿ ಕಲಾವಿದರಿಗೆ ಒಂದು ಹೊತ್ತು ಊಟ ಬೇಯಿಸಿ ಹಾಕಲು ತಕರಾರು ಎತ್ತುವುದೆಂದರೇನು?... ಅಂಥ ದುಬಾರಿ ಕಾಲದಲ್ಲಿ ಅಷ್ಟು ಮಂದಿಗೆ ಊಟ ಹಾಕಲು ನಮ್ಮ ಮಗನ ನಿಷೇಕವಿದೆಯೇ? ಅವರಿಗೆ ಊಟ ಹಾಕುವುದರಿಂದ ನಮ್ಮ ಹೆಸರನ್ನು ಗ್ರಾಮದ ಇತಿಹಾಸ


೩೦೨

ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲಾಗುತ್ತಯೇ? "ಆಫ್ಟರಾಲ್ ಮೇಷ್ಟ್ರು ಒಬ್ಬ ಜಮೀನ್ದಾರರಿಗೆ ಸರಿಸಮ್ಮನವಾಗಿ ಕಲಾವಿದರಿಗೆ ಊಟ ಹಾಕುವುದೆಂದರೇನು" ಎಂದು ಮುಂತಾಗಿ ಗ್ರಾಮದ ಅಷ್ಟೈಶ್ವರ್ಯವುಳ್ಳವರಾದ ಮಂದಿ ಹಲ್ಲು ಮಸೆಯದೆ ಇರುತ್ತಾರೆಯೇ? ಇದರಿಂದ ಕೌಟುಂಬಿಕ ಆರ್ಥಿಕ ಪರಿಸ್ಥಿತಿ ಮೂರು ತಿಂಗಳ ದಿನಮಾನ ಏರುಪೇರಾಗುವುದಿಲ್ಲವೇ? ಮೇಷ್ಟ್ರು ಕೆಲಸ ಮಾಡಲು ಬಂದಿರುವ ನಾವು ಕೇವಲ ಮೇಷ್ಟ್ರು ಕೆಲಸ ಮಾಡುತ್ತ ಇದ್ದು ಗ್ರಾಮಸ್ತರ ಪ್ರೀತಿಗೆ ಪಾತ್ರರಾಗುವುದನ್ನು ಬಿಟ್ಟು ಇಂಥ ತಲೆನೋವುಗಳನ್ನು ಎದುರು ಹಾಕಿಕೊಳ್ಳುವುದೆಂದರೇನು? ಇವೇ ಮುಂತಾದ ಸಮಸ್ಯೆಗಳನ್ನು ಬಿಡಿಸಿ ಇಟ್ಟ ಆಕೆ ತನ್ನ ಗಂಡನಾದ ನನ್ನ ವಾಗಿಲಿಯ ಕ್ರಿಯಾಕರ್ಮಗಳನ್ನು ಕೇಳಿಬಲ್ಲವಳಾಗಿದ್ದಳು. ಯಕಸ್ಚಿತ್ ಜವಾನನ ಕೆಲಸ ಮಾಡೊದು ತಕ್ಕ ಮಟ್ಟಿಗೆ ಸ್ಥಿರಾಸ್ತಿ ಚರಾಸ್ತಿ ಮಾಡ್ಕೊಂಡು ಆರಾಮಿದ್ದಾರೆ.

ಮೇಷ್ಟ್ರು ಕೆಲಸ ಮಾಡೋ ನಾವ್ಯಾಕೆ ತಿಂಗಳ ಕೊನೆಗೆ ಬಿಡಿಕಾಸಿಗೆ ಪರದಾಡ್ತಿದ್ದೇವೆ ಎಂದು ತರ್ಕಿಸೀ, ತರ್ಕಿಸೀ ಆರ್ಥಿಕ ಇಲಾಖೆಯನ್ನು ತಾನೇ ಖುದ್ಧ ನಿರ್ವಹಿಸ ತೊಡಗಿದ್ದಳು. ಅಂದಿನಿಂದ ನಾವೂನೂವೆ ಹುಳ್ಳಗೆ ಬೆಳ್ಳಗೆ ಆಗಿದ್ದೆವು. ಬೇಸತ್ತ ಗೃಹಿಣಿಯರ ಮನಸ್ಸಿಗೆ ಶಾಂತಿ ನೀಡುವಂಥ ಕಾದಂಬರಿಗಳನ್ನು ಬರೆದು ನಾಲ್ಕು ಕಾಸು ಸಂಪಾದಿಸಿ ಎಂದು ಆಕೆ ಮಾಡಿದ ಒತ್ತಾಯಕ್ಕೆ ಮಣಿದು ನಾನು ಒಂದೆರಡು ಮೂರನೆ ದರ್ಜೆಯ ಕಾದಂಬರಿಗಳನ್ನು ಬರೆದು ವಿಮರ್ಶಕರಿಂದಲೂ; ಓದುಗರಿಂದಲೂ ಉಗಿಸಿಕೊಂಡಿದ್ದೆನು. ಅಂಥ ನಾನು ಕಲಾವಿದರನ್ನು ಆಮಂತ್ರಿಸುವ ಮುನ್ನ ಗೃಹ ಖಾತೆಯೊಂದಿಗೆ ಒಂದು ಮಾತು ಚರ್ಚಿಸಬೇಕಿತ್ತು. ಪುರುಷ ಸಹಜ ಧಿಮಾಕಿನಿಂದ ಆಮಂತ್ರಿಸಿ ಫಜೀತಿಗೆ ಸಿಲುಕಿಕೊಂಡಿದ್ದೆನು.
ಯಾರ ಮರ್ಯಾದೆ ಹೋದರೂ ಒಂದೇ ಎಂಬ ಕಾರಣದಿಂದ ಆಕೆ ವಿದ್ಯಾರ್ಥಿನಿಯರ ಸಹಾಯದಿಂದ ಅಡುಗೆ ಮಾಡಿ ಬಡಿಸಲು ಒಪ್ಪಿಕೊಂಡಳು. ಪಾಪ! ರಾತ್ರಿ ಕೇವಲ ಎರಡುಗಂಟೆ ಮಾತ್ರ ನಿದೆ ಮಾಡಿ ಎದ್ದು ದಗದಕ್ಕೆ ತೊಡಗಿದಳು. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಕರಿಗಡಬು, ಕೋಡುಬಳೆ ಕೋಸುಂಬರಿ, ಪಲ್ಯೆ; ಅನ್ನ ಸಾಂಬಾರು ಚಟ್ನಿ ವಗೈರೆ ಸಿದ್ಧ ಪಡಿಸಿದಳು. ನಾನು ಸ್ಟೈಲಾಗಿ ಕಲಾವಿದರ ಥರ ಜುಬ್ಬ ಪಂಚೆ ಧರಿಸಿ ಕಲಾವಿದರನ್ನು ಕರೆದುಕೊಂಡುಬಂದೆ. ಕಲಾವಿದರೆಲ್ಲ ಹ್ಹಾ...ಹ್ಹಾ...ಹ್ಹೋ...ಹ್ಹೋ... ಎಂದು ಉದ್ಗರಿಸುತ್ತ ಉಂಡು ಶಾಸ್ತ್ರೀಯ ರೀತಿಯಲ್ಲಿಯೇ ಡೇಗಿ ಎಲೆ ಅಡಿಕೆ ತಟ್ಟೆ ಬಳಿಗೆ ಬಂದರು. ಪರಾವಲಂಬಿ ಲೇಖಕನಾದ ನಾನು ಅವರೆಲ್ಲರಿಗೂ ನೀರು ನೀಡಿ; ಎಲೆ ಅಡಿಕೆ ಸುಣ್ಣ ಸರಬರಾಜು ಮಾಡುತ್ತ ಅವರ ಬದುಕಿನ ಒಳ ವಿವರಗಳನ್ನು ಬೆದಕಿ ತಿಳಿದುಕೊಂಡೆ. ಪಾತ್ರದ ನಿರೀಕ್ಷೆಯಲ್ಲಿರುವ ಬಣ್ಣ ಹಚ್ಚಿಕೊಂಡಿರುವ ಕಲಾವಿದನೊಬ್ಬ ವಿಂಗ್ ಸೈಡಿನಲ್ಲಿ ಕುಳಿತು ಮಾಡುವ ಆಲೋಚನೆ ಕುರಿತು ಕಾದಂಬರಿ ಬರೆಯಬೇಕೆಂದು ನಿರ್ಧರಿಸಿದ್ದು ಆ ಸಂದರ್ಭದಲ್ಲಿಯೇ. ಸ್ತ್ರೀ ಪಾತ್ರಧಾರಿ ಪುರುಷನೊಬ್ಬ ರಂಗಪರಿಕಲ್ಪನೆಗಳ ಮೂಲಕ ಪ್ರೇಕ್ಷಕರನ್ನು ಭ್ರಮೆಯ ಕೂಪದಲ್ಲಿ ತಳ್ಳುವ ಪ್ರತಿಭೆಯ ಬಗೆಗೂನೂವೆ.

ಈ ಬಗ್ಗೆ ತಿಂಗಳೊಪ್ಪತ್ತಿನಲ್ಲಿ ಕಾದಂಬರಿಯೊಂದನ್ನು ಬರೆದು ಅದರಿಂದ ಬರುವ ಗೌರವಧನದಲ್ಲಿ ಒಂದು ಭಾಗವನ್ನು ಹೆಂಡತಿ ಕೈಗೆ ಕೊಟ್ಟು ಇನ್ನೊಂದು ಭಾಗವನ್ನು ಪಾಡಾಖರ್ಚಿಗೆ ಇಟ್ಟುಕೊಳ್ಳುವುದೆಂದು ಕೂಡಾ ಯೋಚಿಸದೆ ಇರಲಿಲ್ಲ. ಹಡಬೆ ಮನುಷ್ಯನಾದ ನಾನು ಕಲಾವಿದರಲ್ಲ, ಹಾಡುಗಳನ್ನು ಗೊಣಗಿಕೊಳ್ಳುತ್ತ; ಮಾತುಗಳಿಗೆ ಮರು ಲೇಪನ ಮಾಡುತ್ತಲೇ ನಮಗೆಲ್ಲ ಶುಭ ಹಾರೈಸಿ ತಂತಮ್ಮ ಬಿಡದಿ ಮನೆಗಳ ಕಡೆಗೆ ಹೊರಟು ಹೋದರು.


೩೦೩

ನಾವು ಕಲಾವಿದರಿಗೆ ನಿಜವಾಗಿಯೂ ಊಟ ಹಾಕಿದ ಸುದ್ದಿ ಕೆಲವೇ ಗಳಿಗೆಗಳಲ್ಲಿ ಊರುತುಂಬ ಹಬ್ಬಿತು. ಅದು ಮೊದಲೇ ಹೂಸು ಬಿಟ್ಟರೆ ಊರು ತುಂಬ ಹಬ್ಬುವಷ್ಟು ಕಿರಿಯದಾಗಿತ್ತು. ಜೊತೆಗೆ ಕಲಾವಿದರು ನಮ್ಮ ಕಲಾಭಿಮಾನದ ಬಗ್ಗೆ ಹೊಗಳುತ್ತ ಮೇಷ್ಟ್ರಾಗಿದ್ದುಕೊಂಡೇ ಇಂಥ ಊಟ ಹಾಕಿದ! ಇನ್ನು ತಾಶೀಲ್ದಾರನೋ ಕಲೆಕ್ಟರೋ ಆಗಿದ್ರೆ ಊಟ ಹಾಕುವುದರ ಜೊತೆಗೆ ತಲಾ ಒಂದೊಂದು ಚಿನ್ನದ ನಾಣ್ಯವನ್ನು ಕೈಲಿಡುತ್ತಿದ್ದನೇನೋ ಪುಣ್ಯಾತ್ಮ ಎಂದು ದಾರಿ ಉದ್ದಕ್ಕೂ ಟಾಂಟಾಂ ಹಾಕುತ್ತ ಹೋಗಿದ್ದರು. ಎಲ್ಲರಿಗಿಂತ ಮೊದಲು ಸಿಟ್ಟಗಿದ್ದವರೆಂದರೆ ನಮ್ಮ ಹೆಡ್‌ಮೇಷ್ಟ್ರಾಗಿದ್ದ ಶಿವರಾಮಶಾಸ್ತ್ರಿಗಳು. "ಅಲ್ರೀ... ಮೇಷ್ಟ್ರುಗಳಾದ ನಾವು ಊರಲ್ಲಿ ಹೆಂಗಿರ್ಬೇಕೋ ಹಂಗಿರಬೇಕ್ರಿ... ಅದು ಬಿಟ್ಟು ಜಮೀನ್ದಾರ್ರೀಗೆ ಸರಿಸಮಾನವಾಗಿ ಕಂಪನಿ ಮಂದಿಗೆ ಊಟಹಾಕುವುದೆಂದರೇನು? ಇದೇನೋ ನಮಗೆ ಸರಿಕಾಣಿಸ್ಲಿಲ್ಲ ಮೇಷ್ಟ್ರೇ... ಇದೊಂದು ರೀತಿ ಗೌಡರ ಪ್ರತಿಷ್ಟಿಗೆ ಹಾದ ಹಾನಿಯೇ ಸರಿ" ಎಂದು ಪ್ರತಿಕ್ರಿಯಿಸಿದರು. ಎರಡೆಕರೆ ಗದ್ದೆಗೆ ಒಡೆಯನೂ; ಕೃಷಿ ಕಾರ್ಮಿಕನೂ ಆದ ಸಂನಂಜನು "ಆ ತಿರುಬೋಕಿ ಮೇಷ್ಟ್ರೇ ಉಣ್ಣಾಕ್ಕಿಕ್ಕಿದಾನೆಂದ್ಮೇಲೆ.. ನಾವೇನ್ ಕಡ್ಮೆ" ಎಂದು ಕಂಪನಿಯವರಿಗೆಗ್ರಾಂಡಾಗಿ ಉಂಬಕ್ಕಿಡಲು ಸಿದ್ಧತೆ ನಡೆಸಿದನು. ಮೇಷ್ಟ್ರಂದ್ರೆ ಹೀಗಿರಬೇಕಪ್ಪಾ ಉಳ್ದೋರದಾರ್ನೋಡು ಭೂಮಿಗೆ ಭಾರಾಗಿ ಎಂದು ತೈಲರು ಸುಲೇಮಾನು ಮತ್ತವನ ಸಂಗಡಿಗರು ಮಾತಾಡಿಕೊಂಡರಂತೆ. ನನಗೆ ಸ್ಪಷ್ಟವಾಗಿ ಗೊತ್ತು ನಾನು ಮಾಡಿದ್ದು ಬಡಿವಾರ ಅಂತ. ಇಂಥ ಬಡಿವಾರಗಳು, ಧಿಮಾಕುಗಳು ನಮ್ಮ ವಂಶದಲ್ಲಿ ರಕ್ತಗತವಾಗಿ ಬಂದಿರುವುದು. ನಮ್ಮ ತಾತ ಕಡಿಮೆಯಾಗಿದ್ದರೆ ನಮ್ಮ ಅಪ್ಪ ಕಡಿಮೆಯಾದಾನು! ಹಿಂದೆ ಒಂದ್‌ಹತ್ತು ಮಂದಿಯನ್ನಿಟ್ಟುಕೊಂಡು ಭೂತಕಾಲವನ್ನು ವೈಭವೀಕರಿಸುತ್ತಲೇ ವರ್ತಮಾನವನ್ನು ಕಾಲಕಸವಾಗಿ ನೋಡಿದ ಆಜಾನುಬಾಹು ವ್ಯಕ್ತಿ, ಇದ್ದ ವರಾಸ್ತಿ ಸ್ಥಿರಾಸ್ತಿಯನ್ನೆಲ್ಲವನ್ನೂ ಐದು ಮಂದಿ ಪ್ರತಿಸ್ಪರ್ಧಿಗಳನ್ನು ಜೈಲಿಗೆ ಕಳಿಸಲಿಕ್ಕೆ ವ್ಯಯ ಮಾಡಿದ ಆ ಪುಣ್ಯಾತ್ಮನ ಮಗನಾಗಿ ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಡಿವಾರ ಮಾಡುತ್ತಿದ್ದೆ. ಕೈಮೈಯಿಂದಾಗದ ಎಷ್ಟೋ ಬಡಿವಾರದ ಸಂಗತಿಗಳನ್ನು ಬರಹದ ಮೂಲಕ ಪ್ರಕಟಿಸುತ್ತಿದ್ದೆ.
ಇಂಥಪ್ಪ ನಾನು ಭಲೆ ಠೀವಿಯಿಂದ ಸಿಂಪಲ್ಲಾಗಿ ಅಲಂಕಾರ ಮಾಡಿಕೊಂಡಿದ್ದ ಶ್ರೀಮತಿ ಅನ್ನಪೂರ್ಣಮ್ಮನವರೊಡನೆ ಅದು ನಾಟಕ ನೋಡಲಿಕ್ಕೆಂದು ಹೋದಾಗ ಸಿಕ್ಕ ಗೌರವ, ತಿರಸ್ಕಾರ ವರ್ಣಿಸಲಸದಳ. ಹಾರ್ಮೋನಿಯಮ್ ಶಹನಾಯಿ ನುಡಿಸುವವ ಹಿಂದೆ ಕುಳಿತುಕೊಂಡೆವು. ನಾವೂ ಕಲಾವಿದರೆಂದೂಹಿಸಿ ಆಡುವವರು ಶಕ್ತಿಮೀರಿ ಆಡಿದರು. ಮಹಾಪತಿವ್ರತೆಯಾದ ಮಲ್ಲಮ್ಮನ ಪಾತ್ರ ಬಂದಾಗ ನನ್ನ ಹೆಂಡತಿ ತೋರಿಸುತ್ತಿದ್ದ ಕುತೋಹಲ, ಆಸಕ್ತಿ, ಪ್ರತಿಕ್ರಿಯೆ, ಸೂಳೆ ಪಾತ್ರ ಬಂದಾಗ ಇರುತ್ತಿರಲಿಲ್ಲ. ನಾಟಕ ಮುಗಿದ ನಂತರ ಅನ್ನಪೂರ್ಣೆ ಮ್ಲಾನವದನಳಾಗಿ ಮನೆಕಡೆ ಹೆಜ್ಜೆ ಹಾಕಿದಳು. "ನಿಲ್ಲೇ ಮಾರಾಯ್ತಿ, ಯಾಕೆ ಓಡ್ತೀ" ಎಂದು ನಾನು ಕೇಳಿದ್ದುಂಟು. ನಮ್ಮ ವರ್ತನೆಯನ್ನು ನೋಡಿದ ಯಾರಾದರೂ ಇವರಿಬ್ರು ಜಗಳ ಆಡಿರ ಬೇಕು ಎಂದು ಊಹಿಸುವುದು ಸಾಧ್ಯವಿತ್ತು! ಹಾಸಿಗೆ ಸೇರಿದ ಮೇಲೂ ಶ್ರೀಮತಿಯವರ ಮುಖ ಅರಳಲಿಲ್ಲ. ಒಳ್ಳೆ ಫಜೀತಿಗಿಟ್ಟುಕೊಂಡಿತಲ್ಲಾ... ನಾಟಕ ಸಿನಿಮಾ ಮುಂತಾದ ಪ್ರದರ್ಶಕ ಕಲೆಗಳಿವುದೇ ಮಾನವನನ್ನು ಖುಷಿ ಪಡಿಸಲಿಕ್ಕೆ... ನವರಸಭರಿತವಾದ ಹೇಮರೆಡ್ಡಿಮಲ್ಲಮ್ಮ ಅರ್ಥತ್ ಶ್ರೀಶೈಲ ಮಲ್ಲಿಕಾರ್ಜುನ ಮಾಹಾತ್ಮೆ ನೋಡಿದ ನಂತರ ಶ್ರೀಮತಿಯವರು ಯಾಕ್‌ಹೀಗೆ ಸಪ್ಪಗಿದ್ದಾರೆ? ಅವರ ಮುನಿಸಿಗೆ ಕಾರಣವೇನು? ಇದರಿಂದ ಶ್ರೀಮತಿಯವರನ್ನು ಹೇಗಾದರೂ ಪಾರು


೩೦೪

ಮಾಡಬೇಕೆಂದು ನಿರ್ಧರಿಸಿ ಬಗೆಬಗೆಯ ವಿನೋದಾವಳಿಗೆ ತೊಡಗಿದೆ. ಅದರಿಂದಲೂ ಪ್ರಯೋಜನ ಲಭಿಸದಿರಲು ನಾನೂ ಮುನಿಸಿಕೊಂಡಂತೆ ನಟಿಸಿದೆ. ಅದರಿಂದಲು ಅವರ ಮುಖ ಅರಳದಿದ್ದಾಗ"ನೀನು ಸಪ್ಪಗಿರೋಕೆ ಕಾರಣ ಹೇಳೇ ಮಾರಾಯ್ತಿ" ಎಂದು ಸಿಡುಕಿನಿಂದಲೇ ಹೇಳಿದೆ. "ಸೂಳೆಪಾರ್ಟು ಮಾಡೊರ್ನೆಲ್ಲ ಮನೆಗ್ಯಾಕೆ ಊಟಕ್ಕೆ ಕರ್ಕೊಂಡ್ ಬಂದ್ರೀ" ಎಂದೊಂದೇ ಅಣಿಮುತ್ತನ್ನುದುರಿಸಿದರು. ಇದರಿಂದ ನನಗಾದ ಸಂತೊಷ ಅಷ್ಟಲ್ಲ! ನಕ್ಕೆ. "ಯಾಕೆ ನಗ್ತೀರ" ಅಂದರು. "ಅಲ್ಲಮ್ಮಾ... ಅದ್ರಲ್ಲಿ ತಪ್ಪೇನಿದೆ? ಅಂದೆ. ಅಲ್ರೀ ಅಷ್ಟೊಂದು ಅಶ್ಲೀಲವಾಗಿ ಆ ಮಾತಾಯಿ ಮಲ್ಲಮ್ಮನ್ನ ಗೋಳುಹುಯ್ಕೊಂಡಳಲ್ಲ ಆ ಸೂಳೆ... ಥೂ... ಅಶ್ಲೀಲ... ಒಂದು ಚ್ರಾದ್ರು ಮಾನಮರ್ಯಾದೆ ಬೇಡ್ವೇ... ಆ ಸೂಳೆ ಪಾರ್ಟು ಮಾಡಿದ ಆವಯ್ಯನಿಗೆ ಊಟಕ್ಕಿದೀ ಕೈಗೆ ಯಾವ ಶಿಕ್ಷೆ ಕೊಟ್ಕೋಬೇಕೋ ಅರ್ಥ ಆಗ್ತಾ ಇಲ್ಲ" ಎಂದು ಇತಿಹಾಸ ಪ್ರಸಿದ್ಧ ಚರ್ಚೆಗೆ ನಾಂದಿ ಹಾಡಿದಳು.

ಆಕೆಯ ಮುಖಾರವಿಂದ ಮೇಲೆ ಬೆರಳಾಡಿಸುತ್ತ "ನಾನು ಅದು ವಾಸ್ತವ ಕಣೇ ವಾಸ್ತವ, ಅದ್ರಲ್ಲಿ ತಪ್ಪೇನಿದೆ ಈಗ! ಆ ನಾಟಕದಲ್ಲಿ ಸೂಳೆ ಪಾತ್ರ ಇರದಿದ್ದಲ್ಲಿ ಮಲ್ಲಮ್ಮನ ಪಾತ್ರ ಬೆಳೀತಿತ್ತಾ! ಆ ನಾಟಕದ ನಿಜವಾದ ನಾಯಕಿ ಅಂದ್ರೆ ಸೂಳೇ ಪಾರಾನೆ..." ಎಂದು ನಾನು ಸೂಳ್ಲೆ ಪಾತ್ರವನ್ನು ಒತ್ತುಕೊಟ್ಟುಸಮರ್ಥಿಸಿದ್ದು ನಮ್ಮಿಬ್ಬರ ನಡುವೆ ಹೊಸದೊಂದು ಸಮಸ್ಯೆಯನ್ನು ಹುಟ್ಟು ಹಾಕಿತು. ಆಕೆ ಮಲ್ಲಮ್ಮನ ಕದೆ ವಕಾಲತ್ತು ವಹಿಸಿ ಮಾತಾಡಿದರೆ ನಾನು ಸೂಳೆ ಪಾತ್ರವನ್ನು ಸಮರ್ಥಿಸಿ ಮಾತಾಡತೊಡಗಿದೆ. ಎತ್ತು ನೀರಿಗೆಳೆದರೆ ಕೋಣ ನೀರಿಗೆಳೆಯಿತು ಎನ್ನೋ ಹಾಗೆ ನಮ್ಮಿಬ್ಬರ ಮಾತುಕತೆ ಮುಂಗೋಳಿ ಕೂಗೋವರೆಗೆ ನಿರಾತಂಕವಾಗಿ ನಡೆಯಿತು. ಮಾತುಕತೆ ನಡುವೆ ಅನೇಕ ಜೀವಂತ ಪಾತ್ರಗಳು ಅನೇಕ ಪೌರಾಣಿಕ

ಪ್ರಸಂಗಗಳು ತೇಲಿಹೋದವು. ವಿಜ್ಞಾನವನ್ನು ಕಾಲೇಜಿನಲ್ಲಿ ತಕ್ಕಮಟ್ಟಿಗೆ ಕಲಿತಿರುವ ಆಕೆ ತನ್ನ ಗಮ್ಡನಾದ ನನ್ನನ್ನು ಆಗಾಗ್ಗೆ ನನ್ನ ಗತಿಸಿದ ತಮ್ದೆಗೆ ಅಂದರೆ ತಮ್ಮ ಮಾವನವರಿಗೆ ಹೋಲಿಸುತ್ತಿದ್ದಳು. ಇದಕ್ಕೆಲ್ಲ ಕಾರನ ಅಯ್ಯನವರ ರುದ್ರಮ್ಮ ಎಂದೇ ಹೇಳಬಹುದು. ನನ್ನ ಗೈರು ಹಾಜರಿಯಲ್ಲಿ ಆಯಮ್ಮ ಈಯಮ್ಮನಿಗೆ "ಈಗ ನಿಮ್ಮಾವ ಇರ್ಬೇಕಾಗಿತ್ನೋಡು... ಆತ್ನೋಡೊಕೆ ಒಳ್ಳೆ ರಾಜ್ಕುಮಾರಿದ್ದ್‌ಹಂಗಿದ್ನೇ ಅನ್ನಪೂರ್‍ಣಿ... ಆತನೆಷ್ಟೆತ್ರ ಈ ಊರಾಗ್ಯಾರೂ ಇದ್ದಿಲ್ಲ ಬಿಡು... ಎಂಥ ವರ್ಚಸ್ಸು ಏನ್ಕಥೆ! ಗರಿಗರಿ ಧೋತ್ರ ಸಿಲುಕು ಜುಬ್ಬಾ ತೊಟ್ಕೊಂಡು, ಡಬ್ಬಲ್ ಕಿರಾಪು ಬಿಟ್ಕೊಂಡು ಹೊಂಟಾಂದ್ರೆ ಎಂಥೆಂತ್ಥಾ ಪತಿವ್ರತೇರುಬಿಟ್ಟ ಕಂಣು ಬಿಟ್ಕೊಂದು ಹಂಗೇ ನೋಡ್ತಿದ್ರು ನೋಡು... ಆತನ ನಗು ಮುಖಾನೆ ಹಂಗಿತ್ತು ಬಿಡು..." ಎಂದು ಮುಂತಾಗಿ ಹೇಳುತ್ತಿದ್ದಳು. ಅದರ ಜೊತೇಗೆ ನಮ್ಮಪ್ಪ ಯಾರ್‍ಯಾರನ್ನಎಲ್ಲೆಲ್ಲಿ ಇಟ್ಟುಕೊಂಡಿದ್ದ ಎಂಬುದನ್ನು ಸಹ. ಆಗೊಮ್ಮೆ ಈಗೊಮ್ಮೆ ಶ್ರೀಮತಿಯವರೂ ‘ಹೌದೇನ್ರೀ’ ಎಂದು ಕೇಳುತ್ತಿದ್ದರು ಪರೀಕ್ಷಾರ್ಥವಾಗಿ. ಆಕೆ ಸಾಮಾನ್ಯಳಲ್ಲವೆಂಬ ಸಂಗತಿ. ವಿವಿಧ ಮೂಲಗಳಿಂದ ನಮ್ಮ ತಂದೆ, ತಾತ, ಮುತ್ತಾತಂದಿರ ಕುರಿತಾದ ಸಮಸ್ತ ಸಂಗತಿಗಳೆಲ್ಲವನ್ನೂ ಸಂಗ್ರಹಿಸಿಟ್ತುಕೊಂಡಿರುವಳೆಂದು ಗೊತ್ತು! ಆ ಮಹಾನ್ ಮಾನವ ಸ್ವರೂಪಿ ಯ್‌ಆಂಟೆನಾದಂತೆ ಇರುವ ಆ ಮೂರುಮಕ್ಕಳ ತಾಯಿ ಕ್ರಾಸ್‌ಕ್ವೆಶ್ಚನ್ ಮಾಡಿಯಾಳೆಂಬ ಆತಂಕದಿಂದ ನಮ್ಮಪ್ಪನಿಗೆ ಮೂರು ಜನ ಸೂಳೆಯರಿದ್ದರೆಂದೂ ಅವರ ಪೈಕಿ ಚಿಮಣೆವ್ವ ಎಂಬಾಕೆ ಮಾತ್ರ ಕೊನೆವರೆಗೆ ನಿಷ್ಟೆಯಿಂದ ಉಳಿದಿದ್ದಲೆಂದೂ; ಆಕೆಯನ್ನು ನಾನು ತಾಯಿಗಿಂತ ಹೆಚ್ಚಾಗಿ ಕಾಣುತ್ತೊರುವೆನೆಂದೆಲ್ಲವನ್ನೂ ಹೇಳಿಬಿಟ್ಟೆ. ಆಕೆ ನಖ ಶಿಕಾಂತ ಧಗಧಗಾಂತ ಉರಿಯ


೩೦೫

ತೊಡಗಿದಳು. ಆಕೆ ಕಂಣುಗಳಿಂದ ಕಿಡಿಗಳನ್ನು ಉದುರಿಸತೊಡಗಿದಳು. "ಹಂಗಾದ್ರೆ ನೀವು ತಿಂಗಳಿಗೊಮ್ಮೆ ದುಡ್ಡು ಕಳಿಸ್ತಿರೋದು ಆಕೆಗೇ ಏನು?" ಎಂದಳು. ಹೌದು ಎಂದು ಯಜ್ಞಕ್ಕೆ ಹವಿಸ್ಸು ಸುರಿದೆ. ಸ್ವಲ್ಪ ಹೊತ್ತು ಬಿಟ್ಟು "ಸುಳ್ಳಾದ್ರು ಹೇಳ್ಲಿಕ್ಕೆ ಏನಾಗಿತ್ರೀ ನಿಮ್ಗೆ!" ಎಂದಳು. "ಅದ್ಯಾಕೆ ಸುಳ್ಳು ಹೇಳೋದು ಕಣೇ" ಅಂದೆ. "ಹಾಗಿದ್ರೆ ನಿಮ್ಗೆ ನನ್ ಮೆಲೆ ಪ್ರೀತಿ ಇಲ್ಲವೆಂದಾಯ್ತು" ಅಂದಳು. ನನಗೆ ನಗು ಬಂತು. ಹುಚ್ಚಿ ಅದ್ಕೂ ಇದ್ಕೂ ಯಾಕೆ ಸಂಬಂಧ ಕಲ್ಪಿಸ್ತೀಯ... ಸೂಳೆ ಮಗಳಾಗಿದ್ರೂ ಸುಮಂಗಳ ಒಡಹುಟ್ಟಿದ ತಂಗಿಗಿಂತ ಹೆಚ್ಚು ಪ್ರೀತಿಸ್ತಿಲ್ವೇನು! ನಾನೇನಾದ್ರು ನಿನ್ನ ಹಾಗೆ ಯೋಚಿಸಿದ್ರೆ ಆ ಹುಡುಗಿ ಗತಿ ಏನಾಗ್ತಿತ್ತು ಗೊತ್ತಾ?... ಒಂದು ಹೆಣ್ಣಾದ ನೀನು ಇನ್ನೊಂದು ಹೆಣ್ಣಿನ ಬಗ್ಗೆ ಗೌರವದಿಂದ ಯೋಚಿಸೋದ್ನ ರೂಢಿಸ್ಕೋ. ಆಗ ಗರತಿ ಮತ್ತು ಸೂಳೆ ಎಂಬೆರಡು ಪದಗಳ ನಡುವೆ ಎಳೆದಿರುವ ಗೆರೆ ಏನಂತ ಅರ್ಥವಾಗುತ್ತೆ ಎಂದು ಪರಿಪರಿಯಾಗಿ ಹೇಳಿದೆ. ನಾನು ಹೇಳಿದ್ದು ಅಷ್ಟು ಬೇಗನೆ ಆಕೆ ಕಿವಿಯಲ್ಲಿ ತೂರಲಿಲ್ಲ. ಇಂಥ ಹಿನ್ನೆಲೆಯವನು ನಾನು ಎಂದು ಮೊದಲೇ ಗೊತ್ತಾಗಿದ್ದಿದ್ರೆ ಆಕೆ ನನ್ನ ಮದುವೆ ಆಗ್ತಿದ್ದಳೋ ಇಲ್ಲವೋ... ಅದನ್ನೂ ಕೇಳಿ ಮುಖಕ್ಕೆ ತಿವಿಸಿಕೊಂಡೆ.
ಕಮಲವ್ವನ ಸಂಗತಿಯನ್ನು ಅದು ಹೇಗೆ ಬಂಡೆ ಅದಿ ಮುಚ್ಚಿಡುವುದು ಸಾಧ್ಯವಿತ್ತು ನನಗೆ! ಇಪ್ಪತ್ತೈದು ವರ್ಷಗಳ ದಿನಮಾನ ನಮ್ಮ ಕಷ್ಟ ಸುಖಗಳಲ್ಲಿ ಪಾಲು ಹಂಚಿಕೊಂಡಿದ್ದಂಥ ಅದ್ಭುತ ಹೆಣ್ಣಾದ ಆಕೆ ಬಗ್ಗೆ ಸುಳ್ಳು ಹೇಳುವ ಅಗತ್ಯ ನನಗೆ ಆ ಕ್ಷಣ ಕಂಡು ಬಂದಿರಲಿಲ್ಲ. ಹೆತ್ತ ತಾಯಿಯ ಪ್ರೀತಿಯಲ್ಲಿ ತಿಲದಷ್ಟು ಕೊರತೆ ಕಂಡಿರಬಹುದಾದರೂ ಆಕೆಯ ಪ್ರೀತಿಯಲ್ಲಿ ಅಂಥ ಯಾವುದೇ ಕೊರತೆ ನನಗೆ ಗೋಚರಿಸಿರಲಿಲ್ಲ. ಅಂಬೆಗಾಲಿಡುತ್ತಿದ್ದ ನನ್ನನ್ನು ಎತ್ತಿಕೊಂಡು ಕೆಳಗೆ ಇಳಿಸುತ್ತಿರಲಿಲ್ಲವಂತೆ ಆಕೆ. ನಾನು ಅತ್ತಾಗ ಆಕೆ ಮೊಲೆಯೂಡಿಸಿದ್ದೂ ಉಂಟಂತೆ. ಇಂಥ ಎಷ್ಟೋ ಸಂಗತಿಗಳ ನಡುವೆ ಹೂತು ಹೋಗಿರುವ ನಾನು ಆಕೆಯ ಬಗ್ಗೆ ತಿರಸ್ಕಾರ ದೃಷ್ಟಿ ತಾಳುವುದಾದರೂ ಹೇಗೆ? ನಮ್ಮ ತಂದೆಯವರಿಗೆ ದುಡ್ಡಿನ ಅಡಚನೆ ಅಗಾಧವಾಗಿ ಉಂಟಾದಾಗ ತನ್ನ ಹತ್ತೆಕರೆ ಎರೆಹೊಲ ಮಾರಿ ಹದಿನೈದು ಸಾವಿರ ಇಡಿಗಂಟನ್ನು ಕೊಟ್ಟು ನಮ್ಮ ತಂದೆಯವರ ಮರ್ಯಾದೆ ಕಾಪಾಡಿದ ಆಕೆ ಒಬ್ಬ ಸೂಳೆ ಎಂದು ಪರಿಭಾವಿಸಿ ನಾನುಅದಾವ ನರಕಕ್ಕೆ ಹೋಗಲಿ! ನಮ್ಮ ತಂದೆ ಕೊನೆಯುಸಿರು ಬಿಡುವ ಸಮಯದಲ್ಲಿ ನನ್ನನ್ನು ಏಕಾಂತವಾಗಿ ಕುಳ್ಳರಿಕೊಂಡು ‘ನೋಡಪ್ಪಾ... ನೀನಿಷ್ಟು ದುಡೀತಿದ್ರೂ ನಾನು ಮಾತ್ರ ನಿನ್ನಿಂದ ಒಂದು ರೂಪಾಐ ಕೇಳಿ ಪಡೆದಿಲ್ಲ. ಯಾಕಂದ್ರೆ ನಾನು ಪೂರೈಸದ ಒಂದಿಷ್ಟು ಕೆಲಸಗಳನ್ನು ನೀನು ಪ್ರಾಮಾಣಿಕವಾಗಿ ಪೂರೈಸುತ್ತೀ ಎಂಬ ಒಂದೇ ಒಂದು ನಂಬಿಕೆಯಿಂದ... ಯ್ಯಕೆ ಅಂದ್ರೆ ನೀನು ವಿದ್ಯಾವಂತ... ಕಥೆ ಗಿಥೆ ಬರೆಯುತ್ತ ಸಮಾಜದ ಒಪ್ಪು ತಪ್ಪುಗಳ ಬಗ್ಗೆ ಯೋಚಿಸೋ ಶಕ್ತಿ ನಿನಗಿದೆ.

"ಚಿಮುಣ ಇಷ್ಟು ವರ್ಷ ದಿನಮಾನ ನನ್ನನ್ನು ತಾಳಿಕಟ್ಟಿದ ಗಂಡನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾಳೆ. ಆಕೆ ನನಗಾಗ್ಲಿ; ನಾನು ಆಕೆಗಾಗ್ಲಿ ಒಂಚೂರು ದ್ರೋಹ ಬಗೆದಿಲ್ಲ. ಇದ್ದ ಬದ್ದ ಚೂರುಪಾರು ಆಸ್ತಿಯನ್ನು ನನಗೇ ಬಿಟ್ಟುಕೊಟ್ಟ ಆಕೆಗಾಗ್ಲಿ ಆಕೆಯ ಮಗಳಿಗಾಗಲೀ ಒಂದು ನೆಲೆ ಕಲ್ಪಿಸದೆ ಸಾಯ್ತಿದೀನಿ.. ಕಾರಣ ನೀನವರನ್ನು ನೋಡಿಕೊಳ್ತೀ ಎಂಬ ವಿಶ್ವಾಸದಿಂದ. ಅವರ ಸಮಸ್ತ ಜವಾಬ್ದಾರಿ ನೀನೇ ಹೊರಬೇಕು. ಹೇಗಾದ್ರು ಮಾಡಿ ಆಕೆಗೆ ತಿಂಗಳಿಗೊಂದಿಷ್ಟು ಹಣ ಕಳಿಸ್ತಿರು. ಆಕೆಯ ಮಗಳಿಗೆ ಒಳ್ಳೆ ಸಂಬಂಧ ನೋಡಿ ಮದುವೆ ಮಾಡು... ಎಣ್ದಿಷ್ಟೆ ನಾನು ಕೇಳ್ತಿರೋದು ಎನಂತೀಯಾ?" ಎಂದು ನನ್ನ ಕೈ ಹಿಡಿದು ಕೇಳಿದ್ದರು. ಹಾಗೆಯೇ


೩೦೬

ಮಾಡುವುದಾಗಿ ಮಾತು ಕೊಟ್ಟೋಡನೆ ಅಪ್ಪ ನೆಮ್ಮದಿಯಿಂದ ಪ್ರಾಣ ಬಿಟ್ಟಿದ್ದರು. ಭಯಾನಕ ವೈಧವ್ಯ ಧರಿಸಿದ ಚಿಮುಣವ್ವನನ್ನು ಪರಿಪರಿಯಾಗಿ ಕೇಳಿಕೊಂದರೂ ಆಕೆ ನಮ್ಮೊಡನೆ ಬಂದಿರಲು ಒಪ್ಪಲಿಲ್ಲ. ತನ್ನ ತಾಯಿಯ ತವರೂರಾದ ವೆಂಕಟಾಪುರ ಸೇರಿಕೊಂಡಳು. ಗೆಳೆಯರ ಸಹಾಯದಿಮ್ದ ಬಸಾಪುರದಲ್ಲಿ ಗ್ರಾಮಸೇವಕನಾಗಿ ಕೆಲಸಮಾಡುತ್ತಿದ್ದ ನಾಗರಾಜು ಎಂಬ ವರನನ್ನು ಹುಡುಕಿ ಕೈಮೀರಿ ಖರ್ಚುಮಾಡಿ ಸುಮಂಗಳಳನ್ನು ಕೊಟ್ಟು ಮದುವೆ ಮಾಡಿ ಎಲ್ಲರ ನಿಷ್ಟುರ ಕಟ್ಟಿಕೊಂಡೆ. ಅವರೂ ನಮ್ಮ ಮನೆಗೆ ಬಂದು ಹೋಗುತ್ತಿದ್ದುದಿತ್ತು. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಲಯದೊಳಗೆ ಹುಟ್ಟಿಕೊಂಡ ಅಸಹಕಾರ ಚಳುವಳಿಯಿಂದಾಗಿ ಅವರನ್ನು ಕರೆದುಕೊಂಡು ಬಂದು ಒಳ್ಳೆಯದು ಕೆಟ್ಟದ್ದು ನೋಡಲಾಗಲಿಲ್ಲ. ಇದರಲ್ಲಿ ಅಮಾನೀಯವಾದುದೇನಾದರು ಉಂಟೆ? ತನ್ನ ಗಂದನಾದ ನಾನು ತಮ್ಮ ಮಾವನವರ ಥರ ಎಲ್ಲಿ ಆಗಿಪ್ರೇಮಕ್ಕೆ ಚ್ಯುತಿ ತರುವೆನೋ ಎಂದು ಶ್ರೀಮತಿ ಯೋಚಿಸಿರಬಹುದೆಂದುಕೊಂಡೆ. ಅದಕ್ಕೆ ಪೂರಕವಾಗಿ ಆಕೆಯ ಉಸ್ತುವಾರಿಯೂ ಹಾಗಿತ್ತು. "ಅದ್ಯಾವಳೋ ಏಕವಚನದಲ್ಲಿ ಬರೆದಳೆಂದರೆ ನೀವೂ ಏಕವಚನದಲ್ಲಿ ಬರೆದು ಬಿಡೋದೇನು? ನೀವು ಸಲಿಗೆ ಕೊಟ್ರೆ ತಾನೆ ಯಾರಾದ್ರು ಏಕವಚನದಲ್ಲಿ ಬರೆಯೋದು" ಎಂದು ತರ್ಕಿಸಿದಳು.

ಗರತಿ ಮತ್ತು ಸೂಳೆ ಎಂಬೆರಡು ಪರಿಕಲ್ಪನೆಗಳ ಬಗೆಗಿನ ನಮ್ಮ ಚರ್ಚೆ ದಿನಕ್ಕೊಂದು ಹಾದಿ ಹಿಡಿಯಿತು. ನಾನು ಅಮೃತಮತಿ, ದ್ರೌಪದಿ, ಸೀತೆ, ತಾರಾ, ಅನಸೂಯ, ಅರುಂದತಿರೇ ಮೊದಲಾದ ಪೌರಾಣಿಕ ಮಹಿಳಾ ಪಾತ್ರಗಳ ಉದಾಹರಣೆ ಕೊಟ್ಟು ನೋಡಿದರೂ ಆಕೆಯ ಸಮಸ್ಯೆ ಪರಿಹಾರವಾಗಲಿಲ್ಲ. ಕೊನೆಗೆ ಒಮ್ಮೆ "ಅಲ್ರೀ ಪುರಾಣ ಹಾಳೂ ಮೂಳೂ ಹೇಳಿ ನನ್ನ ಬಾಯಿಗೆ ಬೀಗ ಹಾಕುವ ಪ್ರಯತ್ನ ಮಾಡಬೇಡಿ. ಇವತ್ತಿನ ಸಮಾಜದಲ್ಲಿ ಗರತಿಗಿಂತ ಗ್ರೇಟಾದ ಸೂಳೆ ಯಾರಿದ್ದಾಳೆ ಎಂಭೋದನ್ನು ತುಸು ಬಿಡಿಸಿ ಹೇಳಿದ್ರೆ ಒಪ್ಪಿಕೊಂಡೇನು?" ಎಂದಳು. "ಯಾಕಾಗ್ಬಾರ್ದು ಮಹಾರಾಯ್ಳೇ... ಸ್ಥಿರಾಸ್ತಿ ಅನ್ನೊ ಹೆಸರಿನಲ್ಲಿ ಉಳ್ಕೊಂಡಿರೋ ಮನೆಯ ಕಥೆಯನ್ನು ತಗೋ" ಅಂದೆ, "ಹ್ಹಾಂ ಆ ನಮ್ಮ ಮನೆಗೂ ಈ ನಮ್ಮ ಸಮಸ್ಯೆಗೂ ಏನ್ರೀ ಸಂಬಂಧ? ಎಂದು ಅಡ್ಡ ಪ್ರಶ್ನೆ ಹಾಕಿದಳು. "ಅದೇ ನಮ್ಮ ಶಾಮಣ್ಣ ಗರತಿ ಮತ್ತು ಸೂಳೆಯರ ನಡುವೆ ಕಾಲ್ಚಂಡಿನಂತೆ ವಿಲವಿಲನೆ ಒದ್ದಾಡಿ ಶತ್ರುವಿಗೂ ಬರಬಾರದ ರೋಗ ಬಂದು ಸತ್ನಲ್ಲ ಆ ಶಾಮಣ್ಣನ ಕಥೇನೇ ತಗೋ" ಎಂದೊಡನೆ ಆಕೆ ದೇಹದ ಸಮಸ್ತ ಸಿಟ್ಟನ್ನು ತನ್ನ ಸುಂದರ ಮೂಗಿಗೆ ಕ್ರೋಡೀಕರಿಸಿಕೊಂಡು ನನ್ನತ್ತ ದುರುಗುಟ್ಟಿದಳು. "ಥೂ! ಥೂ!... ಆ ನೀಚನ ಸುದ್ದಿ ಮಾತ್ರ ಎತ್ತಬೇಡಿ... ಕೇಳಿದ್ರೆ ನನ್ನ ಕಿವಿ ಮೈಲಿಗೆ ಆಗ್ತದೆ. ಆ ಮಹಾ ಪತಿವ್ರತೆಯಾದ ಹೆಂಡತಿಗೆ ದ್ರೋಹ ಬಗೆದೋನ ಹೆಸರನ್ನು ಈ ತಂಪು ಹೊತ್ತಿನಲ್ಲಿ ಹೇಳಬೇಡಿ, ಆತನ ಬುದ್ಧಿ ಎಲ್ಲಿ ಎಲ್ರೀಗೂ ಬಂದ್ರೆ ಸಂಸಾರಗಳು ನಾಶ ಆದಾವು..." ಎಂದಳು. ಆಕೆಯ ಮಾತಿಗೆ ನಗಬೇಕೋ ಅಳಬೇಕೋ ಒಂದೂ ಅರ್ಥವಾಗದೆ ಆಕೆಯ ಮುದ್ದು ಮುಖ ನೋಡಿದೆ. "ಆವೇಶದಿಂದ ಯೋಚಿಸಿದ್ರೆ ಯಾವ ಸಮಸ್ಯೆಯೂ ಪರಿಹಾರ ಆಗೋದಿಲ್ಲ ಅನೂ. ನಿಧಾನವಾಗಿ ಆಲೋಚನೆ ಮಾಡು... ಆಗ ನಿನ್ಗೆ ಅರ್ಥಾಗ್ತದೆ, ಪಾತಿವ್ರತ್ಯ ಪ್ರೀತಿವಾತ್ಸಲ್ಯಕ್ಕಿಂತ ದೊಡ್ಡದಲ್ಲ... ವರಲಕ್ಷ್ಮಿಯಲ್ಲಿದ್ದುದ್ದು ಕೇವಲ ಪಾತಿವ್ರತ್ಯವೇ ಹೊರತು ಪ್ರೀತಿ ಒಂಚೂರು ಇರಲಿಲ್ಲ..." ಎಂದು ಮುಂತಾಗಿ ಮಾತಾಡಿದರೆ ಆಕೆಗೆ ನನ್ನ ಮಾತಿನ ತಳಬುಡ ಅರ್ಥವಾಗಲಿಲ್ಲ. ದುರುಗುಟ್ಟಿ ನಿಡುಸುಯ್ದಳು.
ನಾನು ಅದುವರೆಗೆ ಬರೆದಿದ್ದ ಶಾಮಣ್ಣ ಕಾದಂಬರಿಯ ಹಸ್ತ ಪ್ರತಿಕೊಟ್ಟು ಬಿಡುವು ಸಿಕ್ಕಾಗಲೆಲ್ಲ


೩೦೭

ಓದಿ ನಿನ್ನ ಅಭಿಪ್ರಾಯ ತಿಳಿಸು ಎಂದು ಅಭ್ಯರ್ಥಿಸಿದೆ. ಅದನ್ನು ತಿಂಗಳು ಮಾನ ಓದಿ ಹಸ್ತಪ್ರತಿ ಹಿಂದ್ತಿರುಗಿಸಿದಳು. "ಏನ್ರೀ? ಹೀಗೆ ಬರೆದ್ರೆ ಜನ ದುಡ್ದು ಕೊಟ್ಟು ಓದುವುದಾದ್ರು ಹೇಗ್ರಿ! ಏನೋ ನನಗೊಂದೂ ಅರ್ಥ ಆಗ್ಲಿಲ್ಲ... ಶಾಮಣ್ಣ ನೆಗೆದು ಬಿದ್ದ ಮೇಲೆ ಅತ್ತೆ ಸೊಸೆ ಮನೆ ರೂಪದಲ್ಲಿದ್ದ ಸ್ಥಿರಾಸ್ತಿ ವಿಲೇವಾಅರಿ ವಿಷಯದಲ್ಲಿ ಕಚ್ಚಾಡಿದ್ದು ಓದಿ ನನ್ನ ಮನಸ್ಸಿಗೆ ಬೇಸರವಾಯಿತು. ಆದ್ರೆ ಆ ಸೂಳೆ ಅನಸೂಯ ಹೇಗೆ ವರಲಕ್ಷ್ಮಿಯವರಿಗಿಂತ ಗ್ರೇಟಾದಳು ಎಂಬ ಬಗ್ಗೆ ವಿವರಿಸುವ ಗೋಜಿಗೆ ಹೋಗಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದಳು. ಅದು ನನಗೆ ಸರಿಕಂಡಿತು. ಕಥೆಗಾರನಾದ ನನ್ನ ಪುರಾಣ ಹೇಳಿಕೊಳ್ಳುವುದರ ಜೊತೆಗೆ ಶಾಮಂಣನ ಮರಣೋತ್ತರ ಬದುಕನ್ನು ಸೂಚ್ಯವಾಗಿ ವಿವರಿಸಿದ್ದೆ. "ಏನ್ರೀ ಬ್ರಾಹ್ಮಣರನ್ನು ಬ್ಲಾಕ್ ಅಂಡ್ ವೈಟ್ ಮಾಡಿ ಬರೀತಿದ್ದೀರಲ್ಲ" ಎಂದು ಲೇಖಕ ಮಿತ್ರ ಶಾಂತಾರಾಮ ಸೋಮಯಾಜಿ ಅಮೇರಿಚಾದಿಂದ ಪತ್ರಬರೆದ ಮೇಲೆ ಕಾದಮ್ಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದ್ದೆ. ಮೂರು ವರ್ಷ ಮೂಲೆಯಲ್ಲಿ ಕೊಳೆಯುತ್ತ ಬಿದ್ದಿದ್ದ ಹಸ್ತಪ್ರತಿಯನ್ನು ನಾನು ಹೊರಗಡೆ ತೆಗೆದಿದ್ದು ಹೇಮರೆಡ್ಡಿಮಲ್ಲಮ್ಮ ನಾಟಕ ಸಮಸ್ಯೆ ಹುಟ್ಟು ಹಾಕಿದ ಮೇಲೆಯೇ! ಇದೇನಾದರೂ ಮುಂದುವರಿದರೆ ಸಂಪೂರ್ಣ ಯಷಸ್ಸು ನನ್ನ ಶ್ರೀಮತಿಯವರಿಗೇ ಸಲ್ಲಬೇಕು. "ನಿಮ್ಮವಾದವನ್ನು ನೀವು ಸಮರ್ಥಿಸಿಕೊಳ್ಳಲಿಕ್ಕೆ ಸೂಳೆಪಾತ್ರವನ್ನು ಗ್ಲೋರಿಫೈ ಮಾಡಲಿಕ್ಕೆ ಹೋದಿರೆಂದರೆ ನನ್ನಾಣೆ... ಇದ್ದಂದು ಇದ್ದಂಗೆ ಬರೀರಿ... ಅದನ್ನು ಒಪ್ಪಿಕೊಳ್ಳೋದು ಬಿಡೋದು ಓದುಗರಾದ ನಮಗೆ ಸೇರಿದ್ದು ಎಂಬುದನ್ನು ಮರೆಯಬೇಡಿರಿ... ಹಾಗೆ ಬರೀತಾ ಬರೀತಾ ನೀವೂ ಆ ನಿಮ್ಮ ಮಿತ್ರ ಶಮಂಣನ ಚಾಳಿ ಕಲಿತುಕೊಂಡು ಬಿಡಬೇಡಿ... ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತ ಹಿರಿಯರೇ ಹೇಳಿದ್ದಾರೆ. ಆದ್ರೇನು ಮಾಡೋದು ನುಂಗಲಿಕ್ಕೂ ಆಗದೆ ಉಗುಳಲಿಕ್ಕೂ ಆಗದೆ, ಶಾಮಂಣನ ಕಥೇನ ಗಂಟಲಲ್ಲಿಟ್ಟುಕೊಂಡು ನೀವು ಒದ್ದಾಡುತ್ತಿರೋದನ್ನು ನಿಮ್ಮ ಹೆಂಡತಿಯಾದ ನನ್ನಿಂದ ನೋಡಲಿಕ್ಕಾಗ್ತಿಲ್ಲ. ಅದ್ಯಾವ ಪಾಪ ಬಂದ್ರೂ ನಾನನುಭವಿಸ್ತೀನಿ... ನೀವು ಮಾತ್ರ ತಿಂಗಳೊಪ್ಪತ್ತಿನಲ್ಲಿ ಬರೆದು ಮುಗಿಸಿಬಿಡಬೇಕಷ್ಟೆ." ಎಂದು ನೀಟಿ ಸಂಹಿತೆಯನ್ನು ಪ್ರಕಟಿಸಿದಳು.

"ಇದ್ದದ್ದು ಇದ್ದಂಗೆ ಹೆಂಗ ಬರ್‍ಲಿಕ್ಕಾಗ್ತದೆ ಪುಣ್ಯಾತ್ಗಿತ್ತಿ, ಕಥೆಗಾರನಾದ ನನ್ಗೂ ಒಂಚೂರು ಸ್ವಾತಂತ್ರ್ಯ ಬೇಡ್ವೇನು? ರೂಪಕಾದಿರಲಂಕಾರಸ್ತನ್ಯಾನೈರ್ಬಹುದೋದಿತಃ ನಕಾಂತಮಪಿ ನಿರ್ಭೂಷಂ ವಿಭೂತಿ ವನಿತಾ ಮುಖಂ ಅಂತ ಭಾಮಪ ಮಹಾಶಯನೇ ಹೇಳಿದ್ದಾನೆ. ಹೆಣ್ಣಾದೋಳು ಎಷ್ಟೇ ಚಂದ ಇದ್ರೂ ಒಡವೆ ವಸ್ತ್ರ ಹಾಕಿ ಅಲಂಕರಿಸದಿದ್ದರೆ ಆಕೆ ಜನಗಳ ಕಂಣಿಗೆ ಚಮ್ದ ಕಾಣೋದಿಲ್ಲ. ಅದ್ಕೆ ಇದ್ದದ್ದು ಇಲ್ಲದ್ದು ಒಂಚೂರು ಸೇರಿಸಿ ಬರೀಲಿಕ್ಕೆ ಅನುಮತವಿತ್ತು ಕಾಪಾಡೆಲೈ ಗೀರ್ವಾಣಿ" ಎಂದು ಅಂಜಲೀಬದ್ಧನಾಗಿ ಕೇಳಿಕೊಂಡಿದ್ದಕ್ಕೆ ಆ ಕೋವಿದೆಯು ಒಡಂಬಟ್ಟು "ಯಾಕಾಗಬಾರದೆಲೈ ಕಥೆಗಾರನೇ... ಆದ್ರೆ ಒಂದು ಮಾತು ನೆನಪಿಟ್ಕೋ... ಓದುಗರೆಂದ್ರೆ ಎಲ್ರೂ ಒಂದೇ ನಮೂನಿಯವರಿರೋದಿಲ್ಲ, ಮಂಗಳಾರತಿ ಕೊಟ್ರೆ ಉಷ್ಣ ತೀರ್ಥ ಕೊಟ್ರೆ ನೆಗಡಿ ಎಂಬ ಜಾಯಮಾನದೋರು ಇರ್ಥಾರೆ. ಆರಕ್ಕೇರದಂಗೆ ಮುರಕ್ಕಿಳಿಯದಂತೆ ನಿರ್ಲಿಪ್ತ ಮನೋಭಾವದಿಂದ ಕಾದಂಬರಿಯನ್ನು ಮುಂದುವರಿಸುವಂಥವನಾಗೈ ಸಾರಥಿ ಅತಿಜಾಗ್ರತಿ..." ಎಂದು ಕಿವಿಹಿಂಡಿ ಆಶೀರ್ವದಿಸಿದಳು. ಆಗ ನಾನು ಆ ಸಕಲರಾಗ ಸಂಶೋಭಿತೆಯಾದ ಅನ್ನಪೂರ್ಣೆಶ್ವರಿಗೆ ಕೃತಜ್ಞತೆ ಸಲ್ಲಿಸಿ ಕಾದಂಬರಿ ಬೆಳೆಸಲು ಉದ್ಯುಕ್ತನಾದೆನು.
*
*
*
೩೦೮

ಹೆತ್ತ ಮಗನಿಗಿಂತ ಹೆಚ್ಚಾಗಿ ಪ್ರೀತಿಸಿ ಬೆಳೆಸಿದ ಮಗನಾದ ಶ್ರೀಕೃಷ್ಣ ದೇವರಾಯನಿಂದ ಕಂಣು ಕೀಳಿಸಿಕೊಂಡು, ತನ್ನವರೆನ್ನಲಾದ ಎಲ್ಲರನ್ನೂ ಕಳೆದುಕೊಂಡು ತಿರುಪತಿ ಸೇರಿ ಲಡ್ಡು ಮಾರಿ ಹೊಟ್ಟೆ ಹೊರೆದೂ ಹೊರೆದೂ ಕೊನೆಯುಸಿರೆಳೆದ ಅಮ್ಮತ್ಯ ತಿಮ್ಮರಸರ ಬಗ್ಗೆ ಲೀಲಾಜಾಲವಾಗಿ ಕಾದಂಬರಿ ಬರೆದು ಮುಗಿಸಬಹುದು. ಆದರೆ ಕೀರ್ತಿಶೇಷ ಶಾಮಂಣನ ಬದುಕಿನ ಬಗ್ಗೆ ಅಥೆಂಟಿಕ್ಕಾಗಿ ವಿಶಯ ಸಂಗ್ರಹಿಸಿ ಬರೆಯುವುದು ಕಷ್ಟಸ್ದ ಕೆಲಸವೆಂದು ನನಗೆ ಅರ್ಥವಾದದ್ದು ಅನಂತಪುರಕ್ಕೆ ಹೋಗಿ ವರಲಕ್ಷ್ಮಮ್ಮನವರನ್ನು ಕಂಡ ಮೇಲೆಯೇ. ಅವರಿದ್ದ ಮನೆ ನನಗೆ ದೊರಕಿದ್ದು ಬೆಳಗಿಂದ ಮಧ್ಯಾಹ್ನದವರೆಗೆ ತಿರುಗಾಡಿದ ಮೇಲೆಯೇ. ಇಲ್ಲಿಂದ ಅಲ್ಲಿವರೆಗೆ ಇರುವ ಸರೋಜಿನಿ ನಾಯ್ಡು ಬಡಾವಣೆ ಎಂದರೆ ಒಂದು ರೀತಿ ಅಗ್ರಹಾರವೇ. ನೋಡಲಿಕ್ಕೆ ಅಪ್ಪಟ ಶೂದ್ರನಂತೆ ಕಾಣುತ್ತಿದ್ದ ನಾನು ಅಲ್ಲಿನ ಪ್ರತಿಯೊಂದು ಮನೆಯನ್ನು ಎಡಹಾಕಿ ಕಾರಟಗಿ ಶಾನುಭೋಗರಾದ ಲಕ್ಷ್ಮೀನರಸಿಂಹಯ್ಯನವರ ಮಗ ಶ್ರೀಯುತ ಶ್ರೀವಲ್ಲಭಾಚಾರ್ಯರ ಮನೆ ಇದೇ ಏನ್ರಿ? ಎಂದು ಪ್ರತಿಯೊಬ್ಬರನ್ನು ಕೇಳಿದ್ದೇ ಕೇಳಿದ್ದು.

ಆ ತಾಯಿಯ ಅನಂತಪುರದ ವಿಳಸ ತಂದಿದ್ದೇ ಬಹು ದೊಡ್ಡ ರಾಮಾಯಣ. ರಾಜಾಗೋಪಾಲಾಚಾರ್ಯರ ಸಮಾಧಿ ಮೇಲೆ ಪುಷ್ಪಗುಚ್ಚ ವಿರಿಸುತ್ತಿದ್ದ ಯುವಕನೋರ್ವ ದೊರಕದಿದ್ದಲ್ಲಿ ವಿಳಾಸ ದೊರಕುವುದು ಸಾಧ್ಯವೇ ಇರಲಿಲ್ಲ. ಆನೆಗೊಂದಿ ದರ್‍ಭಶಯನಾಚಾರ್ಯರು ಹಿಂದೂಪುರಂಗೆ ಹೋಗಿ ಆರು ಬೆರಳಿನ ಭಕ್ತವತ್ಸಲಂರಾಯರ ಆಶ್ರಯ ಪಡೆದಿದ್ದಾಳವ್ಳು. ನಮ್ಮಲ್ಲಿ ಆಶ್ರಯ ಪಡೆದಿದ್ದರೆ ನಾವೇ ಆಕೆಯ ಹಣವನ್ನು ತಿಂದು ನರಕಕ್ಕೆ ಹೋಗುತ್ತಿದ್ದವೇನು? ಎಂದು ಪ್ರತಿಕ್ರಿಯಿಸಿದರೆ, ಕಂಪ್ಲಿ ಹನುಮಣ್ಣಾಚಾರ್ಯರು ಆಕೆಗೆ ತಿಲೋಕದ ಬಿಟ್ಟು ಎಷ್ಟೋ ವರ್ಷಗಳಾದ್ವು ಎಂದು ಬಿದುವುದೇ?... ನರಸಾಪುರದ ತಮ್ಮಣ್ಣಾಚಾರ್ಯರಂತೂ ಆ ಕೇಶವಿಹೀನೆಯು ವೈಧವ್ಯಕ್ಕೆ ಬೇಸತ್ತು ಕೃಷ್ಣೆಯೊಳಗೆ ದೇಹತ್ಯಾಗ ಮಾದಿದ್ಳೂಂತ ಕೇಳಿದ್ವಿಯಪ್ಪಾ’ ಎಂದು ನಿಟ್ಟುಸಿರು ಬಿಟ್ಟಿದ್ದರು.

ಅಲ್ಲಿಂದ ಸೀದಾ ರಾಯಚೂರಿನ ಗುರುವಾರ ಪೇಟೆಗೆ ಬಂದೆ. ಅಲ್ಲಿ ಅವರ ದೂರದ ಸಂಬಂಧಿಯಾದ ಸುಶೀಲಮ್ಮನು ಗಂಡ ಸತ್ತಿದ್ದರೂ ಮುಂಡೆ-ಗಿಂಡೆ, ನಾರುಮಡಿ-ಗೀರುಮಡಿ ಉಟ್ಟುಕೊಳ್ಳದೆ ಸಾದಾಸೀದಾವಾಗಿಯೇ ಇರುವಳೆಂದೂ; ಆಕೆ ತನಗಿಂತಲೂ ಹತ್ತು ವರ್ಷ ಚಿಕ್ಕವನಾದ ವೆಟರ್‍ನರಿ ಡಾಕ್ಟರ್ ಕುರುಬರ ಗುರುಲಿಂಗಪ್ಪನನ್ನು ಇಟ್ಟುಕೊಂಡು ಮಕ್ಕಳುಮರಿಯನ್ನು ಕೃತು ನಿಶ್ಚಯದಿಂದ ಪಾಲನೆ ಪೋಷಣೆ ಮಾಡುತ್ತಿರುವಳೆಂಬುದಾಗಿಯೂ ಹೆಂಣುಭೇರುಂಡವನ್ನು ಹೋಲುವ ಆಕೆಯನ್ನು ಸಂಪರ್ಕಿಸಿದರೆ ವರಲಕ್ಷ್ಮಿಯ ವಾಸ್ತವ್ಯ ತಿಳಿಯಬಹುದೆಂದೂ ಕಮಲಾಪುರದ ರೆವಿನ್ಯೂ ಇನ್ಸ್‌ಪೆಕ್ಟರ್ ರಮಾನಂದಾಚಾರ್ಯರು ಸುಳಿವು ನೀಡಿದ್ದರಿಂದ ನಾನು ಗುರುವಾರ ಪೇಟೆ ಸೇರಿಕೊಂಡಿದ್ದು. ನೋಡಲಿಕ್ಕೆ ಮೈಕೈ ತಿಂಬಿಕೊಂಡು ತಕ್ಕಮಟ್ಟಿಗೆ ಸುಂದರಳಾಗಿಯೇ ಇದ್ದ ಆ ವನಿತೆಯೂ, ಆಕೆಗೆ ಆಸರೆ ನೀಡಿರುವ ಗುರುಲಿಂಗಪ್ಪನೂ ನನ್ನನ್ನು ಬರಮಾಡಿಕೊಂಡು ಕುಳ್ಳರಿಸಿ ಫಲಹಾರ ಕೊಟ್ಟು ಉಪಚರಿಸಿದರು. ನಾನು ಬಂದ ಕಾರಣ ಹೇಳಲ್ಲಗಿ ಸುಶೀಲಮ್ಮನವರು ಆಶ್ಚರ್ಯ ವ್ಯಕ್ತಪಡಿಸಿದರು. ಆಕೆ ಏನೂ ನಿಮಗೆ ಸಂಬಂಧಿ ಅಲ್ಲ ಸಾಟಿ ಅಲ್ಲ. ಎರಡರಷ್ಟು ವೈಧವ್ಯ ಎಳ್ಕೊಂಡು ಕ್ಷೀಣಿಸಿ ಹೋಗಿರೋ ಆ ರಂಡೆಯಿಂದ ತಿಳ್ಕೊಳ್ಳೋದೇನಿದೆಯಣ್ಣಾ... ಸತ್ತೋನು ಸತ್ತ, ಆದ್ದಕ್ಯಾಕೆ ನೀನು ಕೊರಗೋದು! ಈ ವಯಸ್ನಲ್ಲಿ ಕಾಮವನ್ನು ಕೊಂದ್ಕೊಂಡು ಬದ್ಕೋದು ದುರ್ಭರ... ಒಳ್ಳೆ ಹುಡುಗನ್ನ ಹುಡ್ಕೊಂಡು ದೂರ


೩೦೯

ಎಲ್ಲಾದ್ರು ಸುಖವಾಗಿರು... ಬೇಕಾದ್ರೆ ನಾನೇ ಹೊಂದಿಸಿಕೊಡ್ತೇನೆ... ಎಂದು ಗಿಣಿಗೇಳ್ದಂಗೆ ಹೇಳ್ದೆ ಕಣಣ್ಣ... ಕುಲಟೆ... ಸೂಳೆ... ಅಂಥೋಳು ಇಂಥೋಳು ಅಂಥ ನನ್ನೇ ಬಯ್ದು ಹೊರಗೆ ಅಟ್ಟಿ ಬಿಡೊದೇನು! ತನ್ನ ಗಂಡನ್ನ ಗೋಳೊಯ್ಕೊಂಡು ತಿಂದು ಒಂದು ರೀತೀಲಿ ತಾನೇ ಕೊಲೆ ಮಾಡಿದ ಆಕೆ ಅದ್ಯಾವ ಪತಿವ್ರತೆ ಕಣಣ್ಣಾ... ನಾನು ನನ್ನ ಗಂಡನ್ನ ಬದುಕಿರುವಾಗ್ಲೂ ಪ್ರೀತಿಸ್ತಿದ್ದೆ ಸತ್ತ ಮೇಲೂ ಪ್ರೀತಿಸ್ತಿದೀನಿ... ನೋಡಿ ಅಲ್ಲಿ ಗೋಡೆ ಮೇಲೆ ಫೋಟೋದಲ್ಲಿ ಹೆಂಗವ್ರೆ!... ಗುರುಲಿಂಗಪ್ಪ ನನ್ನ ಕೈಹಿಡೀದಿದ್ರೆ ಈ ಸಮಾಜ ನನ್ನಂಥೋರ್‍ನ ಸುಮ್ನೆ ಬಿಡ್ತಿತ್ತೇನ್ರಿ...! ಆಕೆ ಕಥೇಲಿ ಏನಿದೆ ಬರೆಯೋಕೆ... ಬೇಕಾದ್ರೆ ನನ್ನ ಕಥೆ ಬರೀರಿ... ಪರಪುರುಷರ ಗಾಳಿ ಸೊಂಕದಂಗೆ ಬದುಕುತ್ತಿರೋ ಅವ್ಳು ನಿಮ್ಮನ್ನ ಹತ್ತಿರ ಬಿಟ್ಕೊಂಡಾಳೆಯೇ! ತನ್ನ ಗಂಡನ ಡೈರಿ ಗಿಯ್ರಿ... ಕಾಗ್ದಗೀಗ್ದ ಕೊಡ್ತಾಳಂತ ಏನು ಗ್ಯಾರಂಟಿ? ಆಲಿಗೆ ಹೋಗಿ ಅವಮಾನ ಅನುಭವಿಸೋದ್ಕಿಂತ ಸುಮ್ನೆ ಹೋಗ್ಬಿಡಿ ನಿಮ್ ಪಾಡಿಗೆ ನೀವು" ಎಂದು ಬುದ್ಧಿ ಹೇಳಿದಳು. ಆಕೆಯ ಮಾತುಗಳನ್ನು ಕೇಳಿ ನಾನು ವಿಚಾರನಂದ ಪರವಶನಾದೆನು. ಗುರುಲಿಂಗಪ್ಪನೂ ನನಗೆ ಸಪೋರ್ತಾಗಿ ನಿಂತ ಅನಂತರವೇ ಆಕೆ ಅನಂತಪುರದ ವಿವರ ನೀಡಿದ್ದು.

ಅನಂತಪುರಕ್ಕೆ ಹೋಗಬೇಕೆನ್ನುವ ಆಸೆಗೆ ಏಳೆಂಟು ವರ್ಷ ವಯಸ್ಸಾಗಿದೆ. ಆಂಧ್ರದ ರಾಯಲಸೀಮೆಯ ಜಿಲ್ಲೆಗಳಲ್ಲಿ ಅದೂ ಒಂದು.
ವಿಜಯನಗರದ ಅರಸರು ಆ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಮೂಲನೆಲೆಯಾದ ತಿರುಪತಿ ಸಮೀಪದ ಚಂದ್ರಗಿರಿಗೆ ಅನಂತಪುರದ ಮೂಲಕ ಹಾದು ಹೋಗಬೇಕಷ್ಟೆ. ಇಂಡಿಯಾ ಮಾರ್ಟಿಗೇಜ್ ಎಂಬ ಅಪರೂಪದ ಮತ್ತು ಸರಕಾರದ ಕಂಣು ಕೆಂಪುಮಾಡಿದಂಥ ಪುಸ್ತಕ ಬರೆದು ಹೋರಾಡುತ್ತಲೇ ಕೊನೆಯುಸಿರೆಳೆದ ತರಿಮೆಲನಾಗಿರೆಡ್ಡಿ; ಮೊದಮೊದಲು ನಕ್ಸಲೈಟ್ ಚಳುವಳಿಯಲ್ಲಿದ್ದು ನಂತರ ತೆಲುಗುದೇಶಂನ ಥಳುಕಿಗೆ ಮಾರುಹೋಗಿ ಎಮ್ಮೆಲ್ಲೆ ಯಾಗಿರುವ ಪರಿಟಾಲ ರವಿ; ಶೋಶಿತ ಸಮಾಜದ ಬಗ್ಗೆ ಅದ್ಭುತವಾದ ಕಥೆ ಬರೆಯುತ್ತಿರುವ ಚಿಲಕೂರಿ ದೇವ ಪುತ್ರ , ಸಿಂಗಮನೇನಿ ನಾರಾಯಣ; ಬಂಡಿನಾರಾಯಣ ಸ್ವಾಮಿ, ಪ್ರಸಿದ್ಧ ಕನ್ನಡ ವಿದ್ವಾಂಸರಾದ ಶೇಶಾಶಾಸ್ತ್ರಿ ಇವರೇ ಮೊದಲಾದ ಪ್ರತಿಭಾವಂತರಿರುವ ಅನಂತಪುರಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಿ ಇಳಿದಿದ್ದೆ. ಬಾಯಲ್ಲಿ ತೀನ್ ಸೌ ಬೀಡಾ ಹಾಕಿಕೊಂಡು "ಯಾವ ಶಾಮಣ್ಣ; ಯಾವ ವರಲಕ್ಷಮ್ಮ ಏನ್ಕಥೆ? ಇವರ್ನೆಲ್ಲ ಖುದ್ದ ಬೆಟ್ಟಿಯಾಗಿ ಅದ್ಯಾವ ಕಾದಂಬ್ರಿ ಬರೆದು ಅದೇನು ಸಾಧಿಸ್ತೀಯೋ ಕಣೋ ಕುಂವೀ" ಎಂದು ಉದ್ಗರಿಸಿ ತಮ್ಮ ಅನಂತಪುರದಲ್ಲಿ ಯಾವ ಜಾತಿಯವರು ಯಾವ ಯಾವ ಮೂಲೆಯಲ್ಲಿದ್ದಾರೆಂಬುದರ ಬಗ್ಗೆ ಶೇಶಾಶಾಸ್ತ್ರಿಗಳು ಹೇಳದಿದ್ದಲ್ಲಿ ನಾನೀ ಸರೋಜಿನಿ ನಾಯ್ಡು ಓಣಿ ತಲುಪುತ್ತಿರಲಿಲ್ಲ. ನೋಡಿದೊಡನೆ ಇದು ಬ್ರಾಹ್ಮಣರು ವಾಸಿಸುತ್ತಿರುವ ಸ್ಥಳ ಎಂಬುದು ಅರ್ಥವಾಗಿ ಬಿಟ್ಟಿತ್ತು.

ಇದೇ ಅವರ ಮನೆ ಇರಬೇಕೆಂದೂ; ಅದೇ ಇವರ ಮನೆ ಇರಬೇಕೆಂದು ಕಂಡ ಕಂಡ ಮನೆಗಳನ್ನೆಲ್ಲ ಎಡತಾಕಿದ್ದೇ ಎಡತಾಕಿದ್ದು. "ಯಾವ ವರಲಕ್ಷಮ್ಮ? ಅದೇ ಗರ್ಲ್ಸ್
ಹೈಸ್ಕೂಲಲ್ಲಿ ಟೀಚರಾಗಿದ್ದಾರಲ್ಲ ಅವ್ರಾ?" ಎಂದೊಬ್ಬರು ಉದ್ಗರಿಸಿದರೆ ಇನ್ನೊಬ್ಬರು ಹರಿಕಥೆ ಹೇಳ್ತಾರಲ್ಲ ಅವ್ರಾ ಎನ್ನುತ್ತಿದ್ದರು. ಕಾರಟಗೀ ಶಾನಭೋಗರಾದ ಲಕ್ಷ್ಮೀ ನರಸಿಂಹಯ್ಯನವರ ಮಗ ಶ್ರೀವಲ್ಲಭಾಚಾರ್ಯರ ಮನೆ ಎಲ್ಲಿದೆ ಎಂದು ಕೇಳಿದಾಗ ಒಬ್ಬ ವೃದ್ಧ ಮಹಿಳೆ ನಿಟಾರನೆ ಬೆನ್ನೆತ್ತಿ ನೀನ್ಯಾವ ಜಾತಿಯವ? ಅವರಿಗೂ ನಿಮಗೂ ಏನು ಸಂಬಂಧ ಎಂಬಿವೇ ಮೊದಲಾದ ಪ್ರಶ್ನೆಗಳನ್ನು


೩೧೦

ಕೇಳಿ ಉತ್ತರ ಪಡೆದು "ಈ ಬಡಾವಣೆಯಲ್ಲಿ ಯಾವ ಮನೆ ಮುಂದೆ ರಾಮ ದೇವರ ಗುಡಿ, ಮಸೀದಿ ಎರಡೂ ಇವೆಯೋ ಅದೇ ಕಣಪ್ಪ ಶ್ರೀವಲ್ಲಭನ ಮನೆ" ಎಂದು ಹೇಳಿತು. ನಾನು ಹುಡುಕಿದ ಪ್ರಕಾರ ಆ ಬಡಾವಣೆಯಲ್ಲಿ ಮೂರು ರಾಮದೇವರ ದೇವಸ್ಥಾನಗಳೂ; ಎರಡು ಮಸೀದುಗಳೂ ಇದ್ದವು. ನಂತರ ಕುಳಾಯಪ್ಪನ ಬಡಾವಣೆಗಂಟಿಕೊಂಡಂತಿರುವ ಮನೆಯೊಂದರ ಮುಂದೆ ಮಸೀದಿ ಮತ್ತು ರಾಮದೇವರ ಗುಡಿ ಒಟ್ಟೊಟ್ಟಿಗೆ ಇದ್ದವು. ಅನಂತಪುರಕ್ಕೆ ಎರಡು ಹರದಾರಿ ದೂರದ ಅಂದರೆ ಬೊಮ್ಮಲಾಟಪಲ್ಲಿ ದಾಟಿದ ಮೇಲೆ ಬರುವ ಗೂಡೂದು ಗ್ರಾಮದಲ್ಲಿ ಕುಳಾಯಪ್ಪ ಎಂಬ ಮುಸ್ಲಿಂ ದೇವತೆ ವಾಸವಾಗಿರುವುದು ರಾಮದೇವರ ಗುಡಿಯೊಳಗೇನೆ. ಪ್ರತಿ ಮೊಹರಮ್ ಹಬ್ಬದಲ್ಲಿ ರಾಮದೇವರಿಗೆ ಘನ[ಪೂಜೆ ಸಲ್ಲಿಸಿದ ನಂತರವೇ ಕುಳಾಯಪ್ಪ ಎಂಬ ಪೀರಲು ದೇವರು ಮದಾಲ್ಸಿಗೆ ಹೊರಡುವುದು. ಈಗಲೂ ಈ ಪ್ರಾಂತದಲ್ಲಿ ವೈಶ್ಯರು ಕುಳಾಯಿ ಶೆಟ್ಟಿ ಎಂದು ಹೆಸರಿಟ್ಟುಕೊಳ್ಳುವುದುಂಟು. ಬ್ರಾಹ್ಮಣರಲ್ಲು ಕುಳಾಯಿ ಶರ್ಮ, ಕುಳಾಯಿ ಆಚಾರ್ಯ ಎಂದು ಹೆಸರಿಟ್ಟುಕೊಳ್ಳುವುದನ್ನು ಕಾಣಬಹುದು. ಅಶ್ಟೇ ಏಕೆ! ಈ ನಮ್ಮ ವರಲಕ್ಷ್ಮಮ್ಮನವರಿಗೆ ಆಶ್ರಯಕೊಟ್ಟಿರುವ ಶ್ರೀವಲ್ಲಭಾಚಾರ್ಯರು ಇದ್ದಾರೆ - ಅವರ ಮನೆಯ ಎಡ ಬಾಜೂಕೆ ಡಾ.ತಮ್ಮಿನೇನಿ ಕುಳಾಯಿರಾವ್, ಎಂ.ಬಿ.ಬಿ.ಎಸ್. ಎಂ.ಡಿ. ಎಂದು ನಾಮಫಲಕ ಹಾಕಿಕೊಂಡಿರುವ ಮಹಾಶಯರಿದ್ದಾರೆ. ಅಂದ ಮೇಲೆ ಗುಡಿ ಮತ್ತು ಮಸೀದಿ ಒಟ್ಟೊಟ್ಟಿಗಿರೋದರಲ್ಲಿ ಯಾವ ಆಶ್ಚರ್ಯವಿದೆ?

ನಾನು ಹೋಗಿ ಬಾಗಿಲು ತಟ್ಟಿ "ಅಮ್ಮಾ" ಅಂದೆ. ತಮ್ಮ ಯಜಮಾನರೇ ಕೂಗಿದಂತಾಯಿತು ಎಂಬ ಸಖೇದಾಶ್ಚರ್ಯದಿಂದ ಬಾಗಿಲು ತೆರೆದ ಮಹಿಳೆ ವರಲಕ್ಷಮ್ಮನವರೇ ಆಗಿದ್ದರು. "ಏನಪ್ಪಾ ಅವ್ರೇ ಬಂದ್ರು ಅಂದ್ಕೊಂಡೆ... ನೀನು ಹಾಲಣ್ಣವ್ರ ಮಗ ವೀರಭದ್ರಪ್ಪ ಅಲ್ವೇ" ಎಂದು ನಖಶಿಖಾಂತ ನೋಡಿದರು. ನಾನು ನಿರೀಕ್ಷಿಸಿದ್ದಂಕ್ಕಿಂತ ಕ್ಷೀಣಿಸಿ ಹೋಗಿದ್ದರು. ಹುಬ್ಬಿನ ಮೇಲೆ ಕೈ ಅಡ್ಡ ಹಿಡಿದ ಹೊರತು ಅವರಿಗೆ ಯಾಗ ವಸ್ತೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೇಶವಿಹೀನಿಯಾಗಿದ್ದ ಆಕೆ ಕೆಳದರ್ಜೆ ಸೀರೆ ಉಟ್ಟು ಕಂಪಿಸುತ್ತಿದ್ದರು. ಇದ್ದಕ್ಕಿದ್ದಂತೆ ಕಂಣಲ್ಲಿ ನೀರು ತಂದುಕೊಂಡು ಅವರ್ನ ನೆನಸಿಕೊಂಡ್ರೆ ಎದೆನೇ ಹೊಡ್ದೋಗ್ತದಪ್ಪಾ... "ನಮ್ಮನ್ನೆಲ್ಲ ಈ ಸ್ಥಿತಿಗೆ ತಂದಿಟ್ಟು ಬಿಟ್ರಲ್ಲ ಆ ನಿಮ್ಮ ಗೆಳೆಯರು". ಎಂದು ಒಂದೇ ಸಮನೆ ಅಳತೊಡಗಿದರು. "ಆಗಿದ್ನೆಲ್ಲ ಮರ್‍ತು ಧೈರ್ಯದಿಂದ ಇರಬೆಕಮ್ಮಾ... ಹೋದೋನು ಮತ್ತೆ ಬರ್ತಾನೆಯೇ" ಎಂದು ಮುಂತಾಗಿ ಸಮಾಧಾನದ ಮಾತುಗಳನ್ನು ಹೇಳಿದೆ.

ಅಷ್ಟರಲ್ಲಿ ಒಳಗಡೆಯಿಂದ ಬಂದ ಮಹಿಳೆ ಶ್ರೀವಲ್ಲಭಾಚಾರ್ಯರ ಹೆಂಡತಿ ರುಕ್ಮಿಣಿಯಾಗಿದ್ದರು. ಬೆಂಗಳೂರಿನ ನಿವೃತ್ತ ತಹಶೀಲ್ದಾರ ಹಯವದನರಾಯರ ಮಗಳಾದ ಆಕೆಯನ್ನು ಗುರಿತಿಸುವುದು ಕಷ್ಟವಾಗಲಿಲ್ಲ. ಪಿಂಚಣಿ ಇತ್ಯಾದಿ ವಗೈರೆಗಳಿಗೆ ಅಂತ ಕಾರಟಿಯ ಶಾನುಭೋಗರು ಬೆಂಗಳೂರಿಗೆ ಹೋಗಿದ್ದಾಗ ಏಜಿ ಆಫೀಸಿನ ಅದೇ ಮಹಡಿಯಲ್ಲಿ ಹಯವದನರಾಯರು ಪರಿಚಯ ಮಾಡಿಕೊಂಡರಂತೆ. ಅದೇ ಪರಿಚಯವೇ ಅವರ ಮಗ ಶ್ರೀ ವಲ್ಲಭಗೆ ರುಕ್ಮಿಣಿಯನ್ನು ಧಾರೆ ಎರೆದುಕೊಡುವುದರಲ್ಲಿ ಪರ್ಯವಸಾನ ಗೊಂಡಿತ್ತು. ಆಕೆಯೂ ನನ್ನನ್ನು ಗುರುತಿಸಿದಳೆಂದು ಕಾಣುತ್ತದೆ... ಕೂತ್ಕೊಳ್ರಣ್ಣ... ಇನ್ನೇನು ಅವ್ರೂ ಬಂದೇ ಬಿಡ್ತಾರೆ... ಇವ್ರು ಎಷ್ಟು ಹೇಳಿದ್ರು ಕೇಳೋದಿಲ್ಲ... ಒಮ್ಮೊಮ್ಮೆ ಹೊತ್ತು ಗೊತ್ತಿಲ್ದೆ ಅಳ್ತಾನೇ ಇರ್ತಾರೆ... ಕೂತಿರಿ... ಒಳಗಡೆ ಹೋಗಿ ಕಾಫಿ ತಗೊಂಡು ಬರ್ತೀನಿ" ಎಂದು ರುಕ್ಮಿಣಿ ಒಳಗಡೆ


೩೧೧

ಹೋದರು.
ನಾನು ತುಂಬ ಅಂಜಿಕೆಯಿಂದ ವರಲಕ್ಷಮ್ಮನವರ ಕಡೆ ನೋಡುತ್ತಿದ್ದೆ.
ಏನಂತ ಮಾತುಗಳನ್ನು ಆರಂಭಿಸುವುದು! ಶಾಮಂಣನ ಬಗ್ಗೆ ಕಾದಂಬರಿಯನ್ನು ಬರೀತಾ ಇದ್ದೀನಿ. ಆತ ಬರೆದಿಟ್ಟಿರೋ ಡೈರಿ ಇದ್ದರೆ ಕೊಡಿ ಅಂತ ಯಾವ ಬಾಯಿಂದ ಕೇಳಲಿ! ಒಂದು ರೀತಿಯ ಸಂದಿಗ್ಧತೆ ಕಾಡತೊಡಗಿತು. ಆಕೆ ತಾನೇ ನನ್ನ ಬಗ್ಗೆ ಮದುವೆ, ಮಕ್ಕಳು ಇತ್ಯಾದಿ ವಿವರ ಕೇಳಿದರು. ಹೇಳಿದೆ. ಈ ದೌರ್ಭಾಗ್ಯೆ ಅತ್ತಿಗೆ ಇರೋ ವಿಷ್ಯ ಗೊತ್ತಿಲ್ವೇನಪ್ಪಾ.. ನಿನ್ಗೆ? ಕರೆದಿದ್ರೆ ನಾನೂ ಬಂದು ಅಕ್ಷತೆ ಹಾಕ್ತಿರ್‍ಲಿಲ್ವೇ.. ಒಂದು ರೀತಿ ಕರೆಯದೆ ಇದ್ದದ್ದೇ ಒಳ್ಳೆಯದಾಯ್ತು ಬಿಡು. ನನ್ನಿಂದ ತವರು ಮನೇನೂ ಸುಖವಾಗಿರ್ಲಿಲ್ಲ... ಗಂಡನ ಮನೇನೂ ಸುಖವಾಗಿರ್ಲಿಲ್ಲ... ನನ್ನ ಕಾಲ ಗುಣಾನೆ ಅಂಥಾದ್ದು... ಮುಂದೆಂದಾದ್ರು ಒಂದಿನ ನಿನ್ನ ಹೆಂಡತಿ ಮಕ್ಕಳನ್ನು ಕರ್ಕೊಂಡು ಬಾರಪ್ಪ..." ಎಂದು ಹೇಳಿ ಅಂತಃಕರಣ ಕಲಕಿದರು. "ಆಗ್ಲಮ್ಮ ಖಂಡಿತ ಕರ್ಕೊಂಡು ಬರ್ತೀನಿ..." ಎಂದು ಭರವಸೆಯ ಮಾತುಗಳನ್ನಾಡಿ "ಎಲ್ಲಮ್ಮ ಮಕ್ಳು ಕಾಣ್ತಿಲ್ವಲ್ಲ... ಸ್ಕೂಲಿಗೆ ಹೋಗಿದಾರಾ" ಎಂದು ಕೇಳಿದೆ... ಅಷ್ಟರಲ್ಲಿ ಬಂದ ಹುಡುಗರಿಬ್ಬರು ಥೇಟ್ ಶಾಮಂಣನ ಥರವೇ ಇದ್ದರು... "ನಿಮ್ಮ ತಂದೆಯವರ ಸ್ನೇಹಿತರು ಬಂದಿದ್ದಾರೆ ಕಣ್ರೋ..." ಎಂದು ವರಲಕ್ಷಮ್ಮ ಮಕ್ಕಳಿಗೆ ನನ್ನ ಪರಿಚಯ ಮಾಡಿಕೊಟ್ಟರು. "ಹಲೋ ಅಂಕಲ್, ಹಲೋ ಅಂಕಲ್" ಎಂದವರಿಬ್ಬರು ನನಗೆ ವಿಶ್ ಮಾಡಿದರು. "ಇವ್ನೇ ದೊಡ್ಡಮಗ ಶಿವರಾಮಶಾಸ್ತ್ರೀ ಅವ್ನೇ ಎರಡ್ನೇ ಮಗ ಅಶ್ವತ್ಥ ನಾರಾಯಣ " ಎಂದು ಹೇಳಿದರು. ನಾನು ಅವರಿಬ್ಬರನ್ನು ಬಾಚಿ ತಬ್ಬಿಕೊಂಡೆ. ಇಂಗ್ಲೀಷ್ ಮೀಡಿಯಂನಲ್ಲಿ ಒಬ್ಬ ಟೆಂಥು ಇನ್ನೊಬ್ಬ ಯೆಯ್ತು ಓದುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಅವರು ಪರಮೇಶ್ವರ ಶಾಸ್ತ್ರಿಗಳ ಮರಿಮಕ್ಕಳು ಎಂದು ನಂಬುವುದೇ ಕಷ್ಟವಾಯಿತು. ಅವರು ಅಷ್ಟು ಆಧುನಿಕವಾಗಿದ್ದರು. ಅಷ್ಟರಲ್ಲಿ ರುಕ್ಮಿಣಿಯವರ ಹೆಣ್ಣು ಮಕ್ಕಳಾದ ಸೌಂದರ್ಯ, ನಿವೇದಿತಾ ಎಂಬ ಹೆಸರಿನ ಹುಡುಗಿಯರು ಬಂದರು. ಅವರು ಕ್ರಮವಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಯೊಂದರಲ್ಲಿ ಐದು ಮತ್ತು ಮೂರನೆ ತರಗತಿಯಲ್ಲಿ ಓದುತ್ತಿದ್ದರು. ಹೆಂಣು ಮಕ್ಕಳಿಬ್ಬರು ಸುಂದರವಾಗಿಯೂ ಮುದ್ದಾಗಿಯೂ ಇದ್ದರು. ಸೌಂದರ್ಯ ಎಂಬ ಹುಡುಗಿಯನ್ನು ಶಿವರಾಮಶಾಸ್ತ್ರಿಗೂ, ನಿವೇದಿತಾ ಎಂಬ ಹುಡುಗಿಯನ್ನು ಅಶ್ವತ್ಥ್ ನಾರಾಯಣನಿಗೂ ತಂದುಕೊಳ್ಳುವುದೆಂದು ಗುಟ್ಟಾಗಿ ಒಪ್ಪಂದವೇರ್ಪಟ್ಟಿರುವುದಂತೆ. ನಾನು ತಂದಿದ್ದ ಸಿಹಿ ತಿಂಡಿಗಳ ಮತ್ತು ಹೂವಿನ ಪೊಟ್ಟನವನ್ನು ಆ ಮಕ್ಕಳು ಕೃತಜ್ಞತಾ ಪೂರ್ವಕ ಸ್ವೀಕರಿಸಿ ಒಳಗಡೆ ತೆಗೆದುಕೊಂಡು ಹೋದವು.

"ಈ ಮಕ್ಕಳಿಗಾಗಿ ಜೀವ ಹಿಡಿದುಕೊಂಡಿದ್ದೀನಪ್ಪಾ... ಹೆತ್ತ ತಪ್ಪಿಗೆ ಅವರಿಗೊಂದು ನೆಲೆ ಕಲ್ಪಿಸಬೇಕಲ್ಲ! ಮುಂದೆ ಅವ್ರು ಹೆತ್ತೋರ್ನ ಬಯ್ಕೋಬಾರ್ದು ನೋಡು" ಎಂದು ವರಲಕ್ಷಮ್ಮ ನಿಟ್ಟುಸಿರು ಬಿಟ್ಟರು.

ಅಷ್ಟರಲ್ಲಿ ಹೊರಗಡೆ ಸ್ಕೂಟರ್ ಬಂದು ನಿಂತ ಸದ್ದಾಯಿತು. ವರಲಕ್ಶ್ಮಿ "ತಮ್ಮಾ ಶ್ರೀವಲ್ಲಭ... ನಾನು ಹೇಳ್ತಿದ್ನೆಲ್ಲಾ... ಅವ್ರ ಸ್ನೇಹಿತರೊಬ್ಬರಿದ್ದಾರೆ... ಕಥೆ ಬರೀತಾರೆ ಅಂರ... ಅವ್ರೇ ಇವ್ರು ನೋಡು" ಎಂದು ತಮ್ಮ ಚಿಕ್ಕಪ್ಪನ ಮಗ ಶ್ರೀವಲ್ಲಭರಿಗೆ ನನ್ನ ಪರಿಚಯ ಮಾಡಿಕೊಟ್ಟರು. ನನ್ನ ಕೆಲ ಕಥೆಗಳನ್ನು ಓದಿದ್ದ ಅವರು ಬಹು ಪ್ರೀತಿಯಿಮ್ದ ನನ್ನ ಕೈಕುಲಿಕಿದರು. ಹಳೆ ಪರಿಚಯವಿರುವವರಂತೆ ಮಾತನಾಡಿಸಿದರು. ಶುಭ್ರ ಆಧುನಿಕ ವಾತಾವರಣ ಜೀಕುತ್ತಿದ್ದ


೩೧೨

ಮನೆಯೊಳಗೆ ಮೂಲೆಯಲ್ಲೆಲ್ಲೊ ಬಿಥೊವನ್ ವಯಲಿನ್ ನುಡಿಸುತ್ತಿದ್ದ, ಮಮ್ಮಿ ಡ್ಯಾಡಿ ಎಂಬ ಶಬ್ದಗಳು ಪಲ್ಲವಿಸುತ್ತಿದ್ದವು. ಶಾಮಂಣನ ಮಕ್ಕಳು ಪಾಶ್ಚಿಮಾತ್ಯ ಜೀವನ ಶೈಲಿ ರೂಡಿಸಿಕೊಳ್ಳುತ್ತಿರುವುದು ಕಂಡು ನಾನು ಆನಂದಪರವಶನಾದೆ. ಬಾತ್ರೂಮ್, ಡೈನಿಂಗ್ ಹಾಲು, ಕಿಚನ್ ಡ್ರಾಯಿಂಗ್ ರೂಂನಲ್ಲಿ ಹೆರಾಲ್ಡ್ ರಾಬಿನ್ಸ್, ಅಗಾಥ ಕ್ರಿಸ್ತಿ, ಬರ್ಬರಾ ಕಾರ್ಟ್‌ಲ್ಯಾಂಡು, ಜೇಮ್ಸ್ ಹ್ಯಾಡ್ಲಿಮುಂತಾದವರೇ ತುಂಬಿಕೊಂಡಿರುವ ಕಪಾಟು. ಮುಖ್ಯ ತಲೆಬಾಗಿಲ ಮೇಲೆ ಶ್ರೀಮದ್ವೆಂಕಟೇಶ್ವರರ ಫೋಟೋ ಬಿಟ್ಟರೆ ಮತ್ತೊಂದು ದೇವರ ಫೋಟೋ ಕಾಣಿಸುತ್ತಿರಲಿಲ್ಲ. ಊಟ ಮಾಡುವ ಮುನ್ನ "ಅಮ್ಮಾ ನಿಮ್ದು ಊಟ ಆಯ್ತೆ" ಎಂದು ಕೇಳಿದೆ. "ಇವತ್ತು ನಾನು ಒಪ್ಪತ್ತು ಕಣಪ್ಪಾ" ಎಂದು ವರಲಕ್ಶಮ್ಮ ಬತ್ತಿ ಹೊಸೆಯುವುದರಲ್ಲಿ ನಗ್ನರಾದರು. ಅದಕ್ಕೆ ಪ್ರತಿಯಾಗಿ ರುಕ್ಮಿಣಿಯವರು, ಅಣ್ಣಾನೀವು ಬನ್ನಿ... ಅವರು ಆದಿತ್ಯವಾರವೊಂದೆ ಎರಡು ಹೊತ್ತು ಊಟ ಮಾಡೋದು... ಉಳಿದ ದಿನಗಳಲ್ಲಿ ಒಂದೊಂದು ದೇವರ ಹೆಸರು ಹೇಳ್ಕೊಂಡು ಊಟ ಬಿಡ್ತಾನೆ ಇರ್ತಾರೆ... ತಾಯಿ ಆದೋರು ಮಕ್ಕಳಿಗಾದ್ರು ಸುಖವಾಗಿರೋದು ಬೇಡ್ವೆ?..." ಎಂದು ನನ್ನನ್ನು ಕರೆದರು. ಅಪ್ಪಟ್ ಬೆಂಗಳೂರು ಶೈಲಿಯಲ್ಲಿ ಊಟ ಬಡಿಸಿದರು. ಊಟ ತುಂಬ ರುಚಿಯಾಗಿದ್ದರೂ ನನಗ್ಯಾಕೋ ಸೇರಲಿಲ್ಲ. ಶಾಮಂಣನ ಶಾಶ್ವತ ಅಗಲಿಕೆಯ ನಂತರ ವರಲಕ್ಷಮ್ಮ ದೇಹವನ್ನು ದೇವರು ದಿಂಡರುಗಳ ಹೆಸರಿನಲ್ಲಿ ದಂಡಿಸಿಕೊಳ್ಳುತ್ತಿರುವುದಕ್ಕೆ ಏನಾದರು ಅರ್ಥವಿದೆಯೇ? ಆಕೆಯ ವಯಸ್ಸು ಮೂವತ್ತೈದರ ಆಜುಬಾಜಿರಬಹುದು ಅಷ್ಟೆ? ಈ ವಯಸ್ಸಿಗೆ ಐವತ್ತಾಗಿರುವಂತೆ ಕಾಣಿಸುತ್ತಿರುವುದು ಸಂಪ್ರದಾಯದ ಬಹು ದೊಡ್ಡ ವ್ಯಂಗವೇ ಆಗಿದೆ. ಶ್ರೀ ವಲ್ಲಭ ದಂಪತಿಗಳು ಅದನ್ನು ನೀಡಿಸಿಕೊಳ್ಳಿ, ಇದನ್ನು ನೀಡಿಸಿಕೊಳ್ಳಿ ಎಂದು ಬಲವಂತಿಸಿದರೂ ಊಟದ ಶಾಸ್ತ್ರ ಮುಗಿಸಿ ಕೈ ತೊಳೆದುಕೊಂಡಿದ್ದೆ. ಇದರಿಂದ ಮುಖ್ಯವಾಗಿ ರುಕ್ಮಿಣಿಯವರಿಗೆ ಬೇಸರವಾಯಿತು. ಅಂದಿನ ಮದುವೆ ಮುರಿದು ಬಿದ್ದು ಶಾಮಂಣ ರುಕ್ಮಿಣಿಯವರ ಕೈ ಹಿಡಿದಿದ್ದರೆ ತುಂಬು ಜೀವನ ನಡೆಸುತ್ತಿದ್ದನೇನೋ ಎಂದುಕೊಂಡೆ.

ಹೊರಗಡೆ ಹಾಲ್‌ನಲ್ಲಿ ಕುಳಿತಾಗ ತುಟಿ ಜಾರಿ "ಅಲುಮೇಲಮ್ಮನವ್ರು ಈಗೆಲ್ಲಿದ್ದಾರಮ್ಮಾ" ಎಂದು ಅಕಸ್ಮಾತ್ ಕೇಳಿ ಹಿರಿದಾದ ದುಃಖದ ಸನ್ನಿವೇಶವನ್ನು ಎದುರು ಹಾಕಿಕೊಂಡೆ. ವರಲಕ್ಶಮ್ಮನವರು ಒಮ್ಮೆಗೆ ಹೋ ಎಂದು ಅಳುತ್ತ; ತನ್ನ ಅಳುವಿನಿಂದ ತಮಗೆ ಆಶ್ರಯ ಕೊಟ್ಟಿರುವ ಮನೆಯ ಆಧುನಿಕ ವಾತಾವರಣಕ್ಕೆ ಎಲ್ಲಿ ಧಕ್ಕೆ ಬರುವುದೋ ಎಂಬ ಆತಂಕದಿಂದ ಬಾಯಿಗೆ ಅಡ್ಡ ಸೆರಗು ಇಟ್ಟುಕೊಂಡು ದುಃಖದ ಪ್ರವಾಹಕ್ಕೆ ಅಣೆಕಟ್ಟು ಕಟ್ಟಿದರು. ಶ್ರೀವಲ್ಲ್ಭ ದಂಪತಿಗಳ ಸ್ವಾಂತನದ ಮಾತುಗಳಿಂದ ಅವರು ಇನ್ನಷ್ಟು ಗೊಂದಲಕ್ಕೀಡಾಗಿ ಎದ್ದು ಒಳಗಡೆ ಇದ್ದ ದೇವರ ಕೋಣೆಗೆ ಹೋದರು. ಶ್ರೀವಲ್ಲಭ ನಿಟ್ಟುಸಿರು ಬಿಟ್ಟು ಎಲ್ಲಾ ಹೇಳಿದರು.
ಮನೆ ಮಾರಿ ಬಂದ ಹಣವನ್ನು ಇಟ್ಟುಕೊಂಡ ನಂತರ ಅಲುಮೇಲಮ್ಮಜ್ಜಿ ಪ್ರತಿಯೊಬ್ಬರನ್ನು ಸಂಶಯದಿಂದ ನೋಡಲಾರಂಭಿಸಿತು. ತನ್ನಲ್ಲಿರುವ ಇಡಿಗಂಟಿಗಾಗಿ ಎಲ್ಲರು ನನ್ನನ್ನು ಪ್ರೀತಿಸುತ್ತಿದ್ದಾರೆ; ತನ್ನಲ್ಲಿರುವ ಹಣ ಅಪಹರಿಸಿ ಬೀದಿಗೆ ತಳ್ಳುತ್ತಾರೆ ಎಂಬಂಥ ಸಂಶಯಗಳಿಗೆ ಈ ಪ್ರಪಂಚದಲ್ಲಿ ಮದ್ದು ಸಿಕ್ಕುವುದಾದರೂ ಎಲ್ಲಿ?... ಆರ್ಥಿಕ ಸಂಪನ್ಮೂಲಗಳಿಂದ ವಂಚಿತಗೊಂಡು ನಲುಗಿ ಹೋದ ಯಾರಿಗಾದರೂ ಇಡಿ ಮೊತ್ತ ದೊರಕಿದಾಗ ಈ ರೀತಿ ವರ್ತಿಸುವುದು ಸಹಜವೇ. ಆದರೆ ಹಣ ಅಲುಮೇಲಮ್ಮಜ್ಜಿಯನ್ನು ಸಂಪೂರ್ಣ ನಿಯಂತ್ರಿಸತೊಡಗಿತು. ಒಂದೊಂದು ರೂಪಾಯಿಗೆ ಜೀವ ಬಂದು ಅವರಿವರ ಮೇಲೆ ಚಾಡಿ ಹೇಳತೊಡಗಿತು. ಅದರಿಂದಾಗಿ ಆಕೆ


೩೧೩

ಠಿಕಾಣಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆ ನಿರಂತರವಾಗಿ ಬದಲಾಯಿಸತೊಡಗಿದರು. ಕೊನೆಗೆ ನನ್ನವರು ತನ್ನವರೆಂಬುವವರಿವ ನೆಲವೇ ಪಿಶಾಚಿ ರೂಪ ಧರಿಸಿ ತನ್ನನ್ನೂ, ತನ್ನಲ್ಲಿರುವ ಹಣವನ್ನೂ ನುಂಗಿ ನೀರು ಕುಡಿಯಲು ಹೊಂಚುಹಾಕಿದೆ ಎಂದು ಭಾವಿಸಲಾದ ಆಕೆ ಇದ್ದಕ್ಕಿಂದ್ದಂತೆ ನಾನು ನಾಳೆ ಬೆಳೆಗ್ಗೆ ಉತ್ತರ ಭಾರತದ ಯಾತ್ರೆಗೆ ಹೊರಟು, ಕೃಷ್ಣ, ಗೋದಾವರಿ, ನರ್ಮದ, ಗಂಗೆ, ಯಮುನ, ಸರಸ್ವತಿಯೇ ಮೊದಲಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಮೂರು ತಿಂಗಳ ನಂತರ ವಾಪಸು ಬರುತ್ತೇನೆ ಎಂದು ಘೋಷಿಸಿಬಿಟ್ಟಳಂತೆ. ವಿಷ ಬೆರೆಸಿರಬಹುದೆಂಬ ಕಾರಣದಿಂದ ರುಕ್ಮಿಣಿ ಮಾಡಿಕೊಟ್ಟ ತಿಂಡಿಗಳನ್ನೂ ತೆಗೆದುಕೊಳ್ಳದೆ ಹೊರಟುಹೋದಳು. ಹಾಗೆಯೇ ಹೊರಟೇ ಹೋಗಿಬಿಟ್ಟಳು. ಇಷ್ಟು ವರ್ಷಗಳಾದರೂ ಆಕೆ ಮರಳಿ ಬಾರಲೇ ಇಲ್ಲ... ತಮ್ಮತ್ತೆಯವರು ಇಂದು ಬರಬಹುದು ನಾಳೆ ಬರಬಹುದೆಂದು ಪ್ರತಿನಿತ್ಯ ಬೀದಿಯ ಎರಡೂ ಬದಿಗೆ ನೋಡುತ್ತಲೆ ಇದ್ದಾರೆ... ಉತ್ತರ ಭಾರತದ ಯಾವುದಾದರೊಂದು ಪವಿತ್ರ ನದಿ ಆಕೆಯನ್ನು ಬಿಟ್ಟುಕೊಟ್ಟಿರಲಿಕ್ಕಿಲ್ಲವೆಂದು ಊಹಿಸುವುದೂ ಕ್ರೌರ್ಯವೇ! ಕಾಶಿಯ ಯಾವುದಾದರೊಂದು ಸ್ನಾನದ ಘಟ್ಟದ ಮೇಲೆ ತಮ್ಮತ್ತೆಯವರು ಜಪಮಣಿ ಏಣಿಸುತ್ತ ಜೀವಹಿಡಿದಿರಬಹುದೆಂಬ ವರಲಕ್ಷಮ್ಮನವರ ಕಲ್ಪನೆ ಕೇವಲ ಕಲ್ಪನೆಯಾಗಿ ಉಳಿದುಕೊಂಡಿದೆ.

ನಾನು ಶೀವಲ್ಲಭರನ್ನು ಏಕಾಂತದಲ್ಲಿ ಸಂಧಿಸಿ ನಾನು ಬಂದಿರುವ ಉದ್ದೇಶ ಹೇಳಿದೆ. ಅದೂ ಸಂಚೋಚ ಮತ್ತು ಹಿಂಜರಿಕೆಯಿಂದ. ವಿದ್ಯಾವಂತರೂ; ಆಧುನಿಕ ಮನೋಭಾವದವರಾದ ಅವರೂ ಅನ್ಯ್ಥಾ ಭಾವಿಸಲಿಲ್ಲ. ಯಙ್ಜಕ್ಕೆ ಸಮಿತ್ತು ಹವಿಸ್ಸುಗಳನ್ನು ಜೋಡಿಸುವುದರಿಂದ ಯಾವ ಪ್ರಕಾರವಾಗಿ ಪುಣ್ಯ ಲಭಿಸುವುದೋ ಹಾಗೆಯೇ ಕಾದಂಬರಿಯ ನಿರ್ಮಾಣಕ್ಕೆ ಪರಿಕರಗಳನ್ನು ಒದಗಿಸುವುದರಿಂದ ಅದಕ್ಕಿಂತ ಮಿಗಿಲಾದ ಸಾರ್ಥಕ ಭಾವ ಸಿದ್ಧಿಯಾಗುವುದೆಂಬುದಾಗಿ ಬಗೆದ ಆ ಪುಣ್ಯ ದಂಪತಿಗಳು- ಒಳಗಡೆ ಹೋಗಿ ಒಂದಿಷ್ಟು ಹಾಳೆಗಳಿದ್ದ ಗಂಟನ್ನು ತಂದು ಗುಟ್ಟಾಗಿ ಕೊಟ್ಟರು... ನಾನು ಜೋಪಾನವಾಇ ಅದನ್ನು ಬ್ರೀಫ್ ಕೇಸಿಗೆ ಸೇರಿಸಿದೆನು.

ಶೀವಲ್ಲಭರಿಂದ ಅನಸೂಯಮ್ಮನವರ ಬಗೆಗೂ ಒಂದಿಷ್ಟು ಮಾಹಿತಿ ದೊರಕಿತು. ಡೈರಿ ಮತ್ತಿತರ ವಿವರಗಳು ಆಕೆಯಲ್ಲಿ ದೊರಕಬಹುದೆಂದು ಪಿಸುಗುಟ್ಟಿದರು. ಆಕೆಯೂ ಹಿಂದೆ ಒಂದೆರಡು ಬಾರಿ ಶಾಮಂಣನ ಮಕ್ಕಳನ್ನು ನೋಡಲು ಮತ್ತು ವರಲಕ್ಷ್ಮಮ್ಮನವರ ಆರೋಗ್ಯ ವಿಚಾರಿಸಲು ಅನಂತಪುರಕ್ಕೆ ಬಂದಿದುದುಂಟಂತೆ. ದುಡ್ಡು ಬಟ್ಟೆಬರೆ ಮುಂತಾದ ವಸ್ತುಗಳನ್ನು ಮಕ್ಕಳಿಗೆ ಕೊಡಲು ಪ್ರಯತ್ನಿಸಿದುದುಂಟಂತೆ... ಒಮ್ಮೊಮ್ಮೆ ಬಂದಾಗಲೂ ವರಲಕ್ಸ್ಮಮ್ಮನವರು ‘ಎಲೈ ಕತ್ತೆ ಲವುಡೀ’ ಎಂಸು ಸುಂಟರಗಾಳಿ, ಬಿರುಗಾಳಿಗಳನ್ನು ಸೃಷ್ಟಿಸಿ ಆಕೆಯನ್ನು ಮತ್ತೊಮ್ಮೆ ಬಾರದ ಹಾಗೆ ಮಾಡುವುದರಲ್ಲಿ ಯಶಸ್ವಿಯಾದರಂತೆ. ಆದರೆ ಕರುಳನ್ನು ತಡೆಯುವ ಶಕ್ತಿ ಯಾವ ಬಿರುಗಾಳಿಗೆ ತಾನೆ ಉಂಟು! ಪ್ರತ್ಯೇಕವಾಗಿ ಶ್ರೀವಲ್ಲಭರನ್ನು ಕಂಡು, "ನೋಡ್ರಿ ಸ್ವಾಮಿ... ಹೊಟ್ಟೇಲಿ ಹುಟ್ದೋವೆ ಮಕ್ಳೇನು... ವರಲಚುಮವ್ವನ ಮಕ್ಳು ನನ್ ಮಕ್ಳೂ ಅಲ್ವೇನು?... ಆತನ್ ಮಕ್ಳು ಬೇಷಿ ಓದ್ಕೊಂಡು ಮುಂದೆ ದೊಡ್ಡಾಫೀಸರಗಳಾಗಬೇಕು... ಓದಿಗೆ ಪಾದಿಗೆ ರೊಕ್ಕ ಬೇಕಾದ್ರೆ ಬರೀತಿರ್ರಿ... ಕಳಿಸ್ತಿರ್‍ತೀನಿ! ಎಂದು ಹೇಳಿದಲಂತೆ. "ಅಂಥ ಸಂದರ್ಭಬಂದಾಗ ಬರೆಯುವೆವಮ್ಮಾ" ಎಂದು ಶ್ರೀವಲ್ಲಭ ಹೇಳಿದರಂತೆ. ಆಕೆ ಕಾನ್ವೆಂಟು ಸ್ಕೂಲಿಗೆ ಹೋಗಿ ಶಾಮಂಣನ ಮಕ್ಕಳಿಬ್ಬರನ್ನು ಎತ್ತಿ ಮುದ್ದಾಡಿ ಹೋಗಿರುವುದುಂಟಂತೆ. ಈಗ ದೊಡ್ಡವರಾಗಿದ್ದಾರೆ... ಒಳ್ಳೆಯದು ಕೆಟ್ಟದ್ದು ಅರ್ಥ ಮಾಡಿಕೊಳ್ಳೋ ವಯಸ್ಸಿಗೆ ಬಂದಿರುವ ಅವರ ಸನಿಹಕ್ಕೆ


೩೧೪
ಹೋಗುವುದು ಅನಸೂಯಮ್ಮನಂಥವರಿಗೆ ಸಾಧ್ಯವಾದೀತೆ? ಆಕೆಯೂ ಇತ್ತೀಚೆಗೆ ಬಂದುದಿಲ್ಲ. ಅಕೆಯ ಬಗೆಗೂ ಮಕ್ಕಳಿಗೆ ಗೌರವ ಹುಟ್ಟಿಸುವಂಥ ಮಾತುಗಳನ್ನಾಡಲು ಪ್ರಯತ್ನಿಸುತ್ತಿರುವ ಶ್ರೀವಲ್ಲಭ ಮನುಷ್ಯ ಸಂಬಂಧ ಎಷ್ಟು ವಿಚಿತ್ರ ಅಂತ ನಿಟ್ಟುಸಿರುಬಿಟ್ಟರು ಅವರೆಲ್ಲರಿಂದ ಬೀಳ್ಕೊಂಡುನಾನು ಶೇಷಾಶಾಸ್ತ್ರಿಗಳ ಮನೆ ತಲುಪಿದೆ.ಬೊಮ್ಮಲಾಟಪಲ್ಲಿ ಬಳಿ ದೊರಕಿರುವ ಶಿಲಾ ಶಾಸನದ ವಿಶ್ಲೇಷಣೆಗೆ ತೊಡಗಿದ್ದ ಶಾಸ್ತ್ರಿಗಳು ಬಾರಪ್ಪಾ... ಬಾ... ಕೃಷ್ಣದೇವರಾಯ ಬೊಮ್ಮಲಾಟಪಲ್ಲಿಯನ್ನೇ ನಾಗಯ್ಯನಿಗೆ ಉಂಬಳಿಯಾಗಿ ಬಿಟ್ಕೊಟ್ಟಿದ್ದಾನೆ ನೋಡೊ... ಒಂದು ವಿಚಿತ್ರ ಅಂದರೆ ಇದು ಹಳೆಗನ್ನಡದಲ್ಲಿದೆ. ಹೆಚ್ಚು ಕಡಿಮೆ ವಿರೂಪಾಕ್ಷ ಪಂಡಿತನ ಕಾವ್ಯ ಭಾಷೆಯನ್ನೇ ಹೊಲ್ತಿದೆ... ಆ ವಿರೂಪಾಕ್ಷನೇ ಈ ಶಾಸನದ ಕವಿ ಆಗಿರಬಾರದೇಕೆ... ಅಥವ ಅವನ ಶಿಷ್ಯರ ಪೈಕಿ ಯಾರಾದರೊಬ್ಬರು..." ಎಂದು ಮಾತಿಗೆಳೆದರು. ಬಾಯಿ ತುಂಬಿದ ತಾಂಬೂಲದ ರಸವನ್ನು ಪಿಚಕ್ಕನೆ ಉಗುಳಿ ಬಂದರು. ಜಾನಪದ ಕಲೆಗಳಿಗೆ ನನ್ಗೂ ಹೆಸ್ರು ಬರ್ತದೆ... ನಿಮ್ಮ ಹಂಪಿಲಿರೋ ಕನ್ನಡ ಯೂನಿವರ್ಸಿಟಿ ಹೊರನಾಡಿನಲ್ಲಿ ಹಂಚಿಹೋಗಿರುವ ಕನ್ನಡ ವಿವರಗಳನ್ನು ಯಾಕೆ ಸಂಗ್ರಹಿಸೋ, ಸ್ಟಡಿ ಮಾಡೋ ಕೆಲಸ ಮಾಡ್ತಿಲ್ವಲ್ಲಯ್ಯಾ?... ಎಂದು ಉತ್ಸಾಹದಿಂದ ಶುರು ಮಾಡಿದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ನಿರರ್ಥಕವಾಗಿ ಆರು ತಿಂಗಳು ಇದ್ದು ಬಂದ ಕಷ್ಟ ಗೊತ್ತಿರೋ ನಾನು ನಿಟ್ಟಿಸಿರುಬಿಟ್ಟು ಗಂಟು ಬಿಚ್ಚಿ ಕಾಗದ ಪತ್ರಗಳನ್ನು ನೆಲದ ಮೇಲೆ ಹರಡಿದೆ, "ಕಾದಂಬರಿಗೆ ವಸ್ತು ಸಿಕ್ಕಂತಿದೆಯಲ್ಲ" ಎಂದು ಹತ್ತಿರ ಬಂದು ಶಾಸ್ತ್ರಿಗಳು "ನಾನು ಬೇಕೆಂದೇ ಮನೆ ಹುಡುಕಿಕೊಡ್ಲಿಕ್ಕೆ ಬರ್ಲಿಲ್ಲಪ್ಪ... ತಪ್ಪು ತಿಳ್ಕೋಬೇಡ... ನಮ್ಮ ಮಾಧ್ವರು, ಸ್ಮಾರ್ಥರು ವಾಸಿಸೋ ಬಡಾವಣೇಲಿ ಲೇಖಕನಾದ ನಿನಗೊಂದು ಎಕ್ಸ್‌ಪೀರಿಯನ್ಸು ಆಗ್ಲಿ ಅನ್ನೋ ಕಾರಣಕೆ ಬಲ್ಲಿಲ್ಲಪ್ಪಾ" ಎಂದು ನಕ್ಕರು. ನಿಷ್ಕಲ್ಮಷ ಮತ್ತು ಮೃದು ಹೃದಯಿಯಾದ ಅವರು ಒಂದೆರಡು ಕಾಗದ ಹಿಡಿದು, ಓದಿ "ಅರೇ! ಈ ಮನುಷ್ಯ ಒಳ್ಳೆ ಲೇಖಕ್ನಂಗೆ ಬರಿದಿದ್ದಾನಲ್ಲ ಮಾರಾಯ... ನಮ್ಮವ್ರಲ್ಲಿ ಇಷ್ಟೊಂದು ವೈನಾಗಿ ಕನ್ನಡ ಬರ್ಯೋರೆ ಕಡ್ಮೆ, ಪರಿಚಯ ಪರಿಚಯ ಮಾಡಿಕೊಡಬಾರದಾಗಿತ್ತೇ...ನೀನು" ಎಂದರು. ನಾನು ಶಾಮಂಣನ ಕಥೆಯನ್ನು ಕೇವಲ್ ಹತ್ತು ವಾಕ್ಯಗಳಲ್ಲಿ ವಿವರಿಸಿದೆ. ರಾಮಾಯಣವನ್ನು ಹಳ್ಳಿ ಮಂದಿ ಮೂರೇ ಮೂರು ಶಬ್ದಗಳಲ್ಲಿ ಹಿಡಿದಿಟ್ಟು ಹೇಳುವರಲ್ಲ ಹಾಗೆ! ಮುಖದಲ್ಲಿ ಕವಿದ ವಿಷಾದದಿಂದ ಮರುಚಣದಲ್ಲಿ ಚೇತರಿಸಿಕೊಂಡ ಶಾಸ್ತ್ರಿಗಳು " ನಮ್ಮ ವ್ಯವಸ್ಥೇನೆ ಹಂಗಾಗಿ ಬಿಟ್ಟ್ದೆ. ಬದುಕಬೇಕೆನ್ನೋರು ಸಾಯ್ತಾರೆ, ಸಾಯ್ಬೇಕನ್ನೋರು ಬದುಕ್ತಾರೆ..." ಎಂದು ನಿಟ್ಟುಸಿರು ಬಿಟ್ಟು ತಮ್ಮ ಅನಂತಪುರದಲ್ಲಿ ಯಾರು ಯಾವ ಯಾವ ಕಾರಣಕ್ಕೆ ಮತ್ತು ವಿನಾ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ನೀಡಿದರು.

ಆದರೆ ಆ ಪಟ್ಟಿಯಲ್ಲಿರುವವರ ಯಾವ ಜಾಯಮಾನಕ್ಕೂ ನಮ್ಮ ಶಾಮಂಣ ಒಗ್ಗಲಿಲ್ಲ. ಅವನು ಅಗಾಧವಾದ ಜೀವನ ಶ್ರದ್ಧೆ ಪ್ರಕಟಿಸುತ್ತಿದ್ದ ಎಂಬುದಕ್ಕೆ ಬರೆದಿರುವ ಕಥೆಗಳೇ ಸಾಕ್ಷಿ. ಹಾಗೆಯೇ ಪರಮೇಶ್ವರ ಶಾಸ್ತ್ರಿಗಳು ಬರೆದಿಟ್ಟಿರುವ ಅಪೂರ್ಣ ವೀಲುನಾಮ ಅವನು ವೈವಿಧ್ಯಮಯವಾಗಿ ಬದುಕನ್ನು ಪ್ರಯತ್ನಿಸಿದ್ದ ಎಂಬುದರ ಮೇಲೆ ಬೆಳಕು ಚೆಲ್ಲುವಂತಿರುವುದು. ಮಾನವ ಸಹಾಯವಿರದಿದ್ದರೂ; ಎಲ್ಲರಿಗಿಂತ ಸೊಗಸಾಗಿ ಬದುಕಬಲ್ಲೆನೆಂಬ ಆತ್ಮವಿಶ್ವಾಸವನ್ನು ಅವನು ಬರೆದಿರುವ ಪ್ರತಿಯೊಂದು


೩೧೫

ಸಾಲು ಪ್ರಕಟಿಪಡಿಸುತ್ತಿರುವುದು. ಮನುಷ್ಯ ಜಗತ್ತಿನೊಂದಿಗೆ ಪ್ರಾಣಿ ಜಗತ್ತು ಮತ್ತು ಸಸ್ಯ ಜಗತ್ತನ್ನು ಲಗತ್ತಿಸಿ ನೋಡುವ ಅಪರೂಪದ ಮನುಷ್ಯನಾಗಿದ್ದ ಅವನು ಆತ್ಮಹತ್ಯೆ ಮಾಡಿಕೊಂಡನೆ? ಅಥವಾ ವ್ಯವಸ್ಥಿತವಾಗಿ ಕೊಲೆ ಮಾಡಲಾಯಿತೆ ಎಂಬುದೇ ಉಳಿದಿರುವ ಒಗಟು. ಈ ಒಗಟನ್ನು ಭೇದಿಸಲು ಕೊತ್ತಲಿಗಿಯ ಅನಸೂಯಳ ಸಹಾಯ ಬೇಕೇ ಬೇಕು? ಅದನ್ನು ಪಡೆಯುವ ಬಗೆ ಹೇಗೆ?

"ನಿನಗ್ಯಾವುದೂ ಅಸಾಧ್ಯವಲ್ಲ ಕುಂವೀ... ನೀನು ಅಂದ್ಕೊಂಡಿದ್ದನ್ನು ಸಾಧಿಸೋ ಮನುಷ್ಯ...ಎದೆಗುಂದಬೇಡ. ನುಗ್ಗು... ಮುಂದದ್ನ ಅನುಭೋಸು ಅಷ್ಟೆ" ಎಂದು ಶಾಸ್ತ್ರಿಗಳು ಧೈರ್ಯ ತುಂಬುವ ಮಾತುಗ್ಳನ್ನಾಡಿದರು. ಅಕ್ಷ ಮಂದಿ ಗೆಳೆಯರಿಗೆಲ್ಲ ಕಳಸ ಪ್ರಾಯರಾಗಿರುವ ಶೇಷಾಶಾಸ್ತ್ರಿಗಳು ನಗೆ ತೋರಿಸುವುದನ್ನು ತೋರಿಸಿ, ಉಣ್ಣುವುದನ್ನು ಉಣ್ಣಿಸಿ; ಕುಡಿಯುವುದನ್ನು ಉಣಿಸಿ; ಹಾಕುವುದನ್ನು ಹಾಕಿಸಿ ಬಸ್ ನಿಲ್ದಾಣದವರೆಗೆ ಬಂದು ಹತ್ತಬೇಕಾಗಿರುವುದನ್ನು ಹತ್ತಿಸಿ... ಟಾಟಾ ಮಾಡುತ್ತ ಬೀಳ್ಕೊಡಲು ಚಲಿಸುತ್ತಿರುವ ಬಸ್ಸೊಳಗೆ ನಾನು ಎಷ್ಟೊ ಗೆಲುವಿನಿಂದ ಪಯಣಿಸುತ್ತಿದೆನು.
*
*
*
ನನಗೇನು ಅಷ್ಟು ಪರಿಚಿತವಲ್ಲದ ಕೊತ್ತಲಗಿಯಲ್ಲಿ ಇಳಿದಾಗ ಇಳಿ ಹೊತ್ತು ಶುರುವಾಗಿತ್ತು. ಕೆಲವಿ ಹೆಜ್ಜೆ ನಡೆದು ಮೂರು ದಾರಿ ಶುರುವಾದ ವೃತ್ತದಲ್ಲಿ ನಿಂತೊಡನೆ ದುತ್ತನೆ ಕೊಟ್ಟೂರು ಎದೆಯೊಳಗೆ ಬೇತಾಳದಂತೆ ನಿಂತುಕೊಂಡಿತು. ದುಃಖ ಜೋಬದ್ರ ಹೃದಯ ಭಾಗವನ್ನು ಹಿಂಡಿ ಹಿಪ್ಪೆ ಮಾಡಿ ಮಣ್ಣು ಮುಕ್ಕಿದ ಹಾವಿನಂತೆ ಬೆಳೆದಿರುವ ಬಡಾವಣೆಗಳು, ಆ ಬಡಾವಣೆಗಳೊಳಗೆ ಸದಾ ಹಣಕ್ಕಾಗಿ ಹಪಹಪಿಸುತ್ತಿರುವ ರಕ್ತದೊತ್ತಡದ ಶೋಭಾಯಮಾನ ರೋಗಿಗಳು; ಧರ್ಮ ಪತ್ನಿಯ ಸೊಗಸಾದ ಕಂಣುಗಳಿಗೆ ಕಾಣದಂತೆ ತಿಂಡಿತೀರ್ಥ ಕುರುಕುತ್ತ ಮೆಡಿಕಲ್ ಶಾಪುಗಳಿಗೆ ಆಧಾರಸ್ಥಂಭವಾಗಿರುವ ಸಿಹಿಮೂತ್ರ ರೋಗಿಗಳು, ಪಾತಿವ್ರತದ ಮುಂಭಾರ, ಹಿಂಭಾರದಿಂದ ನಲುಗಿ ಹೋಗುತ್ತಲೇ ಕೈತೋಟಗಳ ಮುಂಗಟ್ಟೆಗಳ ಮೇಲೆ ಪರ್ಜನ್ಯ ಜಪ ಮಾಡುತ್ತಿರುವವರಂತೆ ಮಂಕಾಗಿ ಕೂತಿರುವ ತುಂಬು ಮುಖದ ಗೃಹಿಣಿಯರು, ಒಳ ಉಡುಪುಗಳ ಬಗ್ಗೆ ಮುತುವರ್ಜಿ ವಹಿಸುವುದರ ಜೊತೆಗೆ ಕಣ್ಣು ಹುಬ್ಬಿನ ಅನಗತ್ಯ ಕೂದಲನ್ನು ಬುಡಸಹಿತ ಕಿತ್ತೆಸೆಯುವಂತ ಅತ್ಯಾಧುನಿಕ ಚಿಮಟಿಗೆಗಳಿಗಾಗಿ ಫ್ಯಾನ್ಸಿ ಸ್ಟೋರುಗಳಿಗೆ ದಟ್ಟಂಡಿ ದಾರುಂಡಿ ಅಲೆಯುತ್ತಿರುವ ಯುವತಿಯರು, ಕಾಂಡೂಮ್ಸ; ಹೈರ್ಡೈಕವರ್‍ಸೂ; ಹೇರ್‌ರಿಮೂವರ್ ಪಾಕೆಟ್ಸೂ; ಬ್ಲೇಡ್ಸೂ ಇಂಥಪ್ಪ ತರಾವರಿ ನಿರುಪಯುಕ್ತ ವಸ್ತುಗಳಿಂದಲೇ ತುಂಬಿಹೋಗಿರುವ ಮುನಿಸಿಪಾಲಿಟಿ ಕಸದ ಡಬ್ಬಿಗಳು, ಚಳುವಳಿಗಾರರಿಂದ ತಡೆಯಲ್ಪಟ್ಟ ಕ್ಷಣದಿಂದ ನಿಂತು ತುಕ್ಕು ಹಿಡಿದು ಹೋಗಿರುವ ರೈಲುಗಾಡಿ... ಭಾರತ ಕಾನೂನು ಸಂಹಿತೆಯ ಕಲಮುಗಳನ್ನು ನಾಲಿಗೆ ಮೇಲೆ ಬರೆದುಕೊಂಡು ಸವರ್ಣೀಯರ ಮೇಲೆ ಹೂಂಕರಿಸುತ್ತಿರುವ ಅರೆ ವಿದ್ಯಾವಂತ ದಲಿತರು, ಕುರುಕಲು ತಿಂಡಿಗಳನ್ನು ಜನಪ್ರಿಯಗೊಳಿಸುತ್ತಿರುವ ತಳ್ಳೋ ಬಂಡಿಗಳು; ಶ್ವಾನ ಸಂತಾನದ ಬಗ್ಗೆ ಕಾಳಜಿ ವಹಿಸುತ್ತಿರುವ ಕೌನ್ಸಿಲರುಗಳು; ಹಿಂಸೆ ಮತ್ತು ಲೈಂಗಿಕ ಚಟುವಟಿಕೆಗಳಿಂದಾಗಿ ನಾಡಿನುದ್ದಾಕ್ಕೂ ಹೆಸರು ಮಾಡಿರುವ... ಖಡ್ಗದಂಥ ಪತ್ರಿಕೆಗಳು (ಸಮೀಪ ದೃಷ್ಟಿ ದೋಶದಿಂದಲೂ; ಕಲ್ಲರ್ ಅಲರ್ಜಿಯಿಂದಲೂ ಬಳಲುತ್ತಿರುವ ಡಾ.ಕಮಲಾಕರನು ಕಳೆದ ವಾರ ಕಂಟೆಸ್ಸಾ ಖರೀದಿಸಿರುವವನಂತೆ ಕಣ್ರೀ!) ವಿಧ್ಯಾರ್ಥಿಗಳಿಗೆ


೩೧೬

ಹೆದರುತ್ತಿರುವ ಅವಿದ್ಯಾವಂತ ಉಪನ್ಯಾಸಕರು ಕಲಿತಂಥ ಒಂದೊಂದು ಅಕ್ಷರವನ್ನು ಒಂದೊಂದು ಆಯುಧ ಮಾಡಿಕೊಂಡು ಚಿಗುರುಮೀಸೆ ತಿರುವುತ್ತಿರುವ ವಿಧ್ಯಾರ್ಥಿಗಳು, ಗೊನೋರಿಯಾ; ಸಿಫಿಲಿಸ್ಸಿವೇ ಮೊದಲಾದ ರೋಗ ರುಜಿನಗಳು ಮಡುಗಟ್ಟಿರುವ ಮೂತ್ರಾಲಯಗಳು ಲೈಂಗಿಕ ಸಾಹಿತ್ಯದ ತುಂಡುಗಳಿಗೆ ವ್ಯಾಸಪೀಠವಾಗಿರುವ ಸಾರ್ವಜನಿಕ ಕಕ್ಕಸ್ಸುಗಳ ಗೋಡೆಗಳು, ಬೆನ್ನೆಲಬು ನಿಟಾರನೆ ನೀಡಿ ಒಂದು ಘಳಿಗೆ ಬಿಸಿಲಿಗೆ ಬಂದು ಹೋಗುವ ರಾಜಕಾರಣಿಗಳು; ಹೇಷಾರವಗಳಿಗೆ ಪ್ರೇರಣೆ ನೀಡುತ್ತಿರುವ ಸರ್ಕಾರ ಕೃಪಾಪೋಶಿತ ಸಾರಾಯಿ ಅಂಗಡಿಗಳು; ಕ್ವಾಟ್ರು ಬಾಟಲಿಯೊಳಗೆ ಚಟಾಕು ಎಣ್ಣೆ ಸುರಿಯುತ್ತಿರುವ ಮೆತ್ರಿಕ್ ಮಾಪನಗಳು, ದುಕ್ಕ ದುಮ್ಮಾನ,ಕೇಕೆ, ಕ್ಯಾಕರಿಕೆ, ಹಸಿವೆ, ಕಮರು ಡೇಗು, ಹೈಹೀಲ್ಡ್ ನಡಿಗೆ ಇವೇ ಮೊದಲಾದ ಅವಘಡಗಳಿಂದ ತುಂಬಿಹೋಗಿರುವ ಕೊಟ್ಟೂರಿಗೆ ಹೋಗದೆ ಎಷ್ಟೊಂದು ದಿನಗಳಾದುವಲ್ಲ?
ನಾನು ಕನ್ನಡ ಮತ್ತು ಸಂಸ್ಕೃತಿ ಜೊತೆಗೆ ಕ್ರೀಡಾ ಇಲಾಖೆಗಳನ್ನು ಜೊತೆಗೆ ನಿಭಾಯಿಸುತ್ತಿದ್ದಾಗ ಒಮ್ಮೆಯಾದ್ರು ಕಾಣಬಾರದಾಗಿತ್ತೇ ನೀನು... ನೀನು ನನ್ನ ಕಾಣದಿದ್ದುದು, ನನ್ನಿಂದ ನೀನು ಅಕಾಡೆಮಿ ಮೆಂಬರಾಗಲಿಕ್ಕಾದ್ರು ನನ್ನ ಕೇಳಿಕೊಳ್ಳದಿದ್ದುದು ಇವೆಲ್ಲ ನೀನು ನನಗೆ ಮಾಡಿದ ದೊಡ್ಡ ಅವಮಾನಎಂದು ತಿಳಿಯುತ್ತೇನೆ ಎಂದು ರಾಜಾರೋಷವಾಗಿಚಚ್ಚಿದ ಜಲಜಾಕ್ಷಿ ಮುಂದಿನ ತಿಂಗಳಲ್ಲಿ ಸ್ಪೀಕರಾಗಲಿದ್ದಾಳಂತೆ... ಹೆಂಣು ಮತ್ತು ಹೆಂಡದ ನಡುವೆ ಇದ್ದ ಗೆರೆಯನ್ನೇ ಅಳಿಸಿ ಹಾಕಿರುವ ರಾಜಕಾರಣಿಗಳ ಬಳಿಗೆ ಹೋಗಿ ಗೋಗರೆಯುವುದೂ ಒಂದೇ, ಆತ್ಮಹತ್ಯೆ ಮಾಡಿಕೊಳ್ಳುವುದ್ ಒಂದೇ!

ಕೊಟ್ಟೂರಿಗಿಂತ ಯಾವ ರೋಗದಲ್ಲಿ ಕೊತ್ತಲಿಗಿ ಕಡಿಮೆ ಇದೆ... ಸ್ವಭಾವ ಮತ್ತು ಜಾಯಮಾನದ ವಿಷಯದಲ್ಲಿ ಇವೆರಡೂ ಒಂದು ರೀತಿ ಅವಳಿ ಜವಳಿಗಳೇ; ಯಾರನ್ನು ಹೇಗೆ ಮಾತಾಡಿಸಬೇಕೆಂಬ ಪೌರಪ್ರಜ್ಞೆ ಕಳೆದುಕೊಡವನಂತೆ ಅಲ್ಲಿ ಕೂತು ಇಲ್ಲಿ ಎದ್ದು ಇಲ್ಲಿ ಕೂತು ಅಲ್ಲಿ ಎದ್ದು ವಿಲವಿಲನೆ ಒದ್ದಾಡುತ್ತಿದ್ದ ನನ್ನನ್ನು ಅವರಿವರು ಗಮನಿಸಿರಲಿಕ್ಕೂ ಸಾಕು. ಅನೇಕ ದಂತಕಥೆಗಳ ಮೂಲ ಸ್ಥಾವರವಾಗಿದ್ದ ಕತ್ತಲಿಗಿಯ ಸೋಮವಾರಪೇಟೆಕಡೆ ಹೆಜ್ಜೆ ಹೇಗೆ ಹಾಕಬೇಕೆಂಬುದರ ಬಗ್ಗೆ ನಿಂತಲ್ಲೆ ತಾಲೀಮು ಮಾಡತೊಡಗಿದ್ದೆ. ನನ್ನ ಈ ಒದ್ದಾಟವನ್ನು ಬಹಳ ಹೊತ್ತಿನಿಂದ ದೂರದಿಂದಲೇ ಗಮನಿಸುತ್ತಿದ್ದ ಒಬ್ಬ ನೋಡಲಿಕ್ಕೆ ಒಳ್ಳೆ ಜಾನಿವಾಕರನಂತಿದ್ದನು. ಒಂದು ನೋಟಕ್ಕೆ ಜೇಬುಗಳ್ಳನಂತೆಯೂ; ಇನ್ನೊಂದು ನೋಟಕ್ಕೆ ಸವದತ್ತಿ ರಿಟರ್‍ನಂಡ್‌ನಂತೆಯೂ, ಮತ್ತೊಂದು ನೋಟಕ್ಕೆ ತಲೆಹಿಡುಕನಂತೆಯೂ; ಮಗದೊಂದು ನೋಟಕ್ಕೆ ಹವ್ಯಾಸಿ ಸಮಾಜ ಸೇವಾ ಕಾರ್ಯಕರ್ತನಂತೆಯೂ; ಮರುಹುಟ್ಟು ಪಡೆದ ತತ್ವಜ್ಞಾನಿಯಂತೆಯೂ ಹುಡುಕುವ ಕಾಲಿಗೆ ತೊಡರಲಿದೆಯೋ ಎಂಬಂತೆ ಗೋಚರಲಿದೆಯೋ ಎಂಬಂತೆ ಗೋಚರಿಸುತ್ತಿದ್ದ. ಇನ್ನೇನು ಮಾತನಾಡಿಸುತ್ತಾನೆ ಎಂಬಷ್ಟರಮಟ್ಟಿಗೆ ಹತ್ತಿರ ಬಂದು ಮತ್ತೆ ಮೂರು ಮಾರು ದೂರ ಸರಿದುಬಿಡುತ್ತಿದ್ದ. ನಾನೇ ಮಾತಾಡಿಸಬೇಕೆಂದುಕೊಂಡ ಕ್ಷಣದಲ್ಲಿಯೇ ಅವನೇ ಹಿಂದೆಲೆ ಕೆರೆಯುತ್ತ ಹತ್ತಿರ ಬಂದ. ಯಾವೂರು ಅಂತ ಮಾತಾಡಿಸಿದ. ಬೇಕೆಂದೇ ನಾನು " ಮೇಮು ಆಂಧ್ರವಾಳ್ಳು... ಚಾಲ ದೂರಮುನುಂಡಿ ವಚ್ಚಿನಾಮು" ಎಂದು ತೆಲುಗಿನಲ್ಲಿ ಉತ್ತರಿಸಿದೆ. ಬೆಟ್ಟಮಂ ಗುಂಗುರು ಕಾಡಿತ್ತು ಎಂಬ ನಯಸೇನನ ಮಾತಿನಂತೆ ಒಂದೇ ಸಮನೆ ಅವನು ಕಲೆ ಬಿದ್ದ. "ನೇನು ಅಟ್ಲಂಡಿ ಇಟ್ಲಂಡಿ" ಅಂತ ಶುರು ಮಾಡಿದ. ತನಗೆ ಹಿಂದಿ, ಇಂಗ್ಲೀಷು, ತೆಲುಗು, ಕನ್ನಡ ಇವೇ ಮೊದಲಾದ ಷೋಡಷ ಭಾಷೆಗಳು ಗೊತ್ತುಂಟೆಂದು ಹೇಳಿದ. ತನ್ನ ಹೆಸರು


೩೧೭

ರಾಖೇಶನೆಂದೂ; ತನ್ನ ತಂದೆ ಮಾಜಿ ಸಣ್ಣ ನೀರಾವರಿ ಮಂತ್ರಿ ಗುಲಾಮನಬಿ ಎಂದೂ; ತನ್ನ ತಾಯಿ ಹೆಸರು ಬಸವ್ವನೆಂದೂ; ತನ್ನ ಚಿಕ್ಕಪ್ಪನ ಹೆಸರು ವರ್ಡ್ಸ್‌ವರ್ಥನೆಂದೂ; ತನ್ನ ತಂಗಿ ಹೆಸರು ಡಯಾನ ಎಂದೂ, ತಾನು ಎಸ್ಸೆಲ್ಸಿಯನ್ನು ನಾಲ್ಕನೆ ಬಾರಿ ಫೇಲಾದುದಾಗಿಯೂ; ಇಪ್ಪತ್ತೈದು ವರ್ಷ ತುಂಬುತ್ತಲೆ ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ. ಎ. ಮಾಡಿಕೊಂಡಿದ್ದಾಗಿಯೂ, ತನಗೆ ತಾಲ್ಲೂಕಾಫೀಸಿನಲ್ಲಿ ಜವಾನನ ಕೆಲಸ ಸಿಕ್ಕಲಿಲ್ಲಾಂತ ತಾನು ನಿರಾಶನಾಗದೆ ಬಡೇಲಡುಕು ಮಂಡಲ ಪಂಚಾಯ್ತಿ ಎಲೆಕ್ಷನ್ನಿಗೆ ಸ್ಪರ್ಧಿಸಿ ಗೆದ್ದಿರುವುದಾಗಿಯೂ, ಹೊಟ್ಟೆ ತುಂಬಿಸಿಕೊಳ್ಳಲು ನಿಂಂಅಂಥವರನ್ನು ಪರಿಚಯ ಮಾಡಿಕೊಳ್ಳುತ್ತಿರುವುದಾಗಿಯೂ ನಿರರ್ಗಳವಾಗಿ ಹೇಳಿ ಅವನು ರೈಟರ್ಸ್ ಡಾರ್ಲಿಂಗಾದ. ನೋಡು ನೋಡುವಷ್ಟರಲ್ಲಿ ಅವನು ನನಗಿಂತ ಎತ್ತರವಾದ, ಸುಮಾರು ಐವತ್ತಾರು ಕನ್ನಡ ಸಿನಿಮಾಗಳಲ್ಲಿ ಹೆಣದ ಪಾರ್ಟ್ ಮಾಡಿರುವುದಾಗಿಯೂ, ಸಾಹಸಸಿಂಹ, ರೆಬೆಲ್‌ಸ್ಟಾರೂ; ಟೈಗರ್ರೂ; ಇವರೆಲ್ಲರು ತನಗೆ ತುಂಬ ಪರಿಚಯವೆಂದೂ ಹೇಳಿಕೊಂಡು ನನಗೆ ದಿಗಿಲು ಹುಟ್ಟಿಸಿದ. ಪೆಂಡ್ಲಾಮು ಪಿಲ್ಲಲೂ ಅಂತ ಕ್ರಾಸ್ ಕ್ವೆಶ್ಚನ್ನು ಮಾಡಿದ್ದಕ್ಕೆ ಅವನು ತಾನು ಹನ್ನೆರಡು ಸಿನಿಮಾಗಳಲ್ಲಿ ಮದುವೆ ಆಗಿರುವುದಾಗಿಯೂ; ಬಾಲಕೃಷ್ಣರಂಥವರಿಗೆ ಮಗನಾಗಿದ್ದುದಾಗಿಯೂ; ವಾಸುದೇವರಾವ್‌ರವರಿಗೆ ಮೊಮ್ಮಗನಾಗಿದ್ದಾಗಿಯೂ; ಅವನು ಹೇಳಿದ್ದನ್ನು ಕೇಳಿ ನಾನು ಪಾತಾಳಕ್ಕೆ ಇಳಿದುಹೋದೆ. ನನ್ನ ಮುಖದಲ್ಲಾದ ಬದಲಾವಣೆ ಗುರುತಿಸಿ ಜಂಬಲಕಡಿ ಪೊಂಬ ಸಿನಿಮಾದಲ್ಲಿ ಬ್ರಹ್ಮಾನಂದಂ ಜೊತೆ ತಾನು ಹುಚ್ಚನ ಪಾರ್ಟ್ ಮಾಡಿರುವುದಾಗಿ ಹೇಳಿ ಗ್ರಮದ ಸಮಸ್ತ ಸಿಂಗಾರವನ್ನು ಮುಖದ ಇಂಚಿಂಚಿನಲ್ಲು ಪ್ರಕಟಿಸ ತೊಡಗಿದ. ಈ ಮಹಾನ್ ಕಲ್ಲಕಾರನೆದುರು ಏನೂ ಅಲ್ಲವೆನಿಸಿ ತಪ್ಪಿಸಿಕೊಳ್ಳಲೆತ್ನಿಸಿದೆ. ಆದರೆ ಅವನು ಬಿಡಬೇಕಲ್ಲ! ಚೂಡಂಡಿ ದೊರ... ಇಕ್ಕಡಿ ವಚ್ಚಿನಾರಂಟೆ ... ದಾನಿಕೇ ವಚ್ಚುಂತಾರು... ನಾಕು ತೆಲುಸು ಸಾರ್... ಮೀ ಆಂಧ್ರಲೋ ಪೆದ್ದ ಪೆದ್ದ ಮನುಷಲು ನಾಕ ಬಾಗ ತೆಲುಸು... ರಸಿಕುಲಂಟೆ ವಾಳ್ಳು... ದಬ್ಬುನು ನೀಳ್ಳಲಾಗ ಖರ್ಚು ಚೇಸ್ತಾರು... ಮಂಚಿ ಪಿಟ್ಸನು ಗೂಟೀಕಿ ಲಾಖ್ಖುಂಟಾರು... " ಎಂದು ಮೇಸೆಗೆ ಉಘುಳು ಲೇಪಿಸಿ ಹುರಿ ಮಾಡಿದ... ಅದಕ್ಕಲ್ಲಯ್ಯಾ ನಾನು ಬಂದಿರೋದು ಎಂದರು ಅವನು ಬಿಡದೆ... "ಈ ವಯಸ್ಸುಲೋ ಸುಖ ಪಡಾಲಂಡೀ... ನಾಕಂತಾ ತೆಲ್ಸು... ಮೇರೇಮಿ ಸಿಗ್ಗು ಪಡವಲಸಿನ ಅವಸರಮು ಲೇದಂಡಿ... ಮುಖಂ ಚೂಸ್ತೇನೇ... ವೀಳ್ಳು ದೀನಿಕೇ ವಚ್ಚಿನಾರನಿ... ಚೆಪ್ತಾನಂಡಿ ... ಭಯಂ ಉಂಟೆ ಪನಿ ಜರಗದಂಡಿ... ಚೆಪ್ಪಂಡಿ ಮೀಕೆಲಾಂಟ ಮಾಲು ಕಾವಾಲಿ... ವಯಸ್ಸುಎಂತ ಉಂಡಾಲಿ... ಮೆಚುರ್‍ಡುಕಾವಾಲೋ; ನಾನ್‌ಮೆಚುರ್‍ಡು ಗರ್ಲ್ ಕಾವಾಲೋ... ಹೌಸು ವೈಫ್ಸು ಕಾವಾಲೋ... ಪ್ಯೂರ್ ಪ್ರೊಫೆಷನಲಿಷ್ಟು ಕಾವಾಲೋ... ಇಂತೇ ಕಾದನ ನಾ ಲಿಸ್ಟುಲೋ ಸ್ಕೂಲು ಗರ್‍ಲುಸು; ಕಾಲೇಜು ಗರ್‍ಲುಸು... ಅಸ್ಂದ್ರೂ ಉನ್ನಾರಂಡಿ... ಆಶ್ಚರ್ಯಮು ಪಡಕಂದಿ... ಕಡುಪು... ಕಡುಪೂ... ಕಡುಪೂ... ಈ ಕಡುಪೇ ಅನ್ನಿ ಪನ್ಲು ನೇರ್‍ಪಿಸ್ತುಂದಂಡೀ..." ಎಂದು ಆವೇಶದಿಂದ ಮಾತಾಡತೊಡಗಿದ... " ಅದಲ್ಲ... ರಾಕೇಶೂ... ಅಂದರೂ ಬಿಡದೆ ಅವನು ನನ್ನ ಕೈಯಲ್ಲಿ ಬ್ಯಾಗು ಹಿಸಿದುಕೊಂಡು ಬಾಯಿಮುಚ್ಚಿಕೊಂಡು ತನ್ನನ್ನು ಫಾಲೋ ಮಾಡುವಂತೆ ಸಂಜ್ಞೆ ಮಾಡಿದ. ಉಳ್ಳೋಕಿ ಪೋದಾಂ ಪಾರುಲು ಚೂದ್ದಾಂ ಚಲೋ ಚಲೋ ಎಂಬ ದೇವದಾಸು ಚಿತ್ರದಲ್ಲಿ ಅಕ್ಕಿನೇನಿಗಾರು ಹಾಡುವ ಹಾಡನ್ನು ಸಿಳ್ಳೆ ಮೂಲಕ ಹಾಡುತ್ತ ಹೊರಟ ಅವನ ಹಿಂದೆ ನಾನು ಕಳ್ಳಹೆಜ್ಜೆ ಹಾಕತೊಡಗಿದೆ... ಅವರಿವರು ನೋಡಿಯಾರೆಂಬ ಭಯದಿಂದ ಕಾಲುಗಳು ಕಂಪಿಸುತ್ತಿದ್ದವು. ನನ್ನ


೩೧೮

ಆಗಮನ ಬಯಸಿ ಪರಿಚಯಸ್ಥರು ತಲೆ ಮರೆಸಿಕೊಳ್ಳುತ್ತಿರಬಹುದೆಂದುಕೊಂಡೆ. ಸಿಳ್ಳೆ ಹಾಕುತ್ತಿದ್ದ ಅವನು ಆಗಾಗ್ಗೆ ಇಂಗ್ಲೀಶು, ಹಿಂದಿ, ತಮಿಳು ಭಾಶೆಗಳಲ್ಲಿ ಮಾತಾಡುತ್ತ ತಾನು ಸರ್ವ ಭಾಷಾ ಪಾರಂಗತ ಎಂಬುದನ್ನು ಸಾದರಪಡಿಸುತ್ತಿದ್ದ. ಮೊಟ್ಟ ಮೊದಲು ಹೆತ್ತವರ ಪಹರೆಯೊಳಗೆ ಶಾಲೆಗೆ ಹೊರಟಿರುವಂತಿರುವ ನಾನೂ, ಎಳಕೊಂಡೊಯ್ದು ಒಳಗೆ ಹಾಕ್ತೀನಿ... ಅದ್ಯಾವ ಮೇಡಂನಿಂದ ಅದೇನು ಕಲಿಯುತ್ತೀಯೋ ಕಲಿ ಎಂಬ ಹಠಮುದ್ರೆಯನ್ನು ತನ್ನ ಚಪ್ಪಟೆ ಮುಖದಲ್ಲಿ ಧರಿಸಿ ವಿಚಿತ್ರ ಲಹರಿಯಲ್ಲಿ ಹೆಜ್ಜೆ ಹಾಕುತ್ತಿರುವ ಅವನೂ; ತನ್ನ ಕೈಯಲ್ಲಿ ನನ್ನ ಬ್ಯಾಗಿದ್ದುದರಿಂದ ತಪ್ಪಿಸಿಕೊಳ್ಳಲಾರನೆಂಬ ಆತ್ಮವಿಶ್ವಾಸವನ್ನು ಪ್ರತಿಹೆಜ್ಜೆ ಮೂಲಕ ಪ್ರಕಟಿಸುತ್ತಿದ್ದ.

ಫತೆಪುರ್ ಸಿಕ್ರಿಯಲ್ಲಿ ಸಿಗುವ ಬುಲಂದ ದರವಾಜ ಸಿಗುತ್ತದಲ್ಲ ಅಂಥದೊಂದು ದರವಾಜ ಎದುರಾಯಿತು. ಎರಡು ಕಲ್ಲುಕಂಬಗಳ ಆ ದರವಾಜದ ನೆತ್ತಿಮೇಲೆ ತೆಂಗಿನಕಾಯಿಯೊಂದನ್ನು ಇಡಿಯಾಗಿ ಮಂತ್ರಿಸಿ ಅದರೊಳಗೊಂದು ಗೂಟ ಬಡಿದು ಕಟ್ಟಿದ್ದರು. ಘನ ಸರಕಾರದವರು ಒಂದು ಕಡೆ ಕಟ್ಟಿದ್ದ ಸೂಚನಾ ಫಲಕದಲ್ಲಿ ಸೂಳೆಗಾರಿಕೆ ಮಾಡುವುದು ಅದನ್ನು ಪ್ರೊತ್ಸಾಹಿಸುವುದು, ಭಾಗಿಯಾಗುವುದು ಭಾರತೀಯ ದಂಡ ಸಂಹಿತೆಯ ಇಷ್ಟನೆ ಕಲಮು ಪ್ರಕಾರ ಅಪರಾಧವೆಂದೂ; ಇಂತಿಂಥ ಅಪರಾಧಕ್ಕೆ ಇಷ್ಟಿಷ್ಟು ಶಿಕ್ಷೆ ವಿಧಿಸಲಾಗುವುದೆಂದೂ ವಿವರವಾಗಿ ಬರೆಯಲಾಗಿತ್ತು. ಇನ್ನೊಂದು ಕಡೆ ಅನೈತಿಕ ಲೈಂಗಿಕ ಸಂಪರ್ಕಗಳಿಂದ ಬರಬಹುದಾದ ಗುಹ್ಯರೋಗಗಳ ಮತ್ತು ಮರಣಾಂತಿಕ ರೋಗವಾದ ಏಯ್ಡ್ಸ್ ಬಗ್ಗೆ ಸುಧೀರ್ಘ ವಿವರವಿದ್ದ ಫಲಕವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದವರು ಸ್ಥಾಪಿಸಿದ್ದರು. ಮತ್ತೊಂದು ಕಡೆ ಕಾಂಡೂಂಮ್ಸ್ ತಯಾರಿಕಾ ಕಂಪೆನಿಯವರು ಸುರಕ್ಷಿತ ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಕಂಪನಿ ತಯಾರಿಸುವ ಕೋಹಿನೂರ್ ನಿರೋಧಕ ಚೀಲಗಳನ್ನೇ ಉಪಯೋಗಿಸಿರಿ ಎಂದು ಬರೆದು ಕಟ್ಟಿದ್ದರು. ಆದರೆ ಸೋಮವಾರ ಪೇಟೆಯ ಅಭಿಮಾನಿಗಳು ಅವಕ್ಕೆಲ್ಲ ಸೆಗಣಿ ಎಸೆದು ವಿರೂಪಗೊಳಿಸಿದ್ದರು. ಅದನ್ನು ಓದಲು ಪ್ರಯತ್ನಿಸಿದ ನನ್ನನ್ನು ಆ ರಾಖೇಶಕುಮಾರನು "ಅವ್ನೆಲ್ಲಾ ಯಾಕೆ ಓದ್ತೀರಿ ಬರ್ರಿ ಸಾರ್...ಎಂದೋ ಒಂದಿನ ಎಲ್ರೂ ಸಾಯ್ಲೇಬೇಕಲ್ಲ... ಮನುಷ್ಯ ಜೀವನ ಎಂಬುದುನೀರ ಮೇಲನ ಗುಳ್ಳೆ ಇದ್ದಂತೆ ಸಾರ್... ಅದು ಟಪ್ಪೆಂದು ಒಡೆಯೋಕು ಮೊದಲೇ ಎಲ್ಲಾ ನಮೂನೆಯ ಸುಖ ಅನುಭವಿಸಬೇಕು..." ಎಂದು ಗುಂಟೂರು ಕಡೆಯ ತೆಲುಗಿನಲ್ಲಿ ಹೇಳಿದ. ಒಂದು ನಾಲ್ಕು ಹೆಜ್ಜೆ ಮುಂದೆ ಹೋಗಲು ಅಲ್ಲಿ ವಾರ್ತಾ ಇಲಖೆಯವರು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಲೈಂಗಿಕ ರೋಗಗಳ ಬಗ್ಗೆ ಒಂದು ಕಿರುಚಿತ್ರವನ್ನು ಪ್ರಸಾರ ಮಾಡಲು ಪ್ರೊಜೆಕ್ಟರು, ಸ್ಕ್ರೀನು ಎಲ್ಲವನ್ನು ಹೊಂದಿಸ ತೊಡಗಿದ್ದರು. ಇನ್ನೊಂದು ನಾಲ್ಕು ಹೆಜ್ಜೆ ಮುಂದೆ ಹೋಗಲು ಕೆಲವು ಗಂಡಸರೂ ಹೆಂಗಸರೂ ಸಾಮೂಹಿಕವಾಗಿ ಕೋಲಾಟದ ಪದ ಹಾಡುತ್ತ ಕುಣಿಯುತ್ತ ಲಯಬದ್ಧವಾಗಿ ಹೆಜ್ಜೆಹಾಕುತ್ತಿದ್ದರು.
ಇನ್ನು ಸ್ವಲ್ಪ ಮುಂದೆ ಹೋಗಲು ಹಂಚಿನ ಮನೆ ಮುಂದೆ ಕೆಲವು ಹೆಂಗಸರು ಕೂತು-
ಬಲ್ಲಿದವರ್‍ನೆಲ್ಲ್ ಹಿಡ್ದು ಬೆನ್ನಾಗ ಸೀಳಿ ಬಾಯ್ತುಂಬ ಕೀಲಾಽಽ ಜಡ್ಡೂ
ಸೊಲ್ಲು ಸೊಲ್ಲಿಗೊಮ್ಮೆ ಉಧೋ ಉಧೋ ಎಂದೂಽಽ
ಒಳ್ಳೇದಲ್ಲವ್ವಾ ನಿನ್ನ ಬಿರುದು ಎಲ್ಲಿ ಕಾಣಲ್ಲಿ ಕಾಣೆನೇ
ಎಲ್ಲಮ್ಮ್ನಂಥಾಕಿನೆಲ್ಲಿ ಕಾಣೆನೇ
ಎಂದು ಮುಂತಾಗಿ ಪಡಲಗಿ ಸುತ್ತ ಕೂತು ಇಂಪಾಗಿ ಹಾಡುತ್ತಿದ್ದರು. ಅವರೆಲ್ಲರ ಹಣೆಯಲ್ಲಿ



೩೧೯

ರೂಪಾಯಿಯಗಲದ ಕುಂಕುಮ ಬೊಟ್ಟು ಕೊರಳಲ್ಲಿ ಕಾಸಿನ ಸರ ಥಳಥಳ ಹೋಲೆಯುತ್ತಿದ್ದವು. ಭೂಮಿಯೇ ಗದಗುಟ್ಟಿ ನಡುಗುತ್ತಿರುವ ರೀತಿಯಲ್ಲಿ ಕುಡುಕನೊಬ್ಬ ತೂರಾಡುತ್ತ ಬಂದ. ಕೈಯಲ್ಲಿ ಮುತ್ತಿನ ಸರವನ್ನು ತೋರಿಸಿ ಥೈತಕ್ ಥೈತಕ್ | ತಂದಾನ ತಾನೇ ತನ್ನನ್ನ ಥೈಯೋ ತಂನೋ ತಂದಾನೆ ತಾನೇ ತನ್ನ ಎಂದು ಮುಂತಾಗಿ ರಾಗವಾಗಿ ಹಾಡುತ್ತ ಕುಣಿಯತೊಡಗಿದ. ಹಂಗೆ ಹೋದರೆ ಹಂಗೆ ಬಿಡವಲ್ಲ. ಹಿಂಗೆ ಹೋದರೆ ಹಿಂಗೆ ಬಿಡುವಲ್ಲ! ನಮಗಿದು ಫಜೀತಿಗಿಟ್ಟುಕೊಂಡಿತು. ಅದರಿಂದ ರಾಖೇಷ ಕುಮಾರಗೆ ರವುಷ ಹುಟ್ಟಿ "ದಿಸ್ ಈಜ್ ಏ ಗ್ರೇಟು ಪರ್ಸನ್ನೂ... ಯು ಡೋಂಟು ನೋ... ಹಿ ಈಜ್ ಕಮಿಂಗ್ ಪ್ರಮ್ಮು ಆಂಧ್ರಪ್ರದೇಶ್... ದಿ ಗ್ರೇಟು ಆಂಧ್ರಪ್ರದೇಶ್... ಡುಯು ಅಂಡರ್‌ಸ್ಟಾಂಡೂ... ಸಡಕ್ ಛೋಡೊ" ಎಂದು ದಬಾಯಿಸತೊಡಗಿದ. ಅದರಿಂದ ಕುಡುಕ ಮಹಾಶಯನಿಗೆ ಸಿಟ್ಟು ಬಂದು "ಎಲಾ ರಾಕ್ಯಾ... ಬಾಸ್ಟರ್ಡು ರಾಕ್ಯಾ ನನ್ಮಗ್ನೇ ಈ ಸಡಕೇನು ನಿನ್ನ ಗ್ರಾಂಡು ಪಾದರದೇನ್ಲೇ ಬಾಡ್ಕಾವ್... ನಾನು ಕಂಟರಾಕ್ಟು ಮಾಡಿ ಹಾಕಿಸಿದ್ದಲೇ ಇದು. ಹಗರಿ ಬ್ರಿಡ್ಜಿಂದು, ರೋಡಿಂದು ಬಿಲ್ಡಿಂಗಿದೆಲ್ಲ... ಸೋಮಾರಪೇಟೆಗೆ ಸುರಿದಿರೋ ಮನುಷ್ಯ ನಾನು... ನಂದು ನಾನು ತೊಗೊಂಡೋದ್ರೆ ಈ ಸೂಳೇರ್‍ಗೆ ನಿನ್ನಂಥ ತಲೆ ಹಿಡಿಕ್ರೀಗೆ ಬುದ್ಧಿ ಬರೋದು... ಆ ಲಚ್ಚುಮಿ ಐವತ್ತು ಕೊಟ್ರೆ ಒಳಾಗ ಬಿಟ್ಕೊಂತೀನಿ ಅಂದ್ಲಲ್ಲವೇ... ನನ್ನ ಪ್ರೆಸ್ಟೀಜು ಏನುಳೀತಲೇ." ಎಂದು ನನ್ನ ಕಡಿಗೆ ತಿರುಗಿ, ಏನಯ್ಯಾನೀನು ಎಜುಕೇಟಡ್ನಂಗೆ ಕಾಣ್ತಿ..." ಎಂದು ಏನೇನೋ ಹೇಳಲಿದ್ದ. ಅಷ್ಟರಲ್ಲಿ ರಾಕ್ಯಾ ಅವನನ್ನು ಪಕ್ಕಾಕ್ಕೆ ತಳ್ಳಿ ನನ್ನ ಕೈಹಿಡಿದು ಎಳೆದುಕೊಂಡೊಯ್ದನು.

ಇಂಥ ಕಂಟಕಗಳನ್ನು ಲೀಲಾಜಾಲವಾಗಿ ದಾಟಿ ಪೇಟೆಯ ಹೃದಯಭಾಗ ತಲುಪಿದೆವು. ಬೇವಿನಕಟ್ಟೆ ಬಳಿ ನನ್ನನ್ನು ಬಿಟ್ಟುಯ್ ಒಂದೆರಡು ಮಂದಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಪರಿಚಯಿಸಿದ. ಅವರಲ್ಲಿ ಒಬ್ಬಳು ವ್ಯೋನಣ್ಣಾ... ಐನೂರದಾವ? ಅಂತ ರೇಟು ಪ್ರಸ್ತಾಪಿಸಿದಳು. ಇನ್ನೊಬ್ಬಳು "ಅಯ್ ಒಮ್ಗೆ ನೂರಂದ್ರೆ ಯದಿ ಹೊಡ್ಕೊಂಡು ಸಾಯ್ತಾನೀ ಯಣ್ಣ... ಕೆಲಸ ನೋಡಿ ಸಂತೋಷ ಪಟ್ರೆ ಐನೂರ್ಯಾಕೆ ಸಾವ್ರ ಕೊಟ್ಟಾನು ಬಿಡು" ಎಂದು ನನ್ನ ಕೈ ಹಿಡಿದುಕೊಂಡಳು. ಬಾ ಮಯ್ಯಿಗೆರಕಂಡು ದಮ್ಮು ಆರಿಸ್ಗೆವಂತಣ್ಣ ಬಾ... ಎಂದು ಎಲೆದಳು... ನಾನು ಒಂಚಣ ಗಲಿಬಿಲಿಗೊಂಡು... ನಾನಿಲ್ಲಿಗೆ ಬಂದಿರೋದು ಅನಸೂಯಮ್ಮನ್ನ ಕಾಣೋಕೆ" ಎಂದೆ. ಅದನ್ನು ಕೇಳಿ ಅವರು ಕಿಲಕಿಲ ನಕ್ಕರು... ಓಸೇಯ್ ಲಚುಮಕ್ಕ... ಓ ಸೇಯ್ ಸುಚೇಲಿ... ಓ ಸೇಯ್ ರಂಗುಲಮ್ಮೀ ಎಂದು ಕೂಗಿದರು. ಕಾಗೆಯೊಂದಗುಳಕಂಡರೆ ಕರೆಯದೇ ತನ್ನ ಬಳಗವನು... ಅಷ್ಟರಲ್ಲಿ ಮೂಲೆಮೂರು ಕಟ್ಟುಗ್ಳಿಂದ ಹತ್ತಾರು ಮಂದಿ ಹೆಂಣು ಮಕ್ಕಳು ಓಡೋಡಿ ಬಂದು ನನ್ನನ್ನು ನಖಶಿಖಾಂತ ನೋಡತೊಡಗಿದರು.ಆಯ್ ಈ ಯಣ್ಗೆ ಅನಸೂವಿ ಬೇಕಂತ್ರಲೇ ಎಂದವಳನ್ನುತ್ತಲೇ ಉಳಿದವರು ಫಕಫಕ ನಗ್=ಆಡಿದರು... ನನಾರಿಂಚಿದ್ದೋನು ಒಂದಂಗುಲವಾಗಿ ಬಿಟ್ಟೆ... ಆ ಅನಸೂವಿತಾನೈತಂತ ಹೋಗ್ಯಾನೀವಣ್ಣಾಂತ... ಯಾರೋ ನಮ್ಮಜ್ಜಿ ಮಿಂದನೇ; ಹೋಗಿ ಹೋಗಿ ಇಂಥೆಣ್ಣನ್ನ ಕರಕೊಂಡು ಬಂದಿಯಲ್ಲೋ ನಿನ್ ಮೂಗೀಗೆ ಕವಡಿ ಕಟ್ಲೀ... ಈಟೆತ್ರ ಬೆಳಕೊಂಡಿದ್ರೂ ಕಸುಬು ಗೊತ್ತಿಲ್ವಲ್ಲಾ ಈ ಯಣ್ಗೆ..." ಎಂದಳು ಒಬ್ಬಳು ರಾಕೇಶನ ಸೋಟಿಗೆ ತಿವಿದು ದುಡುದುಡನೆ ಹೋದಳು... ಆದರ ಮಯ್ಯಾಗೇನೈತಂತ ಹೋತಾನೀಯಣ್ಣಾಂತ... ಸ್ವರ್ಗ ತುಂಬ್ಕಂಡಿರೋ ನಮ್ಮ್ ಗುಡುಸ್ಲು ಬಿಟ್ಟು ಹರ್ವಾಣದ ಚಿದಾನಂದಾವದೂತ್ರು ತುಂಕೊಂಡಿರೋ ಆ ಮನೇಲ\ಏನೈತಂತ ಹೋತಾನೀಯಣ್ಣಾಂತ... ಕರಕೊಂಡೊಗಿ ತರುಬು... ಅದೇನಿಡ್ಕಂತಾನೋ


೩೨೦

ಹಿಂಡ್ಕಳ್ಳಿ" ಎಂದು ಮತ್ತೊಬ್ಬಳು ರಾಕೇಷನ ಸೋಟಿಗೆ ತಿವಿದು ಹೋದಳು. ಇನ್ನೊಬ್ಬಳು ಕಸುಬು ಕಲಿಯೋಕೆ ಅಂಥೋರೆ ವಾಸಿ ಬಿಡಪ್ಪ... ಈ ಮುಂಡೇವ್ಕೇನು ತಿಲಿತೈತಿ... ಅಗಾ ರಾಕ್ಯಾ ಕರ್ಕೊಂಡೋಗು... ಆಟುಕೊಡು ಈಟುಕೊಡೂಂತ ಜೀವ ತಿಂಬಬೇಡ... ಅದುರ್ಕೊಂಡು ಬರದಂಗಾದಾನು..." ಎಂದು ಬುದ್ಧಿ ಹೇಳಿ ಹೋದಳು.

ಅವರಿಂದ ನಿರ್ಮನುಷಗೊಂಡ ನಾನು ಜೇಬಿನಿಂದ ಐವತ್ತು ರೂಪಾಯಿ ನೋಟು ತೆಗೆದು ರಾಕೇಶನ ಮುಂಜೇಬಿಗೆ ತುರುಕಿ ಬಂದಿರೋ ಉದ್ದೇಶವನ್ನು ಪಿಸುಗುಟ್ಟಿದೆ. ಅವನು ನೋಟು ಮರಳಿಸುತ್ತ "ನಮ್ಮ ಶಾಮಂಣನ ಕಡೆಯೋರೇನ್ರಿ ನೀವು... ಅಂಥ ದೊಡ್ ಮನುಶ್ಯೋರು ಈ ಪ್ರಪಂಚದಾಗೆಲ್ಲ ಹುಡುಕಿದ್ರೂ ಸಿಗಾಣಿಲ್ಲ ಬಿಡ್ರಿ... ಅವ್ರು ಸತ್ತಿಲ್ರೀ... ಬದ್ಕೇ ಅದಾರ... ಅವಾತುಮ ಇಲ್ಲೆಲ್ಲಾರ ಇರ್‍ತತಿ ನೋಡ್ರಿ... ತಗಳ್ರಿ... ಇದ್ನ ಇಸ್ಕೊಂಡು ನಾನ್ಯಾವ ಪಾಪಕ್ಕೆ ಹೋಗ್ಲಿ..." ಎಂದನು ನಾನು ಬಲವಂತದಿಂದ ಕೊಟ್ಟೆ... "ಆಗಿದ್ದು ಆಗಿ ಹೋಯ್ತಪ್ಪಾ... ಕತ್ತಲಾಗ್ತದೆ... ಕೂಡ್ಲೆ ಅನಸೂಯಮ್ಮನವರ್‍ನ ಬೆಟ್ಟಿ ಮಾಡಿಸಪ್ಪ" ಎಂದು ಅವನ ಮುಂಗೈ ಅದುಮಿದೆ. ಅವನು ನಿಟ್ಟುಸಿರು ಬಿಟ್ಟು "ಅನಸೂಯಕ್ಕ ಇತ್ತೀಚ್ಗೆ ಒಂದ್ನಮೂನಿ ಆಗ್ಯಾಳ್ರೀ... ಗುಬ್ಬಚ್ಚಿಯಂಗ ಮನ್ಯಾಗ ಮುದಡ್ಕಂಡು ಅದ್ಯಾತ್ಮದ ಬಗ್ಗೆ ಚಿಂತನೆಅ ಮಂತನ ಮಾಡತಿರ್‍ತಾಳ್ರೀ ಸಾಹೇಬ್ರ... ಹರಿವಾಣಕೋಗಿ ತಾತನ ಬೋದಾ ತಗಂತೀನಂತಾಳ ನೋಡ್ರಿ... ನೀವಾರ ಬುದ್ಧಿ ಹೇಳ್ರಿ... ಬದುಕೀಗಟ್ರೀ... ಪುಣ್ಯ ಬರ್‍ತತಿ... ಕಂಪಣಿ ನಾಟಕ ಬ್ಯಾಡ ಬಿಡ್ರಿ... ಹಳ್ಳಿ ಮ್ಯಾಲ ಕರದ್ರೆ ಬಯ್ಲಾಟಕಾದ್ರು ಹೋಗೋದು ಬ್ಯಾಡೇನ್ರಿ... ನೀವಾರ ಬುದ್ಧಿ ಹೇಳ್ರಿ" ಎಂದು ನನ್ನ ಕೈ ಹಿಚುಕಿ ಕಂಣ್ಲ್ಲಿ ನೀರು ತಂದುಕೊಂದ.

"ನಿಲ್ಲೋ ನಿಲ್ಲೊ ನೀ ಮಗ್ನೆ... ಹೋಗುವುದುಚಿತಲ್ಲೋ ಮಗನೆ" ಎಂದೊಬ್ಬಳು ಹಾರ್ಮೋನಿಯಂ ಲಯಕ್ಕನುಗುಣವಾಗಿ ಏರು ದನಿಯಲ್ಲಿ ಹಾಡುತ್ತಿದ್ದುದು ಇಂಪಾಗಿ ಕೇಳಿಸುತ್ತಿತ್ತು. ರಕ್ತ ರಾತ್ರಿ ನಾಟಕದಲ್ಲಿ ಭಾನುಮತಿ ಪಾತ್ರ ವಹಿಸುವ ಕುರುವಳ್ಳಿ ಕಮಲ, ದ್ರೌಪದಿ ವಸ್ತ್ರಾಪಹರಣ ಬಯಲಾಟದಲ್ಲಿ ಪಾಂಚಾಲಿ ಪಾತ್ರ ವಹಿಸುವ ಪದುಮ, ಕುರುಕ್ಷೇತ್ರ ನಾಟಕದಲ್ಲಿ ಉತ್ತರ ಪಾತ್ರ ವಹಿಸುವ ಊರಮ್ಮ, ಯಾವುದೇ ಸಾಮಾಜಿಕ ನಾಟಕಗಳಲ್ಲಿನ ಯಾವುದೇ ಸ್ತ್ರೀ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಹುಣಸೇ ಮರದ ಮೀನಾಕ್ಷಿ... ಇಂಥ ನುರಾರು ಮಂದಿ ಕಲ್ಲವಿದರಿಂದಲೇ ತುಂಬಿ ಹೋಗಿರುವ ಕೊತ್ತಲಗಿಯ ಸೋಮವಾರಪೇಟೆಗೆ ಮಹಿಳಾ ಸಂಕ್ಷೇಮಾಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಭುವನೇಶ್ವರಿ ಅಮ್ಮಣ್ಣಿಯವರು (ಈಗೆರಡು ವರ್ಷಗಳ ಹಿಂದೆ ಡೆಪ್ಯುಟಿ ಛೀಫ್ ಮಿನಿಷ್ಟರಾಗಿದ್ದ ಸಾಸಿವೆ ಶಿವನಂಜೇಗೌಡರು "ಅಮ್ಮಣ್ಣಿಯವರು" ಎಂಬ ವಿಶೇಷಣ ಸೇರಿಸಿ ಶಾಸನಸಭೆಯ ಗೌರವಕ್ಕೆ ಪಾತ್ರರಾಗಿದ್ದರು. ಅವರು ಸಿರೆಗೆರೆ ಸಂಸ್ಠಾನದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ....) ಕೊತ್ತಲಿಗಿಯ ಸೋಮವಾರಪೇಟೆಗೆ ಆತ್ಮಗೌರವ ನೀಡಬಹುದಿತ್ತು. ಆದರೆ ಆಕೆ ಬೆಂಗಳೂರಿನ ಪ್ರತಿಷ್ಟಿತ ದಾಲರ್ಸ್ ಕಾಲನಿಯಲ್ಲಿ ಪ್ರಖ್ಯಾತ ಮಾಜಿ ಹತ್ತು ಹಾಲಿಗಳ ನಡುವೆ ಉಭಯ ಕುಶ್ಲೋಪರಿ ಜೀವನ ಆರಂಭಿಸಿ ಭೂತಕಾಲವನ್ನು ಕಪಾಟಿನಲ್ಲಿ ಭದ್ರಗೊಳಿಸಿರುವಳು...

ಅಭಿಷೇಕ್ ಗೋಡ್ಸೆಗೆ (ಸಾರಿಗೆ ಸಚಿವರಾದ ಗೋಪಾಲ ಭಂಡಾರಿಯವರ ಮೂರನೆ ಮಗಳು ಅಮೃತಮತಿಯ ಗಂಡ. ಮದುವೆಗೆ ಆಮಂತ್ರಣ ಪತ್ರಿಕೆ ಅಚ್ಚು ಹಾಕುವಾಗ ಗೋದ್ಲಿ ಎಂಬ ಶಬ್ದಕ್ಕೆ ಬದಲಾಗಿ ‘ಗೋಡ್ಸೆ’ ಎಂದು ಪರಪಾಟಿನಿಂದಾಗಿ ಅಚ್ಚಾಯಿತಂತೆ. ತನ್ನ ನಿಗಮದಿಂದ ಎಲ್ಲ ನೆರವು


೩೨೧

ನೀಡಿ‘ಕೊತ್ತಲಗಿಯ ಸೋಮವಾರಪೇಟೆ’ ಎಂಬ ವಿಷಯದ ಬಗ್ಗೆ ದಾಕ್ತರೇಟ್ ಮಾಡಿಸಿದ ಭುವನೆಶ್ವರಿ ಅಮ್ಮಣ್ಣಿಯವರ ಸಂಶೋದನ ಹಸ್ತಾಕ್ಷರ ಸಹಿತ ಅಚ್ಚು ಹಾಹಿಸಿರುವರು. ಅದರ ಬೆಲೆಯನ್ನು ಸಾವಿರದೊಂದು ನೂರಾ ಇಪ್ಪತ್ತೇಳು ರೂಪೈ ತೊಂಬತ್ತೈದು ಪೈಸೆ ಎಂದು ಬಾಟಾ ರೇಟು ಇಟ್ಟಿರುವುದರಿಂದ ಸಣ್ಣ ಸಂಬಳದ್ಸವನಾದ ನಾನು ಗೆಳೆಯೋರ್ವರಿಂದ ಪಡೆದು ಭದ್ರಪಡಿಸಿಟ್ಟುಕೊಂಡಿರುವೆನು. ವಿಸರ್ಜನಾ ಕಾರ್ಯಕ್ಕೂ ಪೂರ್ವದಲ್ಲಿ ಅದರ ಪುಟಗಳನ್ನು ತಿರುವಿ ವಿರೇಚಕ ಶಕ್ತಿ ಪಡೆದಿರುವ ನಾನು ಸದರೀ ಗ್ರಮದ ಸೋಮವಾರಪೇಟೆಗೆ ಬರುವ ಪ್ರಯತ್ನ ಮಾಡಿರುವುದುಂಟು. ಮಧ್ಯಮವರ್ಗದ ಸಂಕೋಚದಿಂದ ಬರಲಾಗಿಲ್ಲದಿರುವುದೂ ಉಂಟು. ಹೋದಂತೆ ಬಂದಂತೆ ಕಣಸು ಕಂಡಿರುವುದನ್ನು ಅಲ್ಲಗಳೆಯಲಾಗದು.

ಆ ಮಹಾಪ್ರಬಂಧದ ಉಕ್ತಿಗಳ ಪ್ರಕಾರ ವಿಜಯನಗರ ಶ್ರೀಕೃಷ್ಣ ದೇವರಾಯ ಮಹಾರಸಿಕನಾಗಿದ್ದ. ದೇವದಾಸಿ ಕುಟುಂಬದಲ್ಲಿ ಜನಿಸಿದ್ದ ಚಿನ್ನಾಸಾನಿಯನ್ನು ಉತ್ಕಟವಾಗಿ ಪ್ರಿತಿಸುತ್ತಿದ್ದ. ಮದುವೆಯಾಗಿ ಪಟ್ಟಮಹಿಷಿಯನ್ನಾಗಿ ಮಾಡಿಕೊಳ್ಳಬೇಕೆಂದು ಅವನು ಪ್ರಯ್ತ್ನಿಸಿದ. ಆದರೆ ಅಪ್ಪಾಜಿ ತಿಮ್ಮರಸು (ಕಂಣು ಕೀಳಿಸಿಕೊಂಡ ನಂತರ ತಿರುಪತಿ ಸೇರಿ ವೆಂಕಟೇಶ್ವರ ಸ್ವಾಮಿಯ ಪ್ರಸಾದವಾದ ಲಡ್ಡುಬ್ ಮಾರುತ್ತ ಹ್ಟ್ಟೆ ಹೊರೆದು ಬದುಕಿ ನಿರ್ಗತಿಕ ರೀತಿಯಲ್ಲಿ ಸತ್ತವನು. ಈ ಘೋರ ಶಿಕ್ಷೆ ವಿಧಿಸಿದ ಶ್ರೀಕೃಷ್ಣರಾಯನ ಅನಧಿಕೃತ ತಂದೆ ಎಂದು ನರಸನಾಯಕ ಕುಡುಕನಾಗಿದ್ದ ಎಂದು ವಾದಿಸುವ ಸಂಶೋಧಕರು ತಂತಮ್ಮ ಕ್ರುತಿಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ) ಮೈಸೂರು ಸೀಮೆ ಕಡೆಯ ಹೆಣ್ಣು ಹುಡುಕಿ ಮದುವೆ ಮಾಡಿದ. ಚಿನ್ನಾಸಾನಿ ದ್ವಿತೀಯಪತ್ನಿಯಾಗಿ ಸೇರ್ಪಡೆಯಾದಳು. ತನ್ನ ರಾಜಧಾನಿಯಲ್ಲಿ ಸೂಳೆಬಜಾರ ಎಂಬ ಬಡಾವಣೆ ನಿರ್ಮಿಸಿ ವೇಶ್ಯಾವಟಿಕೆಯನ್ನು ಪೋಷಿಸಿದ ನಂತರ ಬಂದ ಅಚ್ಯುತ ರಾಮರಾಯ ಕೂಡ ರಕ್ಕಸಗಿ ಮತ್ತು ತಂಗಡಗಿ ನಡುವಿನ ಹತ್ತು ಮೈಲಿ ವಿಸ್ತೀರ್ಣ ಪ್ರದೇಶದಲ್ಲಿ ಬಹುಮನಿಗಳ ಕೈಯಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು. ಆ ಸುದ್ದಿ ಕೇಳಿ ವೈಷ್ಣವರು ಗುಡಿ ಗುಂಡಾರಗಲಿಂದ ದೇವರುಗಳನ್ನು ಕಿತ್ತುಕೊಂಡು ನಾಡಿನಾದ್ಯಂತ ಚದುರಿದ ರೀತಿಯಲ್ಲಿಯೇ ಸೂಳೆಬಜಾರದಿಂದ ವೇಶ್ಯೆಯರು ಗುಂಪು ಗುಂಪಾಗಿ ಹೊರಟು ಕೊತ್ತಲಗಿಯನ್ನು ಸೋಮವಾರ ಸೇರಿಕೊಂದು ನೆಲೆಯೂರಿದರಾದ್ದರಿಂದ ಅದಕ್ಕೆ ಸೋಮವಾರಪೇಟೆ ಎಂದು ಹೆಸರು ಪ್ರಾಪ್ತವಾಯಿತು. ಕಲೆ; ಸಂಸ್ಕೃತಿ; ರಸಿಕತೆ; ಹುಣಸೆಮರಗಳ ಲಾಲನೆ ಪೋಷಣೆ ಇತ್ಯಾದಿ ವಿವರಗಳನ್ನು ಡಾ. ಅಭಿಷೇಕ್ ಗೋಡ್ಲೆಯವರು ಐತಿಹಾಸಿಕವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೆಲ್ಲ ಸಂಶೊದನೆ ಮಾಡಿ ಹೆಸರುವಾಸಿಯಾಗಿರುವ ಅವರು ರಾಜ್ಯಪಾಲರಿಂದ ಡಾಕ್ತರೇಟ್ ಪದವಿ ಸ್ವೀಕರಿಸುವಾಗ ಅವರು ಸಿಫಿಲಿಸ್‌ನಿಂದ ನರಳುತ್ತಿದ್ದರು. ಈಗಲೂ ನರಳುತ್ತಿರುವ ಅವರನ್ನು ಇಲಾಜಿಗೆಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಜಧಾನಿಯಾದ ವಾಷಿಂಗ್‌ಟನ್‌ಗೆ ಸರಕಾರದ ವೆಚ್ಚದಲ್ಲಿ ಕಳಿಸುವ ಸಚಿವ ಭಂಡಾರಿಯವರ ಯೋಜನೆಗೆ ಮಖ್ಯಮಂತ್ರಿಗಳಿಂದ ಅಂಗೀಕಾರ ಮುದ್ರೆ ಬಿದ್ದಿದೆ. ವೇಶ್ಯಾವಾಟಿಕೆ ನಿರ್ಮೂಲನಾ ವಿಷಯದಲ್ಲಿ ಅಮೇರಿಕಾ ವಹಿಸುತ್ತಿರುವ ಪಾತ್ರ ಕುರಿತಂತೆ ಅಧ್ಯಯನ ಮಾಡಲು ಡಾ.ಗೋಡ್ಲೆ ಹೋಗುತ್ತಿರುವರೆಂದು ಪಟೇಗಾರ್ ನೇತೃತ್ವದ ಸರಕಾರ ವಿರೋಧಿ ಪಕ್ಷಗಳ ಮನವೊಲಿಸುವ


೩೨೨

ಪ್ರಯತ್ನ ಮಾಡುತ್ತಿದೆ. ವಾರೊಪ್ಪತ್ತಿನಲ್ಲಿ ವಿರೋಧಿ ಧುರೀಣರು ಡಾ. ಗೋಡ್ಲೆ ಜೊತೆಯಲ್ಲಿ ಭುವನೆಶರಿ ಅಮ್ಮನ್ನಿಯವರನ್ನೂ ಕಳಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲವೆಂದು ಠರಾವು ಪಾಸು ಮಾಡಬಹುದು. ಪ್ರಮುಖ ಭಿನ್ನಮತೀಯ ಸ್ಚಿವೆಯಾಅದ ಜಲಜಾಕ್ಷಿ ಮಸಾಲೆಯವರು ಹೀಗೆ ವಿರೋಧ ಪಕ್ಷದ ಮುಖಂದ ಅಡಿವೆಪ್ಪನವರ ಕಿವಿ ಚುಚ್ಚಿರಬಹುದೆಂದು ಆಳುವ ಪಕ್ಷದಲ್ಲಿ ಹರಡಿರುವ ಗುಸುಗುಸನ್ನು ನಾಡಿನ ಟಾಬ್ಲೇಡ್ಲು ಪತ್ರಿಕೆಗಳು ಬರೆಯುತ್ತಲೇ ಇವೆ.

ಬರುವಾಗ ಕಂಕುಳಲ್ಲಿ ಆ ಹೆಬ್ಬೊತ್ತಿಗೆಯನ್ನು ಇಟ್ಟುಕೊಂಡು ಬಂದಿದ್ದರೆ ಚೆನ್ನಾಗಿತ್ತು. ಅದರಲ್ಲಿರುವ ಎಷ್ಟೋ ವಿಷಯಗಳು ಹೆಜ್ಜೆಹೆಜ್ಜೆಗೆ ತಲೆಯಿಂದ ಕಳಚಿಕೊಳ್ಳುತ್ತಲೇ ಇವೆ. ಅದೆಲ್ಲ ಹಾಳಾಗಿ ಹೋಗಲಿ! ಶಾಮಂಣನ ಬಗ್ಗೆ ಅನಸೂಯಮ್ಮ ವಿವರ ಕೊಟ್ಟರೆ ಸಾಕು!
ಬೇವಿನ ಮರದ ಸಂದಿಯಲ್ಲಿ ಮುಳುಗಿ ಸಂಕುಲಮ್ಮನ ಮರದ ಸಂದಿಯಲ್ಲಿ ತೇಲಿದಾಗಲೇ ನನಗೆ ಆ ಪೇಟೆಯ ಗಾತ್ರ ಮತ್ತು ಆಳದ ಅರಿವು ಆಗಿದ್ದು. ಒಂದು ಹಿಡಿ ಬೆಳದಿಂಗಳ ಬೇಳಕಲ್ಲಿ ಹಾಯ್... ಹಾಯ್... ಬಾಯ್... ಬಾಯ್... ನಡೆದಿತ್ತು. ನಾಯಿಗಳು ಯಾವ ಅಪರಿಚಿತರನ್ನು ಕಂಡರೂ ಬೊಗಳುವ ಕೈಕಂಕರ್ಯ ಸೇವೆ ಮಾಡದೆ ಬಾಲ ಅಲ್ಲಾಡಿಸುತ್ತ ಸಹಕರಿಸುತ್ತಿದ್ದವು.
ರಾಕೇಷ್ಕುಮಾರನು ನನ್ನನ್ನು ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿ ತಾನು ಪರದೆ ಸರಿಸಿ ಬಾಗಿಲು ಪ್ರವೇಶಿಸಿದ. ಮನೆಯೊಳಗಡೆ ಇಬ್ಬರಿಗಿಂತ ಹೆಚ್ಚು ಮಂದಿ ಇರುವರೆಂದು ಹೊರಗೆ ಇದ್ದೇ ಖಚಿತವಾಗಿ ಊಹಿಸಬಹುದಾಗಿತ್ತು.
ಗುರುವಿನ ಕೂಡಿದನೇ ಅರುವಿನ ಮನೆಯಲ್ಲಿ ನೂರೆಂಟು ನಾಯಿ ಬೊಗುಳಿದರೇನು.
ಗುರುವಿನ ಕೂಡಿದನೇಽಽಽ
ಎಣ್ಣೆ ತೀರಿದ ಚಿಮುಣಿ ಚೆಲ್ಲುವ ಬೆಳಕಿನಂತೆ ತತ್ವಪದದ ಪಲ್ಲವಿ ಕ್ಷೀಣವಾಗಿ ಕೇಳಿಸುತ್ತಿತ್ತು. ಕಿಟಕಿ ಬಾಗಿಲುಗಳಿಂದ ಊದುಬತ್ತಿ ಲೋಭಾನದ ಪರಿಮಳ ಹೌದೋ ಅಲ್ಲವೋ ಎಂಬಂತೆ ಹೊರಗಡೆ ಬಂದು ಮೂಗಿಗೆ ಕುಟುಕುತಿತ್ತು. ಒಂಚಣ ಕಾಡು ಬೆಕ್ಕು ತನ್ನನ್ನು ಗಮನಿಸುತ್ತಿದೆ ಎಂದು ಗಾಬರಿಯಿಂದ ತಿರುಗಿ ನೋಡಿದರಲ್ಲಿ ಸುಂಕಲಮ್ಮನ ಮರದ ಬೊಡ್ಡೆಯ ಗೂಡಿನಲ್ಲಿ ಹಣತೆ ಇದ್ದಕ್ಕಿದ್ದಂತೆ ಪ್ರಜ್ವಲಿಸಿ ಉರಿಯತೊಡಗಿರುವುದು ಕಂಡಿತು. ಹೋಗುವವರು, ಬರುವವರು ತನ್ನ ಕಡೆ ‘ಇದ್ಯಾವ ಪ್ರಾಣಿ... ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಬಿಕೋ ಎಂಬಂತೆ ನಿಂತಿರುವುದಲ್ಲ್’ ಎಂಬಂತೆ ನನ್ನ ಕಡೆ ನೋಡುತ್ತಿದ್ದರು. ಅಂಥ ನೋತಗಳಿಂದ ಅಪರಾಧಿ ಭಾವದೀಂದ ಕಂಪಿಸ ತೊಡಗಿದೆ. ಇಂಥ ಅಸಭ್ಯವೂ ಅಶ್ಲೀಲವೂ ಆದ ವಾತಾವರಣವನ್ನು ಪ್ರವೇಶಮಾಡಿರುವುದು ಗೊತ್ತಾದರೆ ಹೆಂಡತಿ ಅನ್ನಪೂರ್ಣ ಏನೆಂದುಕೊಳ್ಳುವಳೇನೋ? ಪಾತಿವ್ರತ್ಯವೆಂಬ ಪರಿಕಲ್ಪನೆಯನ್ನು ಗಂಡನಾದ ನನಗೂ ಆರೋಪಿಸುವ ಮಹಿಳೆ ಆಕೆ. ಉದಿಯಲ್ಲಿರುವ ಕೆಂಡವನ್ನು ಮುಚ್ಚಿಡಲಿಕ್ಕೆ ಹೇಗೆ ಸಾಧ್ಯವಿಲ್ಲವೋ? ಹಾಗೆಯೇ ಅಭಿವ್ಯಕ್ತಿಯ ಉಡಿಯಲ್ಲಿರುವ ಸ್ವಾನುಭವಗಲನ್ನು ಲೇಖಕ ಮುಚ್ಚಿಡಲು ಸಾಧ್ಯವಿಲ್ಲ ಜಲಸ್ತಂಬನ ವಿದ್ಯೆ ಗೊತ್ತಿರದಿದ್ದರೂ ಸೋಮವಾರಪೇಟೆಯೆಂಬ ವೈಶಂಪಾಯನ ಸರೋವರಕ್ಕೆ ಜಿಗಿಯಲು ದಡದ ಮೇಲೆ ನಿಂತಿರುವೆ.
ಅಷ್ಟರಲ್ಲಿ ರಾಕೇಶ ಬಂದು ನನ್ನನ್ನು ಒಳಗಡೆ ಕರೆದೊಯ್ದ. ಆ ಮನೆ ಚಿಕ್ಕದೂ; ಚೊಕ್ಕದೂ ಆಗಿತ್ತು. ಮೂಲೆಯಲ್ಲಿ ಹರಿದ ತಬಲಗಳೂ; ಸರಿಗಮ ಕಳಚಿದ್ದ ಹಾರ್ಮೋನಿಯಂ ಪೆಟ್ಟಿಗೆಯೂ ಇದ್ದವು. ಡೆ ಮೇಲೆ ಒಂದೆರಡು ಹಲ್ಲಿಗಳು ನೊಣ, ಸೊಳ್ಲೆಗಳಣ್ಣು ಬೇಟೆಯಾಡುವುದರಲ್ಲಿ೯ ಮಗ್ನವಾಗಿದ್ದವು. ಬಾಗಿಲ ಪಕ್ಕ ಇದ್ದ ಎರಡು ಫೋಟೊಗಳ ಪೈಕಿ


೩೨೩

ಒಂದರಲ್ಲಿ ಸೀತೆಯನ್ನು ಅಪಹರಿಸುತ್ತಿರುವ ಮಾಯಾ ವಿರೂಪಿ ರಾವಣ ಮತ್ತು ಇನ್ನೊಂದರಲ್ಲಿ ಅಪಹರಣಕ್ಕೀಡಾಗುತ್ತಿರುವ ಸೀತೆ ಈ ಎರಡೂ ಪತ್ರಗಳನ್ನು ವಹಿಸಿರುವುದು ಒಬ್ಬ ಮಹಿಳೆ ಎಂದು ನೋಡುತ್ತಲೆ ಅರ್ಥ ಮಾಡಿಕೊಂಡೆ. ತಲೆ ಬಗಿಲ ಮೆಲೆ ಒಂದೆರಡು ಹಾರಗಳಿಂದಲೂ, ವಿಭೂತಿ ಕುಂಕುಮ ಲೇಪನಗಳಿಂದಲೂ ಮುಚ್ಚಿಹೋಗಿರುವ ಶಾಮಂಣನ ಫೋಟೋ ಇತ್ತು.ಅದನ್ನು ನೋಡಿದೊಡನೆ ಒಂದೆರೌ ಹನಿ ಕಂಣಲ್ಲಿ ತುಳುಕಿದವು.

"ನನ್ ಬಗ್ಗೆ ಬರೆಯೋಕೆ ಬಂದಿದ್ದೀಯಾ ನನ್ ಮಗ್ನೇ... ಇನ್ನೊಬ್ಬರ ಲೈಫ್ ಬಗ್ಗೆ ಬರೆಯೋ ಹಕ್ಕು ನಿನ್ಗೆ ಕೊಟ್ಟೋರು ಯಾರೋ... ಬರ್‍ಕೋ... ಅದೇನು ಬರ್‍ಕೋತೀಯೋ ಬರ್‍ಕೋ... ಮದುವೆ ಅಯ್ಯೂ ಆಯ್ತೂ ಒಂದಿನ ಆದ್ರೂ ಬಂದು ನನ್ನ ಮಾತಾಡಿಸಿದ್ದುಂತಾ ನೀನು ನಿಮ್ಮ ತಾತ ಬರೆದಿಟ್ಟಿರೋ ವೀಲು ನಾಮದ ಪ್ರಕಾರ ನಾನು ವೈದಿಕನಾಗಿದ್ದಿದ್ರೆ ಅವರಂತೆ ನಾನೂ ಸಾಯ್ತಿದ್ದೆ ಕಣಯ್ಯಾ... ನನ್ನ ಸಾವನ್ನೇ ಬದುಕಿನ ಬಂಡವಾಳವನ್ನಾಗಿ ಮಾಡಿಕೊಂಡು ಲೀಲಾಜಾಲವಾಗಿ ಬದುಕುತ್ತಿರುವ ನಿಮ್ಮಂಥವರ ಬದುಕಿಗೆ ಅರ್ಥವಿದೆ ಏನಯ್ಯಾ! ನಾನು ಸಾಯೋಕು ಮುಂಚೆ ಒಂದೊಂದು ರೂಪಾಯಿಗೂ ಒದ್ದಾಡುತ್ತಾ ಬಿದ್ದಿದ್ದಾಗ ಬಂದು ಸಹಾಯ ಮಾಡದ ನೀನು ಈ ನೆವದಿಂದಲಾದ್ರು ಇಂಥ ಕಡೆ ಬಂದು ಶತಾವಧಾನಿಯಂತೆ ಮುಖಮಾಡಿಕೊಂಡು ಕೂತಿದ್ದೀಯಲ್ಲ... ಕೂತ್ಕೋ... ಅವ್ಳು ಬಂದು ಅದೇನು ಹೇಳ್ತಾಳೋ! ಅದಕ್ಕೆಲ್ಲ ನೀನೆಂಗೆ ಅಕ್ಷರ ರೂಪ ಕೊಟ್ಕೋತೀಯೋ... ಬರೆಯೋ ಕರ್ಮಕ್ಕಿಂತ ಮಿಗಿಲಾದ ನರಕ ಎಲ್ಲೂ ಇಲ್ಲ ಎಂಬುದನ್ನು ಮರೆಯಬೇಡ" ಎಂದು ಮುಂತಾಗಿ ಸ್ಥಿರಚಿತ್ರವಾಗಿ ಶಾಮಂಣ ನುಡಿದಂತೆ ಭಾಸ ವಾಯಿತು. ಇಲ್ಲೇ ಇದ್ದರೆ ಎಲ್ಲಿ ಬಂದು ಕುತ್ತಿಗೆ ಹಿಡಿದು ಹೊರತಳ್ಳುವನೋ ಪುಣ್ಯಾತ್ಮ... ಕೂತಿರಲಾರದೆ ನಿಂತಿರಲಾರದೆ ಹೋಗಲಾರದೆ ಖೆಡ್ಡಾದಲ್ಲಿ ಆನೆಯೊಡನೆ ಬಿದ್ದ ಕಾಡು ಬೆಕ್ಕಿನಂತೆ ಒಂದೇ ಸಮನೆ ಚಾಪಡಿಸತೊಡಗಿದೆ. ನನ್ನ ಒದ್ದಾಟ ಗಮನಿಸಿ ರಾಖೇಶ ಕಪಾಟಿನಿಂದ ಫೋಟೊ ಆಲ್ಬಮ್ ತಂದು ಅಕ್ಕ ಪೂಜೆ ಮಾಡ್ಕೋತಿದ್ದಾಳೆ... ಇನ್ನೇನು ಬಂದು ಬಿಡ್ತಾಳೆ... ಅಲ್ಲಿವರ್‍ಗೆ ಆಲ್ಬಮ್ಮು ನೋಡ್ಕೋತಿರಿ ಎಂದು ಕೊಟ್ಟ. ಬೆಳ್ಳಿ ಚುಕ್ಕಿ, ರತ್ನಮಾಂಗಲ್ಯ; ಬಂಜೆ ತೊಟ್ಟಿಲು, ಕುರುಕ್ಷೇತ್ರ, ಗೌಡರ ಗದ್ವ, ನೀನೂ ಸಾಹುಕಾರನಾಗು ಇವೇ ಮೊದಲಾದ ನಾಟಕಗಳಲ್ಲಿ ಅಭಿನಯಿಸುತ್ತಿರುವ ಸ್ಥಿರ ಚಿತ್ರಗಳು ಅದರಲ್ಲಿದ್ದವು. ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಬಹುಮಾನಗಳು ಸ್ವೀಕರಿಸುತ್ತಿರುವ ಸ್ಥಿರಚಿತ್ರಗಳೂ ಸಹ. ಆಲ್ಬಮ್ಮಿನೊಳಗೆ ಎಲ್ಲೋ ಒಂದು ಕಡೆ ಯಾವುದೋ ಒಂದು ಪಾತ್ರದ ಮರೆಯೊಳಗೆ ಶಾಮಂಣ ಇದ್ದಾನೆಂದುಕೊಂಡು ಹುಡುಕತೊಡಗಿದೆ. ಮದುವೆಯಾದ ಮೊದಲ ವರ್ಷದಲ್ಲಿಯೇ ಸಂಗೀತ ಮತ್ತು ನಾಟಕದ ಗೀಳು ಹಚ್ಚಿಕೊಂಡಿದ್ದ ಎಂದು ಕೇಇ ತಿಳಿದಿದ್ದೆ. ಸುಶ್ರಾವ್ಯವಾಗಿ ಹಾಡುತ್ತ ತನಗೆ ತಾನೆ ಮೈಮರೆಯುತ್ತಿದ್ದುದೂ ಕೇಳುಗರನ್ನು ಹಗುರಮಾಡಿ ಬ್ಯಲಲ್ಲಿ ಹಾರಾಡಿಸುತ್ತಿದ್ದುದು ನನಗೆ ಗೊತ್ತಿಲ್ಲದಿರಲಿಲ್ಲ.
ಹೊರಗಡೆ ಯಾರೋ ಕುಡಿದು ತೂರಾಡುತ್ತ "ಲೇ ಅನಸೂವಿ... ನಿನ್ ಮರ್‍ತು ಹೆಂಗ್ಲೇ ಬದುಕ್ಲೀ... ನನ್ ಮಹರಾಣಿ, ಹೃದಯವಲ್ಲಭೇ... ಬರ್‍ಲೇನೆ ಒಳಗೆ" ಎಂದು ಕೂಗುತ್ತಿರುವುದು ಕೇಳಿಸಿತು. ಆಗ ಕೂಡಲೆ ಹೊರಗಡೆ ಹೋಗಿ ರಾಖೇಶನು... " ಇನ್ನೂ ನಮ್ಮಕ್ಕನ ಹುಚ್ಚು ಬಿಟ್ಟಿಲ್ಲೇನ್ರಿ ಸಾಹೇಬ್ರ... ನಿಮ್ಮಗ್ನೂ ಇಲ್ಲೆಲ್ಲೋ ಬಂದಂಗಿದಾನ... ಆತ್ನೇನಾರ ನೋಡಿದ್ರೆ ನಿಮ್ಮನ್ನ


೩೨೪

ಸುಮ್ನೆ ಬಿಟ್ಟಾನೇನ್ರಿ... ರಿತೈರಾದ ಮ್ಯಾಲ್ ರಾಮಾ ಕೃಷ್ಣ ಅಂತ ಕಾಲಕಳೆಯೋದು ಬಿಟ್ಟು ಒಳ್ಳೆ ಯುವಕರಂಗೆ ಈ ಪ್ಯಾಟಿಯೊಳಗೆ ಕುಡ್ದು ಬರೋದೇನ್ರಿ?... ನಮ್ಮಕ್ಕ ಈ ಲೈನು ಬಿಟ್ತು ಎಷ್ಟು ವರ್ಷಾದ್ವು ಏನ್ಕಥೆ? ಎಲ್ಲಾನೂ ನಿಮ್ಗೆ ಗೊತ್ತಿದ್ದಾದೆಏ ಐತಿ... ನಿಮ್ಮ ವರ್ತನಕ್ಕ ಮೂಗುದಾಣ ಹಾಕ್ಕೊಂಡು ಹೊರಡ್ರಿ ಲಗೂನ... ಇಲ್ಲಾಂದ್ರೆ ನಮ್ಮಕ್ಕಗೆ ರವುಷ ಬಂದು ಏನಾರ ಘಾತ ಮಾಡ್ಕೊಂಡಾಳು" ಎಂದು ಪರಿಪರಿಯಾಗಿ ಬುದ್ಧಿ ಹೇಳುತ್ತಿರುವುದು ಕೇಳಿಸಿತು. ಅದಕ್ಕಿದ್ದು ಆ ಸಾಹೇಬ "ಲೇ ರಾಕ್ಯಾ ನೀನು ಹೇಳೊದು ಬರೋಬ್ಬರಿ ಐತೆ ಮಾರಾಯಾ... ನಮ್ಮನುಸೂವಿನೇನ ಈ ದೇವ್ರು ಚೆನ್ನಾಗಿಟ್ಟಿರ್ಲಿ ಕಣಪ್ಪಾ... ಈ ಪ್ರಪಂಚದಾಗ ಅದ್ಯಾವ ಘಾತಗಳಿದ್ರೂ ನಾವು ಅನುಭೋಗಿಸೋಣ... ಅಂದಂಗ... ನನ್ ಮಗ ಬಂದಾನಂದೆಲ್ಲ... ಅದ್ಯಾರ ಮನ್ಯಾಗ ಹೊಕ್ಕೊಂಡಿದಾನೆ ಜರ್ರ ತೋರಿಸಲ್ಲ... ನನ್ನೆಂಜಲಿಗೆ ಅವ್ನೂ ಕೈಹಚ್ಚಿದ್ರೆ ಬದುಕೋದಾದ್ರು ಹೆಂಗಪ್ಪಾ? ಎಂದು ಪೀಡಿಸಿದ. ರಖೇಶ ಏನು ಹೇಳಿದನೋ? ಆ ಸಾಹೇಬ ಲೇ ಕಲ್ಯಾಣ... ಎಲ್ಲಿದ್ದೀಯೋ ನನ್ಮಗ್ನೇ... ಮೈ ಡಿಯರ್ ಸನ್ ಕಲ್ಯಾಣ್... ವೇರಾರ್ ಯು... ಮೈ ಬಾಯ್" ಎಂದು ಕಂಣನ್ನು ಗಂಟಲಿಗೆ ತಂದುಕೊಂಡು ಕೂಗುತ್ತ ಹೋಗಲು ರಾಖೇಶನು ಒಳಗೆ ಬಂದು ನಿಟ್ಟುಸಿರುಬಿಟ್ತ. ಅವ್ರು ರಿಟೈರ್ಡ್ ಏಈಓ ಸಾಹೇಬ್ರು ಕಣ್ರಿ... ಬೆಂಗ್ಳುರಾಚೆಕಡೇಕಿದ್ದು ರಿಟೈರಾಗಿ ಬಂದಾರ... ತಲೆ ಸಜ್ಜಿಲ್ಲ... ಕುಡ್ದಾಗೊಂದೆ ಹಿಂಗೆ ಒದರಾಡ್ತಾರೆ... ಅವ್ರಿಗೆ ಮಕ್ಳೂ ಮರಿ ಒಂದೂ ಇಲ್ರಿ... ಮಗ ಚಿಕ್ಕ ವಯಸ್ಸಿಗೆ ಸತ್ತೋದ... ಸಮುದ್ರದಾಗೀಜಾಲಿಕ್ಕೋಗಿ... ಬದುಕಿದ್ದಿದ್ರೆ ಅವ್ನೂ ತಮ್ಮಂಗೆ ಈ ಸೋಮಾರಪೇಟೆಗೆ ಬಂದು ಸೂಳ್ರ್ನ ಮಾಡ್ತಿದ್ದ ಅಂತ ಕಲ್ಪಿಸಿಕೊಂಡು ಕೂಗ್ತಿರ್‍ತಾರೆ... ಅಷ್ಟೆ... ಅವರ್ದೂ ಒಂದು ಬದುಕ್ರೀ..." ಎಂದು ಕ್ಷೀಣ ಸ್ವರದಲ್ಲಿ ಮಾತಾಡಿದ... ಅವನಾಇದ ಈ ಮಾತುಗಳನ್ನು ಹೇಗೆ ಪರಿಭಾವಿಸಬೇಕೋ ಅರ್ಥವಾಗದೆ ನಿಟ್ಟುಸಿರು ಬಿಟ್ಟೆ.

ಲೈಟು ಹೊಗೋದು, ಬರೋದು ಮಾಡುತ್ತಿದ್ದವು. ಅರ್ಥವಾಗದ ಸೆಕೆಯಿಂದ ಬೇಯತೊಡಗಿದ್ದ ನಾನು ಆಗಾಗ್ಗೆ ಎದೆಗೆ ಊದಿಕೊಳ್ಳುತ್ತಿದ್ದೆ. ನನ್ನೊಳಗೆ ಒಂದೊಂದು ಚಣಕ್ಕೆ ಒಂದೊಂದು ರೂಪ ಧಾರಣ ಮಾಡುತ್ತ ಪೀಕಲಾಟಗಳಿಗೆ ಬಲಿಕೊಡುತ್ತಿದ್ದ ಶಾಮಣ್ಣ... ಸ್ವೀಕರಿಸಲಿಕ್ಕೂ ಆಗದಂಥ ನಿರಾಕರಿಸಲಿಕ್ಕೂ ಆಗದಂಥ ವಾತಾವರಣವನ್ನು ನಿರ್ಮಿಸಿ ಅದರೊಳಗೆ ನನ್ನನ್ನು ಕೂಡಿ ಹಾಕಿದ್ದ ಮಾಯಾವಿ ಅವನು. ನಿನ್ನೊಳಗೆ ನಾನು ಅಷ್ಟು ಸುಲಭವಾಗಿ ಸಾಯೋ ಪೈಕಿ ಅಲ್ಲ ಕಣೋ ನಾನು, ಸಾವು ಎಂಬುದು ಕೇವಲ ದೇಹಕ್ಕಷ್ಟೆ ಸಂಬಂಧಿಸಿದ್ದೆಂದು ತಿಳ್ಕೋಬೇಡ... ‘ಶತಮಾನಂ ಭವತು’ ಎಂದು ತಾತ, ಮುತ್ತಾತರಿಂದ ಆಶೀರ್ವದಿಸಿಕೊಂಡಿರಿವ ವ್ಯಕ್ತಿ ನಾನು... ನಾನು ಸಾಯೋದು ಎಂದರೇನು? ಹೊಗೆ ತುಂಬಿದ ಬಚ್ಚಲಂಥ ಬದುಕಿನಲ್ಲಿ ಬದುಕುತ್ತಿರುವ ನಾನು... ಅಂಥ ನಾನು ಸಾಯೋದು ಎಂದರೇನು? ಕಾಲೇಜಿನ ಆಗತೇನ ಇಮಾಃ ಸರ್ವಾ ಪ್ರಜಾನಂದತಿ ಅಂಥ ಹಿರಿಯರು ಹೇಳಿರುವ ಮಾತು ಎಷ್ಟೊಂದು ಸತ್ಯ! ಅನಂದಾತೀತ ಅವಸ್ಠೆಯಲ್ಲಿ ನಿರಾಕಾರ, ನಿರಂಜನ, ನಿರ್ಮನ, ನಿಷ್ಯಾಮ ಇವುಗಳೆಲ್ಲವುಗಳನ್ನು ಸಾರ್ಥಕವಾದ ರೀತಿಯಲ್ಲಿ ಅನುಭವಿಸಿದ ನಾನು... ನೀನೇನು ಅಲ್ಲ ಅಂದುಕೊಂಡಿರುವಿಯೋ ಅದೆಲ್ಲ ಹೌದು... ಸಾಯೋದರೊಂದಿಗೆ ದೇಹದೊಂದಿಗೆ ತನ್ಮಾತ್ರ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ನಾನು ಮುಂದೆ ಕಾಲದೊಂದಿಗೆ ಅವಿಚ್ಛಿನ್ನವಾದ, ಏಕದಳಧಾನ್ಯದಂಥ ಸಂಪರ್ಕ್ಸ್ವನ್ನು ಇಟ್ಟುಕೊಳ್ಳುವೆ. ನೀನು ನನ್ನನ್ನು ನಿರ್ವಿಕಲ್ಪ ಪ್ರಜ್ಞೆಯಿಂದ ನೋಡಲು ಸಾಧ್ಯವಾಗಲಿಲ್ಲ. ಸತ್ತ ನಂತರ ಸವಿಚಾರ ನಿರ್ವಿಕಲ್ಪ ಪ್ರಜ್ಞೆಯಿಂದ ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸು" ಎದೆಯ ಮೂಲೆಯಲ್ಲಿ


೩೨೫

ಸಪ್ಪಳ್ವಾದಂತಾಯಿತು. ಹಿಂದೊಮ್ಮೆ ಬಸ್ ನಿಲ್ದಾಣದಲ್ಲಿ ವಿನಾಕಾರಣ ನಿಂತಿದ್ದ ಅವನು ಆ ಕ್ಷಣ ನನಗೆ ಶಂಕರರ ಗುರುವಿಗೆ ಗುರುವಾಗಿದ್ದ ಗೌಡಪಾದನಂತೆ ಗೋಚರಿಸಿದ್ದ. ಅವನ ಕಾರಿಕೆಯ ಅಲಾಡಶಾಂತಿ(ಬೆಂಕಿವರ್ತುಲದ ನಿರಸನ)ಯೇ ರೋಗಿಯ ರೂಪ ಧರಿಸಿರುವಂತೆ ಹೊಳೆದಿದ್ದ... ಬೇಲಿಸಾಲೊಳಗೆ ಮಿಣುಕು ಹುಳುಗಳು ಹಾರಾಡುವಂತೆ... ಇತಿ ನೋ ಗುರು ದರ್ಶನಮ್ ಎಂದುಕೊಳ್ಳುತ್ತಿರುವಷ್ಟರಲ್ಲಿ ಪಯಣಿಸಬೇಕಿದ್ದ ಬಸ್ಸು ಚಲಿಸಲಾರಂಭಿಸಿತ್ತು.

ಎಂಥ ವೀರನೂ ಕೊಲ್ಲಲಿಕ್ಕಾಗದಂಥ ತಾಪಸನಂತೆಯೋ; ಬ್ರಾಹ್ಮಣನಂತೆಯೋ; ಶಸ್ತ್ರ ತ್ಯಾಗಿಯಂತೆಯೋ; ಕಾತರಿಯಂತೆಯೋ, ಮರಣೋತ್ತರಿಯಂತೆಯೋ; ವ್ಯಸನಿಯಂತೆಯೋ; ನಪುಂಸಕನಂತೆಯೋ; ಶರಣಾಗತನಂತೆಯೋ, ರೋಗಿಯಂತೆಯೋ, ಬಾಯಲ್ಲಿ ಹುಲ್ಲು ಕಚ್ಚಿಕೊಂಡಿರುವನಂತೆಯೋ ಇಂಥ ಹಲವು ಮಾನಸಿಕ ಸ್ಥಿತ್ಯಂತರಗಳನ್ನು ಅನುಭವಿಸುತ್ತ ಎಲ್ಲಿಗೋ ಹೊರಟಿದ್ದ ನಾನುಎಲ್ಲಿಗೂ ಹೋಗಲಾರದೆ ಮನೆಗೆ ಮರಳಿದ್ದೆನು... ಚ ಗೃಹಾಗತಮ್...

ನಿಟ್ಟುಸಿರು ಬಿಡುತ್ತಿದ್ದ ನನ್ನ ಕಡೆ ವಿಚಿತ್ರವಾಗಿ ರಾಖೇಶ ನೋಡುತ್ತ ತಾನೂ ನಿಟ್ಟುಸಿರು ಬಿಟ್ಟಾಗ ಮೊಳಗುತ್ತಿದ್ದ ಗಂಟೆ ಮೌನ ಧರಿಸಿದ ನಂತರ ಎದ್ದ ಅಲೆಗಳ ನೀರವತೆ ಕವಿದಿದ್ದಾಗ ಹದಿನೆಂಟು, ಹತ್ತೊಂಬತ್ತರ ಪ್ರಾಯ್ದ ತರುಣಿಯೋರ್ವಳು ಮಂಗಳಾರತಿ ತಟ್ಟೆ ಹಿಡಿದುಕೊಂಡು ಹೊರಬಂದಳು. ಕರ್ಪೂರದ ಬೆಳಕನ್ನು ಪ್ರತಿಫಲಿಸುತ್ತಿದ್ದ ಆಕೆಯ ಸುಂದರ ವದನ ನೋಡುತ್ತಿರುವಾಗ ರಾಖೇಶ "ಕಾಂಚನಾ ಅಂತಾರ್ರೀ ಈಕೀನ... ಒಂದೇ ತಾಲಿಮಿಗೆ ನಾಟಕಾನ ಬಾಯಿಪಾಠ ಮಾಡಿಬಿಡ್ತಾಳ ನೋಡ್ರಿ... ಅಷ್ಟು ಹುಷಾರೀರಿ ಈಕೆ... ಈಕೆಯಂಗ ಉತ್ತರೆ ಪಾರ್‍ಟು ಮಾಡೋರು ಈ ಪ್ರಾಂತದಾಗ ಯಾರೂ ಇಲ್ಲ ಬಿಡ್ರಿ... ಭರತನಾತ್ಯ, ಕೂಚಿಪುಡಿ, ಓಡಿಸ್ಸಿ; ದಿಸ್ಕೋ ಎಲ್ಲಾ ಅಭ್ಯಾಸ ಮಾಡ್ಯಾಳ್ರೀ..." ಎಂದು ಮುಂತಾಗಿ ಪ್ರವರ ಪ್ರಾರಂಭಿಸಿದ. ಇಷ್ಟೊಂದು ಚಿತ್ತಾಕರ್ಷಕವಾದ ಜೀವಂತ ಪುತ್ತಳಿಯನ್ನು ನಾನು ನೋಡಿದ್ದು ಇದೇ ಮೊದಲು. ಮಂಗಳಾರತಿ ತಗೊಂಡೆ. ಆಕೆ ಕೊಟ್ಟ ಕೊಬ್ಬರಿ ಚೂರಿನ ಪ್ರಾಸದವನ್ನು ಬಾಯಲ್ಲಿ ಹಾಕಿಕೊಂಡೆ. ಆಕೆ ಹೋದ ನಂತರ ತಗ್ಗಿದ ಧ್ವನಿಯಲ್ಲಿ ರಾಖೇಶನು ಶಾಕುಂತಲೆಗೂ ಈ ಹುಡುಗೀದು ಕಥೆ ಡಿಟ್ಟೋ ಅಂದ್ರ ಡಿಟ್ಟೋ ಐತಿ ನೋಡ್ರಿ... ಆ ಮಟ್ಟಿಗೆ ತಂದೆ ಆದೋನು ಒಂದು ಕಡೆಗೆ ಹೋದ. ಆ ಮಟ್ಟಿಗೆ ತಾಯಿ ಆದಾಕಿ ಒಂದು ಕಡಿಗೆ ಹೋದ್ಲು... ನಮ್ಮನಸೂವವ್ವ ಕಣ್ವ ಋಷಿಗಳಂಗೆ ತಂದಿಟ್ಟುಕೊಂಡು ನಯ ನಾಜೂಕು ಕಲಿಸಿದ್ಲು... ಆ ಲುಚ್ಚಾ ಗುಲಾಂನಬಿ ಈ ಹುಡುಗಿ ಮ್ಯಾಲ ಕಣ್ಣಿಟ್ಟಾನ ನೋಡ್ರಿ..." ಎಂದ. ಕ್ಯಾಬಿನೆಟ್ ದರ್ಜೆಯ ಮುಖ್ಯ ಲೈಂಗಿಕ ಪ್ರಕರಣಗಳ ಪ್ರಮುಖ ಸೂತ್ರಧಾರಿಯಾಗಿ ಮಾರ್ಪಟ್ಟಿದ್ದ ಗುಲಾಮ್ನಬಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವಲಯ ಪ್ರವೇಶಿಸಲು ಪ್ರಯತ್ನ ನಡೆಸಿರುವುದು ಆ ಕೂಡಲೆ ನೆನಪಾಯಿತು.
ಹುತ್ತದ ಕೋವೇಲಿ ಹುಟ್ಟಾಳೆ ನಮ್ಮವ್ವ
ಗುಡುಗನಾಡ್ಯಾಳೆ ದೊರೆದೇವಿ...
ಪಕ್ಕದ ಮನೆಯಲ್ಲೋ; ಎದುರು ಮನೆಯಲ್ಲೋ ಕೆಲವು ಮಹಿಳೆಯರು ಗುಂಪು ಗೂಡಿ ಹಾಡುತ್ತಿರುವರೆಂದುಕೊಂಡೆ.
ತನ್ನಾಗಮನದ ಪೂರ್ವ ಸೂಚನೆ ನೀಡುತ್ತಿರುವ ರೀತಿಯಲ್ಲಿ ಸಜ್ಜುಗೊಂಡ ಮನೆಯ ಒಳಕೋಣೆಯಿಂದ ಯಾರೋ ಈ ಕಡೆ ಹೊರಟಿರುವಂದೂಹಿಸಿ ಆ ಕಡೆ ತಿರುಗಿ ನೋಡಿದೆ. ರಾಖೇಶ ಮುಖಕ್ಕೆ ವಿಶೇಷ ಶಿಸ್ತು ಧರಿಸುತ್ತಿರುವಷ್ಟರಲ್ಲಿ ಒಳಗಿನಿಂದ ಮಹಿಳೆಯೋರ್ವಳು


೩೨೬

ಅವನತಮುಖಿಯಾಗಿಯೇ ಬಂದಳು. ಆದರೆ ನಾನು ಅನೇಕ ನಾಟಕಗಳಲ್ಲಿ ಪಾತ್ರ ವ್ಹಿಸಿದ್ದನ್ನು ಬಹುದೂರದಿಂದ ನೋಡಿದ್ದೆ.ಝಗಝಗಿಸುವ ಬೆಳಕಲ್ಲಿ ಬಣ್ಣಗಳಾಡಂಬರದಲ್ಲಿ ಮುಳುಗಿರುತ್ತಿದ್ದ ಈಕೆಯನ್ನು ಗುರುತಿಸಲಾಗಿರಲಿಲ್ಲ... ಆಯಾ ಪಾತ್ರಗಳೊಂದಿಗೆ ತದ್ಯಾತ್ಮ ಹೊಂದಿ ನಟನೆಯ ಮೂಲಕ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ದ ಮಾಡುತ್ತಿದ್ದ ಆ ಮನಮೋಹನ ನಟಿ ಈಕೆ ಎಂದೊಂದು ಕ್ಷಣ ದಿಟ್ಟಿಸಿದೆ.

ಇಡಿ ಮನೆಯನ್ನು ಅಸಹನೀಯ ಮೌನ ಕವಿಯಿತು. ಕ್ರಮೇಣ ಒಂದು ಹಿದಿ ಸೆರಗಿನ ಉಂಡೆಯನ್ನು ಬಾಯಿಗಡ್ದ ಇಟ್ಟುಕೊಂಡ ಆಕೆಯನ್ನು ಮಾತಾಡಿಸದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ.
"ಅನಸೂಯಮ್ಮನವ್ರೆ..." ಎಂದೆನೋ ಇಲ್ಲವೋ...

ದುಃಖದ ಕಟ್ಟೆಯೊಡೆದು ಆಕೆಯ ಕಪ್ಪು ಕವಿದಿದ್ದ ಕಣ್ಣುಗಳಿಂದ ನೀರು ದುಮ್ಮಿಕ್ಕತೊಡಗಿತು. ಮಹಾಶ್ವೇತೆಯಂಥ ಆಕೆಯನ್ನು ಹೇಗೆ ಸಂತೈಸಬೇಕೋ? ಅರ್ಥವಾಗಲಿಲ್ಲ. ರಾಜಶೇಖರ ವಿಳಸದ ತಿರುಕ್ಕುಳುವಿನಾಚಿ ಪ್ರಸಂಗ ನೆನಪಾಯಿತು.

"ಅಮ್ಮಾ... ಅಳಬೇಡಿ... ಸುಂಕಿರಿ... ಆದದ್ದು ಆಗಿಹೋಯ್ತು... ಅದ್ನೆಲ್ಲ ನೆನಪಿಸಿಕೊಂಡ್ರೇನು ಪ್ರಯೋಜನ?" ಎಂದೆ. ಮುಂದೇನು ಮಾತಾಡಬೇಕೆಂದು ತಿಳಿಯದೆ?
"ಅಯ್ಯಾಯ್ಯೋ... ಅದ್ಯಾಂಗ ಸುಮ್ಕಿರ್‍ಲಿ... ಯಪ್ಪೋ... ಆ ನಿಮ್ ಗೆಣೆಕಾರ್‍ನ ನೆನೆಸ್ಕೊಂಡ್ರೆ ಎದಿ ಹೊಡ್ದೋಗ್ದದ್ರೀ... ಅಂಥ ಮನುಷ್ಯ ಹಿಂದೂ ಹುಟ್ಟಿಲ್ಲಾ ಮುಂದೂ ಹುಟ್ಟಾಕಿಲ್ರೀ ಯಪ್ಪಾ... ಹೋಟ್ಟೇಲಿ ಮಗ್ನಿಗಿಂತ ಜ್ವಾಪಾನ ಮಾಡಿದ್ನೆಲ್ಲೆಪ್ಪಾ... ಉಂಡೆಂಜಲ ಬಳುದು ಎದ್ಯಾಗ ಅವರ ತಲಿ ಇಟ್ಕೊಂಡು ಕಾಪಾಡಿದ್ನಲ್ಲಪ್ಪೋ... ಇರೊ ಎಲ್ಡು ಮುತ್ತಿನಂಥ ಮಕ್ಳ ಮಾರಿನಾರ ನೋಡ್ಕೊಂಡು ವಯನಾಗಿರಬಾರದಿತ್ತೇ ಅವ್ನೂ... ಸತ್ತು ಎದಿ ಬಣವೇಗೆ ಕೊಳ್ಳಿ ಇಟ್ಟುಬಿಟ್ನಲ್ಲಾ... ಅಯ್ಯಯ್ಯೋ ಅವನ್ನ ಹೆಂಗ ಮರ್ತು ಬದುಕ್ಲೀ ನನ್ನಪ್ಪಾ..." ಎಂದು ಆಕೆ ಭೂತಕಾಲದ ತಿಪ್ಪೆ ಕೆದರಿ ಭ್ರೂಣಗಳನ್ನು ಹೆಕ್ಕಿ ಪೇರಿಸತೊಡಗಿದಳು. ಅವು ಒಂದೊಂದು ದಿಕ್ಕಿಗೆ ಒಂದೊಂದು ರೀತಿ ಸಿಡಿದು ಒಬ್ಬೊಬ್ಬರನ್ನು ರೀತಿ ದಂಗು ಬಡಿಸತೊಡಗಿದವು. ಅದೇ ತಾನೆ ತಾರುಣ್ಯದ ಹೊಸ್ತಿಲು ದಾಟಿದ್ದ ಕಾಂಚನ "ಅಳಬ್ಯಾಡನಯವ್ವಾ..." ಎಂದು ತಾನೂ ಅಳಲು ಶುರುಮಾಡಿದರೆ ರಾಖೇಶನಂತೂ "ಯಕ್ಕಾ... ಅದೆಷ್ಟು ಅಳ್ತಿಯೋ ಅಳು... ನಮ್ಗೂ ಹೇಳಿ ಕೇಳಿ ಸಾಕಾಗಿ ಹೋತು... ಕಂಣಾಗ ನೀರು ಖಾಲಿ ಆದ ಮ್ಯಾಲೆ ನೀನೆ ಸುಮ್ಮಕಾಗ್ತಿ..." ಎಂದು ಚುಟ್ಟ ಹಚ್ಚಿಕೊಂಡು ಬುಸುಬುಸು ಹೊಗೆ ಬಿಡತೊಡಗಿದನು. ಲೋಬಾನ ದರಬಾರಗರ ಬತ್ತಿ ಹೊಗೆಯೊಳಗೆ ತಂಬಾಕಿನ ಹೊಗೆ ಬೆರೆತು ಅದೊಂದು ನಮೂನೆ ವಾಸನೆ ಸೃಷ್ಟಿಯಾಯಿತು. ಆ ವಾಸನೆ ಎಂಬುದು ಅಂತರಿಕ್ಷ ಮಾರ್‍ಗದಲ್ಲಿ ರಚಿಸಿದ ಛಪ್ಪನ್ನಾರು ಹಾದಿಗಳಗುಂಟ ಅಕ್ಕಪಕ್ಕದ ಮನೆಯ ಹೆಣ್ಣಾಳು ಗಂಡಾಳುಗಳು ನಾ ಮುಂದು ತಾ ಮುಂದು ಅಂತ ಮನೆ ತೂರಿಕೊಂಡರು. ತೂರಿಕೊಂಡವರು ಸತ್ತ ಶಾಮಣ್ಣಗಿವನೇನಾಗಬೇಕೂಮ್ತ ನನ್ನ ಕಡೆಗೂ; ನಿನ್ನೆದಿಯೊಳಗೀಮೂಳ ಅದ್ಯಾವ ಆಟಂಬಾಂಬು ಇಟ್ತನೇ ತಾಯಿ ಅಂತ ಆಕೆಯ ಕಡೆಗೂ ಹುಳಿ ಹುಳಿ ನೋಡತೊಡಗಿದರು. ಅಳೊದು ಕರೆಯೋದು ತಮ್ಮ ಪೇಟೆಗೆ ತೀರ ಸಹಜವೆಂಬಂತೆ ಕೆಲವರು ರಾಖೇಶನೊಂದಿಗೆ ಗುಸುಗುಸು ಪಿಸಿಪಿಸಿ ಮಾತಾಡತೊಡಗಿದರೆ ಇನ್ನು ಕೆಲವರು ಅನಸೂಯಮ್ಮನ


೩೨೭

ಮೇಲೆ ಅಡರು ಬಿದ್ದು "ಅಯ್ಯಯ್ಯೋ... ನಿನ್ ಬದುಕು ಕಣ್ಣೀರೊಳಗೆ ಮಾರಿ ತೊಳಿಯೋ ಹಂಗಾಯ್ತಲ್ಲೇ... ಇಂಥದೊಂದು ಗಂಟು ಬೀಳೋಕೆ ನೀನೇನು ಕರುಮ ಮಾಡಿದ್ದೀಯೇಽಽ.. ಒಂದಿನಾನಾದ್ರು ಹೊಟ್ತೆ ತುಂಬ ಉಂಬ್ಲಿಲ್ಲ... ರೆಪ್ಪೆಗೆ ರೆಪ್ಪೆ ಹಚ್ಚಿ ನಿದ್ದೆ ಮಾಡಿಲ್ಲಲ್ಲೇ...ಯವ್ವೋ... ಯತ್ತೇ... ಅಕ್ಕೋ... ಮಗ್ನೇ... ತಂಗೇ..." ಎಂದು ಮುಂತಾಗಿ ಒಂದೊಂದು ರಾಗಕ್ಕು ಒಂದೊಂದು ವಿಶೇಷಣ ಮುಡಿಸಿ ಬೋರೆಂದು ಅಳತೊಡಗಿದರು. ಅವರೆಲ್ಲರ ಕಂಣೀರು ಸಿಂಬಳ ಧಾರೆ ಬಿದ್ದೂ, ಬಿದ್ದೂ ಮೈಗೆ ಒಂಥರಾ ತಂಪಾದಂಗಾಗಿ ಅನಸೂಯಮ್ಮ ಧಡಾರನೆ ಫ್ಯಾನಿನ ಮಟ ಎದ್ದು ನಿಂತು... ನಮ್ಮ ಶಾಮನ್ನ ಹೆಣಕೆ ಬೆಂಕಿ ಹಚ್ಚಿದೀ ಕಯ್ಗಳ್ಗೆ ಕರಿ ನಾಗ್ರಾವು ಕಡಿಯಾ... ನಂಗೆ ಬರಬಾರ್ದ ರೋಗ ಬಂದು ಸಾಯಾ... ಮರೀ ಬೇಕಂದ್ರ ಮರಿಗೊಡಸಲ್ವಲ್ಲ ಅವ್ನೂ... ನಾನೇನು ಕಡ್ಮೆ ಮಾಡ್ದೆ ಅಂತ ಸತ್ತೋ ನೀನು... ಆ ದೇವ್ರೆಂಭೋನು ನನ್ನಾಯುಷ್ಯಾನ ಅವ್ನಿಗೆ ಕೊಟ್ಟು ಇನ್ನೂ ನಾಕ್ಕಾಲ ಬದುಕಿಸಬಾರ್ದಿತ್ತೇ... ಶಾಮಾ... ಶಾಮಾ... ನನ್ನೂ ಕರ್ಕೊಂಡೋಗಬಾರ್ದೇನೋ ಸುಡ್ಗಾಡಿಗೆ... ನಿನ್ನೆಣ್ತಿ ಅಂದ ಒಂದೊಂದು ಮಾತು ನೆನೆಸ್ಕೊಂಡ್ರೆ ಈ ಭೂಮಿ ಮ್ಯಾಲ ಬದುಕಬಾರ್ದೋ ನಾನು... ನಿನ್ ಮಕ್ಳೂ ನನ್ ಮಕ್ಳೂ ಅಲ್ಲೇನೋ? ಕಣ್ ಪ್ರೀತಿ ನೋಡಂಗಿಲ್ಲಲ್ಲೋ ನಾನು... ‘ಲೇ ಅನಸೂಯಾ ಹಿಂದಿನ ಜನುಮದಾಗ ನೀನು ನನ್ತಾಯಿಯಾಗಿ ಹುಟ್ಟಿದ್ದೇನೆ ಅಂತಿದ್ದೇಯಲ್ಲೋ... ಶಾಮ...ಶಾಮಾ... ಶಾಽಽಮಾಽಽ..." ಎಂದು ಮೂರ್ಚೆ ಹೋಗಿ ನೆಲದಮೇಲೆ ಅಂಗಾತ ಬಿದ್ದುಬಿಟ್ತಳು. ಒಂಚಣ ಎಲ್ಲರೂ ಹೌಹಾರಿ ಮತ್ತೆ ಚೇತರಿಸಿಕೊಂಡರು. ನೀರು ತರಲಿಕ್ಕೆ ಹೋದವರು ನೀರು ತಂದರು, ಬೆಂಕಿ ತರಲಿಕ್ಕೆ ಹೋದವರು ಬೆಂಕಿ ತಂದರು. ಬೀಸಣಿಕೆ ತರಲಿಕ್ಕೆ ಹೋದವರು ಬೀಸಣಿಕೆ ತಂದರು. ಆ ಗುಂಪಿನಲ್ಲಿತರಾವರಿ ಮಂದಿ ಇದ್ದರು. ನನ್ ಗತಿ ಏನೇ ಯವ್ವಾ ಎಂದು ಎದೆ ಮೇಲೆ ತಲೆ ಇಟ್ಟ ಕಾಂಚನಾಳ ಭುಜ ಹಿಡಿದು ಆಚೆ ಸರಿಸಿ ಆರೆಂಪಿ ಅಮರಪ್ಪ ಒಂಡು ಸೂಜಿ ಮಾಡಿದ್ರೆ ಹೋದ ಜೀವ ಮತ್ತೆ ಬರ್‍ತದೆ ಎಂದು ಸಿರಂಜಿ ಪ್ರದರ್ಶಿಸಿದನು. ಹ್ರಾಂ ಹ್ರೀ ಹ್ರೂಂ ಈ ಮೂರು ಮಂತ್ರಗಳಿಗೆ ಹೆಸರಾದ ಅಂಬನ್ನ "ಲೋ ಅಮರಪ್ಪ... ಇದು ಬ್ರಮ್ಮ ಪಿಶಾಚಿ... ನಿನ್ನ ಇಂಗ್ಲೀಚು ಚೂಚಿಗೆ ಮೈಟು ಮಾಡೊದಲ್ಲ" ಎಂದು ಆರೆಂಪಿ ರಟ್ಟೆ ಹಿಡಿದು ಆಚೆ ತಳ್ಳಿ ಒಂದು ಕೈಲಿ ಹುಣುಸೆ ಬರಲನ್ನೂ; ಇನ್ನೊಂದು ಕೈಲಿ ನಿಗಿ ನಿಗಿ ಉರಿವ ಕೆಂಡವನ್ನೂ ಹಿಂದಕ್ಕೂ ಮುಂದಕ್ಕೂ ವಾಲಾಡುತ್ತ ಪ್ರದರ್ಶಿಸಿ... ಇನ್ನೇನು ಅವನು ಆಕೆಯ ಮೈಯನ್ನು ಚಟ್ನಿ ಮಾಡುವನೆಂದಾಗ ಚೀಪಾಪೀಸರು ಗೋವಿಂದಮ್ಮ "ಎಲವೋ ಅಂಬಣ್ಣ... ಒಳ್ಳೆ ಮಾತ್ನಿಂದ ದೂರಸರಕಮ್ತೀಯಾ... ಇಲ್ಲಾ ಬಾಯಾಗ ಉಚ್ಚಿ ಹೊಯ್ಲಾ..." ಎಂದು ಹೆಡೀತ್ತಿ ಬುಸಗುಟ್ಟಿದಳು. ಸೋಮಾರಪೇಟೆಯ ಕೊತ್ವಾಲ ರಾಮಚಂದ್ರಳೆಂದೇ ಹೆಸರಾಗಿರುವ ಚೀಪಾಪೀಸರ್ರು ಗೋವಿಂದಮ್ಮ ಈ ಪ್ರಕಾರವಾಗಿ ನಾನೆಂಭೋ ಮಾನವರನ್ನು ಆಚೇಕ್ಕ, ಈಚೆಕ್ಕ ಕಳಿಸಿ ಆ ಕಡೆಗೊಂದು ಈ ಕಡೆಗೊಂದು ಕಾಲು ಹಾಕಿ ಅನಸೂಯಮ್ಮನ ತಲೆಯನ್ನು ಬೊಗಸೆಯಿಂದೆತ್ತಿ "ಚಲೋ ಮಾತ್ನಿಂದ ಕಂಣ ತೆರೀತೀಯೊ... ಇಲ್ಲಾ... ನಾನೀ ಪ್ಯಾಟಿ ಬಿಟ್ಕೊಟ್ಟು ಹೊಂಟೋಗ್ಲೋ" ಎಂದು ಒಂದು ಮಾತು ಅಂದು ಮುಖಕ್ಕೆ ಒಂದು ಬೊಗಸೆ ನೀರು ಚುಮುಕಿಸಿದಳು... "ಹಾರವನ ಸಾವಾಸ ಮಾಡ್ದೀ ಸಾಕ್ದೀ ಸಲುವಿದಿ, ಬೆಂಕೀಲಿಟ್ಟಿ. ಅವ್ನ ನೆನಪಿಗೂ ಬೆಂಕಿ ಇಟ್ಟು ಆರಾಮಾಗಿರೋದು ಬಿಟ್ಟು ಹಿಂಗ್ಯಾಕ ಮೂರ್ಚೆ ಹೋಗಿದ್ದೀ. ಕಂಣು ತೆರಿಲಿಲ್ಲಾಂದ್ರೆ ಈಗಿಂದೀಗ್ಲೇ ನಾನೊಂಟು ಹೋಗ್ತೀನಿ ನೋಡು" ಎಂದು ಎರಡು ಮಾತು ಎರಡು ಬೊಗಸೆ ಸುರುವಿದಳು.ಅದಕ್ಕೂ ಕಂಣು ತೆರೆಯದಿದ್ದಾಗ


೩೨೮

"ಮಿಂಡನನ್ನೂ ಮಗನಂಗೆ ಸಾಕಿ ನಂಸ್ವಾಮಾರಪ್ಯಾಟಿ ಮ್ಯಾಲ ತಾಯ್ತನದ ಶಿಖಿರ ಇಟ್ಟೆಲ್ಲೇ; ಅನಸೂವಿ... ನಿನ್ನಂಥಾಕಿ ಪ್ರಗ್ನೆ ತಪ್ಪಿ ಬೀಳೋದೆಂದ್ರೇನು... ನೀನು ಕಂಣು ತೆರೀಲಿಲ್ಲಾಂದ್ರ ಈಗಿಂದೀಗ್ಲೆ ನಾನೊಂಟೋಗ್ತೀನಿ" ಎಂದು ಮೂರು ಮಾತು ಅಮ್ದು ಮೂರು ತಂಬಿಗೆ ನೀರು ಸುರುವಿದೊಡನೆ ಜಲಜಲ ಬೆವೆಯುತ್ತ ಅನಸಮ್ಮ ದಿಗ್ಗನೆದ್ದು ಕುಳಿತು "ಯವ್ವಾ... ಗೋವಿಂದವ್ವಾ... ಹೆಂಗ ಬದುಕಿರ್ಲೆ ಅಂಥವ್ನ ಕಳ್ಕೊಂಡು" ಎಂದು ಎದೆಗೆ ಕೈಹಚ್ಚಿ ಮೇಲೆಳೆದುಕೊಂಡಳು... ಅವನ ಸಂತೆ ಹೊತ್ತುಂಟ್ಲೆ ತನ್ ಸಂತೆ ತಾನು ಮುಗಿಸ್ಕೊಂಡ... ಹೋಂಟೋದ... ನಮ್ನಿನ್ನೂ ಸಂತೆ ಮುಗ್ದಿಲ್ಲೆ ಮಗ್ಳೇ... ಎದ್ದೇಳು... ಬಚ್ಚಲಕೋಗಿ ಮಕ ಮಾರಿ ತೊಳ್ಕೊಂಡು ಹಣೆಮ್ಯಾಲ ಅವ್ವನ ಅಂಗಾರ ಹಚ್ಕಾ... ಎಲ್ಲಾ ಸರಿ ಹೋತೈತಿ... ಚಿಂತೆ ಮಾಡಬ್ಯಾಡ..." ಎಂದು ಎಬ್ಬಿಸಿ ಕಾಂಚನಾಳ ಕೈಗೆ ಕೊಟ್ಟು ಬಚ್ಚಲಿಗೆ ಕಳಿಸಿದಳು.

"ಇದು ಶಾಮಂಣನ ದೆವ್ವಭೇ... ಗೋಯಿಂದೀ... ಬರೋ ಅಮ್ಮಸೆ ರಾತ್ರಿ ಬಿಡಿಸಿದ್ರೆ ಸರೆ... ಇಲ್ಲಾಂದ್ರೆ ಅದು ಈಕಿನ ತಗೊಂಡೊಯತದೆ ನೋಡ್ತಿರು ಎಂದು ಅಂಬಣ್ಣನ ಎದುರು ಕುಪ್ಪಳಿಸಿ ನಿಂದು "ಯೇನಂದ್ಯೋ ನನ್ನಾಟಗಳ್ಳ... ಈಕೆ ವ್ಯೋನು ಮಾಡ್ಯಾಳಾಂತ ಶಾಮ ಆಕೀನ ತಗೊಂಡೊಯ್ತಾನೋ... ಒಯ್ದ್ರೆ ನನ್ ತಗೊಂಡೊಗ್ಬೇಕು ನೋಡು... ನೀನೇನು ಕಡ್ಮೆ ಉರಿಸ್ಕೊಂಡು ತಿಂದ್ಯಾ ಆ ಶಾಮಂಣನ್ನ... ಬಾಯಿ ಸತ್ತೋರು ಈ ಪ್ಯಾಟಿಗೆ ಬರದಂಗೆ ಮಾಡಿ ಬಿಟ್ರೆಲ್ಲೋ ನಿಮ್ಮಂಥೋರೆಲ್ಲ ಸೇರ್‍ಕಂಡು... ನಿನ್ನಂಥ ಭಡ್ಕಾವ್ ಮಂದಿಗೆ ಮುಯ್ಯಿ ಒಪ್ಪಿಸಿದ್ವಿ ನೋಡು ನಮ್ಗೆ ನಾವು ಕಾಲ್ಮರೀಲಿ ಹೊಡ್ಕೋಬೇಕು..." ಎಂದು ಘರ್ಜಿಸಿ ಕ್ಯಾಕ್ ಅಂತ ಮುಖಕ್ಕೆ ಉಗುಳಿದಳು. ಅವನು ಮುಖ ಒರೆಸಿಕೊಂದು ಹೋದನು... ಅಲ್ಲಿದ್ದ ಅನೇಕರು ಅವನ ದಾರಿ ಹಿಡಿದರು.

ಗೋವಿಂದಮ್ಮ ನನ್ನ ಮುಖಕ್ಕೆ ಮುಖ ಅನಿಸಿ ನಿಂತುಕೊಂಡು "ಏನಪ್ಪಾ... ಓದ್ಕಂಡಂತನ್ನಂಗೆ ಕಾಣಿಸ್ತೀ... ಏನಪ್ಪಾ... ಶಾಮನ ಗೇಣೆಕಾರನಂಗೆ ಕಾಣಿಸ್ತಿದ್ದೀ... ನಿಂಗೆ ರವಷ್ಟಾದ್ರು ತಿಳಿಬಾರ್ದೇನು? ಸತ್ತೋನ ಸಂಗ್ತಿ ಎತ್ತಿ ನಮ್ಮ ಅನಸೂವಿ ಎದಿಗ್ಯಾಕ ಬೆಂಕಿ ಹಚ್ಚಿದ್ಯೋ... ಅನಸೂವಿ ನಮ್ ಪ್ಯಾಟಿಗೆಲ್ಲ ಮಗ್ಳಿದ್ದಂಗೆ... ನಾವೆಲ್ರು ನಮ್ ನಂ ಪ್ರಾಣಕ್ಕಿಂತ ಹೆಚ್ಚಾಗಿ ನೋಡ್ಕೊಂತಿದ್ದೀವಿ...ಈಕಿಗೆ ಏನಾರ ವಂಚೂರು ಹೆಚ್ಚೂ ಕಡ್ಮೆ ಆದ್ರೆ ನಾವೆಲ್ಲ ನಿನ್ನ ಸುಮ್ನೆ ಬಿಡಾಕಿಲ್ಲ ನೋದು... ಗೋಣು ಮುರ್ದು ಅವ್ವನ ಮರ್ಕೆ ನೇತಾಕ್ತೀವಿ... ಪೋಲೀಸ್ರೂ ನಮ್ದೇನು ಹರಕನ್ನಂಗಿಲ್ಲ... ಹ್ಹಾಂ... ಎಂದು ಕಟುಮ್ಮನೆ ಗೋಟಡಕೆ ಕಡಿದು ಸದ್ದು ಮಾಡಲು ನಾನು ಜಲಜಲನೆ ಬೆವತು ಹೋದೆನು.
ನನಗೆ ಸಪೋರ್ಟಾಗಿ ಹೆಂಗತ್ತೆ ಹಿಂಗತ್ತೆ ಅಂತ ಬಂದ ರಾಖೇಶನನ್ನು "ಏನಲೋ ಮೂಳಾ ಎಂದು ತಡವಿಕೊಂಡಳು. "ಲೋ ರಾಕೇ... ಚಾ... ನನ್ನಾಟಗಳ್ಳನೇ... ಯೇಸು ಮಂದಿಯ ಮನಿ ವಸೂದಿ ಮಾಡಿರುವಿಯಲ್ಲೋ... ನೀನೇ ಅಲ್ಲೇನೋ ಬ್ಯಾಂಕಿನಾಗಿದ್ದ ಶಾಮಂಣನ್ನ ಕರ್ಕೊಂಡು ಬಂದು ನಮ್ಮನುಸೂವಿಗೆ ಜತಿ ಮಾಡಿದ್ದು... ನನ್ ಮಗ್ಳು ಸಾವಿತ್ರೀನ ಅಡ್ಡ ಹಾಕ್ಲಿಕ್ಕೆ ನೋದ್ದೆಲ್ಲೋ ಬಾಡ್ಕಾವ್... ಆಕೀನ ಒಪ್ಲಿಲ್ಲ ಸರಿ... ಒಪ್ಪಿದ್ದಿದ್ರೆ ಈಕೆಯಂಗೆ ಆಕೀನು ಕಂಣೀರಲ್ಲಿ ಕಯ್ಯ ತೊಳೀಬೇಕಾಗಿತ್ತಾ... ಅವ್ನೀಗೆ ಬದ್ಲಿ ನಿನ್ನಾದ್ರು ಹೊತ್ಕೊಂಡೋದ್ರಾ... ಥೂ... ನಿನ್ನ ತಲಿಹಿಡುಕ ಜನುಮಕ್ಕೀಟು ಬೆಂಕಿ ಹಾಕಾಽಽ" ಎಂದು ತರಾಟೆಗೆ ತೆಗೆದುಕೊಂಡಳು.
ಆ ಕೂದಲೆ ತಲೆ ಹಿಡುಕರ ಸಂಘದ ಗೌರವ ಸದಸ್ಯರಾದ ಯಂಕೋಬಿ, ಮಲ್ಲ, ತಿಗಳ


೩೨೯

ಮುಂತಾದವರು ತಮ್ಮ ಅಧ್ಯಕ್ಷ ರಾಖೇಶನ ನೆರವಿಗೆ ಬಂದರು.
"ನೋದು ಗೋವಿಂದವ್ವೇ... ನಾವು ತಂದು ಅಡ್ಡ ಹಾಕದಿದ್ದಲ್ಲಿ ನೀವೆಲ್ಲ ಹುಣಸೇ ಬೊಟ್ಟು ಕುಟ್ಗೆಂತ ಇರ್ಬೇಕಾಗಿತ್ತು..." ಎಂದು ತಿಗಳ ತನ್ನ ಬೋಳು ನೆತ್ತಿ ಸವರಿಕೊಂಡ.
ಕೆಲವು ವೇಶ್ಯೆಯರು ಗೋವಿಂದಮ್ಮನ ಪರ ಕಚ್ಚೆ ಏರಿಸಿ ನಿಂತಿರು... ಅವರ ಮತ್ತು ತಲೆ ಹಿಡುಕ ಸಂಘದ ಸದಸ್ಯರ ನಡುವೆ ಜಟಾಪಟ ಶುರು ಆಯಿತು. ಒಬ್ಬರ ಜುಟ್ಟು ಒಬ್ಬರು ಹಿಡಿದುಕೊಂಡು ಎಳೆದಾಡತೊಡಗಿದರು. ಇಂಥದೊಂದು ಇತಿಹಾಸ ಪ್ರಸಿದ್ಧ ಜಗಳದಿಂದ ಹುರುಪುಗೊಂಡ ಆರೆಂಪಿ ಅಮರಪ್ಪ "ಜಗಳಾಡೊದಿದ್ರೆ ಬೀದಿ ಬಯಲಾಗ ಜಗಳಾಡ್ರಿ... ನಮ್ ಅನಸೂಯವ್ವಂಗೆ ಮತ್ತೆ ತಲಿ ನೋವು ಮಾಡಬ್ಯಾಡ್ರಿ..." ಎಂದು ಕೈಯಲಿದ್ದ ಸಿರಂಜಿಯನ್ನೇ ವಜ್ರಾಯುಧದಂತೆ ಝಳಪಿಸುತ್ತ ಅವರನ್ನು ಎಬುಡಾ ದಬುಡಾ ಹೊರಕ್ಕೆ ತಳ್ಳಿದನು. ರಾಖೇಶನು ನನ್ನ ರಟ್ಟೆ ಹಿಡಿದು ಹೊರಗೆ "ಅನಸೂಯಮ್ಮನ ತಲೆ ನೆಟ್ತಗಿಲ್ಲ... ಅನಂತಪುರಕ್ಕೆ ಹೋಗಿ ಶಾಮಂಣನ ಹೆಂಡ್ತಿಯಿಂದ ಸಿಕ್ಕಾಪಟ್ಟೆ ಬಯ್ಯಿಸಿಕೊಂಡು ಬಂದಂದಿನಿಂದ ಹಿಂಗಾಡ್ತಿದಾಳೆ... ಆಕೆಗೆ ತಲೆ ಕೆಆಗ ಅವರಿವ್ರೀಗೆ ಮದ್ದು ಇಟ್ಟು ಸರಿಪಡಿಸಿಕೊಳ್ತಾಳೆ. ಇದು ಜರಮಲಿ ಪಾಳ್ಳೆಗಾರ ವಂಶದೋರಲ್ಲಿ ಮೊದಲ್ನಿಂದ ನಡಕೊಂಡು ಬಂದಿರೋ ಆಚಾರ... ಉಪಾಯಾಂತರದಿಂದ ನಿಮ್ಮ ತಲೀಗೆ ಮದ್ದು ತಿಕ್ಕಿದ್ರೆ ಕಷ್ಟ. ನೀವು ಮೊದ್ಲೆ ಹೆಂಡ್ತಿ ಮಕ್ಕಳೊಂದಿಗ್ರು... ಶಾಮಂಣಗೆ ಆಕೆ ಹುಚ್ಚು ಹಿಡ್ದದ್ದು ಹೇಗಂತೀರಾ?" ಎನ್ನತೊಡಗಿದ. ಅವನು ಕ್ರಮೇಣ ನೀಚಸ್ಥಾನ ತಲುಪಿ ನನ್ನನ್ನು ಗಲಿಬಿಲಿಗೊಳಿಸಿದ. ಅವನು ಮುಂದೆ ಹೇಳಲಿದ್ದನ್ನು ನನಗೆ ಕೇಅಲು ಇಷ್ಟವಿರಲಿಲ್ಲ. ನನು ಲಗುಬಗೆಯಿಂದ ಹರುಕುಮುರುಕು ಕತ್ತಲಲ್ಲಿ ಹೆಜ್ಜೆ ಹಾಕಿದೆ. ಕಾಂಚನಾ ಕೂಗಿ ಕರೆಯಬೇಕೆಂದೋ! ಕರೆಯಬಾರದೆಂದೋ! ಒಟ್ಟಿನಲ್ಲಿ ನಾನು ಹಾಕುತ್ತಿದ್ದ ನಡಿಗೆಗೆ ಸಂಬಂಧಿಸಿದಂಥ ಖಚಿತತೆ ಇರಲಿಲ್ಲ. "ರ್ರೀ ಸ್ವಾಮಿ... ನಾನು ಹೇಳೋದ್ನ ಕೇಳಿಸ್ಕೋತೀರಾ ಸ್ವಲ್ಪ... ಹಿಂಗಾಗ್ತದಂದ್ರೆ ನಾನು ಶಾಮಂಣಗೆ ಅನಸೂಯಮ್ಮನ ಪರಿಚಯ ಮಾಡಿಸ್ತಾನೇ ಇರ್ಲಿಲ್ರೀ... ನೀವು ಕಥೆ ಕಾದಂಬರಿ ಬರ್‍ಯೋರಂಥ ಗೊತ್ತಿದ್ರೆ ಬಸ್‌ಸ್ಟಾಂಡ್ನಲ್ಲಿ ನಿಮ್ ತಂಟೆಗೇ ಬರ್ತಿರ್‍ಲಿಲ್ಲ. ಆಗಿದ್ದು ಆಗಿಹೋಯ್ತು... ಅಪೂರ್ವ ಚಿಂತಾಮಣಿಯಂಗ ಶೋಬಿಸ್ತಿರೋ ಯಶೋದಳ ಮನೇಲಿ ಈ ರಾತ್ರಿ ಉಳ್ಕೊಂಡಿದ್ದು ಬೆಳ್ಗೆದ್ದು ಹೋದರಾಗ್ತಿತ್ತಲ್ಲ. .." ಇನ್ನು ಏನೇನೋ ಮಾತಾಡುತ್ತ ಅವನು ಹಿಂದೆ ಹಿಂದೆ ಬರುತ್ತಿದ್ದ... ಅವನ ಕೈಗೆ ಸಿಕ್ಕದಂತೆ ನಾನು ಬೀಸು ಹೆಜ್ಜೆ ಹಾಕತೊಡಗಿದೆ... ಇನ್ನೇನು ಸೋಮಾರಪೇಟೆ ದ್ದಟಿ ಬಿಟ್ತೆ ಎನ್ನುವಷ್ಟರಲ್ಲಿ ಅವನು ಓಡಿ ಬಂದು ನನ್ನ ಎದುರಿಗೆ ನಿಂತೇಬಿಟ್ಟ. ಏನೆಂದೆ? ಅವನು ಏದುಸಿರು ಬಿಡುತ್ತ ನನ್ಗೂ ಹೊಟ್ಟೆ ಇದೆ... ಹೆಂಡ್ತಿ ಮಕ್ಳೊಂದಿಗ ಬೇರೆ! ಎಂದು ಹೆಂದೆಲೆ ಕೆರೆದ. ಜೇಬಿನಿಂದ ಒಂದು ನೋಟು ತೆಗೆದು ಬೀದಿ ದ್ ಪದ ಬೆಳಕಿಗೆ ಹಿಡಿದೆ. ಅದರ ಒಂದು ಕಡೆ ಪಾರ್ಲಿಮೆಂಟೂ; ಇನ್ನೊಂದು ಕಡೆ ಅಶೋಕನ ಕಾಲದ ಮೂರು ಸಿಂಹಗಳು ಇದ್ದುದನ್ನು ಖಚಿತ ಪಡಿಸಿಕೊಂಡು ಅವನ ಬೊಗಸೆಗೆ ಹಾಕಿದೆ. ಅವನು ಅದನ್ನು ಕಂಣಿಗೆ ಒತ್ತಿಕೊಂಡು "ನನ್ ಸೇವೆ ಮುಂದೆಂದಾದ್ರು ಬೇಕಾದ್ರೆ ನಿಸ್ಸಂಕೋಚವಾಗಿ ಬರ್ರಿ ಭಾವ... ಸರ್ಕಿಲ್ ಆಫೀಸ್ ಹಿಂದುಗಡೆ ದಕ್ಷಿಣಕ್ಕೆ ಮುಖವಾಗಿರೋದೇ ನನ್ನ ಮನೆ ಹ್ಹಿ... ಹ್ಹಿ..." ಎಂದ. ಒಂದೊಂದು ನಿಮಿಷಕ್ಕೆ ಒಂದೊಂದು ರೀತಿಯ ಭಾಷೆ ಬಳಸುವುದರಲ್ಲಿ ನಿಷ್ಣಾತನಾದ ಅವನನ್ನು ಬದಿಗೆ ತಲ್ಲಿ ನಾನು ಬಸ್‌ಸ್ಟಾಂಡ್ ಕಡೆ ಹೆಜ್ಜೆ ಹಾಕಿದೆ



೩೩೦
*
*
*

ಮನೆಸೇರಿ ಒಂದು ದಿನ ಕಳೆದರೂ ಹೆಂಡತಿ ಅನ್ನಪೂರ್ಣನೊಂದಿಗೆ ಮನಸ್ಸು ಬಿಚ್ಚಿ ಮಾತಾಡಲು ನನ್ನಿಂದ ಸಾಧ್ಯವಾಗಲಿಲ್ಲ. ತನ್ನ ಬಳಿ ಇರುವ ಹಸ್ತಪ್ರತಿ ಮೇಲೆ ಮತ್ತೊಮ್ಮೆ ಕಣ್ಣಾಡಿಸಿರಬಹುದಾದ ಆಕೆ ಕಾದಂಬರಿಯ ಮುಂದಿನ ಬೆಳವಣಿಗೆ ಬಗ್ಗೆ ಹೆಚ್ಚು ಕುತೋಹಲದಿಂದ ಇದ್ದಳು... ನಾನು ಆಕೆಯೊಂದಿಗೆ ಮಾತಾಡುವಾಗ ಹತ್ತಾರು ಹಗರಣಗಳಿಗೆ ಸಿಲುಕಿಕೊಂಡ ಮಾಜಿಯೂ; ವೃದ್ಧನೂ ಆದ ಪ್ರಧಾನಿಯಂತೆ ಕಂಪಿಸುತ್ತಿದ್ದೆ. ಶರದೃತುವಿನಲ್ಲಿ ಕುಲು ಕಣಿವೆಯ ತುಟ್ಟ ತುದಿಯಲ್ಲಿ ನಿಂತು ಕಂಪಿಸುವ ಮುಗ್ಧ ಪ್ರವಾಸಿಗನಂತೆ ಕಂಪಿಸುತ್ತಿದ್ದೆನು. ಐದನೇ ತುತ್ತಿಗೆ ಕೈ ತೊಳೆದುಕೊಳ್ಳುತ್ತಿದ್ದೆನು. ನೀರನ್ನು ನುಂಗಲು ಪ್ರಯಾಸ ಪಡುತ್ತಿದ್ದೆನು. ಬೆಳಗಿನ ಜಾವದವರೆಗೆ ಅತ್ತಇತ್ತ ಹೊರಳಾಡೀಽ ಹೊರಳಾಡೀ ಇನ್ನೇನು ಮುಂಗೋಳಿ ಕೂಗ್ಕಂತದೆ ಅನ್ನುವಾಗ ಜೋಂಪು ಹತ್ತಿ ಕಂಣು ಮುಚ್ಚುತ್ತಿದ್ದೆನು... ಮಂಪರಿನೊಳಗೆ ಏನನ್ನೋ ಕನವರಿಸುತ್ತಿದ್ದೆನಂತೆ... ಅದೇನನ್ನು ಕಂಬರಿಸುತ್ತಿದ್ದೆನೋ.. ಆ ನಮ್ಮ ಮಂದೇವರಾದ ಹಳೇಕೋಟೆ ವೀರಭದ್ರ ದೇವರಿಗೇ ಗೊತ್ತು. ಕೊತ್ತಲಿಗಿಯ ಸೂಕ್ಷ್ಮ ವಿಚಾರಗಳನ್ನು ಕೇಳಿ ಬಲ್ಲವಳಾದ ಅನ್ನಪೂರ್ಣೆಯು ಇದೇನಿದು/ ತನ್ನ ಗಂಡನು ಅನಂತಪುರ, ಕೊತ್ತಲಿಗಿಯೇ ಮೊದಲಾದ ತೆಂಕಣ ದೇಶಗ್ಫಳನ್ನು ಸುತ್ತಿ, ಖಾಸಗೀ ಕೋಶಗಳನ್ನು ಬಂದಾಗಿನಿಂದ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿಲ್ಲ... ಎಡ್ಲಾರ್ ಅಲನ್ ಪೋನ ಕಥೆಯೊಂದರ ನಾಯಕಮಣಿಯಂತೆ ವರ್ತಿಸುತ್ತಿರುವನಲ್ಲ... ಇದರಲ್ಲೇನೋ ಗೂಢವಡಗಿದೆ ಎಂದು ಬಗೆದವಳಾಗಿ ಪರಿಪರಿಯಾಗಿ ಪರಾಂಬರಿಸತೊಡಗಿದಳು. ತನ್ನ ದೇಹದ ಅಂತಃಶಕ್ತಿಯನ್ನು ‘ಛೂ’ ಬಿಟ್ಟು ತನ್ನ ಗೈರುಹಾಜರಿಯಲ್ಲಿ, ಸುಪ್ತಾವಸ್ಥೆಯಲ್ಲಿ ನನ್ನ ಚಲನವಲನ ಮೇಲೆ ನಿಗಾ ಮಡಗಿದಳು. ಆ ತದನಂತರ ಅರ್ಥವಾಯಿತು. ನನ್ನಂಥ ಹುಂಬು ಬೇರೊಬ್ಬನಿಲ್ಲಂತ. ಪಿಶಾಚಿಯೊಂದು ಬಡಕೊಂಡಿದೆ ಎಂಬರ್ಥ ಬರುವಂತೆ ನಾನು ಆಕೆಯ ಗೈರುಹಾಜರಿಯಲ್ಲಿ ಅಲ್ಲಲ್ಲಿ ಶೋದಿಸಿ ತಂದಿರ್ದ ‘ರಿಕಾಲ್ಡುಗಳನ್ನು ಹರಡಿಕೊಂಡು ಅವುಗಳಲ್ಲಿ ಶಾಮಂಣನು ನನ್ನ ಬಗ್ಗೆ ಏನಾದರೂ ಪ್ರಸ್ತಾಪಿಸಿರುವನೋ ಎಂದು ನನಗಿಂತ ಎಷ್ಟೊಂದು ಚೆನ್ನಾಗಿ ಕೈಫಿಯತುಗಳ ಸ್ಟೈಲಿನಲ್ಲಿ ಬರೆದಿರುವನಲ್ಲ ಎಂಬ ಹೊಟ್ಟೆಕಿಚ್ಚಿನಿಂದೋ ಕಂಣಲ್ಲಿ ಎಣ್ಣೆ ಬಿಟ್ಟುಕೊಂಡು ನೋಡುತ್ತ ಬಿಡಬಾರದಕಡೆ ನಿಟ್ಟುಸಿರು ಬಿಡುತ್ತ, ಜೊಲ್ಲಿನ ಹನಿಗಳನ್ನುದುರಿಸಿ, ಅಕ್ಷರಗಳ ಅಂದಚೆಂದವನ್ನು ಹದಗೆಡಿಸುತ್ತ ಮರುಕ್ಷಣದಲ್ಲಿ ಚೆಂಬಲ್ ಕಣಿವೆಯ ದರೋಡೆಕೋರನಂತೆ ಮೂಲೆಗೆ ಸರಿಸುತ್ತಿದ್ದೆನು. ಮಲಗಿಕೊಂಡಾಗಲೂ ಆ ಅರ್ಥವಾಗದ ಮಸಯೆಗೆ ಕಟ್ಟು ಬಿದ್ದು "ಶಾಮಂಣಾ... ಅನಸೂಯಾ... ಕಾಂಚನಾ... ರಾಖೇಶಾ..." ಎಂಬಿವೇ ಮೊದಲಾದ ನಾಮಪದಗಳನ್ನು ಅವುಗಳ ಕ್ರಿಯಾ ವಿಷೇಶಣಗಳ ಸಹಿತ ಕನವರಿಸುತ್ತಿದ್ದೆನು.

ಇಂಥಪ್ಪ ಹಲವು ಸುಷುಪ್ತಾವಸ್ಥೆಯ ಚಟುವಟಿಕ್ರ್ಗಳನ್ನು ಗಮನಿಸಿದವಳಾದ ಶ್ರೀಮತಿಯು "ರ್ರೀ... ರ್ರೀ ಎದ್ದೇಳ್ರೀ... ಅದ್ಯಾರ್ರೀ ಅವಳು ಬೋಸೂಡಿ ಕಾಂಚನಾ ಎಂಭೋಳು?... ಒಳ್ಳೆ ಮಾತ್ನಿಂದ ಹೇಳ್ತೀರೋ ಇಲ್ಲ ಅನ್ನ ನೀರು ಬಿಟ್ತು ಕೂಡ್ರಲೋ" ಎಂದು ಏಕ್‌ಧಂ ನಾರಾಯಣಾಸ್ತ್ರ ಪ್ರಯೋಗಿಸುವುದನ್ನು ಶುರುಮಾಡಿದಳು... ನಾನಲ್ಲಿಂದ ಬಂದೊಡನೆ ಅನಂತಪುರಕ್ಕೆ ಹೋಗಿದ್ದನೆಂದು ಹೇಳಿದ್ದೆನೇ ಹೊರತು ಕೊತ್ತಲಗಿ ಮನ್ವಂತರದ ಉಪಕಥೆಗಳನ್ನು


೩೩೧

ಅಪ್ಪಿ ತಪ್ಪಿ ಹೇಳಿರಲಿಲ್ಲ... ಅವೆಲ್ಲ ಸೇರಿಕೊಂಡು ನಾನು ಮಲಗಿದ್ದಾಗ ಪಂಚೇಂದ್ರಿಯಗಳ ದ್ವಾರ ಚಿತ್ರವಿಚಿತ್ರವಾಗಿ ಪ್ರಕಟಗೊಳ್ಳುತ್ತ ಹಿಂಸಿಸತೊಡಗಿದ್ದವು. ಅವುಗಳು ತಂಡೋಪ ತಂಡವಾಗಿ ನೆರೆದಿದ್ದ ಮನವೆಂಬ ಜಲಿಅನ್ ವಾಲಾಬಾಗಿನ ಇನ್ನೊಂದು ಬಾಗಿಲ ಬಳಿ ಜನರಲ್ ಡಯರನಂತೆ ಬದ್ಧಭ್ರುಕುಟಿಯಾಗಿ ನಿಂತಿರುವ ಅನ್ನಪೂರ್ಣಳಿಗೆ ಏನೆಂದು ಹೇಳುವುದು! ಏನೊಂದೂ ಹೇಳದೆ ಇರುವುದು! ಶಾಂಣ ಎಂಬ ನಾಯಕ ಪಾತ್ರವನ್ನು ಪುಷ್ಟೀಕರಿಸುವಂಥ ಅನಸೂಯಾ; ಕಾಂಚನಾ, ರಾಖೇಶರಂಥ ಪೋಶಕ ಪಾತ್ರಗಳು ಮೇಲುಗೈ ಸಾಧಿಸಿ ನೋಡುಗರಲ್ಲಿ ಕೇಳುಗರಲ್ಲಿ ಪ್ರಥಮ ಪೂಜೆ ಮಾಡಿಸಿಕೊಳ್ಳುವಂಥ ಅನ್ನಪೂರ್ಣೆಯಲ್ಲಿ ಹೊಚ್ಚ ಹೊಸ ಅನುಮಾನಗಳನ್ನು ಸೃಷ್ಟಿಸಿದ್ದವು... ನನ್ನ ದೃಷ್ಟಿಯಲ್ಲಿ ಅನ್ನಪೂರ್ಣೆ ಕೇವಲ ಹೆಂಡತಿ ಮಾತ್ರ ಆಗಿರಲಿಲ್ಲ... ದುರಿತ ದುರೀಹ ದುರಾಶಯ ದುರ್ಮದ ದಾನವ ದೂತ ಕೃತಾಂತ ಸ್ವರೂಪಿಣಿಯಾದ ಮಹಿಷಾಸುರ ಮರ್ದಿನಿ ಆಗಿರುವಂತೆಯೇ ರುದ್ರಗ್ರಂಥಿ ವಿಭೇದಿನಿಯೂ, ಸಹಸ್ರಾರಾಂಬುಜಾರೂಢೆಯೂ; ಸುಭಾಸಾರಾಭಿವರ್ಷಿಣಿಯೂ ಆದ ಸ್ರೀ ಲಲಿತೆಯೂ ಆಗಿದ್ದಳು. ನನ್ನೊಳಗಿನ ಅರಿಷಡ್ವರ್ಗಗಳಿಗೆ ಲಗಾಮು ಹಾಕಿ ನನ್ನನ್ನೂ ಒಬ್ಬ ಸದ್ವರ್ತನಾ ನರಮಾನವನನ್ನಾಗಿ ಮಾಡಿರುವ ಈ ಅನ್ನಪೂರ್ಣೇಶ್ವರಿ ನಿಜ ಹೇಳಬೇಕೆಂದರೆ ನನ್ನೊಳಗೆ ಒಂದು ಪೋಲೀಸ್ ಠಾಣೆಯನ್ನೇ ಸೃಷ್ಟಿಸಿದಳು. ಪತ್ತೆದಾರಿಕೆಗೆ ಸಂಬಂಧಿಸಿದಂಥ ಎಲ್ಲ ಗುಣಗಳನ್ನು ಲೀಲಾಜಾಲವಾಗಿ ರೂಢಿಸಿಕೊಂಡಿದ್ದಳು. ಆಕೆಯ ಕ್ರಾಸ್ ಕ್ವಶೆನ್ನಿನಿಂದ ಗಲಿಬಿಲಿಗೊಂಡು "ಯಾವ ಕಾಂಚನ?... ಎನ್ಕಥೆ?... ನನನ್ಗೊಂದೂ ಅರ್ಥವಾಗ್ತಿಲ್ಲ" ಎಂದೆ - ಮಹಾ ಮಳ್ಳಿಗನ ಸೋಗು ಧರಿಸಿ, ಕಾಂಚನ ನನ್ನೊಳಗಿನ ಎಲ್ಲಾ ಕೋಣೆಗಳನ್ನು ಆಕ್ರಮಿಸಿಕೊಂಡು ವಸ್ತಿ ಮಾಡಿರುವುದನ್ನು ಮರೆಮಾಚುತ್ತ ಕೆಲವು ಲೇಖಕರ ಜಾಯಿಮಾನ ಗಿರಿಜಮ್ಮ, ಸುಕನ್ಯರಂಥವರಿಂದ ಕೇಳಿಬಲ್ಲ ಆಕೆಗೆ ನನ್ನ ಉತ್ತರದಿಂದ ಸಮಾಧಾನವಾಗಲಿಲ್ಲ... "ಯಾವ ಕಾಂಚನ ಅಂತೀರಲ್ಲ... ಅದೇ ಕಾಂಚನ ಕಣ್ರೀ... ನೀವಿಷ್ಟು ದಿನ ಎಲ್ಲೆಲ್ಲಿಗೆ ಹೋಗಿದ್ರಿ? ಯಾರ್‍ಯಾರ್‍ನ ಕಂಡಿದ್ರಿ?... ಏನೇನು ಘನಕಾರ್ಯ ಸಾಧಿಸಿದ್ದೀರಿ ಎಂಬೋದೆಲ್ಲ ಗೊತ್ತು ಕಣ್ರಿ... ಬೆಕ್ಕು ಕಂಣು ಮುಚ್ಕೊಂಡು ಹಾಲು ಕುಡಿದ್ರೆ ಯಾರೂ ನೋಡೊದಿಲ್ಲಾಂತ ತಿಳ್ಕೊಳ್ತಂತೆ... ಹಂಗಾಯ್ತು ನಿಮ್ದೂನೂವೆ... ನೀವೆಂಥೋರಂಥ ಗೊತ್ತಿಲ್ವೇನ್ರಿ ನನಗೆ... ನನ್ ಕಂಣಿಗೆ ಮಂಣೆರಚ್ತೀರಾ... ಹ್ಹ... ಹ್ಹ..."ಎಂದು ಕಂಣಲ್ಲಿ ನೀರು ತಂದುಕೊಂಡು ಅದನ್ನೇ ಶಾಪ ಕೊಡುವ ಉದಕ ಮಾಡಿಕೊಂಡು ಝಳಪಿಸಿದಳು. ಮಾಳವ ದೇಶಕ್ಕೂ, ಬಂದೇಲ ಖಂಡಕ್ಕೂ ನಡುವೆ ಹರಡುಕೊಂದಿರುವ ಕೋಲಾಹಲ ಪರ್ವತ ಶ್ರೇಣಿಯಂತಾಗಿ ಬಿಡುವಳೋ ಎಂದು ಹೆದರಿದೆ. ಆಕೆಯ ಮುನಿಸೆಂಬ ಪಾಶುಪತಾಸ್ತ್ರವನ್ನು ಎದುರಿಸುವ ಶಕ್ತಿ ಕೈಹಿಡಿದ ಕ್ಷಣವೇ ಕಳೆದುಕೊಂಡಿರುವ ನಾನು ಕಂಚನ ಎಂಬುದು ನಾನು ಓದಿರುವ ಯವುದೋ ಕಾದಂಬರಿಯಲ್ಲಿನ ಪಾತ್ರವಿರಬಹುದೆಂದೂ; ಅದು ನಿದ್ದೆಯಲ್ಲಿ ಕನವರಿಕೆ ಮೂಲಕ ಪ್ರಕಟವಾಗಿರಬಹುದೆಂದೂ ಏನೇನೋ ಹೇಳಲು ಪ್ರಯತ್ನಿಸಿದೆ. ನನ್ನ ವಾಗ್‌ವೈಖರಿ ಸಮಯಪ್ರಜ್ಞೆ ತಂತ್ರೋಪಾಯಗಳನ್ನು ಕಳೆದ ಹದಿನೈದು ವರ್ಷಗಳಿಂದ ಗಮನಿಸುತ್ತ ಬಂದಿರುವ ಆ ಸೂಕ್ಷ್ಮಮತಿಯು "ರ್ರೀ ಎಲ್ಲಿವರ್‍ಗೂ ಇಂಥ ಸುಳ್ಳುಗಳ್ನ ಹೇಳ್ತಾ ಹೋಗ್ತೀರಿ... ಯಾವಳ್ನೋ ಅಂತರಂಗದಲ್ಲಿಟ್ಕೊಂಡು ಹೊರಗಡೆ ಮಾತಿಗೆ ಬೆಣ್ಣೆ ಹಚ್ತಿದೀರಲ್ಲ... ಇದೆಲ್ಲ ನನಗೆ ಗೊತ್ತಾಗೋಲ್ಲಾಂತ ತಿಳ್ಕೊಂಡೀರೇನು? ಇಂಥ ಮಾತುಗಳನ್ನ ಕೇಳೀ, ಕೇಳಿ ನನಗೆ ಸಾಕಾಗಿ ಹೋಗಿದೇರ್ರೀ... ನೀವು ಎಷ್ಟಿದ್ರು ಶಾಮನಂಥೋರ ಸ್ನೇಹಿತ್ರು... ಅವನಂಥೋರ ಚಾಳಿ ನಿಮ್ಗೂ ಬಡ್ಕೊಳ್ದಂಗಿರ್‍ತದೆಯೇ! ಹೋಗಿ, ಆ ಕಾಂಚನಾ ಎಂಬ


೩೩೨

ತಾಟಗಿತ್ತಿಬಳಿಗೆ ಹೋಗಿ ಇದ್ದುಬಿದಿ... ನಾನು ನಮ್ಮಕ್ಕಳನ್ನ ಕರ್ಕೊಂದು ನನ್ತವ್ರು ಮನೆಗೆ ಹೊಂಟೊಗ್ತೀನಿ..." ಎಂದು ಕೊಸರುತ್ತ ವಾಕ್ಯದೊಳಗಿಂದ ಅರ್ಥ ಹೋಗುವಂತೆ; ಕಾವ್ಯದೊಳಗಿಂದ ಅಲಂಕಾರ ಹೋಗುವಂತೆ ಸರಪರ ಎದ್ದು ಅಡುಗೆ ಸೇರಿ ಹಂಡೆ ಮೇಲೆ ಬಾಂಡಲೆಯನ್ನು ಬಡಿದು ದೊಡ್ಡ ಸದ್ದು ಮಾಡಿದಳು. ಪರಿಸ್ಥಿತಿ ಕೆಡುವ ಮೊದಲೆ ಸರಿಪಡಿಸಬೇಕೆಂದು ನಿರ್ಧರಿಸಿ ನಾನೂ ಎದ್ದು ಹೋಗಿ ಗುಗ್ಗುಳೋಪಾದಿಯಲ್ಲಿ ಧಗಧಗ ಉರಿಯುತ್ತಿದ್ದ ಆಕೆಯನ್ನು ಪರಿಪರಿಯಾಗಿ ಸಮಾಧಾನಿಸುವ ಕೃತ್ಯಕ್ಕಿಳಿದೆನು. ಕೇಳುವುದನ್ನು ಕೇಳಿ, ಕೇಳಿ ಆಕೆ ಎದೆಮೇಲೆ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು... ನಾನು ಒಂದು ಹಿಡಿ ಕಂಣೀರು ತಂದುಕೊಂಡು "ಹುಚ್ಚೀಇ ಯಾಕಳ್ತೀಯೇ?... ನಿನ್ಗೆ ದ್ರೋಹ ಬಗೆಯೋವಂಥ ಯಾವ ತಪ್ಪನ್ನೂ ನಾನು ಮಾಡಿಲ್ಲ... ಮುಂದೆ ಮಾಡೋದೂ ಇಲ್ಲ... ತಿಳೀತಾ ಸುಮ್ಕಿರು" ಎಂದು ಭರವಸೆ ನೀಡಿದೆ. ಅಪನಂಬಿಕೆಯಿಂದ ದಿತ್ತಿಸಿದಳು. ... ಆಕೆ ಪ್ರಮಾಣ ಮಾಡಿಸಿದಳು. - ಮಾಡಿದೆ... "ಹಾಗಿದ್ರೆ ನೀವೆಲ್ಲೆಲ್ಲಿ ಹೋಗಿದ್ರಿ... ಯಾರ್‍ಯಾರ ಜೊತೆ ಮಾತಾಡಿದ್ರಿ ಎಂಬ ಬಗ್ಗೆ ಒಂಚೂರು ಬಿಡದ ಹಾಗೆ ಹೇಳಿಬಿಡ್ರಿ... ನೀವೇನು ತಪ್ಪು ಮಾಡಿದ್ರೂ ಹೊಟ್ಟೇಲಿ ಹಾಕ್ಕೊಳ್ತೀನಿ... ನಾವು ಹೆಣ್ಣಾಗಿ ಹುಟ್ಟಿರೋದೆ ಅದ್ಕೆ... ವಿಷಯ ಮರೆಮಾಚಿದ್ರೋ... ನನ್ನಾಣೆ..." ಎಂದು ಪಟ್ಟು ಹಿಡಿದಳು.

ರಾಮ್‌ಜೇಠ್ಮಲಾನಿಯಂಥ ಆಕೆ ಎದುರು ಮುಚ್ಚಿಡೋದಾದ್ರು ಏನಿದೆ? ರೋಗದ ವಿಷಯ ವೈದ್ಯರ ಎದುರೂ; ಖಟ್ಲೆ ವಿಷಯ ವಕೀಲರೆದುರೂ ಮಚ್ಚಿಡಬಾರದೂಂತ ಹಿರಿಯರು ಹೇಳಿರುವರು. ನಾನು ನನ್ನ ನಾಲಕೈದು ದಿನದ ಪ್ರವಾಸದ ಅನುಭವವನ್ನು ‘ಅ’ ಅಕ್ಷರದಿಂದು ಹಿಡಿದು ‘ಕ್ಷ’ ಎಂಬ ಅಕ್ಷರದವರೆಗೆ ಸಾಂಗೋಪಾಂಗವಾಗಿ ವಿವರಿಸಿತೊಡಗಿದೆನು. ಗುರಿ ಕಡೆ ನಿಗಾ ಇಟ್ಟಿರುವ ಬೇಟೆಗಾರನಂತೆ ಆಕೆ ಬಿಡುಗಣ್ಣಿಂದ ನನ್ನ ಮುಖವನ್ನೇ ನೋಫ್ಡುತ್ತಿದ್ದಳು. ಆಗ ನಾನು ಅನಸೂಯಮ್ಮನವರ ಮನೆಯಲ್ಲಿದ್ದ ಕಾಂಚನಾ ಎಂಬ ತರುಣಿಯ ಬಗೆಗೂ ಪ್ರಸ್ತಾಪಿಸದಿರಲಿಲ್ಲ... ಆಕೆ ನಿಟ್ಟುಸಿರು ಬಿಡುತ್ತ, "ಆಕೇನ ಮನಸ್ಸಿನಲ್ಲೇನಾದ್ರೂ ಪ್ರೀತ್ಸಿದ್ರೋ ಇಲ್ಲೋ ಅಷ್ಟು ಹೇಳಿ" ಎಂದು ‘ಢಾಂ’ ಅಂತ ಕೇಳಿದಳು. ನಾನು ಒಂಚೂರು ಅವಕ್ಕಾದೆ... ನಂಗೆ ಪಿ.ಯು.ಸಿ. ಓದುವಾಗ್ಲೆ ಮದ್ವೆ ಆಗಿದ್ರೆ ಆ ವಯಸ್ಸಿನ ಮಗಳಿರ್‍ತಿದ್ಲು ಕಣೇ ಅಂದೆ... "ಅಂದ ಮೇಲೆ ಆಕೀನ್ಯಾಕೆ ಕನವರಿಸ್ತಿದ್ರಿ!" ಎಂದು ಮರು ಪ್ರಶ್ನೆ ಹಾಕಿದಳು. "ಅದನ್ಯಾಕೆ ಈ ಅರ್ಥದಲ್ಲಿ ತಗೋತೀಯೇ ಪುಣ್ಯಾತ್ಗಿತ್ತಿ" ಅಂದೆ ತುಸು ಬೇಸರದಿಂದ. ಅಷ್ಟೆಲ್ಲ ಹೇಳೋದನ್ನು ಹೇಳಿ ಆದ ಮೇಲೆ ಕೇಳೋದನ್ನು ಕೇಳಿ ಆದ ಮೇಲೆ "ನೀವು ಬರೀತಿರೋ ಕಾಅದಂಬರೀನ ಬಚ್ಚಲ ಒಲೇಲಿ ಇಟ್ಟುಬಿಡಿ... ಸ್ನಾನಕ್ಕೆ ನೀರಾದ್ರು ಕಾಯ್ತವೆ" ಎಂದು ತೀರ್ಪು ಪ್ರಕಟಿಸಿದಳು... ತಲೆ ಮೇಲೆ ಕಂಚನಗಂಗ ಕಳಚಿ ಬಿದ್ದಂಥ ಅನುಭವವಾಯಿತು ನನಗೆ... ಬಲಗೈಯ ಮಧ್ಯಮ ಬೆರಳಿನ ಮುಂದೆಲುಬು ಸವೆಯುವಂತೆ ಬರೆಯಿಸಿಕೊಂಡಿರುವ ಕಾದಂಬರಿಯ ಹಸ್ತಪ್ರತಿಯನ್ನು ಅಗ್ನಿಗೆ ಅರ್ಪಣ ಮಾಡುವುದೆಂದರೇನು? ಮುಂಗೈಯ ತೆನ್ನಿಸ್ ಎಲ್ಬೋ ಸವೆದು ಕೊಡುತ್ತಿರುವ ಕಾಟ ಪರಿಶೀಲಿಸಿ ಡಾ.ಅರವಿಂದ ಪಾಅಟೀಲರು ‘ಒಂದೆರಡು ವರ್ಷ ಬರೆಯೋದು ಬಿಟ್ಟುಬಿಡಿ ಎಲ್ಲ ಸರಿಹೋಗ್ತದೆ’ ಎಂದು ಕೊಟ್ಟಿರುವ ಗಂಭೀರ ಸೂಚನೆಯನ್ನು ಲೆಕ್ಕಿಸದೆ ಬರೆದಿರುವ ಕಾದಂಬರಿಯನ್ನು ಬಚ್ಚಲ ಯಜ್ಞಕುಂಡಕ್ಕೆ ಬಲಿಕೊಡುವುದೆಂದರೇನು? ಶಾಮಂಣನ ನೆನಪುಗಳೊಂದಿಗೆ ತಳುಕುಹಾಕಿ ಕೊಂಡಿರುವ ನನ್ನ ಸ್ವಂತ ಬದುಕನ್ನೂ ಅನಾವರಣಗೊಳಿಸಿರುವ ಕಾದಂಬರಿಯನ್ನು ಒಲೆಯಲ್ಲಿಟ್ಟು


೩೩೩
ಸುಟ್ಟು ನೀರು ಕಾಯಿಸುವುದೆಂದರೇನು? ಹಾಗೇನಾದರು ಮಾಡಿದರೆ ಕಾದಂಬರಿಯೊಳಗಿನ ನೂರಾರು ಪಾತ್ರಗಳು ಸುಮ್ಮನಿದ್ದಾವೆಯೇ? ವಿವಿಧ ಕಾಲಮಾನದಲ್ಲಿ ಸತ್ತು ಬಟಾಬಯಲೊಳಗೆ ಅಂತ ಪಿಶಾಚಿಯಾಗಿ ಅಲೆಯುತ್ತಿರುವ ಅಪ್ಪ, ಅಜ್ಜಿ; ಶಾಮಂಣ, ಪರಮೇಶ್ವರಶಾಸ್ತ್ರಿ; ಶಿವಪೂಜೆ ಕೊಟ್ರಗೌಡ, ಅಲುಮೇಲಮ್ಮಜ್ಜಿ, ಇವೇ ಮೊದಲಾದ ನೂರೆಂಟು ಪಾತ್ರ ಸುಟ್ಟರೂ ಅದು ಹೇಗೆ ನಾಶ ಹೊಂದುತಾವೆ? ಮುಂದೆ ಒಂದಲ್ಲಾ ಒಂದು ರೀತಿಯಲ್ಲಿ ಕಥೆಗಾರನಾದ ನನ್ನ ಪಂಚೇದ್ರಿಯಗಳ ಮೂಲಕ ಪ್ರಕಟವಾಗುತ್ತ ಕಾಟ ಕೊಡದೆ ಇದ್ದಾವೆ? ಅದೂ ಅಲ್ಲದೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಕೋತ್ಯಾಂತರ ಮಂದಿಯ ಸಮೂಹ ಶ್ರಮದಿಂದ ರೂಪುಗೊಂಡಿರುವ ಭಾಷೆಗೆ ದ್ರೋಹ ಬಗೆದಂತಾಗುವುದಿಲ್ಲವೇ ತಮ್ಮೀ ಕೃತ್ಯದಿಂದ. "ನವಜಾತ ಶಿಶುವು ಬೇರೆಯಲ್ಲ; ಈ ಕಾದಂಬರಿಯ ಹಸ್ತಪ್ರತಿ ಬೇರೆಯಲ್ಲ್ ಕಣೇ... ವಾತ್ಸಲ್ಯವನ್ನು ಮೂಡುತ್ತಿರುವ ಕಾದಂಬರಿ ಬಗೆಗೂ ತೋರು..." ಎಂದು ಮೊದಲಾಗಿ ಕೇಳಿಕೊಳ್ಳಲು ಆಕೆ ಹೌದೋ? ಅಲ್ಲವೋ ಎಂಬಂತೆ ಒಪ್ಪಿಕೊಂದಳು. ಕಾದಂಬರಿ ಬರೀತಾ ಆ ಕದಂಬರಿಯ ಪಾತ್ರಗಳ ಗುನ ಸ್ವಭಾವಗಳನ್ನು ರೂಢಿಸಿಕೊಳ್ಳಕೂಡದೆಂದೂ; ಇಂಥ ಹಸು ಸ್ವಭಾವದವರು ಬರೆದಿರುವುದೇ! ಎಂದು ಓದುಗರು ಆಶ್ಚರ್ಯ ಪ್ರಕಟಿಸುವಂತಾಗಬೇಕೆಂದೂ; ಅನ್ನಪೂರ್ಣೆಶ್ವರಿಯವರು ಅಪ್ಪಣೆ ಕೊಡಿಸಿದರು... ನಾನು ತಲೆ ಅಲ್ಲಾಡಿಸಿ ಸಮ್ಮತಿಸಿದೆನು. ನಾನೂ; ನನ್ನ ಕಾಲ; ನನ್ನ ಸಮಾಜ; ನನ್ನ ದೇಶ ಇವೆಲ್ಲ ಕಾಅದಂಬರಿಯೊಳಗೆ ಲೀನವಾದಾಗಲೇ ಅದಕ್ಕೊಂದು ಮಹತ್ವ ಲಭಿಸುವುದೆಂದು ಹೇಳಿದರೆ ಆಕೆಗೆ ಅರ್ಥವಾಗುವುದಿಲ್ಲ.

ಈ ಘಟನೆ ಗತಿಸಿದ ನಂತರ ಹೆಚ್ಚು ಗೆಲುವಾದ ನಾನು ನನ್ನಲ್ಲಿ ಸೃಜನಶೀಲ ಪ್ರತಿಕ್ರಿಯೆಯನ್ನು ಹೆಂಡತಿ ತನ್ನ ಖಚರ ದೃಷ್ಟಿಯಿಂದ ಗಮನಿಸುತ್ತಿರುವಳೆಂಬ ಎಚ್ಚರಿಕೆಯಿಂದ ಟೇಬಲ್ ಲ್ಯಾಂಪಿನ ಒಂದು ಗೇಣಗಲ ಬೆಳಕಿನಲ್ಲಿ ಅಲ್ಲಲ್ಲಿ ಸಂಪಾದಿಸಿ ತಂದಿದ್ದ ಶಾಮಂಣನ ಗತ ಜೀವನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹರವಿಕೊಂಡು ಕೂತು ಪರಿಶೀಲಿಸಲು ಶುರುಮಾಡಿದೆ... ಒಂದೊಂದು ದಾಖಲೆಗೆ ಜೀವ ಮೂಡಿ ಮಿಸುಕುತ್ತಿರುವಂತೆ ಭಾಸವಾಗತೊಡಗಿತು. ಶಾಮಂಣ; ಶಾಸ್ತ್ರಿಗಳು; ಅಲುಮೇಲಮ್ಮಜ್ಜಿ; ಹಾಲಪ್ಪ; ನಿಂಗಮ್ಮಜ್ಜಿ; ಸಿದ್ದಮ್ಮಜ್ಜಿಯೇ ಮೊದಲಾದ ಗತಿಸಿದ ಪಾತ್ರಗಳು ನನ್ನ ವಾಮಪಕ್ಷದಲ್ಲೂ; ವರಲಕ್ಷ್ಮಿ; ಅನಸೂಯಮ್ಮ; ಕಾಂಚನ; ರಾಖೇಶರೇ ಮೊದಲಾದ ಗತಿಸಿರದ ಪಾತ್ರಗಳು ನನ್ನ ಬಲಪಾರ್ಶ್ವದಲ್ಲೂ ನೆರೆಯಲಾರಂಭಿಸಿ ತೇಬಲ್ಲೆಂಬ ಅಖಾಡವು ಕಿಕ್ಕಿರಿಯತೊಡಗಿತು... ‘ಎಲವೋ ದುರುಳ... ನಿನ್ನ ಪೆನ್ನು... ನಿನ್ನ ಹಾಳೆ ಅಂಥ ಓದುಗರನ್ನು ರಂಜಿಸಲೋಸುಗ ಬಾಯಿಗೆ ಬಂದದ್ದನ್ನು ಬರೆದು ನಮ್ಮ ಬದುಕಿಗೆ ಕಳಂಕ ಹಚ್ಚೀಯೆ... ಜೋಕೆ... ಎಂದು ಪ್ರತಿಯೊಂದು ಪಾತ್ರವೂ ಹೇಷಾರವ ಕೆನೆಯತೊಡಗಿತು.

"ಏನೇ ಚಿನಾಲಿ... ನಾನು ಅಪಘಾತದಲ್ಲಿ ವೈಕುಂಠವಾಸಿ ಆಗಿದ್ದೀನಂತ ತಿಳ್ಕೊಂಡು ಆ ನಿನ್ನ ಸಂಬಂಧಿ ವಲ್ಲಭನ ಮನೆಯೊಳ್ಗೆ ಮೊಸಳೆ ಕಣ್ಣೀರು ಹಾಕ್ತಾ ಕೂತಿದ್ದೀಯಾ... ಆ ಮ್ನೇಲಿ ಒಂದು ಪೂಜೆ ಉಂಟಾ ಪುನ್ಸ್ಕಾರ ಉಂಟಾ?... ನನ್ನ ಮೊಮ್ಮಕ್ಕಳಾದ ಶಿವರಾಮ್ಗೂನೂವೆ; ಅಶ್ವತ್‌ನಾರಾಯಣ್ಗೂವೆ ಸಂಸ್ಕೃತ ಅಭ್ಯಾಸ ಮಾಡಿಸಿ ವೈದಿಕಕ್ಕೆ ಹಚ್ಚಿ ಮನ್ತನದ ಗೌರವ ಕಾಪಾಡೋದು ಬಿಟ್ಟು ಕಿರಿಸ್ತಾನರ ಸ್ಕೂಲಿಗೆ ಹಾಕಿದ್ದೀಯಾ... ಈ ನಿನ್ನ ಕೃತ್ಯವನ್ನು ನಮ್ಮ ವಂಶದ ಹಿರಿಯರು ಕ್ಷಮಿಸಲಾರರು ಕಣೇ; ಕ್ಷಮಿಸಲಾರರು... ನಾನಿದ್ರೆ ನಿಮ್ಮೀ ಕೃತ್ಯಕ್ಕೆ ತೊಂದರೆ ಅಗ್ತದಂತ ತಾನೆ ಉಭಂ ಶುಭಂ ನುಡಿಯದೆ ತೀರ್ಥಯಾತ್ರೆಗೆ ಬೀಳ್ಕೊಟ್ತಿದ್ದು... ಇದ್ದ ಬದ್ದ ಹಣಾನೆಲ್ಲ ಕಳ್ಕೊಂಡು


೩೩೪

ಕಾಶೀ ಕ್ಷೇತ್ರದಲ್ಲಿ ಪವಿತ್ರ ಗಂಗಾನದಿ ದಡದ ಮೆಲೆ ನಾನು ಕೂತು ದಿನಗಳನ್ನು ಎಣಿಸ್ತಿರೋದು ನಿನ್ನ ಕರುಳಿಗೆ ಗೊತ್ತಾಗ್ತಿಲ್ಲಲ್ಲೇ... ನಿನಗೆ ಕರುಳಿದ್ರೆ ತಾನೆ ತಿಳಿಯೊದು... ನಾನು ನಿನ್ಗೆ ಎಷ್ಟೊಂದು ಪತ್ರ ಬರೆಸಿದೆ... ಏನ್ಕಥೆ ನೀನೊಂದಾದ್ರು ಪತ್ರ ಬರೆದ್ಯಾ ನಂಗೆ... (ವಿಳಾಸ ಗೊತ್ತಿದ್ರೆ ಹೀಗಾಗ್ತಿರಲಿಲ್ಲ) ಕಾಶೀ ವಿಶ್ವನಾಥ ಸ್ವಾಮಿ ದಿನಾಲು ಕನಸಿನಲ್ಲಿ ಕಾಣಿಸಿಕೊಂದು ಮುದುಕಿ ಎಷ್ಟು ದಿನಾಂತ ಬದುಕಿರ್‍ತಿ... ನನ್ ಪಾದ ಸೇರ್‍ಕೊಂಡುಬಿಡು... ನಿನ್ಗೆ ಸ್ವರ್ಗ ಲಭಿಸ್ತದೆ ಎಂದು ಹೇಳ್ತಾನೆ ಇದ್ದಾನೆ... ನಿನ್ನ ಗತಿಸಿದ ಗಂಡನ ಮುತ್ತಜ್ಜಮ್ದಿರಾದ ಘಂಟಾ ಶಾಮಾಶಾಸ್ತ್ರಿಗಳ ಆತ್ಮವೂ ಬಂದುಬಿಡಮ್ಮ ಎಷ್ಟು ದಿನಾಮ್ತ ವಿಲವಿಲನೆ ಒದ್ದಾಡ್ತಾ ಇರ್‍ತೀಯಾ... ಮನವ ಸಹಜ ಕ್ರಿಯೆಗಳನ್ನು ಮರೆತು ಸ್ವರ್ಗದಲ್ಲಿ ಆರಾಮ ಇರಬೌದಂತ ಕರೀತಾನೆ ಇದೆ... ನಾನರ್‍ಗೆಲ್ಲ ಹೇಳ್ತಿರೋದು ಒಂದೆ...

ನನ್ನ ಮೊಮ್ಮಕ್ಕಳಾದ ಶಿವರಾಮನ, ಅಶ್ವಥ್‌ನ ಮದುವೆ ಆಗದ ಹೊರತು ನಸ್ವರ ದೇಹ ತ್ಯಜಿಸುವುದಿಲ್ಲ... ಅಂತ... ಅಷ್ಟು ದೂರ ಇರೋಳು ಹ್ಯಾಂಗ ಬರ್‍ತಾಳಂತ ನೀನಂದ್ಕೊಳ್ಳಬೌದು... ಇಷ್ಟು ದೂರ ಬಂದಿರೋಳ್ಗೆ ಅಷ್ಟು ದೂರ ಹೋಗೋದು ಕಷ್ಟವಲ್ಲ ಎಂಬುದನ್ನು ಮರೀಬೇಡ... ನನ್ ಮಗನ ಚರಾಸ್ತಿಯಲ್ಲಿ ನನ್ನ ಪಾಇಗೆ ಬರೋದಿನ್ನೂ ಅದೆ... ಕಾಶಿಗೆ ಬಂದ ಮೆಲೆ ನಂಗೆ ಅದೆಲ್ಲ ನೆನಪಾಗಿದ್ದು... ಇದೇ ಕಾಶಿ ಮಹಿಮೆ ನೋಡು... ಗೋಸುಂಬೆ ಥರ ಇರೋ ನಿನ್ಗೆ ಇದೆಲ್ಲ ಏನರ್ಥ ಆಗ್ತದೆ... ಮುಂದೊಂದಿನ ಬಂದೇ ಬರ್‍ತೀನಿ... ಎಲ್ಲದಕ್ಕೂ ತಯಾರಾಗಿರು... ಹ್ಹಾಂ!" ಎಂದು ಅಲುಮೇಲಮ್ಮಜ್ಜಿ ಪಾತ್ರ್ವೌ ತನ್ನ ಸೊಸೆ ವರಲಕ್ಶ್ಮಿ ಎಂಬ ಪಾತ್ರವನು ತರಾಟೆಗೆ ತೆಗೆದುಕೊಂಡಿತು. ಕಾದಂಬರಿಕಾರನಂಥ ಅನ್ಯ ಪುರುಷನ ಎದುರಿಗೆ ತನ್ನನ್ನು ಹರಾಜು ಹಾಕುತ್ತಿರುವುದಲ್ಲ ಎಂಬ ದುಃಖಾವೇಶದಿಂದ ವರಲಕ್ಷ್ಮಿ ಎಂಬ ಪಾತ್ರವು "ಅಯ್ಯೋ ಆಯ್ಯೊ..." ಆಮ್ಟಾ ಏಡೇಏಡೇ ಬಡಿದುಕೊಂಡಿತು... "ನಾನದಾವ ಜನುಮದಲ್ಲಿ ಅದಾವ ಘನ ಘೋರ ಪಾಪ ಮಾಡಿದ್ದೆನೋ... ನಿನ್ನ ಸೊಸೆಯಾಗಿ ಅನುಭವಿಸ್ಲಿಕ್ಕೆ... ಅನುಭವಿಸಬಾರದದ್ದನ್ನೆಲ್ಲ ಅನುಭವಿಸಿದ ನಂತರವೂ ಬದುಕಿರುವ ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿರುವೆಯಲ್ಲಾ... ಎರಡು ಮಕ್ಕಳು ನನ್ನುದರದಿಂದ ಜನಿಸದಿದ್ದಲ್ಲಿ ಎಂದೋ ಸಲ್ಲೇಖನಾವ್ರತರೂಢಳಾಗಿ ಇಹ ವ್ಯಾಪಾರ ಮುಗಿಸಿಬಿಡುತ್ತಿದ್ದೆ ಅತ್ತೆಮ್ಮಾ... ಈ ವಲ್ಲಭ ರುಕ್ಮಿಣಿ ಆಶ್ರಯ ಕೊಡದಿದ್ದಲ್ಲಿ ನಾನೂ ಮಕ್ಕಳನ್ನು ಕಟ್ಟಿಕೊಂದು ತುಂಗೆಗೆ ಅರ್ಪಿಸಿಕೊಂದುಬಿದುತ್ತಿದ್ದೆ... ನಿನ್ನ ಮಗನಿಗಾದ ಗತಿ ನಿನ್ ಮೊಮ್ಮಕಳಿಗೂ ಬರಬಾರ್ದು ನೋದು... ವೈದಿಕ ಮಾಡೊದು ಕಲ್ತು ಅರೆಹೊಟ್ಟಿಯಿಂದ ನಿನ್ ಮೊಮ್ಮಕ್ಕಳು ಬದಿಕಿರೋದು ನಿನಗಿಷ್ಟವೇನು? ಬದಲಾದ ಕಾಲಧರ್ಮಕ್ಕೆ ತಕ್ಕಂತೆ ನಾನೂ ನಿನ್ ಮೊಮ್ಮಕ್ಕಳಿಗೆ ಇಂಗ್ಲೀಷು ಕಲಿಸೋ ಸ್ಕೂಲಿಗೆ ಹಾಕಿದ್ದೀನಿ ಅತ್ತೆಮ್ಮಾ... ಅವರೂ ಡಾಕ್ಟ್ರೋ. ಇಂಜಿನಿಯರೋ ಆಗಿ ತಮ್ಮ ಕಾಲ ಮೇಲೆ ನಿಂತುಕೊಂಡು ನಾಲ್ಕು ಜನರ ಹಾಗೆ ಸುಖವಾಗಿ ಬದುಕುವಂತಾದರೆ ಅದಕ್ಕಿಂತ ಸಾರ್ಥಕಥೆ ಮತ್ತೊಂದೇನಿದೆ? ಇನ್ನು ನಿನ್ನ ನಾವು ಸೇರ್‍ಲಿಲ್ಲಾಂತ ಅಪಾದನೆ ಹೊರಿಸ್ತಿದ್ದೀಯಾ? ಇದು ಶುದ್ಧ ಸುಳ್ಳು! ಈ ಕಾದಂಬರಿಕಾರ ಇದನ್ನೇ ನಿಜ ಅಂದ್ಕೊಂಡಾನು! ಇವ್ನೂ ಅನಂತಪುರಕ್ಕೆ ಬಂದಿದ್ದ ನಿನ್ನ ಮೇಲೆ ನಮ್ಗೆಲ್ಲ ಎಷ್ಟೊಂದು ಪ್ರೀತಿ ಇದೆ ಅಂತ ಇವ್ನಿಗೂ ಗೊತ್ತು... ಜಲದೊಲಗೆ ಘೃತದ ಬಿಂದುವಿನಂತೆ ರಾಮಾ ಕೃಷ್ಣಾಂತ ನಾನು ದಿನ ನೂಕುತ್ತಿರೋದ್ನ ಈ ಮನುಷ್ಯನೂ ನೋಡ್ಕೊಂಡು ಬಂದಿದ್ದಾನೆ ಅತ್ತೆಮ್ಮ... (ಕಾದಂಬರಿಯಲ್ಲಿ ಇದನ್ನೆಲ್ಲ ಎದ್ದು ಕಾಣುವಂತೆ ಪ್ರಸ್ತಾಪಿಸು ಮಹರಾಯಾ) ಶ್ರೀ ವಲ್ಲ್ಭ ದಂಪತಿಗಳು ಲಕ್ಷಕ್ಕೊಬ್ಬರು... ಒಡಹುಟ್ಟಿದ ಅಕ್ಕನಿಗಿಂತ ನನ್ನನ್ನು
-

೩೩೫

ಹೆಚ್ಚಾಗಿ ನೋಡ್ಕೋತಿದ್ದಾರೆ. ಮನೆ ಖರ್ಚಿಗೆ ಅವರು ನನ್ನಿಂದ ಚಿಕ್ಕಾಸೂ ಪಡೆದಿಲ್ಲ... ಇದ್ದ ಹಣಾನೆಲ್ಲ ಮಕ್ಕಳ ಹೆಸರಿಗೆ ಮಾಡಿಸಿ ಬ್ಯಾಂಕಿನಲ್ಲಿಟ್ಟು ಬಿಟ್ಟಿದ್ದೀನಿ. ಅವರೇ ಇಲ್ಲಾಂದ ಮೇಲೆ ಆ ಹಣ ತಗೊಂಡು ನಾನ್ಯಾವ ಭೋಗ ಅನುಭೋಗ್ಸ್ಲಿ ಹೇಳು ಅತ್ತೆಮ್ಮಾ... ಶ್ರೀವಲ್ಲಭನಾಗ್ಲೀ ಅತನ ಹೆಂಡತಿ ರುಕ್ಮಿಣಿಯಾಗಲೀ ಸತ್ತೋರ ಅಥವ ಕಂಡೋರ ಗಂಟಿಗೆ ಆಸೆ ಪಡೊದಿಲ್ಲಾಂತ ಪ್ರಮಾಣ ಮಾಡಿ ಹೇಳ್ತೀನಿ... ಬೇಕಾದ್ರೆ ಈ ಕಾದಂಬರಿಕರನ್ನೇ ಕೇಳು... ನಿನ್ನ ಬಗ್ಗೆ ನಮಗಾಗ್ಲೀ; ಶ್ರಿ ವಲ್ಲಭಗಾಗಲೀ ಪ್ರೀತಿ ಇಲ್ಲಾಂತ ತಿಳಿಕೊಂಡಿದ್ರೆ ಅದು ನಿನ್ನ ತಪ್ಪು ಅತ್ತೆಮ್ಮ. ಇದ್ದಷ್ಟು ದಿನ ನಮ್ಮ ಮೆಲೆ ಅನುಮಾನ ಪಟ್ಕೊಂಡಿ. ಪರಮಾನ್ನದಲ್ಲಿ ವಿಷ ಹಾಕಿದ್ದಾರಂತ ದೊಡ್ಡ ರಂಪಾಟ ಮಾಡ್ದಿ... ಅದೂ ಸಾಲ್ದೂಂತ ಹೃಷಿಕೇಶ, ಹರಿದ್ವಾರ ಕಾಶಿ ಅಂತ ಹೊಂಟುಬಿಟ್ಟೆ. ಒಂದು ಮಾತು ಮೊದ್ಲೆ ತಿಳಿಸಿದ್ರೆ, ನಾವೇ ಒಳ್ಳೆಯದು ಕೆಟ್ಟದ್ದು, ವಿಚಾರಿಸಿ ಏರ್ಪಾಟು ಮಾಡ್ತಿದ್ವಿ, ಹಾಗೆ ತಿಳಿಸೋ ಸೌಜನ್ಯ ತೋರಿಸ್ಲಿಲ್ಲ ನೀನು. ಪ್ರಾಯನ ಸುಖಕರವಾಗ್ಲಿ ಅಂತ ನಾವು ಮನದಲ್ಲೆ ಹಾರೈಸಿದ್ವಿ... ಇದು ಮುಂಗೋಪಿಯಾದ ನಿನಗೆ ಅರ್ಥವಾಗಲಿಲ್ಲ. ನಮ್ಮ ವಿಳಾಸ ಮತ್ತಿತರ ವಿವರ ಒಯ್ಯದಿದ್ದುದು ನಮ್ಮ ತಪ್ಪು ಹೇಗಾಗುತ್ತದೆ? ನಿನಗೆ ತಿಳಿಯದ ಹಾಗೆ ಭಾರತದ ಎರಡು ಮೂರು ಭಾಶೆಗಳಲ್ಲಿ ನಮ್ಮ ವಿಳಾಸ ಬರೆದ ಚೀಟಿಗಳನ್ನು ನಿನ್ನ ಚೀಲದಲ್ಲಿ ಇಟ್ತಿವೆಂದುಕೋ; ಅಕ್ಷರಗಲನ್ನು ನೀನು ಸಿಡಿಮದ್ದು ಎಂದು ಭಾವಿಸಿ ಹರಿದೆಸೆಯದೇ ಇರುತ್ತಿರಲಿಲ್ಲ... ಅರವತ್ತು ಆದಮೇಲೆ ಅರಳುಮರುಲು ಎಮ್ಭೋ ಮಾತಿಗೆ ನೀನು ಪ್ರತ್ಯಕ್ಷ ನಿದರ್ಶನ ಅತ್ತೆಮ್ಮಾ... ನನ್ನಂಥ ಹತಭಾಗಿನಿಯರಿಗೆ ಹರಿದ್ವಾರ, ಕಾಶಿ ಪುಣ್ಯಕ್ಷೇತ್ರಗಳು ಗಾಳಿಗಂಟು ಮಾತ್ರ... ಆದ್ದರಿಂದ ಮಕ್ಕಳನ್ನೇ ತೀರ್ಥಕ್ಷೇತ್ರಗಳೆಂದು ಭಾವಿಸಿ ಸಂತೋಷಪಡುತ್ತಿರುವೆನು. ನಮ್ಮೆಲ್ಲರ ಪರವಾಗಿ ಕಾಶಿಯಂಥ ಪುಣ್ಯಧಾಮದಲ್ಲಿರುವ ನೀನು ಈಗಾಗಲೇ ಕಾಶೀರಮಣ ವಿಶ್ವನಾಥನನ್ನೂ; ಆತನ ಪತ್ನಿಯರಾದ ವಿಶಾಲಕ್ಷಮ್ಮ, ಅನ್ನಪೂರ್ಣಮ್ಮನವರನ್ನು ನೂರಾರು ಬಾರಿ ದರ್ಶಿಸಿ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿರಬಹುದು. ನೀವು ಕಾಶಿಯ ಯಾವ ಘಾಟಿನ ಎಷ್ಟನೆ ಮೆಟ್ಟಲ ಮೇಲೆ ಕೂತಿದ್ದು ಕಾಲಕ್ಷೇಪ ಮಾಡುತ್ತಿರುವಿರೋ ಏನೋ? ಖಂಡಿತ ನಿಮ್ಮ ಕೈಯಲ್ಲಿ ಜಪಮಾಲೆ ಇದ್ದೇ ಇರುತ್ತದೆ... ಅದು ಇರುವವರೆಗೆ ನಿಮಗೆ ಭಯವಿಲ್ಲ. ಅದು ಕಳೆಯುವ ಹೊತ್ತಿಗೆ ನಮ್ಮ ಮಕ್ಕಳೂ ದೊಡ್ಡವರಾಗಿರುತ್ತಾರಲ್ಲದೆ ನಿನ್ನನ್ನು ಹುಡುಕಲು ಸಮರ್ಥರಾಗಿರುತ್ತಾರೆ... ನೀನು ಇಚ್ಛೆಪಟ್ಟರೆ ನಿನ್ನನ್ನಿಲ್ಲಿಗೆ ಖಂಡಿತ ಕರೆತರುತ್ತಾರೆ... ಹೆದರಬೇಡಿ... ನಿನ್ನ ನೆನಪಿನಲ್ಲಿ ನಾನದೆಷ್ಟು ಕೃಶಳಾಗಿದ್ದೇನೆ ಗೊತ್ತೆ? ದೂರ ಇದ್ದು ಹಿಂದೂ ಮುಂದೂ ತಿಳಿಯದೆ ಶಪಿಸುತ್ತಿರಬೇಡಿ...

ಇದರಿಂದ ನಮಗೆ ಶ್ರೇಯಸ್ಸಲ್ಲ ಕಣತ್ತಯ್ಯಾ... ನಾನು ಹೀಗೆ ಹೇಳ್ತಿದ್ದೀನಂತ ತಪ್ಪು ತಿಳ್ಕೋಬೇಡಿ... ಕ್ರಮೇಣ ಆಧುನಿಕ ಮನಸ್ಸನ್ನು ರೂಢಿಸಿಕೊಂಡಿದ್ದ ನಿಮ್ಮ ಮಗಂದಿರನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ಸುಖವಾಅಗಿಡಲು ನಾನು ಪಟ್ಟ ಕಷ್ಟ ನಿಮ್ಗೂ ಗೊತ್ತು... ಆ ಭಗವಂತನಿಗೂ ಗೊತ್ತು! ನಿಮ್ಮ ಮಗನ ಕೈ ಹಿಡಿಯದೆ ನಾನು ಬೇರೆಯವರ ಕೈ ಹಿಡಿದಿದ್ದರೆ ನಿಮ್ಮ ಮಗಂದಿರೂ ಸುಖವಾಗಿರ್‍ತಿದ್ರು... ನಾನೂ ದೀರ್ಗ ಸುಮಂಗಲಿಯಾಗಿರ್‍ತಿದ್ದೆ. ರುಕ್ಮಿಣಿಯನ್ನು ಪತ್ನಿಯಾಗಿ ಅವರೂ; ಸೊಸೆಯಾಗಿ ಸ್ವೀಕರಿಸಿದ್ದರೆ ನೀವೂ ಸುಖವಾಗಿರ್‍ತಿದ್ರಿ ಅಂತ ಈಗ ಅನ್ನಿಸ್ತಾ ಇದೆ... ಆದರೆ ನು ಮಾಡುವುದು? ವಿಧಿ ನಿರ್ಣಯ ಹಾಗಿತ್ತು(ಅಲ್ವೇ? ಕದಂಬರಿಕಾರರೇ)... ಒಟ್ಟಿನಲ್ಲಿ ಹೇಗೋ ಬದುಕುತ್ತಿದ್ವಿ... ಆದ್ರೆ ಈ ಗಯ್ಯಾಳಿ ಮೂರುಕಾಸಿನ ಸೂಳೆ ಅನಸೂಯ... ನಮ್ಮನ್ನು ಸುಖವಾಗಿರಲು ಬಿಡ್ಲಿಲ್ವಲ್ಲ..." ಎಂದು ವರಲಕ್ಷ್ಮಿ ಎಂಬ ಪಾತ್ರ ನಿಟ್ಟುಸಿರು ಬಿಡುವ



೩೩೬

ಮೊದಲೆ ಅನಸೂಯ ಎಂಬ ಪಾತ್ರವು ನಖಶಿಖಾಂತಧಗಧಗ ಉರಿದುಹೋಯಿತು.ಅದು ನನ್ನ ಟೇಬಲ್ ಮೆಲಿದ್ದ ಟಿಪ್ಪಣಿಯೊಳಗಿಮ್ದ ಬೃಹದಾಕಾರವಾಗಿ ಬೆಳೆದು ನಿಂತಿತು... "ಅಯ್ಯೋ... ಅಯ್ಯೋ" ಅಂತ ಎದೆ ಎದೆ ಬಡಿದುಕೊಂಡಿತು. "ಆಆ ಘಾರಾಟೀ ಆಆದ್ಟೀರೊ ಂಆಆಟ್ಣಾ ಖೆಲೀಡೀ ಎನಪ್ಪಾ ಕಾದಂಬರಿಕಾರಾ... ನೀನೆ ಬಂದು ನೋಡ್ದೆಲ್ಲಾ ನನ್ನ ಪರಿಸ್ಥಿತೀನ... ಸೋಮಾರಪ್ಯಾಟೆ ಎಂಬೋ ಸೋಮಾರಪ್ಯಾಟೆ ನನ್ನನ್ನೋಡಿ ಮಮ್ಮಲನೆ ಮರುಗುತ್ತಿರೋದ್ನ... ನಾನು ಸೂಳೆ ಆಗಿರಬೌದು... ಆದ್ರೆ ಯಾವ ಗರತಿಗಿಂತ ಏನು ಕಡ್ಮೆ ಇದ್ದೀನಂತ... ತಲಬಾಕ್ಲ ಮೇಲೆ ನನ್ ಶಾಮೂನ ಫೋಟೋನ ಹಾಕಿ ಹೂವ್ನಾರ ಇಳಿಬಿಟ್ಟು ಲೊಬಾನ ಎತ್ತಿ ಊದ್ನ ಕಡ್ಡಿ ಹಚ್ಚಿತ್ತು ಸಣ ಮಾಡೀ ಮಾಡೀ ಮೊಣ್ಕಾಲೆಂಭೋವು ಟೆಂಗಿನ ಚಿಪ್ಪಾಗಿರೋದು ಯಾರ್‍ಗಾರ ಯಂಗೆ ಗೊತ್ತಾಗತೈತೆ. ಇಟ್ಕೊಂಡೋಳಿರೋ ತನಕ ಕಟ್ಕೊಂಡೋಳು ಕೊನೀತನ್ಕ ಎಂಬ ಗಾದಿ ಮಾತ್ನ ತಿರುಗಾ ಮುರುಗಾ ಮಾಡ್ದೋಳಪ್ಪಾ ನಾನು. ಇದೇನೀಕೆ ಮಾತ್ಮಾತ್ಗೆ ಸೂಳೇ ಸೂಳೇಂತ ಹಂಗಿಸ್ತಾಳೇಂತ... ಹೌದು... ನಾನು ಸೂಳೆ... ನಮ್ಮವ್ನೂ ಸೂಳೆ. ನಮ್ಮಮ್ನೂ ಸೂಳೆ ಯಾರಿಲ್ಲಾಂದ್ರೀಗಾಂತ... ಇದು ನಮ್ಮ ಕುಲ ಕಸುಬಪ್ಪಾ ಕುಲ ಕಸುಬು... ರಾಜಮಾರಾಜ್ರಿಂದ ಬಂದಿರೋ ಕುಲಕಸುಬಪ್ಪಾ... ದೇವ್ರು ಗುಡ್ಯಾಗ ನರ್ತನ ಮಾಡ್ತಿದ್ದೋರು ನಾಟಕಗೂಳಾಗ ಪಾತ್ರ ಮಾಡಲಕ ಹತ್ತಿ ಪಾತರದೋರನ್ನಿಸ್ಕಂಡ್ವಿ... ಅದ್ರೊಂದ್ರಿಂದ್ಲೆ ಹೊಟ್ಟೆ ತುಂಬಲ್ಲಾಂತಿಟ್ಕೋ... ಆದ್ರೆ ಹಿಂಗಲಾಗ ಮುಂಗಲಾಗ ಕಸುವಿರೋ ಗಂಡುಸು ಮಂದಿ ಬಿಡಬೇಕಲ್ಲ... ಮೂಗಿಗೆ ತುಪ್ಪ ಹಚ್ಚಿ ಮಲಕ್ಕಳ್ಳಿಕ್ಕೆ ಹತ್ತಿದ್ರು... ಡಬ್ಬಿ ಅಂಗಡ್ಯಾಂಗಿಂದೆಂಗ ಕೊಡ್ತಾರೋ ಅಂಗ ಕೊಟ್ವಿ ತೊಗಂಡ್ವಿ! ಇದರಾಗ ತಪ್ಪೇನೈತಂತ... ನಮ್ಗೂ ಒಂದು ನೀತಿ ನಿಯತ್ತೈತಪ್ಪಾ... ನಾವೇನು ಆಕಿ ಗಂಡನ್ನಕೈ ಹಿಡ್ದು ಎಳೆಕೊಂಡು ಬಂದ್ವೇನು? ತಾನೇ ರಾಕೇಚನ ಜತಿ ಮಾಡ್ಕೊಂಡು ಪ್ಯಾಟಿಯೊಳಕ್ಕೆ ಬಂದ. ಪರಮೇಸೂರ ಶಾಸ್ತ್ರಿಗಳ ಮೊಮ್ಮಗ್ನ ಸಾವಸ್ಯಾಕ ಬೇಕೂಂತ ನಾವ್ಯಾರೂ ಅವನ ತಂಟೆಗೋಗ್ಲಿಲ್ಲ... ರಾಕೇಚ ಹಿಂಗಿಂಗ ಅಂತ ಬಂದು ಹೇಳ್ಳಿದ್ರೆ ನಾವಂಗಲ್ಲ ರೊಕ್ಕ ಕೊಟ್ಟೋರ್‍ಗೆಲ್ಲ ಮಲಿಕ್ಕೊಂತ ಹೋಗೋರಲ್ಲಾಂತ ಹೇಳೂಂತ ಹೇಳಿ ಕಳುವಿದೆ. ರಿಣ ಇತ್ತು ಮುಂದೆಂಗೋ ನಾವಿಬ್ರೂ ಜತಿಯಾದ್ವಿ... ನನ್ ಪ್ರೀತಿ ಮೇಲಾಯ್ತೇ ಹೊರ್‍ತು ಈ ವರಲಕ್ಷ್ಮಿಯ ಪಾತಿವ್ರತ್ಯ ಮೇಲಾಗ್ಲಿಲ್ಲಪ್ಪಾ ಕಾದಂಬರಿಕಾರ... ಈ ಪತಿವ್ರತೆ ಎಷ್ಟೊ ಬಾರಿ ನಂ ಪ್ಯಾಟಿಗೆ ನುಗ್ಗಿ, ನಂ ಮನೆ ಮುಂದೆ ನಿಂತು ಸಿಕ್ಕಾಪಟ್ಟೆ ಒದರಾಡಿ ಗಂಡನ ಮಕಕೆ ಮಣ್ಣು ತೂರಿ ಹೋದ್ಲಲ್ಲ... ಆಗೆಲ್ಲಿ ಹೋಗಿತ್ತೂಂತ ಈಕೆಯ ಪಾತಿವ್ರತ್ಯಾಂತ... ನೀನು ನಿಯತ್ತಿನ ಮನುಷ್ಯನಾಗಿದ್ರೆ ನನ್ನಂಥ ಹೆಂಣಿನ ಕರುಳೊಕ್ಕು ಬರೀತಿ... ಇಲ್ಲಾಂದ್ರೆ ಇಲ್ಲ... ಯಾವ್ದೇ ಹೆಂಗಸನ್ನ ಪತಿವ್ರತೆ, ಸೂಳೆಂತ ಗೆರೆ ಕೊಯ್ದು ನೋಡಬ್ಯಾಡಪ್ಪಾ.. ಅಲಲಲಾ... ನನ್ ಕರುಳೆಂಥದೂಂತ ನನಗ್ಗೆ ಗೊತ್ತೇ ಹೊರ್‍ತು ಇನ್ನೊಬ್ಬರ್ರಿಗೆಂಗ ಗೊತ್ತಾಗ್ತದೆಯೇ (ಅಮ್ಮಾ... ತಾಯಿ... ನೀನು ಮಹಾ ಜಗಳಗಂಟಿ... ನಿನ್ಗಲ್ಲ ನಾನೇಳ್ತಿರೋದು... ಈ ಕಾದಂಬರಿಕಾಗೆ... ನೀನಾಗ್ಲಿ... ನಿಮ್ಮತ್ತೆಯಾಗ್ಲಿ ಹಂಗ್ಯಾಕ ದುರುಗುಟ್ಟಿ ನೋಡ್ತೀರಿ... ಸುಮ್ಕಿರ್ರಿ) ಅಲ್ಲಾಪ್ಪಾ... ಹೊಟ್ಟೇಲಿ ಹುಟ್ದೋವೆ ಮಕ್ಳೇನು... ನಮ್ ಶಾಮನ ಮಕ್ಳು ನನ್ನೋವ್ರು ಅಲ್ವೇನು? ಆ ಶಿವರಾಮೂನ, ಅಶ್ವತ್ಥಾನ ಕಣ್ತುಂಬ ನೋಡ್ಬೇಕೂಂತ ಅಷ್ಟು ದೂರದ ಅನಂತಪುರಕ್ಕೆ ಎದ್ಕಂತ ಬಿದ್ಕಂತ ಹೋದ್ರೆ ಈ ನನ್ ಸವತಿ ಬಾಯಿಗೆ ಬಂದಂಗ ಅಂದು ಮಂಗಳಾರತಿ ಮಾಡೋದೇನು? ಎತ್ತಿಕೊಂಡ್ರೆ ಆ ಹಸುಕಂದಮ್ಮಗಳ ಮೈ ಮಲಿನಾಗ್ತಿತ್ತೇನು? ಈಕೆ ಸಿರಿವಲ್ಲಭನ ಕೂಡೆ ಸೇರ್‍ಕೊಂಡು ನನ್ನ ಮಕ್ಳೂನ ಅಪಹರಿಸೋಕೆ ಬಂದಾಳಂತ ಕಂಪ್ಲೀಂಟು ಕೊಟ್ಟಿದ್ರಪ್ಪಾ



೩೩೭

ಕಂಪ್ಲೀಟು... ಆ ಇನುಸುಪೆತ್ರು ನಂಗೆ ಗೊತ್ತಿದ್ದಾತಾದ್ರಿಂದ ಬಚಾವಾಗಿ ಬಂದೆ... ಇಲ್ಲಾಂದ್ರೆ ನಾನು ಜೆಲಲ್ಲಿ ಕೊಳಿಬೆಕಾಗಿತ್ತ... ಇದು ಯಾವುದೇ ಹೆಂಗಸು ಇನ್ನೊಂದು ಹೆಂಗಸಿನ ಮ್ಯಾಲೆ ಮಾಡೋ ಕೃತ್ಯಾನಾ? ನೀನೇ ಹೇಳು! ನೀನು ನಿಜವಾಗ್ಲು ನಿಮ್ಮವ್ವನ ಮಗನಾಗಿದ್ರೆ ನಿಜ ಸೋಸಿ ಬರೀತಿ... ಇಲಾಂದ್ರೆ ಇಲ್ಲ... ನಾನು ಸುಳ್ಳು ಹೆಳ್ತೀನಿಂತ ನೀನು ತಿಳ್ಕೊಂಡಿದ್ರೆ ಬೇಕಾದ್ರೆ... ನಮ್ಮ ಕಾಂಚನಳನ್ನ ಕೇಳು... ಏನೇ ಕಾಂಚನಾ ಹಂಗ್ಯಾಕ ಆ ಕಾದಂಬರಿಕಾರನ್ನ ಹುಳಿ ಹುಳಿ ನೋದ್ಕ್ಕಂತ ನಿಂತಿದ್ದೀ... ಮಾತಾಡು..." ಎಂದು ಅನಸೂಯಮ್ಮ ಎಂಬ ಪಾತ್ರವು ಕಾಂಚನಾಳ ಸೋಟಿಗೆ ತಿವಿದು ಎಚ್ಚರಿಸಿತು. ಟೇಬಲ್ ಮೇಲಿನ ಎಲ್ಲ ಪಾತ್ರಗಳಿಗಿಂತ ಕಾಂಚನಾ ಎಂಬ ಕೋಮಲ ಪಾತ್ರದ ಪರಿಸ್ಥಿತಿ ಅಯೋಮಯವಾಗಿತ್ತು. ನಾನು ಆಕೆಯ ಕಡೆ ನೋಡಲು ಆಕೆಯು ನಾರಾಯಣನು ಕೆರೆದುಕೊಂಡ ತೊಡೆಯಿಂದ ಹುಟ್ಟಿದ ಲೋಕೋತ್ತರ ಸೌಂದರ್ಯವತಿಯಾದ ಊರ್ವಶಿಯೋ; ಅಮೃತವನ್ನು ಹಂಚುವ ಕಾಲದಲ್ಲಿ ರಾಕ್ಷಸರನ್ನು ವಂಚಿಸುವ ಎಷ್ಟು ವೇಶ ದರಿಸಿದ ಮೋಹಿನಿಯೋ; ರಾಜರ್ಷಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿದ ಮೇನಕೆಯೋ; ಕಶ್ಯಪನಿಂದ ಪ್ರಾಥೇಯಳಲ್ಲಿ ಜನಿಸಿದ ಅಪ್ಸರೆಯಾದ ತಿಲೋತ್ತಮೆಯೋ; ಪ್ರವರನ ಪಂಚೇಂದ್ತಿಯಗಳಿಗೆ ಲಗ್ಗೆ ಹಾಕಿದ ವ್ರೂಥಿನಿಯೋ; ಬ್ರಹ್ಮನ ಜ್ಞಾನಶಕ್ತಿಯದ ಗಾಯ್ತ್ರಿಯೋ; ಪಾರ್ವತಿಯ ದೇಹಕೋಶದಿಂದ ಹೊರಬಂದ ಸೌಂದರ್ಯವತಿಯಾದ ಗೌರಿಯೋ; ಮಹಿಷಾಸುರರೇ ಮೊದಲಾದ ಅಸುರರನ್ನು ಸಂಹರಿಸುವ ಪೂರ್ವದ ಚಾಮುಂಡಿಯೋ ಎಂಬಂತೆ ಗೋಚರಿಸಿದಳು... ಅರುಣೋದಯ ಕಾಲದ ಸಮಸ್ತ ಸೊಬಗಿನಿಂದಲೇ ರೂಪುಗೊಂಡಂತಿದ್ದ ಕಾಂಚನಾ ಎಂಬ ಪಾತ್ರವು ಕಾದಂಬರಿಯ ಎಲ್ಲಾ ಮುಖ್ಯ ಪಾತ್ರಗಳ ಕಡೆ ಬೆದರುಗಂಣಿಂದ ನೋಡಿತು. ಅದು ಮೆಲ್ಲಗೆ ನನ್ನ ಪಕ್ಕ ಸರಿದು ಮೈ ಸೋಂಕಿ ನಿಂತುಕೊಳ್ಳಲು ನಾನು ರೋಮಾಂಚನದಿಂದ ಒಂದು ಕ್ಷಣ ತಲ್ಲಣಿಸಿಹೋದೆ. "ರ್ರೀ ಕಾದಂಬರಿಕಾರರೇ" ಎಂದು ಮಾತಾಡಿಸಲು ತಲೆ ಎತ್ತಿ ನೋಡಿದೆ. ಆಕೆಯ ಇಡೀ ಮುಖ ಒಂದು ನೋಟಕ್ಕೆ ಪುಲ್ಲಾರೆಡ್ಡಿಯ ಮಿಠಾಯಿ ಅಂಗಡಿಯಂತೆ (ಹೈದರಾಬಾದಿನಲ್ಲಿರುವ ಪುಲ್ಲಾರೆಡ್ಡಿ ಸ್ವೀಟ್ ಸ್ಟಾಲ್ ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವುದು) ಇನ್ನೊಂದು ನೋಟಕ್ಕೆ ಬೆಂಗಳುರಿನ ಗಂಜಾಂನಾಗಪ್ಪನವರ ಚಿನ್ನದಾಭರಣದ ಅಂಗಡಿಯಂತೆ ಓಚರಿಸಿತು. ಆಕೆ ಬಿಟ್ಟ ಉಸಿರು ಮಂದಾನಿಲದಂತೆ ಸುಳಿಯಿತು. ಕ್ರಮೇಣ ಎಲ್ಲ ಪಾತ್ರಗಳನ್ನು ಬದಿಗೊತ್ತಿ ತಾನೊಂದೇ ವಿಜೃಂಭಿಸತೊಡಗಿತು. ಇದು ಹೀಗೆ ಮುಂದುವರಿದರೆಲ್ಲಿ ಬರೆಯುತ್ತಿರುವ ಕಾದಂಬರಿಯ ದಿಕ್ಕೇ ಬದಲಾಗಿಬಿಡುವುದೋ ಎಂದು ಹೆದರಿದೆ. ಮೆಲ್ಲಗೆ ಕುರ್ಚಿಯನ್ನು ಆಚೆ ಪಕ್ಕ ಎಳೆದುಕೊಂಡೆ. ಅದುವರೆಗೆ ಸ್ಥಿತಪ್ರಜ್ಞನಂತೆ ಎಲ್ಲ ಗಮನಿಸುತ್ತಿದ್ದ ಶಾಮಂಣ ಎಂಬ ಕೇಂದ್ರ ಪಾತ್ರವೂ ಮೆಲ್ಲಗೆ ಮದ್ಯವಾಸನಾಯುಕ್ತ ತನ್ನ ಬಾಯಿಯನ್ನು ನನ್ನ ಕಿವಿಗೆ ಹತ್ತಿರ ತಂದು ಲೋ... ಖಬರ್ದರ್. ಯಾವ ಕಾರಣಕ್ಕೂ ಆ ಹುಡುಗಿಯ ಮೇಲೆ ಕಣ್ಣು ಹಾಕೀಯಾ... ನಾನೂ ಬರೆಯಬೇಕೆಂದಿದ್ದ ಕಥೆಯ ವಸ್ತು ಆಕೆಯ ಬದುಕು. ಆಕೆಯ ಅಥವಾ ಆಕೆಯ ಬದುಕಿನ ಗೊಡವೆಗೆ ಹೋಗಬೇಡ... ಮಾಮೂಲು ಮನುಷ್ಯನಿಗಿಂತ ಲೇಖಕನಾದವನು ಹೆಣ್ಣಿಗೆ ಸಂಬಂಧಿಸಿದಂತೆ ಅಪಾಯಕಾರಿ. ಕಾಚನಾ ನನ್ನ ಮಗಳಿದ್ದಂತೆ. ನನ್ನ ಗೆಳೆಯನಾದ ನಿನ್ಗೂ ಸಹ. ಸಾಧ್ಯವಾದರೆ ಒಂದು ಒಳ್ಳೆ ಗಂಡು ನೋಡಿ ಮದುವೆ ಮಾಡಲು ಪ್ರಯತ್ನಿಸು. ಈ ವಿಶಯದಲ್ಲಿ ಅನಸೂಯಳಿಗೆ ಸಹಕರಿಸು. ಕಣ್ಣು ತಿಳಿಗೊಳಿಸು... ಆಯ್ತಾ..." ಎಂದು ಪಿಸುಗುಟ್ಟಿದ.
-


೩೩೮

ಪ್ರಾಣಾಯಾಮ ಮಾಡುತ್ತಿರುವವನಂತೆ ಮೂಗಿಗೆ ಅಡ್ಡ್ಡ ಇಟ್ಟುಕೊಂಡಿದ್ದಎರಡು ಬೆರಳುಗಳನ್ನು ತೆಗೆಯುತ್ತ ನಾನು "ನಾನು ಆ ಪೈಕಿಯಲ್ಲ ಮಹರಾಯ... ಹಾಗೇನಾದ್ರು ವರ್ತಿಸಿದ್ರೆ ನನ್ನ ಹೆಂಡತಿ ವರ್ಲ್ಡ್‌ವಾರ್ ಡಿಕ್ಲೇರ್ ಮಾಡಿಬಿಡ್ತಾಳ್:ಎ... ನಾನು ಮೊದಲೇ ನಾಗಸಾಕಿಯಂಥ ಮೆತ್ತನೆಯ ಮನುಷ್ಯ.. ನನ್ಗೂ ಸೌಂದರ್ಯವನ್ನು ಆರಾಧಿಸುವ ಮನೋಭಾಅವವಿದೆ... ಕುಲು ಕಣಿವೆಯನ್ನು ನೋಡಿದಂತೆಯೇ ಕಾಂಚನಾಳನ್ನು ನೋಡುವುದರಲ್ಲಿ ತಪ್ಪೇನಿದೆ? ನನ್ನನ್ನು ಅರ್ಥಮಾಡಿಕೊಂಡಿರೋದು ಇಷ್ಟೇ ಏನು?... ವ್ಯಾಖ್ಯಾನದೊಳಗೆ ಒಂದು ಆಯಕಟ್ಟಾದ ಜಾಗದಲ್ಲಿ ಕಾಂಚನಾಳ ಪೂರ್ವೋತ್ತರ ಬದುಕು ಅರಳದಿದ್ದರೆ ಕಾದಂಬರಿ ಗಗೆಟ್ಟಿಯಾಗುವುದಾದರೂ ಹೇಗೆ? ನಿನ್ನ ಪಾತ್ರಕ್ಕೆ ಅಪೂರ್ವ ಮೆರಗು ಬರುವುದಾದರೂ ಹೇಗೆ? ನಿರ್ವಿಕಲ್ಪಚಿತ್ತದಿಂದ ನಾನೀ ಕೆಲಸ ಮಾಡ್ತೀನಿ. ಹೆಂಗರುಳಿನ ನೀನು ಹೆದರ್‍ಕೋಬೇಡ... ಅಡ್ಡ ತಲೆ ಹಾಕದೆ ತೆಪ್ಪಗಿರ್‍ತೀಯ. ನಿನ್ನ ಸರದಿ ಬಂದಾಗ ನೀನು ಮಾತಡಿಸುವಿಯಂತೆ. ಅಥವಾ ನಿನ್ನ ಪರವಾಗಿ ನಾನೇ ಮಾತಾಡ್ತೀನಿ. ಎಲ್ಲ ಪಾತ್ರಗಳನ್ನು ಲೇಖಕನಾದ ನಾನು ನಿಯಂತ್ರಿಸಿ ಕಾದಂಬರಿಗೆ ತಕ್ಕ ಹಾಗೆ ಪೊಷಿಸದಿದ್ದರೆ ಹೇಗೆ? ಇದು ಲೇಖಕನಾದ ನನ್ನ ಹಕ್ಕು ಕರ್ತವ್ಯ ಮತ್ತು ಸ್ವಾತಂತ್ರ್ಯ ಕೂಡ... ತಿಳಿತಾ? ಎಂದು ನಾನು ನಿಷ್ಟುರವಾಗಿ ಹೇಳಲು ದೈಹಿಕವಾಗಿ ದುರ್ಬಲವಾಗಿದ್ದ ಶಾಮಂಣನ ಪಾತ್ರ ದೂರ ಸರಿದು ಟಿಪ್ಪಣಿಯೊಳಗಿನ ಒಂದು ವಾಅಕ್ಯದ ಮೇಲೆ ಕಾಲು ಚಾಚಿ ಮಲಗಿಕೊಂಡಿತು. ಈ ಲೇಖಕ ತೊಳೆದ ಮುತ್ತಿನಂತಿರುವ ಕಾಂಚನಾಳನ್ನು ಮಾತಾಡಿಸುತ್ತಾನಲ್ಲಾ! ಆಕೆ ಅಥವಾ ಅವನು ಪರಸ್ಪರ ನಯನಾಸ್ತ್ರ ಬೀರುತ್ತಿರುವರಲ್ಲ!... ಕಂಚನಾ ಕಾದಂಬರಿಕಾರಗೆ ಏನೇನು ಹೇಳುವಳೋ? ಎಂಬಂತ ಕುತೋಹಲದಿಂದ ಉಳಿದ ಪಾತ್ರಗಳು ನೋಡತೊಡಗಿದವು. "ಏನಮ್ಮಾ, ಕಾಂಚನಾ" ಎಂದು ನಾನು ಪಲುಕುವಷ್ಟರಲ್ಲಿ ಆ ಕೋಮಲ ಪಾತ್ರವು ಟಿಪ್ಪಣಿ ಅಕ್ಷರಗಳ ಕುರುಚಲು ಕಾಡಿಗೆ ವನವಿಹಾರಕ್ಕೆ ಹೋಗಿಬಿಟ್ಟಿತ್ತು... ಹಾಗೂ ಹೀಗೂ ಪ್ರತ್ನಿಸಿ ಬೆರಳ ಚಿಮುಟಿಗೆಯಿಂದ ಅದನ್ನು ಹಿಡಿದೆತ್ತಿ ನಿಲ್ಲಿಸಲು ಅದು ಒಅನೆ ಮೂಡಿ ಬೆಳ್ದಿಂಗಳು ಹರಡಿ ಉಗುರು ಕಡಿಯುತ್ತ =; ಕಾಲಬೆರಳಿಂದ ಅಕ್ಷರ ಮೀಟುತ್ತ ಅವನತ ಮುಖಿಯಾಗಿ ನಿಂತುಕೊಂಡುಬಿಟ್ಟಿತು. ನಾನಿದ್ದು "ಅಲ್ಲಮ್ಮಾ ಕಾಂಚನಾ... ನೀನು ಹೀಗೆ ಮೌನದಿಂದ ಇದ್ದು ಬಿಟ್ರೆ ಹೇಗಮ್ಮಾ? ಅನಸೂಯಮ್ಮನ ಸಂಗಡ ನೀನೂ ಅನಂತಪುರಕ್ಕೆ ಹೋಗಿದ್ದೆಯಾ/ ಹೋಗಿದ್ದ್ರೆ ಏನಾಯ್ತು ಅಂತ ಸ್ವಲ್ಪ ಹೇಳ್ತೀಯಾ... ಹೆದರಿಕೊಳ್ಳೊಕೆ ಇಲ್ಲಿ ಯಾಅರೂ ಕಡೇಲವರಿಲ್ಲ. ಎಲ್ಲ ನಿಮ್ಮವರೆ. ಹೆದರಬೇಡ ಧೈರ್ಯವಾಗಿ ಹೇಳು?" ಎಂದು ಕಳ್ಳತನದಿಂದ ಅದರ ಮೈದಡವಿದೆ. ಅದನ್ನು ಆಕೆ ಪ್ರತಿಭಟಿಸಲಿಲ್ಲ. ತಗ್ಗಿಸಿದ ತಲೆ ಮೇಲೆತ್ತದಂತೆ "ನಮ್ಮಮ್ಮ ಹೇಳೋದೆಲ್ಲ ಖರೇವ್ರಿ... ಖರೇವಲ್ದೆ ಆಕೆ ಬೇರೇನೂ ಹೇಳೋದಿಲ್ಲ..." ಎಂದು ಹೇಳುವಷ್ಟರಲ್ಲಿ ಜಲಜಲನೆ ಬೆವೆತುಬಿಟ್ಟಳು. ಕಪಟ ನಾಟಕ ಸೂತ್ರಧಾರಿಯಂತಿದ್ದ ನಾನು... "ಅಷ್ಟು ಹೇಳಿದ್ರೆ ಸಾಲ್ದಮ್ಮಾ ಕಾಂಚನಾ... ಸ್ವಲ್ಪ ವಿವರವಾಗಿ ನೀನು ಹೇಳಿಲ್ಲಾಂದ್ರೆ ವರಲಕ್ಷ್ಮಿ ಎಂಬ ಪಾತ್ರದೊಂದಿಗೆ ಅನಸೂಯ ಎಂಬ ಪಾತ್ರವು ತಳುಕುಬಿದ್ದು ನಿಜಾಂಶ ಮುಚ್ಚಿಹೋಗಿಬಿಡುತ್ತೆ" ಎಂದು ಧೈರ್ಯ ತುಂಬಿದೆ. ಕಾಂಚನಾ ಎಂಬ ಪಾತ್ರವೂ ನಿಜಕ್ಕೂ ವರಲಕ್ಷ್ಮಿ ಎಂಬ ಪಾತ್ರವನ್ನು ನೋಡಿ ಖಂಡಿತ ಹೆದರಿತ್ತು. ಹೇಳಲೋ ಬೇಡವೋ ಎಂಬಂತೆ ತಡೆ ತಡೆದು ಹೇಳತೊಡಗಿತು. "ನಮ್ಮವ್ವನ ಸಂಗಡ ನಾನೂ ಹೋಗಿದ್ದೇರಿ.. ತೋರಿಕೇಗಲ್ರಿ ನಮ್ಮಮ್ಮ ಅವ್ರ ಮನ್ಗೆ ಹೋಗಿದ್ದು... ಮನೆ ಬಾಕಲ ಈಚೆ ನಿಂತು ಅಕ್ಕಾ ಅಕ್ಕಾ ಎಂದು ಕೂಗುದ್ಲುರೀ...



೩೩೯

ನಮ್ಮನ್ನ ನೋಡುತ್ಲೆ ವರಲಕ್ಷ್ಮಿ ಚಿಕ್ಕಮ್ನೋರು ಕೆಂಡ ಮಂಡಲ ಆದ್ಲೂರಿ... ಯೇನೇ ಭೋಸೂಡಿ... ನನ್ ಮನೆಗೆ ಬಂದು ನನ್ನೇ ಅಕ್ಕಾ ಅಂತೀ ಏನೇ? ಇನ್ನೊಮ್ಮೆ ಅಕ್ಕ ಅಂದೀ ಅಂದ್ರ ನಿನ್ ನಾಲಗೇನ ಬುಡ ಸಹಿತ ಕಿತ್ತು ಪೋಮೆರಿನ್ ನಾಯ್ಗೆ ತಿನ್ನಿಸಿ ಬಿಡ್ತೀನಿ ಎಂದು ಗದರಿಸಿದ್ಲೂರಿ... ಅದಕ್ಕಿದು ನಮ್ಮಮ್ಮ ನಿಮ್ಗೆ ಅಕ್ಕಾ ಅನ್ದೆ ಬೇರೆ ಯಾರ್ಗೆ ಅನ್ಲಿ ಅಕ್ಕಾ... ಹಿಂದಿನೆಲ್ಲ ಮರ್‍ತು ಬಿಡ್ರಿ ಅಂತ ಕೈಮುಗಿದು ಕೇಳಿದ್ಲೂರಿ... ಅಲ್ಲೊಬ್ಬ ಗಂಡುಮಗ್ನೂ ಅವ್ರಿಗೆ ಸಪೋರ್ಟಾಗಿ ನಿಂತ್ಕೊಂಡಾರೀ... ಒಂದೇ ಒಂದು ಸಾರಿ ಮಕ್ಳೂನ ತೋರಿಸಿಬಿಡ್ರಿ ಅಕ್ಕಾ... ಹೊರಟೊಗ್ತೀವಿ ಎಂದು ಗೋಗರೆಯುತ್ತ ನಮ್ಮಮ್ಮ ಅವರ ಕಾಲಿಗೆ ಬಿದ್ದು ಬೇಡ್ಕೊಂಡ್ಲೂರಿ... ಅದಕ್ಕಿದ್ದು ವರಲಕ್ಷ್ಮಿ ಚಿಕ್ಕಮ್ನೋರು ಕಾಲಿಂದ ಜಾಡಿಸಿ ತಳ್ಳಿ ಬಿಟ್ರೂರಿ... ಅಂಗಾತ ಬಿದ್ದಿದ್ದ ನಮ್ಮಮ್ಮ ಅಳೋ ಮುಖಮಾಡ್ಕೊಂಡು ಅಳೋದ್ನ ನೋಡಲಾರದೆ ರುಕ್ಮಿಣಿ ಅಮ್ನೋರು ಸಮಾಧಾನದ ಮಾತ್ನ ಹೇಳಿದ್ರು ಚಿಕ್ಕಮ್ನೋರು ಕೇಳ್ಳಿಲ್ರಿ... ಅಮ್ಮನ ದುಕ್ಕ ನೋಡ್ಲಾರ್‍ದೆ ನನ್ಗೂ ಸಿಟ್ಟು ಬಂತ್ರೀ... ನಾನೂ ಒಂದ್ನಾಲ್ಕು ಮಾತು ಅಂದೇನ್ರೀ... ಇಲ್ಲಿ ಯಾರ ತಲೆ ಕೆಡಿಸ್ಬೇಕಂತ ಈ ಹುಡುಗೀನ ಕರ್ಕೊಂಡು ಬಂದೀಯೆ ಚಿನಾಲಿ ಎಂದು ಚಿಕ್ಕಮ್ನೋರು ಬಯ್ಯಲಿಕ್ಕ ಹಾತ್ತಿದ್ರೂರಿ... ಮಕ್ಕಳಿಗೇ ಅಂತ ತಂದಿದ್ದ ಪಾಕೆಟ್ನ ನಮ್ಮಮ್ಮ ಕೊಡಲಿಕ್ಕೆ ಹೋದ್ಲೂರಿ... ಚಿಕ್ಕಮ್ನೋರು ಅದ್ನ ಬೀದಿಗೆ ಎಸೆದ್ರೂರಿ ಅವ್ರೆಲ್ಲ ಸೇರ್ಕೊಂಡು ನಮಗ್ಬೆಯ್ಲಿಕ್ಕೆ ಹತ್ತಿದ್ರೂರಿ... ಇವ್ರೆಲ್ಲ ಸೇರ್ಕೊಂಡುಎನಾದ್ರು ಅಪಾಯ ಮಾಡಿದ್ರೆಂತ ಹೆದರಿ ನಾವು ವಾಪಸು ಬಂದುಬಿಟ್ವಿ. ಹೆಂಗೋ ವಿಳಾಸ ಸಂಪಾದಿಸ್ಕೊಂಡು ಮಕ್ಳೋದೋ ಕಾರುಮೆಂಟಿಸ್ಕೂಲಿಗೆ ಹೋದ್ವಿರ್ರೀ... ಬಯಲೋಳಗೆ ಚೆಂಡಾಡ್ಕೊಂತಿದ್ದ ಮಕ್ಳು ಕರೆದ ಕೂಡ್ಲೆ ಹತ್ರ ಬಂದ್ವೂರಿ. ಪಿಳಿ ಪಿಳಿ ನೋಡಲಾಕ ಹತ್ತಿದ್ವೂರಿ. ನಮ್ಮಮ್ಮ ಅವ್ನ ಎತ್ಕೊಂಡು ಮುದ್ದು ಕೊಟ್ಟು ಅಳಲಿಕ್ಕೆ ಹತ್ತಿದ್ಲೂರಿ... ಮೇಡಂ ಬಂದು ಸಮಾಧಾನ ಮಾಡಿದ್ಲೂರಿ... ಮಕ್ಳೂನ ಒಳಗಡೆ ಕರ್‍ಕೊಂಡೋದ್ಲೂರಿ... ನಾನೋದಾಗ ನಡೆದಿದ್ದು ಇಷ್ಟೇರ್ರೀ... ಮತ್ತೊಮ್ಮೆ ಅಮ್ಮನ ಸಂಗಾತ ಹೋಗಿರ್‍ಲಿಲ್ರೀ... ನಾನು ಹೇಳಿದ್ದೆಲ್ಲ ಖರೇವ್ರಿ... ಖರೇವಲ್ದೆ ಬೇರೇನು ಹೆಳಲ್ರೀ" ಎಂದು ಚಿಕ್ಕ ಮಗುವಿನಂತೆ ವರದಿ ಒಪ್ಪಿಸಿದ ಕಾಂಚನಾ ಪಾತ್ರವುನಿಧಾನವಾಗಿ ಕುಗ್ಗುತ್ತಹೋಗಿ ಅಕ್ಷರಗಳೊಳಗೆ ಹೊಕ್ಕೊಂಡು ಅಂತರ್ಧಾನವಾಗಿಬಿಟ್ತಿತು. ಅದು ಮೊದಲೇ ನಾಚಿಕೆ ಸ್ವಭಾವದ ಕೋಮಲ ಪಾತ್ರ... ಅಂತರ್ಧಾನವಾಗದೇ ಇರಲು ಹೇಗೆ ಸಾಧ್ಯ?... ಅದನ್ನು ಹುಡುಕುವ ಕೆಲಸದಲ್ಲಿ ಮಗ್ನನಾದ ರಾಖೇಶ ಎಂಬ ಪಾತ್ರ ಕಂಡು ನನಗೆ ಸಿಟ್ಟು ಬಂತು. "ಲೇ ರಾಖೇಶಾ... ಇಂಥ ಹಡಬೆ ಪಾತ್ರಾ ಮಾಡದೆ ಸುಮ್ನೆ ನಿನ್ ಪಾಡಿಗೆ ನೀನು ನಿಂತ್ಕೋಳಯ್ಯಾ" ಎಂದು ಎಚ್ಚರಿಸಿದೆ.ಟಾಡಾ ಕಾಯಿದೆ ಅಡಿ ಬಂಧಿತರಾದವರಂತೆ ನಿಂತಿದ್ದ ಆ ಎಲ್ಲ ಪಾತ್ರಗಳನ್ನು ಒಮ್ಮೆ ನಖಶಿಖಾಂತ ಪರಿಶೀಲಿಸಿದೆ. ಇನ್ನು ಇವುಗಳನ್ನೆಲ್ಲ ಪ್ರಾಸಿಕ್ಯೂಷನ್ನಿಗೆ ಗುರಿಪಡಿಸೋದರಿಂದ ಯಾವ ಉಪಯೋಗವಿಲ್ಲ. ಇವು ಪರಸ್ಪರ ದೋಷಾರೋಪಣೆ ಮಾಡುತ್ತ ನಿಜಾಂಶದ ಮೇಲೆ ಕಲ್ಲು ಚಪ್ಪಡಿ ಎಳೆದು ಗೋಜಲೆಬ್ಬಿಸುತ್ತವೆ. ಇವುಗಳನ್ನು ಕಾದಂಬರಿಯ ಚೌಕಟ್ಟಿನೊಳಗೆ ಅಳವಡಿಸಿಕೊಳ್ಳುವುದು ಒಂದೇ; ಪಗಡಿಗಳಲ್ಲಿಟ್ಟು ಕಪ್ಪೆಗಳನ್ನು ತೂಗುವುದೂ ಒಂದೇ. ಆದರೆ ಇದು ಅನಿವಾರ್ಯ. ಒಂದೇ ಒಂದು ಸಾರಿ ಶಾಮಂಣ ಎಂಬ ಕೇಂದ್ರ ಪಾತ್ರವನ್ನು ಮಾತಾಡಿಸಿ ಪ್ರಾಸಿಕ್ಯೂಷನ್ ಮುಗಿಸಿ ಬಿಡುವುದು ಒಳ್ಳೆಯದೆಂದುಕೊಂಡೆ. ವಾಕ್ಯವೊಂದರ ಮೇಲೆ ನಿಟಾರನೆ ಮೈಚಾಚಿ ಮಲಗಿಕೊಂಡಿದ್ದ ಆ ಪಾತ್ರದ ಮುಖಕ್ಕೆ ಬ್ಲೇಡು ತಾಗದೆ ಎಷ್ಟು ದಿನಗಳಾಗಿರುವುದೋ ಏನೋ. ವರ್ತಮಾನದ ಗೆದ್ದಲಿಗೆ ಬಲಿಯಾಗಿದ್ದ ಆ ಪಾತ್ರವನ್ನು ನೋಡಿ


೩೪೦

ನನಗೇ ಒಂಥರಾ ಆಗಿ ಕಣ್ಣಲ್ಲಿ ನೀರುಬಂತು. ‘ಶಾಮಾ... ನನ್ನ ಶಾಮಾ... ನಿನ್ನೂ ಒಂಚೂರು ಮಾತಾಡಿಸೋದಿದೆ ಕಣಯ್ಯ... ಸ್ವಲ್ಪ ಎದ್ದು ಬರ್‍ತೀಯಾ ನನ್ನಪ್ಪಾ’ ಎಂದೆ. ಅದು ಮಲಗಿದಲ್ಲಿಂದಲೇ "ಹೋಗೋ ನಿಂದೇನು ಗೋಳು... ಸತ್ತಿರೋ ನನ್ನೂ ನೀನು ಬಿಡ್ತಿಲ್ವಲ್ಲೋ... ನನ್ನ ಬಗ್ಗೆ ಕಾದಂಬರಿ ಬರೆ ಅಂತ ಯಾವ ಬೋಳಿಮಗ ನಿನ್ಗೆ ಹೇಳಿದ್ನೋ ನನ್ನ ಪಾಲಿನ ಸಾಡೆಸಾತ್ ಶನಿಯೇ. ನಾನು ಸತ್ತಿರೋದೇ ಒಂದು ಛಾನ್ಸ್ ಅಂದ್ಕೊಂಡಿದ್ದೀಯಾ ಇದಕ್ಕಿಂತ ದೊಡ್ಡ ಕ್ರೌರ್ಯ ಯಾವ್ದಿದೆ?... ನೀನು ಕಾದಂಬರಿ ಬರೆಯೋದು ಬೇಡ... ನನ್ ಗೋಳು ಹುಯ್ದುಕೋಳ್ಳೋದೂ ಬೇಡ... ಬರೆಯೋದಿದ್ರೆ ಆ ಸಚಿವೆ ಜಲಜಾಕ್ಷಿ ಕಮಲಾಕರರ ಬಗ್ಗೆ ಬರೆ... ಬೆಂಗ್ಳೂರಲ್ಲಿ ಕಂಟಿಸ್ಸಾಕಾರಿನಲ್ಲಿ ಐಷಾರಾಮ ಜೀವನ ನಡೆಸ್ತಿರೋ ಅನಸೂಯ ರಘುರಾಮರ ಬಗ್ಗೆ ಬರೆ... ಪ್ರಸಿದ್ಧ ಇನ್ಸ್‌ಸ್ಟಾಂಟ್‌ಫುಡ್ ತಯಾರಿಕಾ ಕಂಪನಿಯ ಮಾಲೀಕರಾದ ಅವರು ಪ್ರಸಿದ್ಧ ಯೋಗಪಟು ಪಟುವರ್ಧನ್ ಮೂಲಕ ಮಾಜಿ ಪ್ರಧಾನ ಮಂತ್ರಿ ಶತಾವಧಾನಿ ಅಳಸಿಂಗ ರಾಯರಿಗೆ ಒಂದು ಕೋಟಿ ಇಪ್ಪತ್ತಾರುಲಕ್ಷ ಲಂಚ ಕೊಟ್ಟಿರೋ ಸಂಗತಿಯನ್ನು ವೃತ್ತಪತ್ರಿಕೆಗಳು ಪ್ರಕಟಿಸಿವೆಯಲ್ಲ... ಇದರ ಬಗ್ಗೆ ಬರೆಯೋ ಮಹರಾಯ. ಇಂಥ ವಿಷಯಗಳನ್ನು ತಲೆ ಹಚ್ಚಿಕೊಂಡಲ್ವೆ ನಾನು ಕುಡಿಯೋದನ್ನು ಕಲಿತದ್ದು. ಇಂಥ ಮೇಜರ್ ಪಾಯಿಂಟ್ಸ್ ಬಿಟ್ಕೊಟ್ಟು ನಮ್ಮಂಥ ಚಿಲ್ಲರೆ ಮಂದಿಯನ್ಯಾಕೆ ಪೀಡಿಸ್ತಿದ್ದೀಯಾ..." ಎಂದು ಗೊಣಗಿತು. ಶಾಮನೆಂಬ ಪಾತ್ರ ಸತ್ರನಂತರವೂ ಕಾದಂಬರಿಗೆ ಒಳ್ಳೆ ಕ್ಲೂಗಳನ್ನು ಕೊಡ್ತಿವೆಯಲ್ಲಾ ಎಂದು ಆಶ್ಚರ್ಯ ಚಕಿತನಾದೆ. ಸಂಸ್ಕೃತಿ ರಾಜ್ಯ ಇಲಾಖೆ ಸಚಿವೆ ಜಲಜಾಕ್ಷಿ ತನ್ನ ಗಂಡ ಮಸಾಲೆಯವರನ್ನು ಕಿವಿಸೋರುವ ಇಲಾಖೆಗೆ ಸರ್ಕಾರದ ಖರ್ಚಿನಲ್ಲಿ ಅಮೇರಿಕಾಕ್ಕೆ ಕಳಿಸಿರೋದು ಗೊತ್ತು; ಆ ದೂರದ ದೇಶದಲ್ಲಿ ಒಂದೇ ರೋಗದ ಜೊತೆಗೆ ನೂರು ರೋಗಗಳು ಪತ್ತೆಯಾಗಿ ಮಸಾಲೆಯವರು ತಿಂಗಳುಗಟ್ಟಲೇ ಉಳಿಯಬೇಕಾಗಿ ಬಂದಿರುವುದೂ ಗೊತ್ತು! ಲಂಡನ್ನಿನಲ್ಲಿ ಇನ್‌ಸ್ಟಾಂಟ್‌ಫುಡ್ ತಯಾರಿಕಾ ಕಂಪನಿ ಸ್ಥಾಪಿಸುವ ಸಲುವಾಗಿ ಕರ್ನಾಟಕದ ನಂಬರ್ ವನ್ ಮಿಲಿನಿಯರ್ ರಘುರಾಮ್ ಪತ್ರೊಡೆ (ಗ್ರೊವರ್, ಖನ್ನಾ, ಇಂಥ ಪೂರ್ವಪದದ ವಿಶೇಶಣಗಳಿಗೆ ಮಾರುಹೋಗಿ ರಘುರಾಮ ತನ್ನ ಆಪ್ತ ಕಾರ್ಯದರ್ಶಿ ಪಂಡಿತ್ ವಿನೂ ಸನ್ಯಾಲ್ ರವರ ಸಲಹೆಯಂತೆ ಪತ್ರೊಡೆ ಎಂಬ ವಿಶೇಷಣವನ್ನು ಕಾನೂನು ರೀತ್ಯ ಸೇರಿಸಿಕೊಂಡು ಭರತಖಂಡದಲ್ಲಿ ಜನಪ್ರಿಯನಾಗಿರುವನು. ಅಂತ್‌ರಾಷ್ಟ್ರೀಯ ಖ್ಯಾತಿಯ ವಾಮಾಚಾರಿಯೂ; ಯೋಗಪಟ್ಟುವೂ ಆದ ಸ್ವಾಮಿಪಟುವರ್ಧನ್‌ರವರ ಮೂಲಕ ಮಾಜಿ ಪ್ರಧಾನಿ ಶತಾವಧಾನಿಯವರಿಗೆ ಅಪಾರ ಹಣವನ್ನು ಕಾಣಿಕೆ ರೂಪದಲ್ಲಿ ಕೊಟ್ಟಿರಿವುದೂ ಗೊತ್ತು; ಶತಾವಧಾನಿಯವರು ಬ್ರಿಟನ್ ಪ್ರಧಾನಮಂತ್ರಿ ಜಾನ್ ಆಲಿವರ್ರವರೆದುರು ಈ ವಿಷಯ ಪ್ರಸ್ತಾಪಿಸಿ ವಿಫಲರಾಗಿರುವುದೂ ಗೊತ್ತು; ಉದ್ದಿಮಿ ಪತ್ರೊಡೆ ವಿರೋಧ ಪಕ್ಷದ ಮುಖಂಡರೂ; ಬಾಲ ಬ್ರಹ್ಮಚಾರಿಯೂ, ಸಮರಾಂಗಣ ಸೂತ್ರಧಾರ ಎಂಬ ಬಿರುದಾಂಕಿತರೂ, ಆದ ಡಾ||ಶಾಲಿಕನಾಥ ಮಿಶ್ರವರನ್ನು ಪಾರ್ಟಿಫಂಡ್ ಕೊಡುವುದರ ಮೂಲಕ ಖುದ್ದ ಕಂಡು ಈ ಲಂಚ ಪ್ರಕರಣ ವರದಿ ಮಾಡಿ ದಾಖಲೆಗಳ ನಕಲು ಪ್ರತಿಗಳನ್ನು ಕೊಟ್ಟಿರಿವುದೂ ಗೊತ್ತು. ಡಾ|| ಶಾ.ಮಿತ್ರರವರು ಪಾರ್ಲಿಮೇಂಟಿನ ಶೀತಕಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಬಿರುಗಾಳಿ ಎಬ್ಬಿಸಿರುವುದೂ ಗೊತ್ತು. ಹಾಲಿ ಪ್ರಧಾನಿ ಶಂಕರ್‌ಸಿಂಗ್ ಉಡೇರಾರವರು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಛೀಫ್ ಜಸ್ಟೀಸ್ ಯಶೋಧರ್ ಇಂದ್ರಪಾದ್ ಗ್ವಾಲಿಯರ್ರವರ ನೇತೃತ್ವದಲ್ಲಿ


೩೪೧

ತನಿಖಾ ಆಯೋಗ ರಚಿಸಿರುವುದೂ ಗೊತ್ತು; ಕನ್ನಡದ ಯಕಃಚಿತ್ ಲೇಖಕನಾದ ನಾನು ಇಂಥ ಅಂತಾರಾಷ್ಟ್ರೀಯಮಟ್ಟದ ವಿಷಯಗಳನ್ನು ಆಧರಿಸಿ ಕಾದಂಬರಿ ಬರೆಯುವುದು ಅಸಾಧ್ಯವೆಂಬ ಸಂಗತಿ ಶಾಮಂಣ ಎಂಬ ಪಾತ್ರಕ್ಕೆ ಅರ್ಥವಾಗುತ್ತಿಲ್ಲವಲ್ಲವೆಂಬ ಖೇದ ಆವರಿಸಿತು. ಅವರೆಲ್ಲರ ಬದುಕಿನಲ್ಲಿ ಇಲ್ಲದ ವೈಶಿಷ್ಟ್ಯ ನಿನ್ನ ಬದುಕಿನಲ್ಲಿದೆ ಶಾಮಂಣ... ವಸ್ತುವಿನ ಅಗಾಧವಾದ ಪ್ರತಿಬಿಂಬವನ್ನು ಒಂದು ಪುಟ್ಟ ಕನ್ನಡಿಯಲ್ಲಿ ಹಿಡಿದಿರುವ ರೀತಿಯಲ್ಲಿಯೇ ನಿನ್ನ ಮೂಲಕ ನಾಲ್ಕಾರು ಸಂಗತಿಗಳನ್ನು ಸ್ಪಷ್ಟವಾಗಿ ಹೇಳಬೇಕೆಂದಿರುವೆ. ಒಬ್ಬನ ಬದುಕು ಎಲ್ಲರ ಬದುಕೂ ಆಗಬೌದು. ಎಲ್ಲರ ಬದುಕು ಒಬ್ಬನ ಬದುಕೂ ಆಗಬೌದು. ಎಲ್ಲರ ಪಾಪ ಪುಣ್ಯಗಳಲ್ಲಿ ಎಲ್ಲರ ಪಾಲೂ ಇದೆ.. ಅದೂ ಅಲ್ಲದೆ ಸತ್ತ ನಂತರವೂ ರಾಜಕಾರನ ಭ್ರಷ್ಟಾಚಾರ ಮತ್ತಿದರ ಕ್ಷುಣ್ಣ ಆಗು ಹೋಗುಗಳ ಬಗ್ಗೆ ಸದಾ ಚಿಂತಿಸ್ತಿರ್‍ತೀಯಲ್ಲ... ಇದು ಬದುಕಿರೋ ನನ್ನಂಥವರಿಗೇನೆ ಸಾಧ್ಯವಿಲ್ಲಾಂತ... ಬದುಕುವ ಪ್ರತಿಕ್ರಿಯೆ ಮತ್ತು ಕಲೆಯನ್ನು ನಿನ್ನಿಂದ ಕಲಿಯಬೇಕಿದೆ ಕಣಯ್ಯಾ... ಇರಲಿ ನಿನ್ನ ಸಾಮಾಜಿಕ ಕಾಳಜಿಯನ್ನು ಸಾಧ್ಯವಾದರೆ ಪ್ರಸ್ತಾಪಿಸ್ತೀನಂತೆ. ಮೊದ್ಲಿ ನೀನೀಗ ಪ್ರಾಸಿಕ್ಯೂಷನ್‌ಗೆ ಗೌರವ ಕೊಡುವ ನಿಮಿತ್ತವಾದರೂ ಬಂದು ಒಂದ್ನಾಲ್ಕು ಮಾತು ಹೇಳು" ಎಂದು ಶಾಮಂಣ ಎಂಬ ವಿಚಾರಪೂರ್ಣಪಾತ್ರವನ್ನು ಮೇಲೆಬ್ಬಿಸಲು ಅದು ಮಲಗಿದ್ದ ವಾಕ್ಯದ ಅಕ್ಷರಗಳನ್ನು ಹಿಡಿದು ಅಲ್ಲಾಡಿಸಿದೆನು.

ಶರಶಯ್ಯೆಯಿಂದ ಪಿತಾಮಹ ಭೀಷ್ಮರು ತನ್ನ ಮೊಮ್ಮಕ್ಕಳು ಕರೆದರೆಂಬ ಭ್ರಮೆಯಿಂದ ಅಗಾಗ್ಗೆ ಮೇಲೆದ್ದು ಸುತ್ತಮುತ್ತ ನಿರುಕಿಸಿ ಮತ್ತೆ ಮಲಗುವರಲ್ಲ... ಹಾಗೆಯೇ ಎದ್ದ ಶಾಮಂಣ ಎಂಬ ಪಾತ್ರವನ್ನು ಹಿಡಿದೆತ್ತಿ ಟೇಬಲ್ ಮೇಲೆ ಜೋಪಾನವಾಗಿ ನಿಲ್ಲಿಸಿದೆ. ಇಷ್ಟು ದುರ್ಬಲವೂ; ವ್ಯಸನಿಯೂ ಆದ ಪಾತ್ರವು ನೌಕರಿಗೆ ಹೊಸತರಲ್ಲಿ ವ್ಯಾಯಾಮ ಮಾಡಿ ದಷ್ಟಪುಷ್ಟವಾಗಲು ಮುಂಬಯಿಯಿಂದ ಬುಲ್‌ವರ್ಕರ್ ತರಿಸಿಕೊಂಡಿತ್ತೆಂದರೆ ಹೇಗೆ ನಂಬುವುದು? ದೇಹ ದುರ್ಬಲವಾಗಿದ್ದರೂ ಅದರ ಕಣ್ಣು ಮತ್ತು ನಾಲಿಗೆಗಳಿಗೆ ತ್ರಿಕಾಲದ ಪೊದೆಯನ್ನು ಬೇರು ಸಹಿತ ಅಲ್ಲಾಡಿಸುವ ಶಕ್ತಿ ಉಂಟು. "ನಿನ್ನಂಥ ಕ್ರೂರಿ ಮತ್ತೊಬ್ನಿಲ್ಲ ನೋಡಿ ಈ ಪ್ರಪಂಚದೊಳ್ಗೆ! ಏನೋ ಲೌಕಿಕವಾಗಿ ಅನಸೂಯಾನಾಢಿಷ್ಟಿತೋ ಮೇಷೋಪಿ ಸಿಂಹಾಯತಿ (ಅನಸೂಯಳೆದುರು ಮೇಕೆಯಂಥ ನಾನು ಸಿಂಹದಂತೆ ವರ್ತಿಸಿದೆ) ಎಂಬ ಮಾತಿನಂತೆ ವರ್ತಿಸಿ ಸ್ವರ್ಗ ನರಕಗಲ ಕಾಲುಹಾದಿಯ ಯಾತ್ರಿಕನಾದೆ, ಸರಿ ಹೋಯ್ತು... ಲೌಕಿಕರ ಹಲವು ಹೇಳಿಕೆಗಳ ಪ್ರಕಾರ ಸ್ವರ್ಗ ಸೇರಿರುವ ತಾತಮುತ್ತಾಂದಿರಂತೆ ನಾನೂನೂವೆ ಹೋಗಿದ್ದ್ರೆ ನೇನೇನು ಮಾಡ್ಲಿಕ್ಕೆ ಸಧ್ಯ ಇರ್‍ಲಿಲ್ಲಪ್ಪ... ಲೋಕಾಪವಾದದ ಎಲ್ಲ ಹಿಂಸೆ ಸಹಿಸಭೌದು. ಆದ್ರೆ ಭಾಶೆಗೆ ಬಲಿಯಾಗೋ ಹಿಂಸೆ ಸಹಿಸೋದು ಕಷ್ಟ. ಇನ್ನೊಬ್ಬರನ್ನು ಕಾದಂಬರಿಗೆ ವಸ್ತು ಮಾಡ್ಕೊಂಡು ... ನಿನ್ಗೆ ಗೊಟ್ಟು. ಆದ್ರೆ ನೀನೇ ಇನ್ನೊಬ್ಬರ ಕಾದಾಂಬರಿಗೆ ವಸ್ತುವಾಗಿ ಗೊಟ್ಟಿಲ್ಲ... ಪನಿ ಪುಲ್ಲಂ ನಕ್ಕೆ ತೃಷ್ಣೆ ಪೇಳ್ ಪೋಪುದೇ ಎಂಬ ಪಂಪನ ಮಾತಿನಂತೆ ಇನ್ನೊಬ್ಬರ ಬದುಕಿನ ಬಗ್ಗೆ ಬರೆದರೆ ನೀನು ಮಹಾಸಾಹಿತಿ ಆಗೋದಿಲ್ಲಪ್ಪ... ಮೊದಲು ನಿನ್ನ ಬಗ್ಗೆ ಬರ್‍ಕೋ... ಆಮೇಲೆ ನಮ್ಮ ಬದುಕಿಗೆ ಬಾರಯ್ಯ" ಎಂದು ಆ ಪಾತ್ರ ಕೊಕ್‌ಕೊಕ್ಕಂತ ಕೆಮ್ಮ ತೊಡಗಿತು. ಅದರ ಮಾತಿನಿಂದ ನಾನು ಒಂಚಣ ಜಲ ಬೆವೆತು ಹೋದೆನು. ನನ್ನಿಂದ ರೂಪಗೊಂಡ ವಾಕ್ಯಗಳೇ ನೇಣಾಗಿಕುತ್ತಿಗೆ ಅಮುಕುತ್ತಿರುವಂತೆಭಾಸವಾಯಿತು. ಪಂಪನನ್ನೂ ಓದಿಕೊಂಡುಸತ್ತಿರುವ ಈ ಪಾತ್ರದ ಮಾತಿಗೆ ಎದೆಗುಂದಬಾರದೆಂದು ಕೃತುನಿಶ್ಚಯವಂ ಮಾಡಿ "ನೀನು ಹೇಳ್ತಿರೋದನ್ನು ಅಲ್ಲಗಳೆಯೊಲ್ಲ


೩೪೨

ಶಾಮಂಣ. ಯಾವ ಪ್ರಕಾರವಾಗಿ ನೀರಿಗೆ ತನ್ನ ಮಟ್ಟವನ್ನು ತಾನು ಕಾಯ್ದುಕೊಳ್ಳುವ ಶಕ್ತಿಉಂತೋ ಹಾಗೇನ ನಿನ್ನ, ನನ್ನ; ಹಾಗೂ ನಮ್ಮೆಲ್ಲರ ಬದುಕಿಗೆ ಒಂದೇ ಅಂತರ ಕಾಯ್ದುಕೊಳ್ಳೋ ಶಕ್ತಿ ಇದೆ. ನಮ್ಮೆಲ್ಲರ ಬದುಕು ಒಂದೇ ಅರ್ಥದ ಹಲವು ರ್ಥದ ವಿನ್ಯಾಸಗಳು ಅಷ್ಟ್ರ್" ಎಂದು ನಾನು ಹೇಳಿದೊಡನೆ ಅದು ಪಕಪಕ ನಗಾಡಿತು. "ಹೀಗೆ ನೀನು ಎಲ್ಲಿವರ್‍ಗೆ ಅರ್ಥವಾಗದ ಮಾತಾಡುತ್ತ ಬದುಕಿರ್ತೀಯೋ ಆ ದೇವರಿಗೇ ಗೊತ್ತು. ಹೀಗೆಲ್ಲ ನಿನ್ನಂಥ ಉಪದ್ರವಿಯಿಂದ ಕೊರೆಸಿಲೊಳ್ಳೋಕಲ್ಲ ನಾನು ಅಕಾಲ ಮರಣಕ್ಕೀಡಾಗಿದ್ದು... ಈಗ ನನ್ನಿಂದ ನಿನಗೆನಾಗಬೇಕಿದೆ ಅಷ್ಟು ಹೇಳಪ್ಪಾ" ಎಂದು ಕಡ್ಡಿಮುರಿದಂತೆ ಮಾತಾಡಿತು. ಅದು ಇಷ್ಟೊಂದು ತಾರುಣ್ಯದಿಂದ ಮಾತಾಡಬಹುದೆಂದುಕೊಂಡಿರಲಿಲ್ಲ. "ಬರೆಯೋ ಕರ್ಮ ನಿನ್ಗೆ ಗೊತ್ತಿದ್ದಿದ್ದೇ ಇದೆ ಪರಮ ಸಾಯುಜ್ಯ ಹೊಂದಿರುವ ನಿನ್ಗೆ ಬಿಡಿಸಿ ಹೇಳಲು ಅಶಕ್ತ ನಾನು... ಬರೆಯೋಕೆ ಸಹಾಯಕವಾಗುವಂತೆ ಒಂದಿಷ್ಟು ಉಪದ್ವಾಪಿ ಹೇಳಿಬಿಡಯ್ಯ ನೀನು" ಎಂದು ಮುಖಮುಲಾಜು ನೋಡದೆ ಹೇಳಿಬಿಟ್ಟೆ - ಅದು ಹೇಳಿದರೆ ಹತ್ತು ಹೇಳಿದರೆ ಇಪ್ಪತ್ತು ಎಂಬ ಬಿಗುಮಾನದಿಂದ ಸತ್ತ ನಂತರವೂ ಮುಚ್ಚಿಟ್ಟುಕೊಳ್ಳೋದೇನಿದೆ? ಒಳ್ಳೆಯದು ಕೆಟ್ಟದ್ದಲ್ಲವನ್ನು ಹೇಳಿಬಿಡೊಕ್ಕೆ ಅದಕೇನು ಧಾಡಿ! ವರ್ತಮಾನದ ಪಾದಗಟ್ಟೆ ಮೇಲೆ ನಿಂತು ಭೂತ ಭವಿಷ್ಯತ್ತುಗಳನ್ನು ಇಂಚಿಂಚಾಗಿ ಅಳತೇ ಮಾಡೋ ಸ್ವಾತಂತ್ರ್ಯ ಯಾವುದೇ ಲೇಖಕನಿಗಿರುವಂತೆ ನನಗೂ ಇದೆ.ಇದನ್ನು ಸತ್ತಿರುವವರಾಗಲೀ, ಬದುಕಿರುವವರಾಗಲೀ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸೃಜನಶೀಲ ವಲಯವನ್ನು ಪ್ರವೇಶಿಸಿದ ಅನತಿಕಾಲದಲ್ಲಿ ದುರ್ಮರಣಕ್ಕೀಡಾದ ಶಾಮಂಣಗೂ ಇದು ಗೊತ್ತು. ಅಕ್ಷರಗಳಲ್ಲಿದ್ದ ಶಾಮಂಣ ಪಾತ್ರವು ನನ್ನ ಕಡೆಗೆ ದುರುಗುಟ್ಟಿ ನೋಡಿತು. "ಎಲವೋ ದುಷ್ಟ, ನಾನು ನಿನಗೆ ದುಷ್ಟ ಎಂಬ ವಿಶೇಷಣ ಹಚ್ಚುತ್ತಿರುವುದಕ್ಕೆ ಬೇಸರಪಟ್ಟುಕೋ ಬೇಡ... ಪಾತ್ರಗಳ ಜೀವ ತಿನ್ನೊದ್ಕಿಂತ ಮಿಗಿಲಾದ ಕ್ರೌರ್ಯ ಇನ್ನೊಂದಿಲ್ಲ. ನೀನು ನಮ್ಮನ್ನು ಅಕ್ಷರಗಳಿಗೆ ಕಟ್ಟಿಹಾಕಿ ಚಿತ್ರಹಿಂಸೆ ಮಾಡತೊಡಗಿರುವಿ. ನನ್ನ ಬದುಕಿನಲ್ಲಿ ಅದಾವ ದೊಡ್ಡಸ್ತಿಕೆಯಾಗಲೀ, ಗೌಪ್ಯವಾಗಲೀ ಕಂಡು ಪುಟಗಟ್ಟಲೇ ಕೊರೆದು ಅಮಾಯಕ ಓದುಗರ ಜೀವ ತಿನ್ನಲು ಯೋಜನೆ ಹಾಕಿರುವಿ, ಹೇಳು? ಕಾದಂಬರಿ ಬರೆದಾದ ಮೇಲೆ ದೊಡ್ಡ ಹೆಸರೂ ಬರುತ್ತದೆ ಎಂಬುದೊಂದೇ ಕಾರಣದಿಂದಲ್ಲವೇ ನೀನೀ ಕೆಲಸಕ್ಕೆ ತೊಡಗಿರುವುದು! ಆದರೆ ನಮಗೇನು ಬರುವುದಯ್ಯಾ; ಮಹಾನುಭಾವ? ಹೀಗೆ ನಿನಗೆ ಸಹಾಯಕವಾಗಿ ಗಂಟಲ ನರ ಸವೆಸೋದ್ರಿಂದ ನಮಗೇನು ಲಾಭ ಹೇಳು?" ಎಂದು ಅದು ಚಿಟಿಕೆ ಹಾಕಿತು. ಇಷ್ಟೊಂದು ದುರಾಸೆ ಸತ್ತವರಿಗೂ ಇರಬಹುದೆಂದು ನಾನು ಸರ್ವಥಾ ಊಹಿಸಿರಲಿಲ್ಲ. "ಅಲ್ಲಪ್ಪಾ... ಒಳ್ಳೆ ಕಥೆ ಆಯ್ತಲ್ಲಪ್ಪಾ ನಿಂದೂಂತ... ಹಣವಾಗಲೀ ಹೆಸರಾಗಲೀ ನನಗೇನು ಪುಕ್ಕಟೆ ಬರ್‍ತದೇನು?... ಹಣ ಬರುವಂಥ ವಸ್ತು ಇರೋಕೆ ನೀನೇನು ಮೀನಾ ಕುಮಾರಿಯಲ್ಲ... ನಾಥೂರಾಮ ಗೋಡ್ಸೆನೂ ಅಲ್ಲ... ನೀನೂ ಯಕಃಚಿತ್ ಮಾನವ ಪ್ರಾಣಿಗಿಂತ ಅತ್ತಿತ್ತ ಬದುಕಿ ಸತ್ತವನು ಎಂಬುದನ್ನು ಮರೆಯಬೇಡ. ನಿನ್ನದು ಮೊದಲೇ ಯಾವ ರೋಚಕ ಘಟನೆಗಳೂ ಇಲ್ಲದ ಸಾಮಾನ್ಯ ಬದುಕು. ಹಣತೆ ಹಿಡಿದು ಹುಡುಕಿದರೂ ಒಂದೇ ಒಂದು ರೋಮಾಂಚಕಾರಿ ಘಟನೆ ನಿನ್ನ ಬದುಕಿನಲ್ಲಿ ಸಿಗೋದಿಲ್ಲ. ಇಂಥ ನಿನ್ನ ಬಗ್ಗೆ ಬರೆಯೋದೆ ಹಿಂಸೆಯ ವಿಷಯ ಕಣೋ ಶಾಮಾ!... ಇದೇ ಸಮ್ಯ ವಿನಿಯೋಗಿಸಿ ಟೈಂಪಾಸ್ ಕಾದಂಬರಿಗಳನ್ನು ಬರೆದ್ದಿದ್ದಲ್ಲಿ ನಾಲ್ಕು ಕಾಸು ಸಂಪಾದಿಸಬಹುದಿತ್ತು. ಏನೋ ಒಂದು ಬಗೆಯ ಕಕ್ಕುಲಾತಿ. ನಂದೂ ಇನ್ವಾಲ್‌ಮಂಟಿರೋದ್ರಿದಲ್ವೆ ನಾನು ಬರೆಯೋಕೆ ಶುರುಮಾಡಿದ್ದು. ಕೆಲವು


೩೪೩

ಕಟ್ಟುಪಾಡುಗಳನ್ನು ಉಲ್ಲಂಘಿಸುವವರೆಂದರೆ ಏನೋ ಒಂದು ರೀತಿಯ ಅಭಿಮಾನ... ಉಲ್ಲಂಘಕರಲ್ಲೂ ನಾಯಕಗಣಗಳಿರುತ್ತವೆ... ಅಂಥ ರ್ರ್ ಕ್ವಾಲಿಟೀಸೂ ನಿನ್ನಲ್ಲಿರುವುವೋ ಇಲ್ಲವೋ ತಿಳಿಯದು? ಅದೆಲ್ಲ ಬರೆದ ಮೇಲೆ ಗೊತ್ತಾಗುವುದು. ಪಾತ್ರಗಳಿಂದ ವೈಯಕ್ತಿಕ ಗುಣಗಳನ್ನು, ವ್ಯಕ್ತಿತ್ವವನ್ನು ಕಸಿದುಕೊಂಡು ನನ್ನ ಮೂಗಿನ ನೇರಕ್ಕೆ ನಾನು ಬರೆಯುತ್ತ ಹೋಗುವುದೇನು ದೊಡ್ಡ ಸಂಗತಿಯಲ್ಲ, ನಿನ್ನೊಂದಿಗೆ ಬದುಕಿನ ತಲ್ಲಣಗಳನ್ನೂ; ಕ್ಷಣಗಳನ್ನೂ ಅನುಭವಿಸಿರುವ, ಹಂಚಿಕೊಂಡಿರುವ ನಾನು ನಿನಗೆ ದ್ರೋಹ ಬಗೆಯುವ ಕೆಲಸ ಮಾಡಲಾರೆ ಶಾಮಾ... ಅದ್ಕೆ ಮುಖ್ಯ ಪಾತ್ರವಾದ ನೀನೇ ನನ್ನ ಪ್ರಾಸಿಕ್ಯೂಷನ್‌ಗೆ ಎಲ್ಲ ಹೇಳಿಕೊಂಡು ಬಿಡು. ಅಂತ ನಾನು ಹೇಳ್ತಿರೋದು. ನಾನು ಕೇವಲ ಲಿಪಿಕಾರ ಪಾತ್ರವಹಿಸಲಿಕ್ಕೆ ಮಾತ್ರ ಇಷ್ಟಪಡ್ತೀನಿ... ನೀನು ಈ ಅಭಿವ್ಯಕ್ತಿ ಕ್ರಮದಲ್ಲಿ ಭಾಗವಹಿಸುವುದರ ಮೂಲಕ ಬದುಕಿನ ವಝನ ಕಳೆಕೊಂಡು ಇನ್ನೂ ಎತ್ತರದಲ್ಲಿ ವಿಹರಿಸಬಹುದು! , ಅಲ್ಲವೆ? ನಿನ್ನ ಮಾತಿನ ದಾಟಿ ನೋಡಿದರೆ ಇದಕ್ಕೆ ಸಮ್ಮತಿಸಿರುವಿ ಎಂದು ಕಾಣುತ್ತದೆ. ಲಾಭ ಲುಕ್ಸಾನದ ಬಗ್ಗೆ ಪ್ರಸ್ತಾಪಿಸುತ್ತಿರುವಿ. ಕನ್ನಡ ಪ್ರಕಟಣ ಪ್ರಪಂಚದ ಹಣೆಬರಹ ಗೊತ್ತಿರುವ ನಿನಗೆ ಇದರ ಬಗ್ಗೆ ಹೆಚ್ಚಿಗೆ ಹೇಳೋ ಅಗತ್ಯವಿಲ್ಲ. ಸುಳ್ಳೋ ನಿಜವೋ? ಒಟ್ಟಿನಲ್ಲಿ ನೀನು ಅನುಭವಿಸಲಿಕ್ಕೆ ಸಾಧ್ಯ್ವಿದ್ದರೆ ಬಂದ ಹಣವನ್ನು ಅನಸೂಯಾಗೆ ಕೊಡ್ಲಾ! ಅಥವಾ ವರಲಕ್ಷ್ಮಿಗೆ ಕೊಡ್ಲಾ... ನೀನು ಹೇಗೆ ಹೇಳಿದರೆ ಹಾಗೆ!" ಎಂದು ಕರಾರುವಾಕ್ಕಾಗಿ... ಶಾಮಪಾರೆಅಕ್ಕೆ ನನ್ನ ಮಾತುಗಳಿಂದ ಖುಷಿಯಾದಂತೆ ಕಂಡು ಬಂದಿತು. ಆ ಖುಷಿ ನನ್ನ ಅಪ್ರಮಾಣಿಕತೆಯನ್ನು ಗುರುತಿಸಿದ್ದೂ ಆಗಿರಬಹುದು. ಅದು ಹೇಳಿತು. "ಅನುಸೂಯಾಳಿಗೆ ನೀನು ಕೊಡ್ಲಿಕ್ಕೆ ಹೋಗು, ಪೂಜೆ ಮಾಡಿ ಕಳಿಸ್ತಾಳಷ್ಟೆ... ಆ ಪುಣ್ಯಾತ್ಗಿತ್ತಿಗೆ ಕೈ ಎತ್ತಿ ಮುಗಿಯಬೇಕು ನೋಡು. ಅಂಥ ಹೆಣ್ಣು ಈ ಪ್ರಪಂಚದಲ್ಲೆಲ್ಲೂ ಇರಲಿಕ್ಕಿಲ್ಲ ಬಿಡು. ಮಸಣದೊಳಗೆ ನನ್ನ ಕಳೇಬರ ಸುಟ್ಟ ಜಾಗದ ಮೇಲೆ ಐವತ್ತು ಅರವತ್ತು ಸಾವಿರ ಖರ್ಚುಮಾಡಿ ಸ್ಮಾರಕ ಕಟ್ಟಿಸಬೇಕೂಂತ ಯೋಜನೆ ಹಾಕ್ಕೊಂಡಿದ್ದಾಳೆ. ಆಕೆ ಆ ಹಣವನ್ನು ಅದಕ್ಕೆ ಉಪ್ಯೋಗಿಸಿಕೊಂಡು ಬಿಡಬಹುದು. ನನಗಿದೆಲ್ಲ ಸುತರಾಂ ಇಷ್ಟವಿಲ್ಲಪ್ಪಾ... ಆ ಮಹಾ ಪತಿವ್ರತೆಯಾದ ನನ್ನ ಹೆಂಡತಿಗಂತೂ ಮೊದಲೇ ಕೊಡಬೇಡ. ಕಂದಾಚಾರ ಸಂಪ್ರದಾಯಗಳನ್ನು ಕತ್ತಾಳೆ ನಾರಿನಂತೀದೆಯಲ್ಲಿ ಕೊಳೆಯಲು ಬಿಟ್ಟು ಕೆಟ್ಟದಾಗಿ ವರ್ತಮಾನ ಬದುಕುತ್ತಿರೋ ಪುರಾತನ ಪಳೆಯುಳಿಕೆ ಅವಳು. ಕಾಮವನ್ನು ಕೊಂದುಕೊಂಡು ಬದುಕೋ ಅವಳಿಗಿಂತ ಕಾಮವನ್ನು ಪ್ರಮುಖ ದಾಳವನ್ನಾಗಿ ಉಪಯೋಗಿಸಿ ಬದುಕಿನ ಚದುರಂಗ ಆಡುತ್ತಿರುವ ಅನಸೂಯಾಳೇ ಸಾವಿರ ಪಾಲು ಮೇಲು. ತಮ್ಮಮ್ಮನ ಸೆರಗ ಪಂಜರದಲ್ಲಿ ಅರಗಿಳಿಗಳಂತೆ ಬೆಳೆಯುತ್ತಿರುವ ನನ್ನ ಮಕ್ಕಳ ಬಗೆಗೂ ನನಗಶ್ಟು ಮಮಕಾರವಿಲ್ಲ... ಆದ್ರಿಂದ..." ಎಂದು ಅದು ಮೀನ್ಹ ಮೇಷ ಎಣಿಸತೊಡಗಿತು. ಅದರ ಮಾತು ಕೇಳಿ ನಾನು ಒಂದು ಕ್ಷಣ ಅವಾಕಾದೆನು. ಹೀಗೆ ಖಚಿತವಾಗಿ ಯೋಚಿಸುವ ಕಾರಣದೀಮ್ದಾಗಿಯೇ ಅವನು ಮರಣವನ್ನು ಬಹು ಬೇಗ ಆವಹಿಸಿಕೊಂಡದ್ದೆಂದು ಅರ್ಥ ಮಾಡಿಕೊಂಡೆ. ಕೆಲವ್ವರಿಗೆ ಸತ್ತ ನಂತರವೂ ಬುದ್ಧಿ ಬರುವುದಿಲವೆಂದು ಹೇಳುತ್ತಾರಲ್ಲ... ಅಂಥವರ ಪೈಕಿ ಇವನೂ ಒಬ್ಬನು. ಅಥವಾ ತಾರ್ಕಿಕವಾಗಿ ಬದುಕಿರುವವರನ್ನು ಅಳತೆ ಮಾಡುವುದು. ಬದುಕಿರುವವರ ಕಷ್ಟ ಸತ್ತ ಇವನಿಗೆ ಅರ್ಥವಾಗಲಾರದು. ಉದ್ದುದ್ದ ಸನಾತನತೆಗೆ ಅಡ್ಡಡ್ಡ ಅಧುನಿಕತೆಯನ್ನು ನೆಯ್ದು ಬದುಕಿಗೆ


೩೪೪

ವಿಲಕ್ಷಣವಾದ ರೂಪ ಕೊಟಿದ್ದ ಮನುಷ್ಯನಿವನು. ಕನಿಷ್ಟ ಮಕ್ಕಳನ್ನು ಪ್ರೀತಿಸದಿದ್ದರೆ ಯಾಕಿವನು ಸಾಯಬೇಕಿತ್ತು! ( ನನಗೆ ತಿಳಿದಮಟ್ಟಿಗೆ ಆ ಮಕ್ಕಳಿರ್ವರಿಗೆ ನಮ್ಮ ತಂದೆ ಶಾಮಾಶಾಸ್ತ್ರಿ ಎಂಬುವನಿದ್ದ ಎಂಬ ನೆನಪೂ ಸಹ ಇದ್ದಂತಿಲ್ಲ ) ಗೌರವಧನವನ್ನು ಹೇಗೆ ವಿನಿಯೋಗಿಸಬೇಕೆಂದು ಹೇಳುವ ಎನೋ! ಅಷ್ಟರಲ್ಲಿ ಅದೇ ಬಾಯಿ ಬಿಟ್ಟಿತು."ನನ್ನ ಕಳೆಬರವಿದ್ದ ಚಿತೆಗೆ ಬೆಂಕಿ ಹಚ್ಚಲು ಅನಸೂಯ ಇನ್ನೂರಾಐವತ್ತು ಗ್ರಾಂ ಉಂಡೆ ಕರ್ಪೂರವನ್ನು ಉಪಯೋಗಿಸಿದಳು. ತುಂತುರು ಮಳೆ ಮುಗಿಲಿಂದ ಜಿನುಗುತ್ತಿದ್ದರಿಂದ ನಿವೃತ್ತ ತಹಶೀಲ್ದಾರರಾದ ಆನಂದ ತೀರ್ಥರೂ ಅರ್ಧ ಕೇಜಿ ಕರ್ಪೂರ ತರಿಸಿದರು ಎಂದರೆ ಸುದುವ ಕಷ್ಟ ಎಷ್ಟು ಭೀಕರವಾಗಿತ್ತೆಂಬುದನ್ನು ನೀನೇ ಯೋಚಿಸು. ನನ್ನ ಕಳೇಬರವನ್ನು ನಾನೇ ಅಪಹರಿಸುವುದು ಸಾಧ್ಯವಿದ್ದಿದ್ದರೆ ಎಂದೋ ಊರಾಚೆ ಕುರುಚುಲು ಕಾಡ ನದುವೆ ಇರುವ ಹುಲಿಗಡ್ಡದ ಗವಿಯೊಳಗೆ ಬಿಸಾಡಿಕೊಂಡು ಬಿಡುತ್ತಿದ್ದೆ ನಿರಮ್ಮಳವಾಗಿ. ದೂರದೂರದಲ್ಲಿ ಏಕಾಂಗಿಯಾಗಿ ಸಾಯಲು ನಾನು ಅನೇಕ ಬಾರಿ ಪ್ರತ್ನಿಸಿದ್ದುಂಟು ಕಣಯ್ಯಾ. ಹಲವು ರೋಗಗಳ ಅಖಾಡವಾಗಿದ್ದ ನನ್ನ ದೇಹವನ್ನು ನಾನು ಒಂದಿಂಚು ಕದಲಿಸುವುದೂ ಸಾಧ್ಯವಿರಲಿಲ್ಲ...

ಕೊನೆ ಕೊನೆಗೆ ಒಂದೊಂದಾಗಿ ಪಂಚೇಂದ್ರಿಯಗಳು ನಿಷ್ಕ್ರಿಯವಾಗುತ್ತ ಬಂದವು. ನಾನು ಅನಸೂಯಾಳಿಗೆ ಏನು ಹೇಳಲು ಬಯಸಿದೆನೋ ಆ ಮಾತು ನನ್ನ ನಾಲಿಗೆಯಿಂದ ಹೊರಡಲಿಲ್ಲ. ಹೀಗಾಗಿ ನನ್ನ ಕಳೆಬರವನ್ನು ಅಗ್ನಿ ಒಲ್ಲದ ಮನಸ್ಸಿನಿಂದ ಜಮಡಿ ಬೂದಿ ಮಾಡಿತು. ಇಂಥ ಬೂದಿಯ ಸಿಂಹಪಾಲು ಅನಸೂಯಳ ಮನೆಯ ಅಟ್ಟದ ಮೇಲಿದ್ದ ಆ ಗಂಟನ್ನು ಎದೆಗವುಚಿಕೊಂಡು ಆಕೆ ದಿನಕ್ಕೆ ಒಂದು ಸಾರಿಯಾದರೂ ಗೋಳಾಡುತ್ತಿರುತ್ತಾಳೆ. ನಾನು ಆಕೆಗೆ ಕೊಟ್ಟ ಸುಖ ಅಷ್ಟರಲ್ಲ್ ಇದೆ. ಮಿಂದನಂತೆ ಆಕೆಯ ಬದುಕಿನಲ್ಲಿ ಪ್ರವೇಶಿಸಿದಾರು ಕ್ರಮೇಣ ಪ್ರೇಮಿಯಾಗಿಬಿಟ್ಟೆ. ಪ್ರೇಮಿಯಾಗಿದ್ದವನು ಕ್ರಮೇಣ ಹಸುಗೂಸಾಗಿ ಬಿಟ್ಟೆ. ಬದುಕಿನ ಹಲವು ಅವಸ್ಥೆಗಳಿಗೆ ಮಾತೃಕೆಯಾಗಿದ್ದ ಅವಳು ಹೀಗೆ ಅಳೋದೂ,ಕರೆಯೋದೂ ನನಗೆ ಬಿಲ್ಕುಲ್ ಇಷ್ಟವಿಲ್ಲ. ಆ ನನ್ನ ದೇಹದ ಬೂದಿ ಅಲ್ಲಿಂದ ಕದಲಿದರೆ ಮಾತ್ರ ಅವಳು ಯಾರೊಂದಿಗಾದರೂ ಸುಖವಾಗಿ ಬದುಕಲು ಸಾಧ್ಯವಾದೀತು!ಹೀಗೆ ಆಕೆ ಅಳುತ್ತ ಕೂತಿದ್ದರೆ ಆ ಮಗು ಕಾಂಚನಾಳ ಗತಿ ಏನು! ಅದಕ್ಕೆ ನೀನು ನನ್ನ ದೇಹದ ಬೂದಿಯನ್ನು ಬಹು ದೂರದ ಗಂಗೆಯಲ್ಲಿ ವಿಸರ್ಜಿಸಬ್
ಏಕೆಂದು ಯಾಕ್ ಕೇಳ್ತಿದ್ದೀನೆಂದರೆ... ನಾನು ಬದುಕಿದ್ದಾಗ ನನ್ನೋಳಗೆ ಸದಾ ಪ್ರವಹಿಸುತ್ತಿದ್ದ ನದಿ ಎಂದರೆ ಅದೊಂದೇ ನೋಡು. ಬದುಕುವುದಿದ್ದರೆ ಆ ನದಿಯಂತೆ ಬದುಕಬೇಕೆಂದು ಕೊಳ್ಳುತ್ತಿದ್ದೆ. ಯಾರನ್ನಾದರು ಪ್ರವೇಶಿಸುವುದಿದ್ರೆ ಆ ನದಿಯಂತೆ ಪ್ರವೇಶಿಸಬೇಕೆಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿ ಸಫಲನಾದವನು ನಾನು. ಯರಲ್ಲಿ ಅಷ್ಟೊಂದು ವೇಗವಾಗಿ ಪ್ರವೇಶಿಸ ಬೇಕಿತ್ತೋ ಅವರಲ್ಲೆ... ಸಾಧ್ಯವಾಗಲಿಲ್ಲ. ನನ್ನಂಥ ನದಿಯನ್ನು ಒಳ ಬಿಟ್ಟುಕೊಂಡು ಆಶ್ರಯ ಕೊಟ್ಟು ಸಮೃದ್ಧವಾಗಿ ಬೆಳೆಸಿದ್ದೇ ಅನಸೂಯ ಎಂಬ ಪ್ರಸ್ಥಭೂಮಿ... ಆಕೆ ಸಸ್ಯ ಶಾಮಲೆ... ಸಾವಿರಾರು ಪಕ್ಷಿಗಳ ತಂಗುದಾಣ. ಅಂಥ ಪ್ರದೇಶ ನನ್ನ ನೆನಪಿಂದಾಗಿ ಬರಡಾಗುವುದು ನನಗಿಷ್ಟವಿಲ್ಲ. ಆದ್ದರಿಂದ ಉಪಾಯಾಂತರದಿಂದ ಆ ಬೂದಿಯ ಗಂಟನ್ನು ಲಪಟಾಯಿಸಿ ತಗೊಂಡು ಸೀದ ಪಂಡಾನೊಬ್ಬನನ್ನು ಹಿಡಿದು ಅಪರ ಕರ್ಮ ಮಾಡಿಸಿ ಗಂಗೆಯ ನಟ್ಟನಡುವೆ ಬೂದಿ ವಿಸರ್ಗಿಸು.. ಇದು ನಾನು ನಿನ್ನಿಂದ ಬಯಸುತಿರುವ ರುಷುವತ್ತು ಕಣಪ್ಪಾ... ಬಂಡಾಯದ ಸ್ಟೈಲಿನಲ್ಲಿ ಚರ್ಚೆ


೩೪೫

ಆರಂಭಿಸದೆ ಒಪ್ಪುವಿಯೋ, ಇಲ್ಲವೋ ಅಷ್ಟು ಹೇಳು?" ಎಂದು ಕೇಳಿತು.
ಅದರ ಬೇಡಿಕೆಯನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ಅರ್ಥವಾಗದೆ ಸೊಂದಿಗ್ಧಕ್ಕೆ ಸಿಲುಕಿಕೊಂಡೆನು. ಕಾಶಿ ಎಂಬುದರ ಬಗ್ಗೆ ಕೇಳಿದ್ದೆ, ಓದಿದ್ದೆ; ನಕ್ಷೆಗಳಲ್ಲಿ ನೋಡಿದ್ದೆ. ಅಲ್ಲಿಗೆ ಒಮ್ಮೆ ಹೋಗಿಬರಬೇಕೆಂಬಾಲೋಚನೆಯಿಂದ ಪ್ರವಾಸ ಅನುದಾನಕ್ಕಾಗಿ ಅಕಾಡೆಮಿಗೆ ಅರ್ಜಿಯನ್ನೂ ಸಲ್ಲಿಸಿರುವೆನು. ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರೂ ಕೊಡಿಸುವ ಭರವಸೆ ವ್ಯಕ್ತಪಡಿಸಿರುವರು. ಆತ ಅಲ್ಲಿ ಎರಡು ಮೂರು ವರ್ಷ ಇದ್ದು ಬಂದಿರೋ ವ್ಯಕ್ತಿ. ಆತ ಮಾತಿನ ಮೂಲಕ ಕಾಶಿಯನ್ನು ನನ್ನ ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸಿರುವರು. ಉದ್ದೋಕೆ ನಿಂತಿರೋ ಕಾಶಿ ಪಟ್ಟಣ ಕುಂತರೂ, ನಿಂತರೂ ಕೈ ಬೀಸಿ ಕರೆಯುತ್ತಿರುವುದು. ಬಿಸ್ಮಿಲ್ಲಾಖಾನ್, ರವಿಶಂಕರಂಥ ಸಂಗೀತಲೋಕದ ದಿಗ್ಗಜಗಳನ್ನೂ; ಕೇದಾರ್ನಾಥ್ ಪಾಂಡೆ, ಕಾಶೀನಾಥ್ ಸಿಂಗ್‌ರಂಥ ಕಥೆಗಾರರನ್ನು ಮಾತಾಡಿಸಿ ಬರಬೇಕೆಂದುಕೊಂಡಿದ್ದೆನೇ ಹೊರತು ಈ ರೀತಿ ಅಪರ ಕರ್ಮಕ್ಕೆ ತುತ್ತಾಗಿ ಪಂಡಾಗಳ ಕೈಗೊಂಬೆಯಾಗಬೇಕಾಗಿ ಬರಬಹುದೆಂದು ಖಂಡಿತ ಅಂದುಕೊಂದಿರಲಿಲ್ಲ... ಈ ಪ್ರಕಾರವಾಗಿ ನಾನು ಹಿಂದೇಟು ಹಾಕುತ್ತಿರುವಾಗ್ಗೆ ರಾಖೇಶ್ ಕುಮಾರನೆಂಬ ಪಾತ್ರವು ಕಿಯಿಯೊಳಗೆ ಬಾಯಿ ತೂರಿಸಿ "ಒಪ್ಕೊಂಡು ಬಿಡ್ರೀ... ಹುಲಿಹಳ್ಳ... ಕಟ್ರಮ್ಮಹಳ್ಳ... ಇವೆಲ್ಲ ಯಾವ ಗಂಗೆಗಿಂತ ಕಡ್ಮೆ ಅದಾವು... ಗಾಳಿ ಬೀಸೋ ದಿಕ್ಕಿಗೆ ಗುರಿ ಇಟ್ಟು ತೂರಿಕೋಳ್ಳೋದು ನಿಜವಾದ ಜಾಣ್ತನ" ಎಂದು ಪಿಸುಗುಟ್ಟಿ ಹಿಂದಕ್ಕೆ ಸರಿಯಿತು. ಅದು ಸರಿ ಅನ್ನಿಸಿ ನಾನು " ಆಯ್ತಪ್ಪಾ ಶಾಮಂಣ... ನಿನ್ನ ಅಪರ ಕರ್ಮದ ಉಸ್ತುವಾರಿ ವಹಿಸ್ಕೋತೀನಿ... ಆಯ್ತಾ!" ಎಂದು ಒಪ್ಪಿಗೆ ಸೂಚಿಸಿದೆ. ನನ್ನ ಮಾತಿನಿಂದ ಶಾಮಂಣ ಪಾತ್ರಾವು ನೆಮ್ಮದಿಗೆ ಹೊಸ ವ್ಯಾಖ್ಯೆ ಬರೆಯತೊಡಗಿತು. ಅದು... ಇಷ್ಟೊಂದು ದೌರ್ಬಲ್ಯದ ನಡುವೆಯೂ ಮೇರುಪ್ರಾಯವಾದ ಲವಲವಿಕೆಯನ್ನು ಪ್ರಕಟಿಸಬಹುದೆಂದುಕೊಂಡಿರಲಿಲ್ಲ. ಅಕ್ಷರಗಳಿಂದ ನನ್ನ ಕಡೆ ಕೈಚಾಚಿತು. ಹಿಡಿದು ಅಮುಕಿ ನೇವರಿಸಿದೆ. ಕಂಣಲ್ಲಿ ನೀರುತಂದ್ಕೊಂಡೆ. ನನ್ನ ಶಾಮಾ... ನನ್ನ ಶಾಮಾ... ಎಂದು ಉದ್ಗರಿಸಿದೆ. "ಯಾಕೋ ಹೆಂಗಸಿನ ಹಾಗೆ ಭಾವುಕನಾಗ್ತಿಡ್ಡಿಯಾ... ಸದಾ ಒದ್ದಟದಲ್ಲಿ ಬದುಕಿ ಸತ್ತಿರೋ ನಾನೇ ಒಂದೇ ಒಮ್ಡು ಹನಿ ನೀರು ತಂದುಕೊಂಡಿಲ್ಲ... ನೀನ್ಯಾಕೆ ಮುಖವನ್ನು ಒಂಥರಾ ಮಾಡಿಕೊಳ್ಳುತ್ತಿರುವಿ. ಕವಿತೆ ಬರೆಯೋ ಮನಸ್ಥಿತಿಯನ್ನು ದೂರ ಇಟ್ಟು ಗದ್ಯ ಬರೆಯೋ ಮನಸ್ಥಿತಿಯನ್ನು ರೂಢಿಸಿಕೋ... ಆಗ ನಾನು, ನನ್ನಂಥವರು ಅರ್ಥ ಆಗ್ತಾರೆ, ಹತ್ತಿರ ಆಗ್ತಾರೆ... ಬಿಚ್ಚಿಕೊಳ್ಳುತ್ತಾರೆ. ಈಗ ನನಗೆ ತುಂಬ ಸಂತೋಷವಾಗಿದೆ ನ್ಡು... ಅನೇಕ ನದಿಗಳಿಂದ ಅಭಿಮಾನಿಸಿಕೊಳ್ಳುತ್ತಿರುವ ಪೂಜಿಸಿಕೊಳ್ಳುತ್ತಿರುವ ಒಳಗೊಳ್ಳುತ್ತಿರುವ ಗಂಗೆ ಪ್ರೀತಿಗೆ ಪರ್ಯಾಯ ಅಲ್ಲವೆ!... ನಮ್ಮೆಲ್ಲರ ನಿಜವಾದ ಪ್ರೀತಿಗೆ ಅರ್ಥವಿರುವುದೇ ಅಂಥಲ್ಲಿ ವಿಸ್ರ್ಜಿಸಿಕೊಳ್ಳುವುದರಲ್ಲಿ! ಅದಕ್ಕೇನೆ ನಾನು ಹೇಳಿದ್ದು ನನ್ನ ಚಿತಾಭಸ್ಮವನ್ನು ಅಲ್ಲಿ ವಿಸರ್ಜಿಸು ಅಂತ... ಅದಕ್ಕೆ ನೀನು ಒಪ್ಪಿಗೆ ಸೂಚಿಸಿದಿ. ಸಂತೋಷ ನನ್ನ ಮರಣ ಪೂರ್ವೊತ್ತರ ಬದುಕನ್ನು ನೀನು ನಿನ್ನ ಅಕ್ಷರಗಳಿಗೆ ಬಲಿಕೊಡು... ನನ್ನ ಅಭ್ಯಂತರವಿಲ್ಲ, ನಾನು ನನ್ನನ್ನು ನಿನ್ನ ಮೂಲಕ ಬರೆಸುವೆ. ಇದಕ್ಕೆ ಮೊದಲು ನಾನು ಬರೆದಿರುವ ಕಥೆಯೊಂದಿದೆಯಲ್ಲ... ಅದನ್ನು ಕಾದಂಬರಿಯೊಳಗೆ ಅಳವಡಿಸಿ ಬಿಉ. ಈ ಮೂಲಕವಾದರು ಪ್ರಕಟವಾಗಲು... ಅದನ್ನು ಬರೆದು ಲಕ್ಕೋಟೆಯೊಳಗಿರಿಸಿ ಅಂಚೆದಬ್ಬಿಗೆ ಹಾಕ್ಲು ಪ್ರಯತ್ನಿಸಿದ್ದು ನೂರಾರುಬಾರಿ. ಕೊನೆಗೂ ಹಕಲಿಲ್ಲ... ಅಲ್ಲದೆ ನಮ್ಮ ತತನವರು ಬರೆದಿರುವ ಮರಣ ಶಸನವನ್ನು ಹೇಗೋ


೩೪೬

ಸಂಪಾದಿಸಿಕೊಂದಿರುವಿ ಅದರಲ್ಲಿ ನನ್ನನ್ನು ಚಾಮಗೋಚರವಾಗಿ ಬಯ್ದಿರಬೌದು. ನಿಸ್ಸಂಕೋಚವಾಗಿ ಅದನ್ನೂ ಕಾದಂಬರಿಯೊಳಗೆ ಪುನರ್ಘಟಿಸು... ನಂತರ ನಾನು ನಿನ್ನ ಮೂಲಕ ಶುರು ಮಾಡುವೆ. ಆಯ್ತಾ... ಶುಭವಾಗಲಿ" ಎಂದು ಹೇಳಿ ಅದು ಅಂತರ್ಧಾನವಾಯಿತು.

ನಾನು ನೆಮ್ಮದಿಯಿಂದ ಉಸಿರುಬಿಟ್ಟೆ. ಅದನ್ನು ಕೇಳಿಸಿಕೊಂಡು ಹೆಂಡತಿ ಅನ್ನಪೂರ್ಣ ಹತ್ತಿರ ಬಂದಳು. "ಏನ್ರೀ... ನಿಮ್ಮಶ್ತಕ್ಕೆ ನೀವೇ ಏನೇನೋ ವಟಗುಟ್ತಿದ್ರಿ... ಒಳ್ಳೆ ಹೆರಿಗೆ ಸಮಯದಲ್ಲಿ ನೋವು ತಿನ್ತೊರೋ ಗರ್ಭಿಣಿ ಹೆಂಗಸರ ಥರ" ಎಂದು ಅಪಾರ ಕಕ್ಕ್ಲಾತಿಯಿಂದ ಹಣೆ, ಎದೆ ಎಲ್ಲ ಮುಟ್ಟಿಮುಟ್ಟಿ ನೋಡಿದಳು. "ಅಯ್ಯೋ ಜ್ವರ ಬಂದಂತಿದೆಯಲ್ಲ" ಎಂದು ಒಳಗಡೆ ಹೋಗಿ ಕಷಾಯ ಮಾಡಿಕೊಂಡು ಬಂದು ಕುಡಿಸಿದಳು. "ನೀನಂದ್ಕೊಂಡಿರೋ ಜ್ವರ ಅಲ್ಲಮ್ಮಾ... ಇದೊಂದು ನಮೂನಿ ಜ್ವರ, ವಸ್ತುವನ್ನು ಹೊರ ಕಿತ್ತು ಹಾಕುವುದೆಂದರೆ ಏಳೆಂಟು ಕೂಸುಗಳನ್ನು ಒಟಿಗೆ ಹೆತ್ತ ಹಾಗೆಯೆ" ಎನ್ನುತ್ತಿರುವಷ್ಟರಲ್ಲಿ ಹೂಗಳಿದ್ದ ಹಚ್ಚಡ ತಂದು ಮೈಗೆಲ್ಲ ಹೊದ್ದಿಸಿದಳು. ಧೂಳು ಕೊಡವಿ ಉಣ್ಣೆ ಕ್ಯಾಪನ್ನು
ಅಷ್ಟೇನು ಸುಂದರವಲ್ಲದ ನನ್ನ ತಲೆಗೆ ಪೇರಿಸಿದಳು. ಕನ್ನಡಿ ತಂದು ನನ್ನ ಮುಖಕ್ಕಿಟ್ಟು, "ನೋಡ್ರಿ... ಹೆಂಗ ಕಾಣಿಸ್ತಿದ್ದೀರಂತ?" ಎಂದು ಕಿಲ ಕಿಲ ನಗಾಡಿದಳು.

ನನ್ನ ಪ್ರತಿಬಿಂಬ ನೋಡಿ ‘ಇದು ನನ್ನದು ಹೌದೋ ಅಲ್ಲವೋ’ ಎಂಬಂತೆ ಆಶ್ಚರ್ಯವಾಯಿತು. ನನ್ನ ನೈಜ ಪ್ರತಿಬಿಂಬವನ್ನು ಟಿಪ್ಪಣಿಗಳಲ್ಲಿರುವ ಪಾತ್ರಗಳು ಅಪಹರಿಸಿ ಬಿಟ್ಟಿರುವವು ಎಂದುಕೊಂಡೆ. ಪ್ರಾಣೋತ್ಕ್ರಮಣ ಮಾಡುವಾಗ ವಾಗಿಲಿಯ ಜಗನ್ನಥ ರೆಡ್ಡಿ ಮುಖ ಮಾಡಿಕೊಂಡಿದ್ದನಲ್ಲ ಅಂಥ ಪ್ರತಿಬಿಂಬ ಕನ್ನಡಿಯೊಳಗೆ ಪದಿಮೂಡಿತ್ತು. ಭಯವಾಗಿ ಕನ್ನಡಿಯಿಂದ ನನ್ನ ಮುಖವನ್ನು ನಿಷ್ಕ್ರಮಿಸಿದೆ. "ಕನ್ನಡಿ ಸುಮಾರಿದ್ದಂತೆ ಕಣೇ... ಬೆಂಗಳೂರಿನ ಸನ್ ರೈಜ್ ಗ್ಲಾಸ್ ಹೌಸಿನಿಂದ ತಂದಿದ್ದೆನ್ನಲ್ಲ ಆ ಕನ್ನಡಿ ತಗೊಂಡು ಬಾರೆ" ಅಂದೆ.
ವಯಸ್ಸಾದಂತೆಲ್ಲ ಕನ್ನಡಿ ಬಗ್ಗೆ ಹೆಚ್ಚು ಒತ್ತು ಕೊಟ್ಟು ಶ್ರೀಮಂತರು ಖರೀದಿಸುವ ಅಂಗಡಿಯಿಂದ ದುಬಾರಿ ಬೆಲೆ ತೆತ್ತು ತಂದಿದ್ದೆ. ನನಗಿಂತ ಕನ್ನಡಿ ಬೆಲೆಯೇ ಹೆಚ್ಚಿತ್ತು. ತಂದಾಗ "ಇಷ್ಟೊಂದು ದುಬಾರಿಯಾದ್ದು ಯಾಕೆ ತಂದಿರಿ" ಎಂದು ಹೆಂಡತಿ ತಕರಾರು ಎತ್ತಿದ್ದಳು. ಕನ್ನಡಿ ಎಂಬುದು ಪ್ರತಿಷ್ಠೆಯ ಸಂಕೇತ ಕಣೇ... ಎಂಥೆಂಥ ಕನ್ನಡಿ ಇಟ್ಟುಕೊಂಡಿದ್ದಾರೆ ಎಂಬುದರ ಮೇಲೆ ನಮ್ಮ ಗೌರವ ಇರುತ್ತದೆ" ಎಂದು ಗ್ರಾಹಕ ಬುದ್ಧಿ ಪ್ರದರ್ಶಿಸಿದ್ದೆ. ನಮ್ಮ ಮನೆಗೆ ಯಾರಾದರು ಅತಿಥಿಗಳು ಬಂದರೆ ನೀರು ನಿಡಿ ಕೊಟ್ಟಾದ ಮೇಲೆ ನೋಡಿಕೊಳ್ಳಲಿಕ್ಕೆ ಆ ಕನ್ನಡಿ ಕೊಡುತ್ತಿದ್ದೆವು. ಅದರಲ್ಲಿ ಪ್ರತಿಬಿಂಬ ನೋಡಿಕೊಂಡವರು "ಕನ್ನಡಿ ಅಂದರೆ ಇದು ನೋಡ್ರಿ ಕುಂವೀ... ಎಲ್ಲಿಂದ ತಂದ್ರಿ ಇದನ್ನು... ವಿಳಾಸ ಕೊಡ್ರಿ... ನಾವೂ ಅಲ್ಲಿಂದ ಖರೀದಿಸ್ತೀವಿ" ಎಂದು ಅದರ ಹೆಚ್ಚುಗಾರಿಕೆಯನ್ನು ಕೊಂಡಾಡುತ್ತಿದ್ದರು. ನಮ್ಮಲ್ಲಿ ಇರೋವಷ್ಟು ಕಾಲ ಅವರು ಆ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಿಕೊಳ್ಳುತ್ತ ಮೈಮರೆಯುತ್ತಿದ್ದರು. ನಮ್ಮ ಆತಿಥ್ಯದಲ್ಲಿನ ಲೋಪದೋಶಗಳು ಮುಚ್ಚಿಕೊಂಡು ಹ್ಗಿಬಿಡುತ್ತಿದ್ದವು. ಆದ್ದರಿಂದ ಅದನ್ನು ಕೋಹಿನೂರ್ ವಜ್ರಕ್ಕಿಂತ ಮಿಗಿಲಾಗಿ ಜೋಪಾನ ಮಾಡಿಕೊಂಡು ಬಂದಿದ್ದೆವು.
"ಅದೇ ಕನ್ನಡಿ ಕಣ್ರಿ... ಜಾತ್ರೇಲಿ ತಂದದ್ದು ಎಂದುಕೊಂಡಿರೇನು?" ಎಂದಳು.
ನಾನು ಅದನ್ನು ಕೂಲಂಕುಷ ಪರಿಶೀಲಿಸಿದೆ. ಅದೇ ಕನ್ನಡಿ ಇದೆಂದು ಖಾತ್ರಿಪಡಿಸಿಕೊಂಡು ಮತ್ತೆ ಇಣುಕಿ ನೋಡಿದೆ. ನನ್ನ ಪ್ರತಿಬಿಂಬ ನನ್ನನ್ನು ನೋಡಿ ಪಕಪಕ ನಗಾಡಿತು. "ಅಯ್ಯೋ ಮೂರ್ಖ


೩೪೭

ಕಾದಂಬರಿಕಾರನೇ... ಒಂದು ಕಾದಂಬರಿಗೆ ಎಷ್ಟೊಂದು ತ್ರಾಸು ತಗೊಂಡು ನಿರೂಪಗೊಂಡಿರುವೆಯಲ್ಲೋ ಬೇವಕೂಫಾ" ಎಂದು ಕನ್ನಡಿಯೊಳಗಿನ ಪ್ರತಿಬಿಂಬ ಗೊಣಗಿತು.
ಅದನ್ನು ಸಿಟ್ತಿನಿಂದ ದೂರ ತಳ್ಳಿದೆ. ವಿಶ್ವಾಮಿತ್ರ ಮೇನಕೆಯರಂಥ ಹೆತ್ತವರಿಂದ ತಿರಸ್ಕೃತಗೊಂಡ ಶಕುಂತಲೆ ಎಂಬ ಹೆಸರಿನ ಕೂಸಿನಂತೆ ಅದು ಚಿಟಾರನೆ ಚೀರಿತು. ಶ್ರೀಮತಿ ಅಯ್ಯೋ ಅಂತ ಓಡಿ ಹೋಗಿ ಅದನ್ನು ಎದೆಗವುಚಿಕೊಂಡಳು.
"ಅಯ್ಯೋ ಏನ್ರಿ ಇದು... ಯಾರ ಮೇಲಿನ ಸಿಟ್ಟನ್ನು ಇದರ ಮೇಲೇಕೆ ತೋರಿಸ್ತಿದ್ದೀರಿ. ಇದು ನಿಮಗೆ ಬಗೆದಿರೋ ದ್ರೋಹವಾದರೂ ಏನು?" ಎಂದು ಅದರ ಕ್ಷೇಮಲಾಭ ವಿಚಾರಿಸಿಕೊಂಡು "ನಿಮ್ಮ ಮನಸ್ಸು ಯಾಕೋ ಸಜ್ಜು ಇರುವಂತಿಲ್ಲ... ಊಟ ಮಾಡಿ ರೆಸ್ಟ್ ತಗೊಳ್ರಿ... ಎಲ್ಲ ಸರಿಹೋಗ್ತದೆ ಎಂದುನನ್ನನ್ನು ಎಬ್ಬಿಸಿಕೊಂಡು ವಯಾ ಬಚ್ಚಲ ಮನೆಯಿಂದ ಅಡುಗೆ ಮನೆಗೆ ಕರೆದೊಯ್ದು ಊಟಕ್ಕಿದಳು. ಬೆಕ್ಕು ಎಂಜಲು ಮಾಡಿರೋ ಹಾಲು ಮೊಸರನ್ನು ನೀಡಲು ಆಕೆ ಒಪ್ಪಲಿಲ್ಲ. ಅನ್ನ ಸಾಂಬಾರು ಊಟ ಮಾಡಿ ಕೈತೊಳೆದುಕೊಂಡೆ.
ಆಗಲೆ ತುಂಬ ಹೊತ್ತಾಗಿತ್ತು. ಹತ್ತು ದಾಟಿರಬಹುದು ಎಂದುಕೊಂಡೆ. ಆಕೆ ಎಷ್ಟು ಪ್ರಯತ್ನಿಸಿದರೂ ನನಗೆ ನಿದ್ದೆ ಅಡರಲಿಲ್ಲ. ಪರಮೇಶ್ವರ ಶಾಸ್ತ್ರಿಗಳ ಅವಸಾನ ಕುರಿತಂತೆ ಶಾಮಂಣ ಬರೆದಿಟ್ಟಿರುವ ಕಥಾಪಠಣ ಸ್ರವಣ ಮಾಡಿದರೆ ಮನಸ್ಸು ಹಗುರಾಗಿ ನಿದ್ದೆ ಬರಬುಹುದೆಂದುಕೊಂಡೆ. ಅದಕ್ಕೆ ಸ್ರಿಮತಿಯೂ ಒಪ್ಪಿದಳು.
ಟೇಬಲ್ ಲ್ಯಾಂಪಿನ ಪಕ್ಕ ಆಕೆಯನ್ನು ಕೂದ್ರಿಸಿಕೊಂಡು ಅವನ ಹಸ್ತಪ್ರತಿಯನ್ನು ಕೈಗೆತ್ತಿಕೊಂಡು ಓದತೊಡಗಿದೆ. ರಾಯಮುರಾರಿ ಸೋಮೇಶ್ವರನ್ ಆಸ್ಥಾನದಲ್ಲಿದ್ದ ಶಾನ ಕವಿ ಸಜ್ಜನ ತಿಲಕನ ಕುಕುನೂರಿನ ಶಾಸನ ಓದಿರುವ ನನಗೆ ಅವನ ಕೈ ಬರಹ ಓದುವುದು ಕಷ್ಟವೆನಿಸಲಿಲ್ಲ.
*
*
*
‘ದಿ. ಶಾಮಾಶಾಸ್ತ್ರಿಯ ಬರೆದ ಅಪ್ರಕಟಿತ ಕಥೆಯು’
ಮನಸ್ಸಿನಲ್ಲಿ ಅದ್ನನ್ನು ಬೇಡಿಕೊಂದಿದ್ದಳೊ? ಆಕೆ ಎಲ್ಲರಿಗಿಂತ ಮುಖ್ಯವಾಗಿ ಅರ್ಚಕರಿಗಿಂತ ಮೊದಲೇ ಎದ್ದು ಸೊಗಸಾಗಿ ನಿದ್ದೆ ಏರಿಸಿದ್ದ ನನ್ನನ್ನೂ ಎಬ್ಬಿಸಿದಳು. ವಾರದಿಂದ ಸುತ್ತಾಡೀ ಸುತ್ತಾಡೀ ನಾನೂ ದಣಿದಿದ್ದೆನು. ದಣಿವಿನಿಂದ ದೇಹವೆಂಬುದು ಹಣ್ಣಾಗಿತ್ತು. ಸದರೀ ಪುಣ್ಯಕ್ಷೇತ್ರ ತಲುಪುತ್ತಲೆ ಸೂರ್ಯೊದಯವಾದ ತುಂಬು ಹೊತ್ತಿಗೆ ಏಳಬೇಕೆಂದು ನಿಶ್ಚಯಿಸಿ ಮಲಗಿದ್ದವನು ನಾನು. ಈ ಪ್ರಕಾರವಾಗಿ ದಣಿದು ನಿದ್ದೆ ಹೋಗಿದ್ದ ನನ್ನನ್ನು ಎದ್ದು ಗೋಳು ಹೊಯ್ದುಕೊಳ್ಳುವಳೆಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ನನಗಿಂತ ದೈಹಿಕವಾಗಿ ಬಲವಾಗಿದ್ದ ಆಕೆ ಮೇಲಿಂದ ಮೇಲೆ ಉರುಳಾಡಿಸಲು ಬೇರೆ ದಾರಿಗಾಣದೆ ಎದ್ದು ಕೂತೆನು. ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ‘ವರಲಕ್ಷ್ಮಿ’ ಎಂದು ಸಂಭೋದಿಸಲು ಪ್ರಯತ್ನಿಸಿದೆನಾದರೂ ಸಾಧ್ಯವಾಗಲಿಲ್ಲ. ತನ್ನನ್ನು ಹೆಸರು ಹಿಡಿದು ಕರೆಯಬಾರದೆಂದೂ, ಅದರಿಂದ ಪತಿಯ ಆಯುಷ್ಯ ಕ್ಷೀಣಿಸುವುದೆಂದೂ, ಏಯ್... ಹಾಯ್ ಎಂದು ಪಶು ಸಮಾನವಾಗಿ ಕರೆಯಬೇಕೆಂದೂ ಕಟ್ಟುನಿಟ್ಟಾಗಿ ಸಲಹೆ ನೀಡಿದ್ದಳು. ನಾನು ಎಚ್ಚರವಾಗುತ್ತಲೆ ನನ್ನ ಪಾದಗಳಿಗೆತನ್ನ ಮಸ್ತಿಷ್ಯವನ್ನು ಅಂ
ಟಿಸಿ ಅದೇನನ್ನೋ ಗೊಣಗಿದಳು. ಹಾಗೆಯೇ ಕೊರಳ ಮಾಂಗಲ್ಯಕ್ಕೂ ಅದೇ ಗೌರವ ಸಲ್ಲಿಸಿದಳು. ಕಡಿಮೆ ಪ್ರಮಾಣದಲ್ಲಿ ಬೆಳಕು ಚೆಲ್ಲುತ್ತಿದ್ದ ವಿದ್ಯುದ್ದೀಪದ ಬೆಳಕಿಗೆ ಅಳವಡಿಸಿ ನನ್ನ ಮುಖವನ್ನು ನೋ
ಡಿ ಸಮಾಧಾನದ ಉಸಿರು ಬಿಟ್ಟ ಮೇಲೆಯೇ ನನಗೆ ಮಾತಾಡಲು ಆಕೆ ಅವಕಾಶ


೩೪೮

ಕೊಟ್ತಿದ್ದು. "ಅಲ್ಲೇ ಸರಿಯಾಗಿ ಮೂರು ಗಂಟೆ ಸಹ ಆಗಿಲ್ಲ, ಇಷ್ಟೊತ್ತಿಗೆ ಎಬ್ಬಿಸಿದ್ಯಾಅಕೆ?" ಎಂದು ಬೇಸರ ವ್ಯಕ್ತಪಡಿಸಿದೆ. "ಅಲ್ರೀ... ಮನೆಗೆ ಹೋದ ಮೆಲೆ ಮಲಗೋದು ಇದ್ದೇ ಇದೆ... ನಿದ್ದೆಯಿಂದ ಬುದ್ಧಿ ನಾಶ ಅಂತ ಹಿರಿಯರು ಹೇಳಿದ್ದಾರೆ. ಪ್ರಾತಃಕಾಲ ಪ್ರಥಮ ಪೂಜೆ ಎಷ್ಟು ಕೊಟ್ರೂ ಸಿಕ್ಕೀತ್ರಿ... ಇನ್ನೊಂದುಊವರೆ ಗಂಟೆ ಕಳೆದ್ರೆ ಬೆಳಗಾಗಿ ಬಿಡ್ತದೆ... ಹೇಗೋ ಎದ್ದು ಬಿಡ್ರಿ... ಹೇಗೂ ಚಂದ್ರನ ಬೇಳಕಿದೆ. ನದಿಗೆ ಹೋಗಿ ಸ್ನಾನ ಮಾಡೋಣ... ಅಷ್ಟೊತ್ತಿಗೆ ಅರ್ಚಕರೂ ಎದ್ದಿರ್ತಾರೆ" ಎಂದು ಲಗುಬಗೆಯಿಂದ ಹಾಸಿಗಿ ಮಡಚಿ ಪೆಟಾರಿಗೆ ಸೇರಿಸಿದಳು. ಅಷ್ಟು ದೂರದಲ್ಲಿ ಮಬ್ಬು ಬೆಳಕೊಳಗೆ ಹೆಣ್ಣು ಗಂಡು ಪರಸ್ಪರ ಒಬ್ಬರಮೇಲೊಬ್ಬರು ಕಾಲು ಹಾಕಿಕೊಂಡು ಮಲಗಿದ್ದರು. ಪ್ರಕೃತಿಯ ರಮ್ಯ ಮಡಿಲಲ್ಲಿ ಹೀಗೆಯೇ ಲೈಂಗಿಕ ಸುಖವನ್ನು ಅನುಭವಿಸಬೇಕೆಂಬ ಉದ್ದೇಶದಿಂದಲೇ ನಾನು ಸಾಲ ಸೂಲ ಮಾಡಿಕೊಂಡು ಮಧು ಚಂದ್ರಕ್ಕೆ ಹೊರಟುಬಂದದ್ದು. ಬಂದು ಏಳೆಂಟು ದಿನವಾದರೂ ಇಂಥದೊಂದು ಅನುಭವಕ್ಕೆ ಆಸ್ಪದ ಮಾಡಿಕೊಟ್ಟವಳಲ್ಲ ಇವಳು. ಕೇಳಿದಾಗ, "ಮುಧುಚಂದ್ರಕ್ಕೆ ಬೆಂಕಿ ಬಿತ್ತು. ನಾವು ಬಂದಿರೋದೆ ದೇವರ ದರ್ಶನಕ್ಕೆ ಪೂಜ್ಯರೆ, ಮುಂದೆಂದಾದ್ರು ಈ ಸುದ್ದಿ ಎಟ್ಟಿದ್ರೀ ಅಂದ್ರ ನನಗೆ ಕೆಟ್ಟ್ ಕೋಪ ಬಂದುಬಿಡ್ಟದೆ" ಎಂದು ಲಕ್ಷಣ ರೇಖೆಗಳಿಂದ ದಾಂಪತ್ಯದ ನಡುವೆ ರಂಗವಲ್ಲಿ ರಚಿಸಿದಳು. ಯಾವ ಸ್ಪಂದನವೂಇರದಿದ್ದ ಆಕೆಯನ್ನು ಉದ್ದೀಪಿಸುವ ಸಾಹಸಕ್ಕೂ ನಾನು ಇಳಿದಿರಲಿಲ್ಲ. ನಾನು ಕದ್ದು ಮುಚ್ಚಿ ಸುಂದರವಾದ ಹೆಣ್ಣುಗಳನ್ನು ನೋಡುತ್ತಳೋ.. ಅಂಗೋಪಾಂಗಗಳನ್ನು ಸ್ಪರ್ಶಿಸುತ್ತಲೋ ಸುಖಿಸುತ್ತಿದೆನು. ನವವಿವಾಹಿತನಾದ ನಾನು ಈ ನ್ಡುವೆ ಒಂದೆರಡು ಬಾರಿ ಮುಷ್ಟಿ ಮೈಥುನ ಮಾಡಿಕೊಂಡದ್ದೂ ಉಂಟು. ಈ ಗೋಪ್ಯ ಚಟುವಟಿಕೆಯನ್ನು ಹೇಗೋ ಪತ್ತೆ ಮಾಡಿ "ಏನ್ರೀ... ಮಾನಸಿಕ ವ್ಯಭಿಚಾರ ಅಲ್ವೇನ್ರಿ?... ಇದು... ಇನ್ನೊಮ್ಮೆ ಪರಸ್ತ್ರೀಯನ್ನು ಕಣ್ಣೆತ್ತಿ ನೋಡಿದ್ರೀ ಅಂದ್ರೆ ನದಿಯಲ್ಲಿ ಹಾರಿ ಪ್ರಾಣ ಕಳ್ಕೋತೀನಿ" ಎಂದು ಹೆದರಿಸಿದ್ದಳು. ಅದಕ್ಕೂ ಕಲ್ಲು ಬಿದ್ದು ನಾನು ತೆಪ್ಪಗೆ ಇದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. "ಅಯ್ಯೋ ಇನ್ನೊಂದು ಸ್ವಲ್ಪ ಹೊ
ಟ್ಟು ಮಲಕ್ಕೋಳ್ಳೆ ನಾಲ್ಕೂ... ನಾಲ್ಕೂವರೆಗೆ ಎದ್ದು ಹೋದರಾಯ್ತು" ಎಂದೆ.

"ಅಯ್ಯೋ... ಬೇರೆ ಜನರೆಲ್ಲ ಎದ್ದು ಬಿಟ್ಟಿದ್ದಾರಲ್ರೀ... ಅವರ ಎದುರಿಗೆ ಸ್ನಾನ ಮಾಡೋದು ಹೇಗೆ... ಅದೆಲ್ಲ ಆಗೋ ಮಾತಲ್ಲ... ಈಗ ಸ್ನಾನ ಮಾಡಿಬಿತ್ರೆ ಎಷ್ಟೊಮ್ದು ದೇವರ ಮಾಡೋದಿದೆ ಎನ್ಕಥೆ? ನೂರೊಂದು ಸಾರಿ ಉರುಳು ಸೇವೆ ಮಾಡಬೇಕು... ಕುಂಕುಮಾರ್ಚನೆ ಸಹಸ್ರ ಬಿಲ್ವಾರ್ಚನೆ ಮಾಡಿಸ್ಬೇಕು... ಇದೆಲ್ಲ ಸೂರ್ಯೋದಯಕ್ಕೂ ಪೂರ್ವದಲ್ಲಿ ನಡೆಯಬೇಕಿದೆ ಕಣ್ರೀ..." ಎಂದು ಲಗುಬಗೆಯಿಂದ ಸ್ನಾನಕ್ಕೆ ಬೇಕಾದ ಸಾಮಾನುಗಳನ್ನು ಜೋಡಿಸಿಕೊಂಡಳು. ಬಲವಂತದಿಂದ ನನ್ನನ್ನು ಎಬ್ಬಿಸಿಕೊಂಡು ಹೊರಟಳು. ದಾರಿಯಲ್ಲಿ ಮೊಖ್ತೇಸ್ತರರ ಪೈಕಿ ಒಬ್ಬ ಎದ್ದು, "ಯಾರದು?" ಎಂದು ಗದರಿದ. ‘ನಾವು’ ಎಂದಾಗ "ಅಯ್ಯೋ... ನೀವಾ... ನನ್ಯಾರೋ ಕಳ್ರು ಎಂದುಕೊಂಡಿದ್ದೆ... ತುಸು ಹೊತ್ತಾದ ಮೇಲೆ ಹೋದರಾಗದೆ... ನದಿ ಎಲ್ಗೂ ಓಡಿಹೋಗೋದಿಲ್ಲ... ಇದ್ರ ಮೇಲೆ ನಿಮ್ಮಿಷ್ಟ,ನಿಮ್ಮಂಥ ಭಕ್ತರನ್ನು ಸಹಿಸಿಕೊಳ್ಳೋದು ನಮ್ಮ ಕರ್ಮ. ಅದ್ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ವೋ... ಸಹಿಸಿಕೊಂಡಿರೋಕೆ!" ಎಂದು ಮುಂತಾಗಿ ಗೊಣಗಿಗುತ್ತ ರಗ್ಗಿನೊಳಗೆ ಮೈಗೂಡಿಸಿಕೊಂಡು ಗಡಗಡ ನಡುಗತೊಡಗಿದ. "ನಾಸ್ತಿಕ್ರು, ಶುದ್ಧ ನಾಸ್ತಿಕ್ರು" ಎಂದು ಸಿಡುಕುತ್ತ ವರಲಕ್ಷ್ಮಿ ಹೆಜ್ಜೆ


೩೪೯

ಹಾಕತೊಡಗಿದಳು. ವೀರಬಲ್ಲಾಳ ಚಕ್ರವರ್ತಿ ಎಂಬುವನು ಕಟ್ಟಿಸಿದ್ದ ದೇವಾಲಯದ ಪ್ರಾಂಗಣ ದಾಟುವ ಹೊತ್ತಿಗೆ ನನ್ನ ಹಾಜರಿಯನ್ನು ನೂರು ಬಾರಿ ಖಚಿತಪಡಿಸಿಕೊಂಡಿರಬಹುದು. ಮೈಮುರಿದು ಎಚ್ಚರಗೊಳ್ಳಲಿರುವಂತೆ ಗೋಚರಿಸುತ್ತಿರುವ ಸಹ್ಯಾದ್ರಿಯ ಈ ಮಗ್ಗುಲು ಭದ್ರೆ ಜುಳುಜುಳು ಪ್ರವಹಿಸುತ್ತ ನಿರಂತರ ಜೀವಂತಿಕೆಗೆ ಪ್ರತ್ಯಕ್ಷ ನಿದರ್ಶನವಾಗಿದ್ದಳು. ಮೌನಕ್ಕೆ ಲಾಲಿ ಹಾಡುತ್ತಿರುವ ಜೀರುಂಡೆಗಳ ಸದ್ದು ಪ್ರಕೃತಿ ಕೋಟಿ ತಂಬೂರಿಗಳನ್ನು ಸರಿಪಡಿಸುತ್ತಿರುವಂತೆ ಕೇಳಿಸುತ್ತಿತ್ತು. ಹೊರಗಡೆ ಒಂದು ಮೂಲೆಯಲ್ಲಿ ಹತ್ತಾರು ಭಿಕ್ಷುಕರು ಒಂದೇ ದೇಹವೆಂಬಂತೆ ಮಲಗಿದ್ದರು. ಕೊರೆಯುವ ಚಳಿಗೆ ಸ್ವಾಂತನ ಹೇಳಲು ನನ್ನವಳ ತೋಳನ್ನು ಹಿಡಿದುಕೊಳ್ಳಲು ಹೋದೆ. ‘ಏನ್ರಿ ಇದು ನಿಮ್ಮ ಹುಚ್ಚಾಟ’ ಎಂದು ಕೊಸರಿ ದುರಸರಿದಳು. ಹೊಟ್ಟೇರಿದ್ದರೆ ಅವರ ಮೈಯನ್ನು ಇವರು ಉಜ್ಜುವ; ಇವರ ಮೈಯನ್ನು ಅವರು ಉಜ್ಜುವ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸುವ, ಕಂಪಿಸುವ ಹೊಂಬಣ್ಣದ ಮಾಂಸಖಂಡಗಳನ್ನು ದರ್ಶಿಸಬಹುದಾಗಿತ್ತು. ಆದರೆ ಆ ಭಾಗ್ಯವನ್ನು ನನ್ನಿಂದ ಕಸಿದುಕೊಂಡಿರುವ ಶ್ರೀಮತಿ ಮ್ಡಿವಂತಿಕೆಯೇ ಮೂರ್ತಿವೆತ್ತಂತೆ ಅದಾವುದೋ ಮಂತ್ರವನ್ನು ಗೊಣಗುತ್ತ ತನ್ನ ಪಾಡಿಗೆ ತಾನು ನಡೆಯುತ್ತ ನದಿಯ ದಡ ತಲುಪಿದಳು. ನಾನೂ ಕೂಡ... ನನ್ನನ್ನು ಸಹ್ಯಾದ್ರಿ ಕಡೆ ನೋಡುವಂತೆ ನಿರ್ದೇಶಿಸಿ ತಾನು ಸೀರೆ ಉದುರಿಸಿ ಲಂಗವನ್ನು ಎದೆ ಮಟ್ಟ ಕಟ್ಟಿಕೊಂಡು ನೀರಿಗಿಳಿದಳು. ವಿಷ್ಟು ಸಹಸ್ರನಾಮ ಜಪಿಸುತ್ತ ಮುಳುಗತೊಡಗಿದಳು. ನಾನು ನಿಲುಕದ ಹೆಣ್ಣನ್ನು ಧ್ಯಾನಿಸುತ್ತ ದಾದಲ್ಲಿ ಇದ್ದುಬಿಟ್ಟೆ. ಆಕೆ"ಆ ಹೆಬ್ಬಂಡೆ ಮರೆಗೆ ಹೋಗಿ ನೀವು ಹಾಗೆ ಸ್ನಾನ ಮಾಡ್ರಿ... ಹಂಗ್ಯಾಕೆ ಹುಳಿಹುಳಿ ನೋಡ್ಕೊತಾ ನಿಂತಿದ್ದೀರಿ... ಏನು ಗಂಡಸರಪ್ಪಾ ನೀವು... ಶಾಸ್ತ್ರಿಗಳ ಮನೆತನದೋರೆಂದರೆ ಹೇಗಿರಬೇಕು ನೀವು" ಎಂದಾಕೆ ಹೇಳುತ್ತಿದ್ದಂತೆಯೇ ನಾನು ಹೆಬ್ಬಂಡೆ ಮರೆಗೆ ಹೋದೆ. ಅರ್ಥವಾಗದ ಹಿಂಸೆ ವರ್ಣನೆಗೆ ನಿಲುಕದ್ದು. ಇಷ್ಟೊಂದು ದೈವ ಭಕ್ತಿಯನ್ನು ಇಂಚಿಂಚಿಗೂ ಪ್ರಕಟಿಸಬಹುದೆಂದು ಮೊದಲೇ ಗೊತ್ತಾಗಿದ್ದರೆ ಖಂಡಿತ ನಾನೀ ಮಧುಚಂದ್ರ ಯೋಜನೆ ಹಾಕಿಕೊಳ್ಳುತ್ತಿರಲಿಲ್ಲ. ಒಂದೊಂದು ಮುಟ್ಟಿಗೂ ಒಂದೊಂದು ಕಾರಣ ದುರ ಸಿಡಿಯುವ ಈ ಸತೀಮಣಿಯೊಂದಿಗೆ ಹೇಗಪ್ಪಾ ಜೀವನುದ್ದಕ್ಕೂ ಪಯಣಿಸುವುದು ಎಣ್ಬ ಚಿಂತೆಯಿಂದ ನಾನು ಸ್ನಾನ ಮಾಡಿ ದಡಕ್ಕೆ ಬಂದಾಗ ಕಾಡೊಳಗಿಂದ ಕೋಳಿ ಕೂಗಿತು.

ಕ್ರೌಂಚಗಳು ಮುಗುಲಿಗೆ ಸಿಡಿದಾಗ ಆಕೆ ಮಡಿ ಬಟ್ಟೆ ಉಟ್ಟಳು. ಟಿತ್ತಿಭಗಳು ಕೂಗತೊಡಗಿದಾಗ ಆಕೆ ಉರುಳು ಸೇವೆಗೆ ಸಜ್ಜಾಗ್ತಿದ್ದೀನಿ. ಮಾತಾಡಿಸಿ ವ್ರತಭಂಗ ಮಾಡಿಬೇಡಿರೆಂದು ಎಚ್ಚರಿಸಿ ಮತ್ತೊಮ್ಮೆ ನೀರೊಳಗೆ ಮುಳುಗಿ ಮೇಲೆದ್ದಳು. ಆಕೆ ಸರಸರ... ದೇವಾಲಯದ ಕಡೆ ಸರಸರ ನಡೆಯತೊಡಗಿದಳು. ನಾನು ಹಸಿ ಬಟ್ಟೆಯನ್ನು ಛತ್ರದ ಮುಂದೆ ಒಣಗಲು ಹಾಕಿ ಗರ್ಭ ಗುಡಿ ಕಡೆ ಹೋದೆ. ಆಕೆ ಗರ್ಭ ಗುಡಿ ಸುತ್ತ ಉರುಳು ಸೇವೆ ಆರಂಭಿಸಿದ್ದಳು. ಒಂದೆರಡು ಸುತ್ತು ಅಕೆಯನ್ನು ಹಿಂಬಾಲಿಸಿದೆನಾದರೂ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಗರ್ಭಗುಡಿ ಮುಂದುಗಡೆ ಅಂದರೆ ಪ್ರಾಚೀನ ಗಂಟೆಯ ಕೆಳಗೆ ಕೂತುಬಿಟ್ಟೆ. ಒಂದು ಸಿಗರೇಟನ್ನಾದರೂ ಸೇದಬೇಕೆಂಬಾಸೆ ಬಲವತ್ತರವಾಯಿತು. ಕಣ್ಣು ತಪ್ಪಿಸಿ ಕದಲುವಂತಿರಲಿಲ್ಲ. ನನ್ನ ಪತ್ನಿಯ ಸೇವಾ ಕೈಂಕರ್ಯ ಕಂಡು ಕೆಲ ಯಾತ್ರಾರ್ಥಿಗಳಂತೂ ಮೂಕ ವಿಸ್ಮಿತರಾಗಿದ್ದರು. ‘ಸನಾತನತೆಗೆ ಹಿಂದೂ ಧರ್ಮದ ಕೊಡುಗೆ’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧ ಬರೆಯುತ್ತಿದ್ದ ಸಂಶೋಧಕನೋರ್ವ ನನ್ನ


೩೫೦

ಹೆಂಡತಿಯ ಪ್ರತಿ ಪ್ರದಕ್ಷಿಣೆ ಕುರಿತು ಏನನ್ನೋ ಟಿಪ್ಪೈ ಹಾಕಿಕೊಳ್ಳುತ್ತಿದ್ದ. ಹವ್ಯಾಸಿ ಛಾಯಾಗ್ರಾಹಕನೋರ್ವ ನನ್ನ ಹೆಂಡತಿಯ ವಿವಿಧ ಭಂಗಿಗಳನ್ನು ಸೆರೆಹಿಡಿಯತೊಡಗಿದ್ದ. ಮತ್ತೊಬ್ಬ ಡಾಕುಮೆಂಟರಿಗಾರನೋರ್ವ ವಿಡಿಯೋ ಕೆಮರಾವನ್ನು ಹೆಗಲ ಮೇಲಿಟ್ಟುಕೊಂಡು ಗೋಪುರದ ಮಿಥುನ ಶಿಲ್ಪಗಳಿಗೆ ಪೂರಕವಾಗಿ ನನ್ನ ಹೆಂಡತಿಯ ಅರೆನಗ್ನ ದೇಹವನ್ನು ಚಿತ್ರೀಕರಿಸಲಾರಂಭಿಸಿದ. ನನಗೊಂಥರಾ ಕಿರಿಕಿರಿಯಾದರೂ ಸಹಿಸಿಕೊಂಡೆ. ಮೊಖ್ತೇಸರರೇ ಅವರಿಗೆ ಆ ಎಲ್ಲ ಸೌಲಭ್ಯ ಒದಗಿಸಿರುವರೆಂದಮೇಲೆ ಹೇಳುವುದು, ಕೇಳುವುದು ಏನಿದೆ> ಒಟ್ಟಿನಲ್ಲಿ ಯಾತ್ರಾರ್ಥಿಗಳ ಪಾಲಿಗೆ ‘ಅಪರೂಪದ ದೈವಭಕ್ತೆ’ಯಾಗಿದ್ದಳು ನನ್ನ ಹೆಂಡತಿ. ವೃದ್ಧ ವಿಧವೆಯೋರ್ವಳು ನನ್ನ ಬಳಿಗೆ ಬಂದು "ಆ ಮಹಾತಾಯಿಯ ಗಂಡ ನೀನೇ ಏನಪ್ಪಾ..." ಎಂದು ಉದ್ಗಾರ ತೆರೆದಳು. "ನನ್ನ ಸೊಸೆಯಂದಿರೂ ಇದ್ದಾರೆ ತಗೊಂಡೆನು ಮಾಡುವುದು? ದಂಡ... ಸದಾ ತಮ್ಮ ಗಂಡಂದಿರ ಹೆಗಲಿಗೆ ಜೋತು ಬಿದ್ದಿರ್‍ತಾರೆ... ಒಂಚೂರು ಮಡಿಯುಡಿ ಇಲ್ಲ. ಅಂಥ ಹುಡುಗಿಯನ್ನು ಕೈಹಿಡಿದಿರೋ ನೀನೇ ಪುಣ್ಯವಂತನಪ್ಪಾ... ಹೆಂಡತಿಗೆ ಎಷ್ಟೆಲ್ಲ ಸಹಕಾರ ನೀಡ್ತಿರೋ ನಿನ್ನಂಥ ಗಂಡಂದಿರು ಲಕ್ಷಕ್ಕೊಬ್ಬರಪ್ಪಾ..." ಎಂದು ಪ್ರಶಂಸಿಸಿ ಹೋಯಿತು. ಮೂತಶಂಕೆ ನೆಪದಿಂದ ನಾನೂ ಎದ್ದು ಹೊರಗಡೆ ಹೋದೆ. ಗುಡಿಗೆಸ್ವಲ್ಪ ದೂರದಲ್ಲಿದ್ದ ಡಬ್ಬಿ ಅಂಗಡಿಯಿಂದ ಒಂದು ಸಿಗರೇಟು ಕೊಂಡು ಸೇದಿದೆ. ವಸನೆ ಬರದಿರಲೀ ಅಂತ ನಾಲ್ಕು ಸೋಪಿನ ಕಾಳುಗಳನ್ನೂ ಬಾಯಲ್ಲಿ ಹಾಕಿಕೊಂಡೆ. ಕಾಲು ಹಾದಿಯ ಪಕ್ಕ ವೃದ್ಧನೊಬ್ಬ ತಲೆ ಅಡಿ ಚ್ ಲವನ್ನು ಇಟ್ಟುಕೊಂಡು ನಿದ್ದೆ ಹೋಗಿದ್ದ. ನನಗೆ ಅನುಮಾನ ಬಂದು ತಿಬ್ಬಳಿಸಿ ನೋಡಿದೆ. ಅವನ ಅರೆತೆರೆದ ಬೊಚ್ಚು ಬಾಯಿಯೊಳಗಿಂದ ಗೊದ್ದಿಗವೊಂದು ಹೊರ ಬಂತು. ಕಣ್ಣು ರೆಪ್ಪೆಯೊಳಗೆ ನಾಲಕೈದು ಕಟ್ಟಿರುವೆಗಳು ಅಡ್ಡಾಡುತ್ತಿದ್ದುವು. ನನಗೆ ಅದನ್ನು ನೋಡಿ ಭಯವಾಯಿತು. ಈ ಮುದುಕ ಸತ್ತಿದ್ದಾನೆ ಎಂದು ನಾನು ಉದ್ಗರಿಸಿದಾಗ ಒಬ್ಬ ಈ ಕಾಯ ನಶ್ವರ ಎಂದ. ಇನ್ನೊಬ್ಬ ಈವತ್ತು ಈ ಮುದುಕ, ನಾಳೆ ನಾನು, ನಾಡಿದ್ದು ನೀನು ಎಂದ. ಮತ್ತೊಬ್ಬ ದಿನಾ ಸಾಯೊರ್‍ಗೆ ಅಳೋರ್‍ಯಾರು ಹೋಗಯ್ಯ ಹೋಗು ಅಂದ, ಮಗದೊಬ್ಬ ಆ ಮುದುಕ ಚೀಲದಲ್ಲಿ ಏನಿಟ್ಟಿರಬಹುದೆಂದು ಆ ಕಡೆ ಓಡಿದ. ಗೋಪುರದ ಮೇಲೆ ರಾಕ್ಷಸನನ್ನು ಎಡಗಾಲಿಂದ ಮೆಟ್ಟಿ ನಿಂತಿರುವ ದೇವಿಯ ಬಾಯಿಂದ ಕೋರೆ ಹಲ್ಲುಗಳು ದಿನದ ಮೊದಲ ಬೆಳಕಿಗೆ ಫಳಫಳ ಹೊಳೆಯುತ್ತಿದ್ದವು.

ಇದರಿಂದ ನನ್ನ ಮನಸ್ಸಿಗೆ ಅಪಾರ ನೋವುಂಟಾಯಿತು... ಯಾಕಿದ್ದೀತಂತ ಮುಂದೆ ಬಂದಾಗ ಕೆದರು ತಲೆಯ ವೃದ್ಧೆಯೋರ್ವಳು ತಾರಕ ಸ್ವರದಲ್ಲಿ ‘ಬ್ರೋಚೇವಾಡೆವುಡುರಾ’ ಎಂದು ಹಾಡುತ್ತಿದ್ದಳು. ಸುಶ್ರಾವ್ಯವಾದ ಆ ಶಾರೀರಕ್ಕೆ ಮನಸೋತು ನಿಂತಿದ್ದ ನನಗೆ ಆದಿತಾಳಕ್ಕೆ ಮಾತ್ರೆಗಳೆಷ್ಟು ಗೊತ್ತಾ ಹೇಲು ಮತ್ತೆ... ಮಹಾ ಸಂಗೀತಜ್ಞನ ಥರ ನಿಂತ್ಕೊಂಡು ಕೇಲ್ತಿದ್ದೀಯಲ್ಲ... ನೀನೇನು ಮುಮ್ಮುಡಿ ಕ್ರಿಷ್ಣ ಒಡೆಯನೋ... ಹೋಗಯ್ಯ ಹೋಗು" ಎಂದು ಗದರಿಸಿ ಬಿಟ್ಟಿತು. ಅವಮಾನವಾದಂತಾಗಿ ನಾನು ಗರ್ಭಗುಡಿ ಕಡೆ ಬಂದೆ... ಅದೇ ತಾನೆ ಸಾವಿರದ ಒಂದು ಉರುಳು ಸೇವೆ ಮುಗಿಸಿದ್ದ ವರಲಕ್ಷ್ಮಿಗೆ ಅರ್ಚಕರು ಗುಡಿಯೊಳಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಸೋತು ಸುಣ್ಣಾಗಿದ್ದ ಆಕೆ ದೇವಿ ಮೂರ್ತಿಯ ಮುಂದೆ ಸಾಷ್ಟಾಂಗ ಪ್ರಣಾಮ ಸಲ್ಲಿಸಲು ಉದ್ದೋಕೆ ಮಲಗಿದ್ದಳು. ನನ್ನ ಅಕ್ಕಪಕ್ಕದಲ್ಲಿದ್ದವರು ಆ ಮೂಗುತಿಯನ್ನು ಟಿಪ್ಪುಸುಲ್ತಾನ್ ಮಾಡಿಸಿಕೊಟ್ಟದ್ದೆಂದೂ; ಕೊರಳ ರತ್ನದಾಭರಣವನ್ನು ಕೃಷ್ಣ ದೇವರಾಯನ ದ್ವಿತೀಯ ಹೆಂಡತಿ ಚಿನ್ನಾಂಬಿಕೆ


೩೫೧
ಮಾಡಿಸಿಕೊಟ್ಟಿದೆಂದೂ ಹೇಳತೊಡಗಿದ್ದರು. "ಈ ತಾಯಿಗೆ ಸಂಬಂಧಿಸಿದವರ್‍ಯಾರಾದ್ರು ಅದೀರೇನ್ರಿ... ಎದ್ದೇಳ್ಲಿಕ್ಕಾಗದೆ ಮಲಗಿದ್ದಾರೆ... ಎಬ್ಬಿಸಿ ಅರ್ಚನೆಗೆ ಸಹಕರಿಸಿ" ಎಂದು ಅರ್ಚಕರೋರ್ವರು ಕೂಗುತ್ತಲೆ ನಾನು ಒಳಗಡೆ ಪ್ರವೇಶಿಸಿದೆ. ನಿಜವಾಗಲೂ ವರಲಕ್ಷ್ಮಿ ಸೋತು ಸುಣ್ಣವಾಗಿದ್ದಳು. ಎಬ್ಬಿಸಲು ಹೋದರೆ "ದೇವಿ ಸಿಟ್ ಮಾಡ್ಕೊಂಡಾಳು... ಮೈಮುಟ್ಟಬೇಡಿ..." ಎಂದು ಕೊಸರಿದಳು. ಆಕೆಯ ಉತ್ತರದಿಂದ, ಅರ್ಚಕರು ಸುಪ್ರೀತರಾಗುತ್ತಿರಲ್ಕೆ ಶ್ರೀಮತಿಯು ಬಹು ಪ್ರಯಾಸದಿಂದ ಮೇಲಕ್ಕೆದ್ದಳು. ಹಾಗೆ ವಾಲಾಡುತ್ತಲೆ ಕುಂಕುಮಾರ್ಚನೆ, ಬಿಲ್ವಾರ್ಚನೆ ಇವೆಲ್ಲವನ್ನು ಮಾಡಿಸಿದಳು. ಮಂಗಳಾರತಿ ಮಾಡುವಾಗ್ಗೆ ಮುಖ್ಯ ಅರ್ಚಕರು ವಂಶದ ಪೂರ್ವಾಪರ ವಿಚಾರಿಸಿದರು. ನಾನು ಹೇಳಲ್ಲಗಿ ಅವರು ಹಿರಿಹಿರಿ ಹಿಗ್ಗಿದರು. "ಸರ್ವದರ್ಶನ ತೀರ್ಥರೂ; ಜ್ಯೋತಿಷ್ಯ ಪಾರಂಗತರೂ; ಅಮಲ ವಿದ್ಯಾನಿಧಿಗಲೂ ಆದ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳೇನ್ರಿ ನೀವು..." ಎಂದು ಉದ್ಗರಿಸುತ್ತಲೇ ವಿಶೇಷ ಮಂಗಳಾರ್ಚನೆ ಮಾಡಿದರು. ಐದು ನಿಮಿಷ ನಿರರ್ಗಳವಾಗಿ ಮಂತ್ರೋಚ್ಚರಣೆ ಮಾಡಿ ವಿಶೇಷ ಆಶೀರ್ವಾದ ಮಾಡಿದರು. ಪೂಜಾ ಕೈಂಕರ್ಯವನ್ನು ತಮ್ಮ ಕಿರಿಯರಿಗೆ ವಹಿಸಿಕೊಟ್ಟು ಅವರೂ ನಮ್ಮೊಂದಿಗೆ ಬಂದರು. ವರಲಕ್ಷ್ಮಿಯ ದೈವಭಕ್ತಿ ಕೊಂಡಾಡಿದರು. ನಮ್ಮ ತಾತನವರ ಬಳಿ ಒಂದು ತಿಂಗಳ ಕಾಲ ಶಿಷ್ಯ ವೃತ್ತಿಯಲ್ಲಿದ್ದರಂತೆ. ಸಂಹಿತಾ ಬ್ರಾಹ್ಮಣಗಳಲ್ಲಿ ಯಜ್ಞಕರ್ಮಗಳ ಹೃದ್ಗತ ಮಾಡಿಕೊಂಡಿರುವ ಕೆಲವೇ ಕೆಲವು ಶ್ರೋತ್ರಿಗಳ ಪೈಕಿ ನಮ್ಮ ತಾತನವರೂ ಒಬ್ಬರಂತೆ. ತಾತನವರು ಈ ಶಕ್ತಿ ಸ್ಥಳದಲ್ಲಿ ಚಂಡಿಕಾ ಯಜ್ಞ ಮಾಡಬೇಕೆಂದು ಪ್ರಯತ್ನಿಸಿದ್ದರಂತೆ... ರಾಜಕೀಯ ವಿದ್ಯಮಾನಗಳಿಂದ ಅದು ನೆರವೇರಲಿಲ್ಲವಂತೆ... ಹೀಗೆ ಅವರು ನನಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ತಿಳಿಸಿದರು. "ಅಷ್ಟು ಸುಲಭವಾಗಿ ನಾನು ಅರ್ಥ ಆಗೋದಿಲ್ವೋ... ಅನ್ಯರಿಗೆ ನಾನು ಅರ್ಥ ಆದಷ್ಟು ನಾನು ಹೆತ್ತ ಮಗನಿಗೆ; ಮೊಮ್ಮಗನಿಗೆ ಅರ್ಥ ಆಗಲಿಲ್ವಲ್ಲ ಎಂಬ ನೋವು ನನಗಿದೆ. ವೇದಾಧ್ಯಯನ ಮಾಡಿದೋರಿಗೆ ಈ ದೇಶದ ತೀರ್ಥಕ್ಷೇತ್ರಗಳಲ್ಲಿ ವಿಶೇಷ ಮರ್ಯಾದೆ ಗೌರವ ಸಿಗ್ತದ್ ಅಪ್ಪಾ" ಎಂದು ತಾತನವರು ಹೇಳುತ್ತಿದ್ದ ಮಾತುಗಳು ನೆನಪಾದವು. ಅರ್ಚಕರು "ಹೇಗಿದ್ದಾರಪ್ಪಾ ಶಾಸ್ತ್ರಿಗಳು?" ಎಂದು ಕೇಳಿದರು. ಅವರು ಶಯ್ಯಾಶ್ರಿತರಾಗಿರುವ ಸಂಗತಿ ಹೇಳಲು ಮನಸ್ಸು ಬಾರದೆ ಆರೋಗ್ಯವಾಗಿದ್ದಾರೆ ಎಂದು ಹೇಳಿಬಿಟ್ಟೆ. ಅವರು ಸದಾ ಸುಖವಾಗಿರಲಪ್ಪಾ... ಮಹಾನುಭಾವರು ಅವರು... ಅವರ ಆಶೀರ್ವಾದದಿಂದಲೇ ನಾನು ಈ ಮಟ್ಟ ತಲುಪಿರುವುದು. ಯಜುರ್ವೇದಿ ರಾಮಾನುಜರು ಒಮ್ಮೆ ಬಂದು ದರ್ಶನ ತಗೋತಾರಂತ ತಿಳಿಸಪ್ಪಾ..." ಎಂದು ಹೇಳಿದರಲ್ಲದೆ ವಿಶೇಷ ಪ್ರಸಾದದ ಪೊಟ್ಟಣಗಳನ್ನು ಕೊಟ್ಟರು. ಹಾಗೆಯೇ ನಮ್ಮ ವಸತಿಗೆ ಹೇಮಾದ್ರಿ ಮೇಲಿದ್ದ ವಿಶ್ರಾಂತಿ ಗೃಹದಲ್ಲಿ ಅವಕಾಶ ಮಾಡಿಕೊಟ್ಟರು. ದೇವಿ ಸಾನಿಧ್ಯದಲ್ಲಿ ಐಷಾರಾಮವಾಗಿ ಇರೋದು ಬೇಡಾರೀ ಎಂದು ಮೊದಮೊದಲು ತಕರಾರೆತ್ತಿದರೂ ವರಲಕ್ಷ್ಮಿ ಹೇಮಾದ್ರಿ ಏರಲು ಒಪ್ಪಿದಳು.

ಮೂರು ಕೋನೆಗಳುಲ್ಲ ಒಂದೊಂದು ಸೂಟ್ ನಾವು ನಿರೀಕ್ಷಿಸಿದ್ದಂಕ್ಕಿಂತ ಹೆಚ್ಚು ಸುಸಜ್ಜಿತವಾಗಿತ್ತು. "ನಿಮ್ಮ ಲೈಂಗಿಕ ಶಕ್ತಿ ನೂರ್ಮಡಿಗೊಳಿಸಲು ಇದೇ ‘ಅರ’ ಬ್ರಾಂಡಿನ ಮಿಕ್ಸ್‌ಗಳನ್ನೇ ಉಪಯೋಗಿಸಿರಿ" ಎಂಬ ಪೋಸ್ಟರ್ಸ್‌ಗಳನ್ನು ಕಿತ್ತು ಹರಿದು ತುಂಗೆಯ ಕಡೆ ತೂರಿದೆ. ಕಿತಕಿಗಳಾಚೆ ಸಹ್ಯಾದ್ರಿ ಸಾಲು ಅತಿ ಮನೋಹರವಾಗಿ ಕಾಣಿಸುತ್ತಿತ್ತು. ಗಾಳಿ ಹಿತವಾಗಿ ಸಂಚರಿಸುತಿತ್ತು.



೩೫೨

ನಾನಾ ಪಕ್ಷಿಗಳು ತೀರ ಹತ್ತಿರದಲ್ಲಿ ಬ
ದು ಕೂತು ಹಾಡುತ್ತಿದ್ದವು. ಮಂಚದಮೇಲಿದ್ದ ಹಾಸಿಗೆ ಹಂಸತೂಲಿಕಾತಲ್ಪಕ್ಕಿಂತ ಏನು ಕಡಿಮೆ ಇರಲಿಲ್ಲ. ಅಮೆರಿಕನ್ ಶೈಲಿಯ ಹಾಗೂ ಭಾರತೀಯ ಶೈಲಿಯ ಕಕ್ಕಸ್ಸು ಕೋಣೆಗಳಲ್ಲಿ ಉಪಯೋಗಿಸಲ್ಪಟ್ಟ ಕೆಲವು ನಿರೋಧ್‌ಗಳು ಒದ್ದೆಒದ್ದೆಯಾಗಿ ಬಿದ್ದಿದ್ದವು. ಅವುಗಳ ಅನುಭವಕ್ಕೆ ಅಕ್ಷರ ರೂಪ ಕೊಡುವ ರೀತಿಯಲ್ಲಿ ಜಾರುವ ಗೋಡೆ ಮೇಲೆ ಲೈಂಗಿಕ ಕ್ರಿಯೆ ಬಗ್ಗೆ ಕೆಟ್ಟದಾಗಿ ಅಶ್ಲೀಲವಾಗಿ ಬರೆಯಲಾಗಿತ್ತು. ಅವುಗಳಿಂದಲಾದರೂ ಸ್ಪೂರ್ತಿ ಪಡೆಯಲೀಕೆ ಎಂಬ ಕಾರಣದಿಂದ ನಾನವನ್ನು ಅಳಿಸುವ ಗೋಜಿಗೆ ಹೋಗಲಿಲ್ಲ. ಆದರೆ ಅವ್ಯಾವೂ ಆ ಪತಿವ್ರತೆಯ ಮೇಲೆ ಯಾವ ಪರಿಣಾಮ ಬೀರಲಿಲ್ಲ. ಇತ್ತೀಚಿನ ಅಪರೂಪದ ಸಂಶೋದನೆಗಲಲ್ಲಿ ನಿರೋಧ್ ಕೂಡ ಒಂದು ಎಂಬ ಪರಿಜ್ಞಾನ ಇದ್ದಂತಿಲ್ಲ ಈಕೆಗೆ. ನಮ್ಮ ತಾತನವರ ಮೆಲಿನ ಪೂಜ್ಯ ಭಾವನೆಯಿಂದಲ್ಲವೆ ನವ ವಿವಾಹಿತರಾದ ನಾವೀರ್ವರು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿ ನಿರ್ವಿಘ್ನವಾಗಿ ಕ್ರೀಡಿಸಲಿ ಎಂದಲ್ಲವೆ ಯಜುರ್ವೇದಿಯವರು ಇಂಥ ಸುಂದರವಾದ ಭವನ ಕಲ್ಪಿಸಿಕೊಟ್ತಿರುವುದು! ಆ ಕ್ರಿಯೆಗೆ ನಾನವಳನ್ನು ಎಳೆಯಲೆತ್ನಿಸಿ ಮುಖಭಂಗ ಮಾಡಿಸಿಕೊಂಡೆ. ಪ್ರಕೃತಿಯ ಯಾವ ಭಾಗಕ್ಕೂ ಆಕೆಯಲ್ಲಿ ಆಸೆ ಆಕಾಂಕ್ಷೆಗಳನ್ನು ಉದ್ದೀಪಿಸುವ ಶಕ್ತಿ ಇಲ್ಲವೆಂದುಕೊಂಡೆ. ನನಗೆ ನಮ್ಮ ತಾತನವರ ಮೆಲೆ ಹುಲಿಗುಡ್ಡದಷ್ಟು ಗಾತ್ರದ ಸಿಟ್ಟು ಬಂದಿತು. ಅಸಹಾಯಕತೆಯಿಂದ ಕುಗ್ಗಿ ಹೋದೆ. ಇಷ್ಟೂ ಸಾಲದೆಂಬಂತೆ ಊಟ, ತಿಂಡಿ, ನೀರು ನಿಡಿ ಇತ್ಯಾದಿ ವಿಷಯಗಳ ಬಗೆಗೂ ಸುಗ್ರೀವಾಜ್ಞೆ ಜಾರಿ ಮಾಡಿದ್ದಳು. ಆವತ್ತು ಸತಿಯಾದವಳು ಏಕಾಗ್ರತೆಯಿಂದ, ಮಡಿಯುಡಿಯಿಂದ ಒಪ್ಪತ್ತಿದ್ದು ಖಾಲಿ ಹೊಟ್ಟೆಯಲ್ಲಿರುವ ತನ್ನ ಪತಿಪರಮೇಶ್ವರನ ಪಾದಗಳಿಗೆ ಸಾವಿರದಾ ಒಂದು ಪುಜೆ ಸಲ್ಲಿಸಿದ್ದಲ್ಲಿ ಅಲೌಕಿಕವಾದ ಆನಂದ ಲಭಿಸುವುದೆಂದು ಹಿಂದಿನ ರಾತ್ರಿ ಅಷ್ಟು ದೂರ ಮಲಗಿಕೊಂಡೇ ಹೇಳಿದ್ದಳು. ಇಂಥ ಸದರಿ ಪೂಜೆಯಿಂದ ದಾಂಪತ್ಯ ಬಿಗಿಗೊಳ್ಳೂವುದೆಂದೂ; ಗಂಡನಾದವನು ಪರಸ್ರೀಯತ್ತ ಕಣ್ಣೆತ್ತಿ ನೋಡುವುದಿಲ್ಲವೆಂದೂ ಆಕೆ ಪರೋಕ್ಷವಾಗಿ ಗೊಣಗಿಕೊಂಡಿದ್ದಳು... ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಬೇಸರದಿಂದ ಒದ್ದಾಡಿದೆ. ಪೂಜ್ಯರಾದ ಶಾಸ್ತ್ರಿಗಳ್ನ್ನೂ; ಮಾತೋಶ್ರೀ ಅಲುಮೆಲಮ್ಮನವರನ್ನೂ ಮನಸಾರೆ ಶಪಿಸಿದೆ... ನನ್ನ ಬದುಕಿನಲ್ಲಿ ಲೈಂಗಿಕ ಅನುಭವವನ್ನು ಸ್ವಾದಿಷ್ಟವಾಗಿ, ಸಲೀಸಾಗಿ ಅನುಭವಿಸಲಾಗಲಿಲ್ಲವೆಂದ ಮೇಲೆ ಈ ಅನುಕೂಲಗಳಿಗೆ ಬೆಂಕಿ ಹಚ್ಚಲಿ ಎಂದು ಶಾಪ ಹಾಕುವುದು ಅನಿವಾರ್ಯವಲ್ಲವೆ? ನನ್ನ ಪಾಡಿಗೆ ನಾನಿರಲಿಕ್ಕೂ ಬಿಡುತ್ತಿಲ್ಲ ಈಕೆ... ಸೂತ್ರದ ಗೊಮ್ಬೆಯಂತೆ ತನ್ನ ಮೂಗಿನ ನೇರಕ್ಕೆ ಕುಣಿಸುತ್ತಲೆ ಇರುವಳು. ಇನ್ನೆನು ಅತ್ತೇ ಬಿಡುವನೆಂಬಂತೆ ಮುಖ ಮಾಡಲು "ಇದೆಲ್ಲ ನಿಮ್ಗೆ ಒಳ್ಳೇದಾಗ್ಲೀ ಅಂತ... ಹುಟ್ಟುವ ಮಕ್ಕಳು ಆಯುರಾರೋಗ್ಯದಿಮ್ದ ಬಾಳಲಿ, ಬದುಕಲೀ ಅಂತ ಕಣ್ರೀ ನಾನೀ ಪೂಜೆ ಪುನಸ್ಕಾರ ವ್ರತ ಇತ್ಯಾದಿ ನಿಯಮಗಳನ್ನು ಪಾಲಿಸ್ತಿರೋದು." ಎಂದು ನನಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದಳು. ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೆಃ ವಿಜ್ಞಾನ ಶೌರ್ಯ ವಿಭವಾರ್ಯ ಗುಣೈಃ ಸಮೇತಂ ಎಂದು ತಾತನವರು ನನ್ನ ಬಗ್ಗೆ ಹೇಳುತ್ತ ಸದಾಚಾರಿಯೂ ಸುಸಂಪನ್ನನೂ ಆದ ನಮ್ಮ ಮೊಮ್ಮಗನಾದ ಶಾಮನು ಕಟ್ಟಾ ಸಂಪ್ರದಾಯವಾದಿಯೂ; ವ್ರತೋಪಾಸಕನೂ ಆಗಿ ಆಚಂದ್ರಾರ್ಕವಾಗಿ ಬೆಳಗುವನೆಂದು ಹೇಳುತ್ತಿದ್ದುದು ನೆನಪಿಸಿಕೊಂಡರೆ ನಗು ಬರುತ್ತದೆ. ಅದಕ್ಕೆಂದೇ ಅವರು ಸಂಪ್ರದಾಯ ಮಡಿವಂತಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕನ್ಯೆಯನ್ನು


೩೫೩

ಹುಡುಕಿ ನೂರೊಂದು ವಿಘ್ನಗಳ ನಡುವೆ ಮದುವೆ ಮಾಡಿರುವುದು. ನಿಷೇಕದ ರಾತ್ರಿಯೆಂದೆ ನನ್ನ ಬದುಕಿನ ಪತನ ಆರಂಭವಾಯಿತೆಂದು ಒಂದೆರಡು ದಶಕ ಕಳೆದ ನಂತರ ನಾನು ಹೇಳಬಹುದು ಎಂದುಕೊಂಡೆ. ಆಕೆ ಹೊಡೆದು ಶಿಕ್ಷಿಸುವುದಿರಲಿ, ಗದರಿಸಲೂ ನನ್ನಿಂದಾಗಲಿಲ್ಲ. ಎಲ್ಲ ಹಿಂಸೆಗಳನ್ನು ಮೌನವಾಗಿ ಸಹಿಸಿಕೊಂಡೆ. ನನಗೆ ಹಸಿವೆ ಬಾಯಾರಿಕೆ ಅರ್ಥವದದೇ ಆಕೆ ಪೂಜೆಯಲ್ಲಿ ತನ್ಮಯಳಾಗಿದ್ದಾಗ... ದೈವೀ ಭಕ್ತಿಯ ಪ್ರಕಮ್ಪನಗಳನ್ನು ಪ್ರಕಟಿಸುತ್ತಿದ್ದ ಆಕೆಯ ಬಗ್ಗೆ ಬೇಸರಪಟ್ಟುಕೊಳ್ಳಲೂ ನನ್ನಿಂದ ಆಗಲಿಲ್ಲ. ತುಟಿ ಕಚ್ಚಿ ಸಹಿಸಿಕೊಂಡೆ. ಪಾದ ಪೂಜೆ ಒಂದೂವರೆ ಗಂಟೆ ಮುಂದುವರೆದ ಹೊತ್ತಿನಲ್ಲಿ ಜವ್ವು ಗಟ್ಟಿ ನನ್ನ ಕಾಲೊಳಗಿಂದ ಅಸಹನೀಯವಾದ ನೋವು ಒಡಮೂಡಿತು. ಅದೆಲ್ಲ ಮುಗಿದ ನಂತರವೂ ಆಕೆ ನನ್ನನ್ನು ಪ್ರಸಾದ ನಿಲಯಕ್ಕೆ ಹೋಗಲು ಬಿಡಲಿಲ್ಲ. ದೂರದಲ್ಲಿದ್ದ ಅಡುಗೆ ವಿಭಾಗದಿಮ್ದ ಸಾಂಬಾರಿನ ವಾಸನೆ ಅಲೆಅಲೆಯಾಗಿ ಬಂದು ನನ್ನ ಮೂಗನ್ನು ಮೋಹಪಾಶದಿಂದ ಬಂಧಿಸಿತ್ತು. "ಇನ್ನೇನು ಎರಡನೇ ಪಂಕ್ತಿ ಶುರುವಾಗುವ ಹೊತ್ತು ಹೋಗೋಣ, ಹೊಟ್ಟೆ ಹಸಿದಿದೆ" ಎಂದು ಚಿಕ್ಕ ಮಗುವಿನಂತೆ ಗೋಗರೆದರೂ ಪ್ರಯೋಜನವಾಗಲಿಲ್ಲ. "ರ್ರೀ... ಇವತ್ತು ಶುಕ್ರವಾರ... ದೇವಿ ಸನ್ನಿಧಿಯಲ್ಲಿ ಉಪವಾಸ ವ್ರತ ಮಾಡಿದ್ರೆ ಪುಣ್ಯ ಲಭಿಸ್ತದೆ... ನೀವು ಊಟ ಮಾಡಿದ್ರೀ ಅಂದರೆ ನಿಮ್ಮ ಏಳಿಗಾಗಿ ಕೈಕೊಂಡ ವ್ರತ ನಿಷ್ಫಲವಾಗ್ತದೆ... ನಿಮಗೆ ಹಸಿವು ತಡೆದುಕೊಳ್ಳಲಗದಿದ್ರೆ ದೇವಿಪ್ರಸಾದ ಸ್ವೀಕರಿಸಿ ಅದೂ ಒಂದೇ ಒಂದು ಬಾಳೆಹಣ್ಣು ಮಾತ್ರ..." ಎಂದು ಕಡಿವಾಣ ಬಿಗಿಗೊಳಿಸಿದಳು. ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತಾದರೂ ಸಹಿಸಿಕೊಂಡೆ. ಒಂದು ಆಷ್ಚರ್ಯದ ಸಂಗತಿ ಎಮ್ದರೆ ಒಂದು ಹಿಡಿ ಅನ್ನ, ಒಂದು ಹನಿ ನೀರು ಮುಟ್ಟದಿದ್ದರೂ ವರಲಕ್ಷ್ಮಿ ಹೆಚ್ಚು ಲವಲವಿಕೆಯಿಂದ ಇದ್ದಳು. ಹೀಗೆ ದೇಹ ದಂಡಿಸಿಕೊಳ್ಳುತ್ತ ಹೋಗುವ ಈಕೆ ಮುಂಬರುವ ವರ್ಷಗಳಲ್ಲಿ ಹೆಚ್ಚು ಕುರೂಪಿಯಾಗುವುದರಲ್ಲಿ ಸಂಶಯವಿಲ್ಲವೆಂದುಕೊಂಡೆ.

ರಾತ್ರಿಯಾಗುತ್ತಿದ್ದಂತೆ ತಾತಂದಿರ ನೆನಪು ಬಿರುಗಾಳಿಯೋಪಾದಿಯಲ್ಲಿ ಬೀಸಿ ಹಿಂಸಿಸತೊಡಗಿತು. ಅವರನ್ನು ಆ ಸ್ಥಿತಿಯಲ್ಲಿ ಬಿಟ್ಟು ಬರಬಾರದೆಂದುಕೊಂಡೆನು. ಇತ್ತೀಚಿನ ದಿನಗಳಲ್ಲಿ ನಿಷ್ಕ್ರಿಯರಾಗುತ್ತಿರುವ ಅವರ ಮನಸ್ಸಿನಲ್ಲಿ ಏನಿರುವುದೋ ಬಲ್ಲವರಾರು? ಅವರು ಬರೆದಿಟ್ಟಿರುವಲೆನ್ನಲಾದ ವೀಲುನಾಮದೊಲಗೆ ನನ್ನ ಬದಲಾದ ನಡುವಳಿಕೆಗಳ ಕುರಿತು ಸುಧೀರ್ಘವಾಗಿ ಪ್ರಸ್ತಾಪಿಸಿರಬಹುದು. ಅದು ಭಾರತದ ಸಂವಿಧಾನಕ್ಕಿಂತ ಮತ್ತು ಭಾರತೀಯ ದಂಡ ಸಂಹಿತೆಗಿಂತ ಏನು ಕಡಿಮೆ ಇರಲ